Loading date... | Loading Hijri date... | Loading time...

قريش

ಕನ್ನಡ Translation with Arabic Quran Text

ಕನ್ನಡ العربية
1 ಕುರೈಷರನ್ನು ಪರಿಚಿತಗೊಳಿಸುವುದಕ್ಕಾಗಿ.[1]
[1] ಕುರೈಷ್ ಗೋತ್ರವು ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿತ್ತು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಗೋತ್ರದ ಬನೂ ಹಾಶಿಮ್ ಕುಟುಂಬದಲ್ಲಿ ಹುಟ್ಟಿದ್ದರು. ಕುರೈಷರು ಪವಿತ್ರ ಕಅಬಾಲಯದ ಪರಿಪಾಲಕರಾಗಿದ್ದರಿಂದ ಅರೇಬಿಯನ್ ಪರ್ಯಾಯ ದ್ವೀಪದ ಎಲ್ಲಾ ಗೋತ್ರಗಳು ಅವರನ್ನು ಗೌರವಿಸುತ್ತಿದ್ದವು. ಈ ಕಾರಣದಿಂದ ಅವರ ವ್ಯಾಪಾರ ಪ್ರಯಾಣಗಳು ಸುರಕ್ಷಿತವಾಗಿದ್ದವು. ವ್ಯಾಪಾರವು ಕುರೈಷರ ಪ್ರಮುಖ ವೃತ್ತಿಯಾಗಿದ್ದು ಅವರು ಬೇಸಿಗೆಗಾಲದಲ್ಲಿ ಶಾಮ್ (ಈಗಿನ ಸಿರಿಯಾ-ಜೋರ್ಡಾನ್-ಪ್ಯಾಲಸ್ತೀನ್) ಗೆ ಮತ್ತು ಚಳಿಗಾಲದಲ್ಲಿ ಯಮನ್‌ಗೆ ವ್ಯಾಪಾರ ನಿಮಿತ್ತ ಪ್ರಯಾಣ ಮಾಡುತ್ತಿದ್ದರು.
لِإِيلَٰفِ قُرَيْشٍ. ﴿1﴾
2 ಅಂದರೆ ಅವರಿಗೆ ಚಳಿ ಮತ್ತು ಬೇಸಿಗೆಯ ಪ್ರಯಾಣಗಳನ್ನು ಪರಿಚಿತಗೊಳಿಸುವುದಕ್ಕಾಗಿ. إِۦلَٰفِهِمْ رِحْلَةَ ٱلشِّتَآءِ وَٱلصَّيْفِ. ﴿2﴾
3 ಆದ್ದರಿಂದ ಅವರು ಈ ಭವನದ (ಕಅಬಾಲಯದ) ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಲಿ. فَلْيَعْبُدُوا۟ رَبَّ هَٰذَا ٱلْبَيْتِ. ﴿3﴾
4 ಅವನು ಯಾರೆಂದರೆ ಅವರು ಹಸಿದಿರುವಾಗ ಅವರಿಗೆ ಆಹಾರವನ್ನು ಒದಗಿಸಿದವನು ಮತ್ತು ಅವರು ಭಯದಲ್ಲಿದ್ದಾಗ ಅವರಿಗೆ ನಿರ್ಭಯವನ್ನು ನೀಡಿದವನು. ٱلَّذِىٓ أَطْعَمَهُم مِّن جُوعٍۢ وَءَامَنَهُم مِّنْ خَوْفٍۭ. ﴿4﴾