القارعة
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಆ ಭಯಾನಕ ಸದ್ದು. | ٱلْقَارِعَةُ. ﴿1﴾ |
| 2 ಆ ಭಯಾನಕ ಸದ್ದು ಎಂದರೇನು? | مَا ٱلْقَارِعَةُ. ﴿2﴾ |
| 3 ಆ ಭಯಾನಕ ಸದ್ದು ಏನೆಂದು ನಿಮಗೇನು ಗೊತ್ತು? | وَمَآ أَدْرَىٰكَ مَا ٱلْقَارِعَةُ. ﴿3﴾ |
| 4 ಮನುಷ್ಯರು ಚದುರಿದ ಹಾತೆಗಳಂತಾಗುವ ದಿನ. | يَوْمَ يَكُونُ ٱلنَّاسُ كَٱلْفَرَاشِ ٱلْمَبْثُوثِ. ﴿4﴾ |
| 5 ಪರ್ವತಗಳು ಕೆದರಿದ ತುಪ್ಪಳದಂತಾಗುವ ದಿನ. | وَتَكُونُ ٱلْجِبَالُ كَٱلْعِهْنِ ٱلْمَنفُوشِ. ﴿5﴾ |
| 6 ಆಗ ಯಾರ ತಕ್ಕಡಿಗಳು ಭಾರವಾಗುತ್ತದೋ, | فَأَمَّا مَن ثَقُلَتْ مَوَٰزِينُهُۥ. ﴿6﴾ |
| 7 ಅವನು ಸಂತೃಪ್ತ ಜೀವನದಲ್ಲಿರುವನು. | فَهُوَ فِى عِيشَةٍۢ رَّاضِيَةٍۢ. ﴿7﴾ |
| 8 ಆದರೆ ಯಾರ ತಕ್ಕಡಿಗಳು ಹಗುರವಾಗುತ್ತದೋ, | وَأَمَّا مَنْ خَفَّتْ مَوَٰزِينُهُۥ. ﴿8﴾ |
| 9 ಅವನ ವಾಸಸ್ಥಳವು ಹಾವಿಯ ಆಗಿರುವುದು. | فَأُمُّهُۥ هَاوِيَةٌۭ. ﴿9﴾ |
| 10 ಅದು (ಹಾವಿಯ) ಏನೆಂದು ನಿಮಗೇನು ಗೊತ್ತು? | وَمَآ أَدْرَىٰكَ مَا هِيَهْ. ﴿10﴾ |
| 11 ಅದು ತೀವ್ರ ಶಾಖವಿರುವ ಬೆಂಕಿಯಾಗಿದೆ. | نَارٌ حَامِيَةٌۢ. ﴿11﴾ |