Loading date... | Loading Hijri date... | Loading time...

التكاثر

ಕನ್ನಡ Translation with Arabic Quran Text

ಕನ್ನಡ العربية
1 ಹೆಚ್ಚು ಸಿಗಬೇಕೆಂಬ ನಿಮ್ಮ ದುರಾಸೆಯು ನಿಮ್ಮನ್ನು ಅಲಕ್ಷ್ಯದಲ್ಲಿರಿಸಿದೆ. أَلْهَىٰكُمُ ٱلتَّكَاثُرُ. ﴿1﴾
2 ಎಲ್ಲಿಯವರೆಗೆಂದರೆ ನೀವು ಸಮಾಧಿ ಸ್ಥಳವನ್ನು ತಲುಪುವ ತನಕ. حَتَّىٰ زُرْتُمُ ٱلْمَقَابِرَ. ﴿2﴾
3 ಇಲ್ಲವೇ ಇಲ್ಲ, ಸದ್ಯವೇ ನೀವು ತಿಳಿಯುವಿರಿ. كَلَّا سَوْفَ تَعْلَمُونَ. ﴿3﴾
4 ಇಲ್ಲವೇ ಇಲ್ಲ, ನಂತರ ನಿಮಗೆ (ಎಲ್ಲವೂ) ತಿಳಿಯಲಿದೆ. ثُمَّ كَلَّا سَوْفَ تَعْلَمُونَ. ﴿4﴾
5 ಇಲ್ಲವೇ ಇಲ್ಲ, ನೀವು ದೃಢವಾಗಿ ತಿಳಿದಿರುತ್ತಿದ್ದರೆ. كَلَّا لَوْ تَعْلَمُونَ عِلْمَ ٱلْيَقِينِ. ﴿5﴾
6 ಖಂಡಿತವಾಗಿಯೂ ನೀವು ನರಕವನ್ನು ನೋಡುವಿರಿ. لَتَرَوُنَّ ٱلْجَحِيمَ. ﴿6﴾
7 ನಂತರ ನೀವು ಅದನ್ನು ಖಚಿತವಾದ ಕಣ್ಣುಗಳಿಂದ ನೋಡುವಿರಿ. ثُمَّ لَتَرَوُنَّهَا عَيْنَ ٱلْيَقِينِ. ﴿7﴾
8 ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು. ثُمَّ لَتُسْـَٔلُنَّ يَوْمَئِذٍ عَنِ ٱلنَّعِيمِ. ﴿8﴾