الهمزة
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಅವಹೇಳನ ಮಾಡುವ ಮತ್ತು ಪರದೂಷಣೆ ಮಾಡುವ ಪ್ರತಿಯೊಬ್ಬನಿಗೂ ವಿನಾಶವಿದೆ. | وَيْلٌۭ لِّكُلِّ هُمَزَةٍۢ لُّمَزَةٍ. ﴿1﴾ |
| 2 ಅವನು ಯಾರೆಂದರೆ ಸಂಪತ್ತು ಶೇಖರಿಸುವವನು ಮತ್ತು ಅದನ್ನು ಎಣಿಸುವವನು. | ٱلَّذِى جَمَعَ مَالًۭا وَعَدَّدَهُۥ. ﴿2﴾ |
| 3 ಅವನ ಸಂಪತ್ತು ಅವನನ್ನು ಶಾಶ್ವತಗೊಳಿಸುತ್ತದೆ ಎಂದು ಅವನು ಭಾವಿಸುತ್ತಾನೆ. | يَحْسَبُ أَنَّ مَالَهُۥٓ أَخْلَدَهُۥ. ﴿3﴾ |
| 4 ಇಲ್ಲವೇ ಇಲ್ಲ, ಅವನನ್ನು ತುಂಡು ತುಂಡಾಗಿ ಕತ್ತರಿಸುವ ಬೆಂಕಿಗೆ ಖಂಡಿತ ಎಸೆಯಲಾಗುವುದು. | كَلَّا ۖ لَيُنۢبَذَنَّ فِى ٱلْحُطَمَةِ. ﴿4﴾ |
| 5 ತುಂಡು ತುಂಡಾಗಿ ಕತ್ತರಿಸುವ ಬೆಂಕಿ ಏನೆಂದು ನಿಮಗೇನು ಗೊತ್ತು? | وَمَآ أَدْرَىٰكَ مَا ٱلْحُطَمَةُ. ﴿5﴾ |
| 6 ಅದು ಭುಗಿಲೆದ್ದು ಉರಿಸಲಾದ ಅಲ್ಲಾಹನ ಬೆಂಕಿಯಾಗಿದೆ. | نَارُ ٱللَّهِ ٱلْمُوقَدَةُ. ﴿6﴾ |
| 7 ಅದು ಹೃದಯಗಳ ಮೇಲೆ ಏರಿ ಬರುತ್ತದೆ. | ٱلَّتِى تَطَّلِعُ عَلَى ٱلْأَفْـِٔدَةِ. ﴿7﴾ |
| 8 ಅದು ಅವರನ್ನು ಎಲ್ಲಾ ಕಡೆಗಳಿಂದಲೂ ಮುಚ್ಚಿಕೊಳ್ಳುತ್ತದೆ. | إِنَّهَا عَلَيْهِم مُّؤْصَدَةٌۭ. ﴿8﴾ |
| 9 ದೊಡ್ಡ ದೊಡ್ಡ ಸ್ತಂಭಗಳಲ್ಲಿ. | فِى عَمَدٍۢ مُّمَدَّدَةٍۭ. ﴿9﴾ |