Loading date... | Loading Hijri date... | Loading time...

العاديات

ಕನ್ನಡ Translation with Arabic Quran Text

ಕನ್ನಡ العربية
1 ಏದುಸಿರು ಬಿಡುತ್ತಾ ದೌಡಾಯಿಸುವ ಕುದುರೆಗಳ ಮೇಲಾಣೆ! وَٱلْعَٰدِيَٰتِ ضَبْحًۭا. ﴿1﴾
2 ಗೊರಸನ್ನು ಕಲ್ಲಿಗೆ ಉಜ್ಜಿ ಬೆಂಕಿ ಕಿಡಿ ಹಾರಿಸುವವುಗಳ ಮೇಲಾಣೆ! فَٱلْمُورِيَٰتِ قَدْحًۭا. ﴿2﴾
3 ಮುಂಜಾನೆಯ ಸಮಯದಲ್ಲಿ ಆಕ್ರಮಣ ಮಾಡುವವುಗಳ ಮೇಲಾಣೆ! فَٱلْمُغِيرَٰتِ صُبْحًۭا. ﴿3﴾
4 ಆಗ ಅವು ಧೂಳನ್ನು ಹರಡುತ್ತವೆ. فَأَثَرْنَ بِهِۦ نَقْعًۭا. ﴿4﴾
5 ನಂತರ ಅದರ ಮೂಲಕ ಸೈನ್ಯಗಳ ನಡುಭಾಗಕ್ಕೆ ನುಗ್ಗುತ್ತವೆ. فَوَسَطْنَ بِهِۦ جَمْعًا. ﴿5﴾
6 ನಿಶ್ಚಯವಾಗಿಯೂ ಮನುಷ್ಯನು ತನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಕೃತಜ್ಞತೆಯಿಲ್ಲದವನಾಗಿದ್ದಾನೆ. إِنَّ ٱلْإِنسَٰنَ لِرَبِّهِۦ لَكَنُودٌۭ. ﴿6﴾
7 ನಿಶ್ಚಯವಾಗಿಯೂ ಅವನೇ ಅದಕ್ಕೆ ಸಾಕ್ಷಿಯಾಗಿದ್ದಾನೆ. وَإِنَّهُۥ عَلَىٰ ذَٰلِكَ لَشَهِيدٌۭ. ﴿7﴾
8 ಅವನಿಗೆ ಸಂಪತ್ತಿನ ಮೇಲೆ ಅತಿಯಾದ ಮೋಹವಿದೆ. وَإِنَّهُۥ لِحُبِّ ٱلْخَيْرِ لَشَدِيدٌ. ﴿8﴾
9 ಸಮಾಧಿಗಳಲ್ಲಿರುವುದನ್ನು ಹೊರತೆಗೆಯಲಾಗುವ ಆ ಸಮಯದ ಬಗ್ಗೆ ಅವನಿಗೆ ತಿಳಿದಿಲ್ಲವೇ? ۞ أَفَلَا يَعْلَمُ إِذَا بُعْثِرَ مَا فِى ٱلْقُبُورِ. ﴿9﴾
10 ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗಪಡಿಸಲಾಗುವ (ಆ ಸಮಯದ ಬಗ್ಗೆ). وَحُصِّلَ مَا فِى ٱلصُّدُورِ. ﴿10﴾
11 ನಿಶ್ಚಯವಾಗಿಯೂ ಅಂದು ಅವರ ಪರಿಪಾಲಕನು (ಅಲ್ಲಾಹು) ಅವರ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ. إِنَّ رَبَّهُم بِهِمْ يَوْمَئِذٍۢ لَّخَبِيرٌۢ. ﴿11﴾