Loading date... | Loading Hijri date... | Loading time...

إبراهيم

ಕನ್ನಡ Translation with Arabic Quran Text

ಕನ್ನಡ العربية
1 ಅಲಿಫ್ ಲಾಮ್ ರಾ. ಇದು ಗ್ರಂಥ. ನೀವು ಮನುಷ್ಯರನ್ನು ಅವರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಂತೆ ಅಂಧಕಾರಗಳಿಂದ ಬೆಳಕಿಗೆ—ಪ್ರಬಲನು ಮತ್ತು ಸ್ತುತ್ಯರ್ಹನಾದವನ ಮಾರ್ಗಕ್ಕೆ—ತರಲು ನಾವು ಇದನ್ನು ನಿಮಗೆ ಅವತೀರ್ಣಗೊಳಿಸಿದ್ದೇವೆ. الٓر ۚ كِتَٰبٌ أَنزَلْنَٰهُ إِلَيْكَ لِتُخْرِجَ ٱلنَّاسَ مِنَ ٱلظُّلُمَٰتِ إِلَى ٱلنُّورِ بِإِذْنِ رَبِّهِمْ إِلَىٰ صِرَٰطِ ٱلْعَزِيزِ ٱلْحَمِيدِ. ﴿1﴾
2 ಅಂದರೆ, ಭೂಮ್ಯಾಕಾಶಗಳಲ್ಲಿರುವ ವಸ್ತುಗಳೆಲ್ಲವೂ ಯಾರಿಗೆ ಸೇರಿದೆಯೋ ಆ ಅಲ್ಲಾಹನ ಮಾರ್ಗಕ್ಕೆ. ಸತ್ಯನಿಷೇಧಿಗಳಿಗೆ ಕಠೋರ ಶಿಕ್ಷೆಯ ದುರ್ಗತಿ ಕಾದಿದೆ. ٱللَّهِ ٱلَّذِى لَهُۥ مَا فِى ٱلسَّمَٰوَٰتِ وَمَا فِى ٱلْأَرْضِ ۗ وَوَيْلٌۭ لِّلْكَٰفِرِينَ مِنْ عَذَابٍۢ شَدِيدٍ. ﴿2﴾
3 ಅವರು ಯಾರೆಂದರೆ, ಪರಲೋಕಕ್ಕಿಂತಲೂ ಇಹಲೋಕಕ್ಕೆ ಆದ್ಯತೆ ನೀಡುವವರು, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಗಟ್ಟುವವರು ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವವರು. ಅವರು ಅತಿವಿದೂರದ ದುರ್ಮಾರ್ಗದಲ್ಲಿದ್ದಾರೆ. ٱلَّذِينَ يَسْتَحِبُّونَ ٱلْحَيَوٰةَ ٱلدُّنْيَا عَلَى ٱلْءَاخِرَةِ وَيَصُدُّونَ عَن سَبِيلِ ٱللَّهِ وَيَبْغُونَهَا عِوَجًا ۚ أُو۟لَٰٓئِكَ فِى ضَلَٰلٍۭ بَعِيدٍۢ. ﴿3﴾
4 ನಾವು ಎಲ್ಲಾ ಸಂದೇಶವಾಹಕರನ್ನೂ ಅವರ ಜನರ ಭಾಷೆಯಲ್ಲಿ (ಮಾತನಾಡುವಂತೆ) ಕಳುಹಿಸಿದ್ದೇವೆ. ಅವರು ಜನರಿಗೆ ಸಂದೇಶವನ್ನು ಸ್ಪಷ್ಟವಾಗಿ ವಿವರಿಸಿಕೊಡುವುದಕ್ಕಾಗಿ. ಅಲ್ಲಾಹು ಅವನು ಇಚ್ಛಿಸುವವರನ್ನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. وَمَآ أَرْسَلْنَا مِن رَّسُولٍ إِلَّا بِلِسَانِ قَوْمِهِۦ لِيُبَيِّنَ لَهُمْ ۖ فَيُضِلُّ ٱللَّهُ مَن يَشَآءُ وَيَهْدِى مَن يَشَآءُ ۚ وَهُوَ ٱلْعَزِيزُ ٱلْحَكِيمُ. ﴿4﴾
5 “ನಿಮ್ಮ ಜನರನ್ನು ಅಂಧಕಾರಗಳಿಂದ ಬೆಳಕಿಗೆ ತನ್ನಿರಿ ಮತ್ತು ಅವರಿಗೆ ಅಲ್ಲಾಹನ ಉಪಕಾರಗಳನ್ನು ನೆನಪಿಸಿಕೊಡಿ” (ಎಂದು ಆದೇಶಿಸುತ್ತಾ) ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ನಿಶ್ಚಯವಾಗಿಯೂ, ಸೈರಣೆಯಿರುವ ಮತ್ತು ಕೃತಜ್ಞರಾದ ಪ್ರತಿಯೊಬ್ಬರಿಗೂ ಅದರಲ್ಲಿ ದೃಷ್ಟಾಂತಗಳಿವೆ. وَلَقَدْ أَرْسَلْنَا مُوسَىٰ بِـَٔايَٰتِنَآ أَنْ أَخْرِجْ قَوْمَكَ مِنَ ٱلظُّلُمَٰتِ إِلَى ٱلنُّورِ وَذَكِّرْهُم بِأَيَّىٰمِ ٱللَّهِ ۚ إِنَّ فِى ذَٰلِكَ لَءَايَٰتٍۢ لِّكُلِّ صَبَّارٍۢ شَكُورٍۢ. ﴿5﴾
6 ಮೂಸಾ ತಮ್ಮ ಜನರಿಗೆ ಹೇಳಿದ ಸಂದರ್ಭ: “(ಓ ಜನರೇ!) ನಿಮಗೆ ಕಠೋರ ಹಿಂಸೆ ನೀಡುತ್ತಿದ್ದ, ನಿಮ್ಮ ಗಂಡು ಮಕ್ಕಳ ಕತ್ತು ಕೊಯ್ಯುತ್ತಿದ್ದ ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಬಿಡುತ್ತಿದ್ದ ಫರೋಹನ ಜನರಿಂದ ಅಲ್ಲಾಹು ನಿಮ್ಮ ರಕ್ಷಿಸಿದ ಸಂದರ್ಭದಲ್ಲಿ ಅವನು ನಿಮಗೆ ಕರುಣಿಸಿದ ಅನುಗ್ರಹವನ್ನು ಸ್ಮರಿಸಿ. ಅದರಲ್ಲಿ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಮಹಾ ಪರೀಕ್ಷೆಯಿತ್ತು”. وَإِذْ قَالَ مُوسَىٰ لِقَوْمِهِ ٱذْكُرُوا۟ نِعْمَةَ ٱللَّهِ عَلَيْكُمْ إِذْ أَنجَىٰكُم مِّنْ ءَالِ فِرْعَوْنَ يَسُومُونَكُمْ سُوٓءَ ٱلْعَذَابِ وَيُذَبِّحُونَ أَبْنَآءَكُمْ وَيَسْتَحْيُونَ نِسَآءَكُمْ ۚ وَفِى ذَٰلِكُم بَلَآءٌۭ مِّن رَّبِّكُمْ عَظِيمٌۭ. ﴿6﴾
7 ನಿಮ್ಮ ಪರಿಪಾಲಕನು (ಅಲ್ಲಾಹು) ಘೋಷಿಸಿದ ಸಂದರ್ಭ: “ನೀವು ಕೃತಜ್ಞರಾದರೆ ನಾನು ನಿಮಗೆ (ಅನುಗ್ರಹವನ್ನು) ಖಂಡಿತ ಹೆಚ್ಚಿಸುವೆನು. ಆದರೆ ನೀವು ಕೃತಘ್ನರಾದರೆ ನನ್ನ ಶಿಕ್ಷೆಯು ಅತಿಕಠೋರವಾಗಿದೆ.” وَإِذْ تَأَذَّنَ رَبُّكُمْ لَئِن شَكَرْتُمْ لَأَزِيدَنَّكُمْ ۖ وَلَئِن كَفَرْتُمْ إِنَّ عَذَابِى لَشَدِيدٌۭ. ﴿7﴾
8 ಮೂಸಾ ಹೇಳಿದರು: “ನೀವು ಮತ್ತು ಭೂಮಿಯಲ್ಲಿರುವ ಮನುಷ್ಯರೆಲ್ಲರೂ ಒಟ್ಟಾಗಿ ಅಲ್ಲಾಹನನ್ನು ನಿಷೇಧಿಸಿದರೂ (ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ). ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.” وَقَالَ مُوسَىٰٓ إِن تَكْفُرُوٓا۟ أَنتُمْ وَمَن فِى ٱلْأَرْضِ جَمِيعًۭا فَإِنَّ ٱللَّهَ لَغَنِىٌّ حَمِيدٌ. ﴿8﴾
9 ನಿಮಗಿಂತ ಮೊದಲಿನ ನೂಹರ ಜನರು, ಆದ್ ಮತ್ತು ಸಮೂದ್ ಗೋತ್ರಗಳು ಹಾಗೂ ಅವರ ನಂತರ ಬಂದ—ಅಲ್ಲಾಹನ ಹೊರತು ಬೇರೆ ಯಾರೂ ತಿಳಿದಿರದ ಗೋತ್ರಗಳು—ಮುಂತಾದವರ ಸಮಾಚಾರಗಳು ನಿಮಗೆ ತಲುಪಿಲ್ಲವೇ? ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆಗ ಅವರು ತಮ್ಮ ಕೈಯನ್ನು ಬಾಯಿಗೆ ಒತ್ತಿ ಹಿಡಿದು ಹೇಳಿದರು: “ಯಾವ ಸಂದೇಶದೊಂದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ಅದನ್ನು ನಾವು ಸಂಪೂರ್ಣವಾಗಿ ನಿಷೇಧಿಸಿದ್ದೇವೆ. ನೀವು ನಮ್ಮನ್ನು ಯಾವ ಧರ್ಮದ ಕಡೆಗೆ ಕರೆಯುತ್ತಿದ್ದೀರೋ ಅದರ ಬಗ್ಗೆ ನಮಗೆ ಗೊಂದಲಪೂರ್ಣ ಸಂಶಯಗಳಿವೆ.” أَلَمْ يَأْتِكُمْ نَبَؤُا۟ ٱلَّذِينَ مِن قَبْلِكُمْ قَوْمِ نُوحٍۢ وَعَادٍۢ وَثَمُودَ ۛ وَٱلَّذِينَ مِنۢ بَعْدِهِمْ ۛ لَا يَعْلَمُهُمْ إِلَّا ٱللَّهُ ۚ جَآءَتْهُمْ رُسُلُهُم بِٱلْبَيِّنَٰتِ فَرَدُّوٓا۟ أَيْدِيَهُمْ فِىٓ أَفْوَٰهِهِمْ وَقَالُوٓا۟ إِنَّا كَفَرْنَا بِمَآ أُرْسِلْتُم بِهِۦ وَإِنَّا لَفِى شَكٍّۢ مِّمَّا تَدْعُونَنَآ إِلَيْهِ مُرِيبٍۢ. ﴿9﴾
10 ಅವರ ಸಂದೇಶವಾಹಕರುಗಳು ಕೇಳಿದರು: “ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಅಲ್ಲಾಹನ ಬಗ್ಗೆ ನಿಮಗೆ ಸಂಶಯವೇ? ನಿಮ್ಮ ಪಾಪಗಳನ್ನು ಕ್ಷಮಿಸಲು ಮತ್ತು ಒಂದು ನಿಗದಿತ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡಲು ಅವನು ನಿಮ್ಮನ್ನು ಕರೆಯುತ್ತಿದ್ದಾನೆ.” ಅವರು ಹೇಳಿದರು: “ನೀವು ನಮ್ಮಂತಿರುವ ಮನುಷ್ಯರೇ ಆಗಿದ್ದೀರಿ. ನಮ್ಮ ಪೂರ್ವಜರು ಯಾರನ್ನು ಆರಾಧಿಸುತ್ತಿದ್ದರೋ ಅವರಿಂದ ನಮ್ಮನ್ನು ತಡೆಯುವುದೇ ನಿಮ್ಮ ಉದ್ದೇಶವಾಗಿದೆ. ನಮಗೆ ಸ್ಪಷ್ಟ ಸಾಕ್ಷ್ಯಾಧಾರವನ್ನು ತಂದು ತೋರಿಸಿ.” ۞ قَالَتْ رُسُلُهُمْ أَفِى ٱللَّهِ شَكٌّۭ فَاطِرِ ٱلسَّمَٰوَٰتِ وَٱلْأَرْضِ ۖ يَدْعُوكُمْ لِيَغْفِرَ لَكُم مِّن ذُنُوبِكُمْ وَيُؤَخِّرَكُمْ إِلَىٰٓ أَجَلٍۢ مُّسَمًّۭى ۚ قَالُوٓا۟ إِنْ أَنتُمْ إِلَّا بَشَرٌۭ مِّثْلُنَا تُرِيدُونَ أَن تَصُدُّونَا عَمَّا كَانَ يَعْبُدُ ءَابَآؤُنَا فَأْتُونَا بِسُلْطَٰنٍۢ مُّبِينٍۢ. ﴿10﴾
11 ಅವರ ಸಂದೇಶವಾಹಕರುಗಳು ಕೇಳಿದರು: “ನಾವು ನಿಮ್ಮಂತಿರುವ ಮನುಷ್ಯರೇ ಆಗಿದ್ದೇವೆ. ಆದರೆ ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರನ್ನು ಆಶೀರ್ವದಿಸುತ್ತಾನೆ. ಅಲ್ಲಾಹನ ಅನುಮತಿಯಿಲ್ಲದೆ ಯಾವುದೇ ಸಾಕ್ಷ್ಯಾಧಾರವನ್ನು ತರಲು ನಮಗೆ ಸಾಧ್ಯವಿಲ್ಲ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ. قَالَتْ لَهُمْ رُسُلُهُمْ إِن نَّحْنُ إِلَّا بَشَرٌۭ مِّثْلُكُمْ وَلَٰكِنَّ ٱللَّهَ يَمُنُّ عَلَىٰ مَن يَشَآءُ مِنْ عِبَادِهِۦ ۖ وَمَا كَانَ لَنَآ أَن نَّأْتِيَكُم بِسُلْطَٰنٍ إِلَّا بِإِذْنِ ٱللَّهِ ۚ وَعَلَى ٱللَّهِ فَلْيَتَوَكَّلِ ٱلْمُؤْمِنُونَ. ﴿11﴾
12 ಅಲ್ಲಾಹು ನಮಗೆ ನಮ್ಮ ಮಾರ್ಗಗಳನ್ನು ಸ್ಪಷ್ಟವಾಗಿ ತೋರಿಸಿರುವಾಗ ಅವನಲ್ಲಿ ಭರವಸೆಯಿಡದಿರಲು ನಮಗೇನು ಹಕ್ಕಿದೆ? ನೀವು ನೀಡುವ ಕಿರುಕುಳಗಳನ್ನು ನಾವು ಖಂಡಿತ ಸಹಿಸಿಕೊಳ್ಳುತ್ತೇವೆ. ಭರವಸೆಯಿಡುವವರು ಅಲ್ಲಾಹನಲ್ಲಿಯೇ ಭರವಸೆಯಿಡಲಿ.” وَمَا لَنَآ أَلَّا نَتَوَكَّلَ عَلَى ٱللَّهِ وَقَدْ هَدَىٰنَا سُبُلَنَا ۚ وَلَنَصْبِرَنَّ عَلَىٰ مَآ ءَاذَيْتُمُونَا ۚ وَعَلَى ٱللَّهِ فَلْيَتَوَكَّلِ ٱلْمُتَوَكِّلُونَ. ﴿12﴾
13 ಸತ್ಯನಿಷೇಧಿಗಳು ಅವರ ಸಂದೇಶವಾಹಕರುಗಳೊಡನೆ ಹೇಳಿದರು: “ನಾವು ನಿಮ್ಮನ್ನು ನಮ್ಮ ಊರಿನಿಂದ ಖಂಡಿತ ಓಡಿಸುತ್ತೇವೆ. ಅಥವಾ ನೀವು ನಮ್ಮ ಧರ್ಮಕ್ಕೆ ಮರಳಿ ಬರಲೇಬೇಕು. ಆಗ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ದೇವವಾಣಿಯನ್ನು ನೀಡಿದನು: “ಆ ಅಕ್ರಮಿಗಳನ್ನು ನಾವು ಖಂಡಿತ ಸರ್ವನಾಶ ಮಾಡುತ್ತೇವೆ. وَقَالَ ٱلَّذِينَ كَفَرُوا۟ لِرُسُلِهِمْ لَنُخْرِجَنَّكُم مِّنْ أَرْضِنَآ أَوْ لَتَعُودُنَّ فِى مِلَّتِنَا ۖ فَأَوْحَىٰٓ إِلَيْهِمْ رَبُّهُمْ لَنُهْلِكَنَّ ٱلظَّٰلِمِينَ. ﴿13﴾
14 ಅವರ ಬಳಿಕ ನಾವು ನಿಮ್ಮನ್ನು ಭೂಮಿಯಲ್ಲಿ ವಾಸ ಮಾಡಿಸುತ್ತೇವೆ. ಇದು ನನ್ನ ಮುಂದೆ ನಿಲ್ಲುವುದನ್ನು ಭಯಪಡುವವರಿಗೆ ಮತ್ತು ನನ್ನ ಎಚ್ಚರಿಕೆಗಳನ್ನು ಭಯಪಡುವವರಿಗಾಗಿದೆ.” وَلَنُسْكِنَنَّكُمُ ٱلْأَرْضَ مِنۢ بَعْدِهِمْ ۚ ذَٰلِكَ لِمَنْ خَافَ مَقَامِى وَخَافَ وَعِيدِ. ﴿14﴾
15 ಅವರು (ಪ್ರವಾದಿಗಳು) ತೀರ್ಪು ನೀಡಬೇಕೆಂದು ಅಂಗಲಾಚಿದರು. ಪ್ರತಿಯೊಬ್ಬ ಹಠಮಾರಿ ಪೀಡಕನು ನೆಲಕಚ್ಚಿದನು. وَٱسْتَفْتَحُوا۟ وَخَابَ كُلُّ جَبَّارٍ عَنِيدٍۢ. ﴿15﴾
16 ನರಕಾಗ್ನಿ ಅವನ ಮುಂಭಾಗದಲ್ಲೇ ಇದೆ. ಅವನಿಗೆ ಕೀವು ತುಂಬಿದ ನೀರನ್ನು ಕುಡಿಸಲಾಗುವುದು. مِّن وَرَآئِهِۦ جَهَنَّمُ وَيُسْقَىٰ مِن مَّآءٍۢ صَدِيدٍۢ. ﴿16﴾
17 ಅವನು ಅದನ್ನು ಅತೀವ ತ್ರಾಸದಿಂದ ಗುಟುಕರಿಸುವನು. ಆದರೂ ಅದನ್ನು ಗಂಟಲ ಕೆಳಗಿಳಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ಸಾವು ಎಲ್ಲಾ ಕಡೆಗಳಿಂದಲೂ ಅವನ ಬಳಿಗೆ ಬರುವುದು. ಆದರೂ ಅವನು ಸಾಯುವುದಿಲ್ಲ. ಅವನಿಗೆ ಅದರ ಹಿಂದೆಯೇ ಅತಿಕಠೋರ ಶಿಕ್ಷೆಯೂ ಇದೆ. يَتَجَرَّعُهُۥ وَلَا يَكَادُ يُسِيغُهُۥ وَيَأْتِيهِ ٱلْمَوْتُ مِن كُلِّ مَكَانٍۢ وَمَا هُوَ بِمَيِّتٍۢ ۖ وَمِن وَرَآئِهِۦ عَذَابٌ غَلِيظٌۭ. ﴿17﴾
18 ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರು ಯಾರೋ—ಅವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಬಿರುಗಾಳಿಯ ದಿನ ಅದಕ್ಕೆ ಬಲವಾದ ಗಾಳಿ ಬೀಸಿತು. ಅವರು ಮಾಡಿದ ಕರ್ಮಗಳಲ್ಲಿ ಯಾವುದರ ಮೇಲೂ (ಅದನ್ನು ಹಿಡಿದಿಟ್ಟುಕೊಳ್ಳಲು) ಅವರಿಗೆ ಸಾಮರ್ಥ್ಯವಿಲ್ಲ. ಅತಿವಿದೂರವಾದ ದುರ್ಮಾರ್ಗವೆಂದರೆ ಇದೇ.[1]
[1] ಬಿರುಗಾಳಿ ಬೀಸಿದರೆ ಬೂದಿಯ ಸ್ಥಿತಿ ಏನಾಗುವುದೋ ಪರಲೋಕಕ್ಕೆ ಬರುವಾಗ ಸತ್ಯನಿಷೇಧಿಗಳ ಕರ್ಮಗಳು ಸ್ಥಿತಿಯೂ ಆದೇ ಆಗುತ್ತದೆ. ಅವರು ಮಾಡಿದ ಯಾವುದೇ ಸತ್ಕರ್ಮಕ್ಕೂ ಅಲ್ಲಿ ಪ್ರತಿಫಲವಿಲ್ಲ. ಎಲ್ಲವೂ ನೀರಿನಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಗುತ್ತವೆ.
مَّثَلُ ٱلَّذِينَ كَفَرُوا۟ بِرَبِّهِمْ ۖ أَعْمَٰلُهُمْ كَرَمَادٍ ٱشْتَدَّتْ بِهِ ٱلرِّيحُ فِى يَوْمٍ عَاصِفٍۢ ۖ لَّا يَقْدِرُونَ مِمَّا كَسَبُوا۟ عَلَىٰ شَىْءٍۢ ۚ ذَٰلِكَ هُوَ ٱلضَّلَٰلُ ٱلْبَعِيدُ. ﴿18﴾
19 ಅಲ್ಲಾಹು ಭೂಮ್ಯಾಕಾಶಗಳನ್ನು ಅತ್ಯಂತ ನಿಖರವಾಗಿ ಸೃಷ್ಟಿಸಿದ್ದಾನೆಂದು ನೀವು ನೋಡಿಲ್ಲವೇ? ಅವನು ಇಚ್ಛಿಸಿದರೆ ಅವನು ನಿಮ್ಮನ್ನು ತೊಲಗಿಸಿ ಹೊಸ ಸೃಷ್ಟಿಯನ್ನು ತರುವನು. أَلَمْ تَرَ أَنَّ ٱللَّهَ خَلَقَ ٱلسَّمَٰوَٰتِ وَٱلْأَرْضَ بِٱلْحَقِّ ۚ إِن يَشَأْ يُذْهِبْكُمْ وَيَأْتِ بِخَلْقٍۢ جَدِيدٍۢ. ﴿19﴾
20 ಅಲ್ಲಾಹನ ಮಟ್ಟಿಗೆ ಅದು ಕಷ್ಟವೇ ಅಲ್ಲ. وَمَا ذَٰلِكَ عَلَى ٱللَّهِ بِعَزِيزٍۢ. ﴿20﴾
21 ಅವರೆಲ್ಲರೂ ಅಲ್ಲಾಹನ ಬಳಿಗೆ ಹೊರಟು ಬರುವರು. ಆಗ ಬಲಹೀನರು ಅಹಂಕಾರಿಗಳೊಂದಿಗೆ ಹೇಳುವರು: “ನಾವು ನಿಜಕ್ಕೂ ನಿಮ್ಮ ಹಿಂಬಾಲಕರಾಗಿದ್ದೆವು. ಈಗ ಅಲ್ಲಾಹನ ಶಿಕ್ಷೆಯಿಂದ ಒಂದಂಶವನ್ನಾದರೂ ನಮ್ಮಿಂದ ದೂರ ಮಾಡುವಿರಾ?” ಅವರು ಉತ್ತರಿಸುವರು: “ಅಲ್ಲಾಹು ನಮಗೆ ಸನ್ಮಾರ್ಗ ತೋರಿಸುತ್ತಿದ್ದರೆ ನಾವು ನಿಮಗೂ ಸನ್ಮಾರ್ಗ ತೋರಿಸುತ್ತಿದ್ದೆವು. ಈಗ ನಾವು ಸಹನೆ ಕಳೆದುಕೊಂಡರೂ ಸಹನೆಯಿಂದ ವರ್ತಿಸಿದರೂ ಯಾವುದೇ ವ್ಯತ್ಯಾಸವಿಲ್ಲ. ನಮಗೆ ಯಾವುದೇ ರಕ್ಷಾಮಾರ್ಗವಿಲ್ಲ.” وَبَرَزُوا۟ لِلَّهِ جَمِيعًۭا فَقَالَ ٱلضُّعَفَٰٓؤُا۟ لِلَّذِينَ ٱسْتَكْبَرُوٓا۟ إِنَّا كُنَّا لَكُمْ تَبَعًۭا فَهَلْ أَنتُم مُّغْنُونَ عَنَّا مِنْ عَذَابِ ٱللَّهِ مِن شَىْءٍۢ ۚ قَالُوا۟ لَوْ هَدَىٰنَا ٱللَّهُ لَهَدَيْنَٰكُمْ ۖ سَوَآءٌ عَلَيْنَآ أَجَزِعْنَآ أَمْ صَبَرْنَا مَا لَنَا مِن مَّحِيصٍۢ. ﴿21﴾
22 ವಿಷಯವನ್ನು ತೀರ್ಮಾನಿಸಲಾದಾಗ ಶೈತಾನನು ಹೇಳುವನು: “ನಿಜಕ್ಕೂ ಅಲ್ಲಾಹು ನಿಮಗೆ ಮಾಡಿದ ವಾಗ್ದಾನವು ಸತ್ಯವಾಗಿತ್ತು. ನಾನೂ ನಿಮಗೆ ವಾಗ್ದಾನ ಮಾಡಿದ್ದೆ. ಆದರೆ ನಾನು ನನ್ನ ವಾಗ್ದಾನವನ್ನು ಉಲ್ಲಂಘಿಸಿದ್ದೇನೆ. ನನಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ನಾನು ನಿಮ್ಮನ್ನು ಕರೆದಾಗ ನೀವು ನನ್ನ ಹಿಂದೆ ಓಡಿ ಬಂದಿರಿ. ಆದ್ದರಿಂದ ನನ್ನ ಮೇಲೆ ಅಪವಾದ ಹೊರಿಸಬೇಡಿ. ನಿಮ್ಮ ಮೇಲೆಯೇ ಅಪವಾದ ಹೊರಿಸಿರಿ. ನನ್ನನ್ನು ಸಹಾಯಕ್ಕಾಗಿ ಕೂಗಬೇಡಿ. ನಾನು ನಿಮ್ಮನ್ನು ಸಹಾಯಕ್ಕಾಗಿ ಕೂಗುವುದಿಲ್ಲ. ನೀವು ಇದಕ್ಕೆ ಮೊದಲು ನನ್ನನ್ನು ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ಮಾಡಿದ್ದನ್ನು ನಾನು ನಿಷೇಧಿಸಿದ್ದೇನೆ. ನಿಶ್ಚಯವಾಗಿಯೂ, ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿದೆ.” وَقَالَ ٱلشَّيْطَٰنُ لَمَّا قُضِىَ ٱلْأَمْرُ إِنَّ ٱللَّهَ وَعَدَكُمْ وَعْدَ ٱلْحَقِّ وَوَعَدتُّكُمْ فَأَخْلَفْتُكُمْ ۖ وَمَا كَانَ لِىَ عَلَيْكُم مِّن سُلْطَٰنٍ إِلَّآ أَن دَعَوْتُكُمْ فَٱسْتَجَبْتُمْ لِى ۖ فَلَا تَلُومُونِى وَلُومُوٓا۟ أَنفُسَكُم ۖ مَّآ أَنَا۠ بِمُصْرِخِكُمْ وَمَآ أَنتُم بِمُصْرِخِىَّ ۖ إِنِّى كَفَرْتُ بِمَآ أَشْرَكْتُمُونِ مِن قَبْلُ ۗ إِنَّ ٱلظَّٰلِمِينَ لَهُمْ عَذَابٌ أَلِيمٌۭ. ﴿22﴾
23 ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸಲಾಗುವುದು. ಅವರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಿಂದ ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಿ ಅವರ ಅಭಿವಂದನೆಯು ಸಲಾಂ (ಶಾಂತಿ) ಎಂದಾಗಿರುವುದು. وَأُدْخِلَ ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ جَنَّٰتٍۢ تَجْرِى مِن تَحْتِهَا ٱلْأَنْهَٰرُ خَٰلِدِينَ فِيهَا بِإِذْنِ رَبِّهِمْ ۖ تَحِيَّتُهُمْ فِيهَا سَلَٰمٌ. ﴿23﴾
24 ಅಲ್ಲಾಹು ಪರಿಶುದ್ಧ ವಚನಕ್ಕೆ[1] ಯಾವ ರೀತಿಯಲ್ಲಿ ಉದಾಹರಣೆ ನೀಡಿದ್ದಾನೆಂದು ನೀವು ನೋಡಿಲ್ಲವೇ? ಅದೊಂದು ಪರಿಶುದ್ಧ ಮರದಂತೆ. ಅದರ ಬೇರುಗಳು ಭದ್ರವಾಗಿವೆ ಮತ್ತು ರೆಂಭೆಗಳು ಆಕಾಶದಲ್ಲಿವೆ.
[1] ಪರಿಶುದ್ಧ ವಚನ ಎಂದರೆ ‘ಲಾಇಲಾಹ ಇಲ್ಲಲ್ಲಾಹ್’ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ) ಎಂಬ ವಚನ. ಈ ವಚನವನ್ನು ಸ್ವೀಕರಿಸಿ ಇದರ ಆಧಾರದಲ್ಲಿ ಬದುಕುವ ಸತ್ಯವಿಶ್ವಾಸಿಗೆ ಯಾವುದೇ ಭಯವಿಲ್ಲ. ಅವನು ಸಂಪೂರ್ಣ ಆತ್ಮಶಾಂತಿಯೊಂದಿಗೆ ಬದುಕುತ್ತಾನೆ. ಜೀವನದಲ್ಲಿ ಏರುಪೇರುಗಳನ್ನು ಕಾಣುವಾಗ, ಕಷ್ಟಗಳು ಬರುವಾಗ, ದುರಂತಗಳು ಸಂಭವಿಸುವಾಗ ಅವನು ಧೃತಿಗೆಡುವುದಿಲ್ಲ. ಅವನು ಅಲ್ಲಾಹನಲ್ಲಿ ಸಂಪೂರ್ಣ ಭರವಸೆಯಿಟ್ಟು ಮುಂದುವರಿಯುತ್ತಾನೆ. ಅವನ ಎಲ್ಲಾ ಕರ್ಮಗಳಿಗೂ ಪರಲೋಕದಲ್ಲಿ ಅತ್ಯುತ್ತಮ ಪ್ರತಿಫಲವಿರುತ್ತದೆ.
أَلَمْ تَرَ كَيْفَ ضَرَبَ ٱللَّهُ مَثَلًۭا كَلِمَةًۭ طَيِّبَةًۭ كَشَجَرَةٍۢ طَيِّبَةٍ أَصْلُهَا ثَابِتٌۭ وَفَرْعُهَا فِى ٱلسَّمَآءِ. ﴿24﴾
25 ಅದರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಿಂದ ಅದು ಎಲ್ಲ ಕಾಲಗಳಲ್ಲೂ ಫಲ ನೀಡುತ್ತದೆ. ಅಲ್ಲಾಹು ಜನರಿಗೆ ಉದಾಹರಣೆಗಳನ್ನು ವಿವರಿಸುತ್ತಾನೆ. ಅವರು ಉಪದೇಶ ಪಡೆಯುವುದಕ್ಕಾಗಿ. تُؤْتِىٓ أُكُلَهَا كُلَّ حِينٍۭ بِإِذْنِ رَبِّهَا ۗ وَيَضْرِبُ ٱللَّهُ ٱلْأَمْثَالَ لِلنَّاسِ لَعَلَّهُمْ يَتَذَكَّرُونَ. ﴿25﴾
26 ಹೊಲಸು ವಚನದ[1] ಉದಾಹರಣೆಯು ಒಂದು ಹೊಲಸು ಮರದಂತೆ. ಅದು ಭೂಮಿಯಿಂದ ಬೇರು ಸಹಿತ ಕಿತ್ತು ಹೋಗಿದೆ. ಅದಕ್ಕೆ ಯಾವುದೇ ಭದ್ರತೆಯಿಲ್ಲ.
[1] ಹೊಲಸು ವಚನ ಎಂದರೆ ದೇವಸಹಭಾಗಿತ್ವ (ಶಿರ್ಕ್) ಮತ್ತು ಸತ್ಯನಿಷೇಧ (ಕುಫ್ರ್) ದ ವಚನಗಳು. ಈ ವಚನಕ್ಕೆ ಯಾವುದೇ ಅಡಿಪಾಯವಿಲ್ಲ. ಒಂದು ಸಣ್ಣ ಗಾಳಿಗೂ ಇದು ಕಿತ್ತು ಹೋಗಬಹುದು. ದೇವಸಹಭಾಗಿತ್ವ ಮತ್ತು ಸತ್ಯನಿಷೇಧದಲ್ಲಿ ಬದುಕುವವರ ಜೀವನವು ಸುಭದ್ರವಲ್ಲ. ಅವರಿಗೆ ಆತ್ಮಶಾಂತಿಯಿರುವುದಿಲ್ಲ. ಒಂದು ಸಣ್ಣ ಕಷ್ಟ ಬಂದರೂ ಅವರು ಧೃತಿಗೆಡುತ್ತಾರೆ. ಕೆಲವೊಮ್ಮೆ ತಮ್ಮ ಜೀವನವನ್ನೇ ಕೊನೆಗೊಳಿಸುತ್ತಾರೆ. ಪರಲೋಕದಲ್ಲಿ ಅವರ ಕರ್ಮಗಳಿಗೆ ಯಾವುದೇ ಪ್ರತಿಫಲವಿರುವುದಿಲ್ಲ.
وَمَثَلُ كَلِمَةٍ خَبِيثَةٍۢ كَشَجَرَةٍ خَبِيثَةٍ ٱجْتُثَّتْ مِن فَوْقِ ٱلْأَرْضِ مَا لَهَا مِن قَرَارٍۢ. ﴿26﴾
27 ಅಲ್ಲಾಹು ಸತ್ಯವಿಶ್ವಾಸಿಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸದೃಢ ವಚನದ ಮೂಲಕ ದೃಢವಾಗಿ ನಿಲ್ಲಿಸುತ್ತಾನೆ.[1] ಅಕ್ರಮವೆಸಗಿದವರನ್ನು ಅಲ್ಲಾಹು ದಾರಿತಪ್ಪಿಸುತ್ತಾನೆ. ಅಲ್ಲಾಹು ಅವನು ಇಚ್ಛಿಸಿದ್ದನ್ನು ಮಾಡುತ್ತಾನೆ.
[1] ಇಹಲೋಕ ಜೀವನದಲ್ಲಿ, ಮರಣದ ಸಂದರ್ಭ ಮತ್ತು ಸಮಾಧಿಯಲ್ಲಿ ಪ್ರಶ್ನೆ ಕೇಳಲಾಗುವ ಸಂದರ್ಭ ಅಲ್ಲಾಹು ಸತ್ಯವಿಶ್ವಾಸಿಗಳನ್ನು ‘ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದ್ ರಸೂಲುಲ್ಲಾಹ್’ ಎಂಬ ವಚನದಲ್ಲಿ ದೃಢವಾಗಿ ನಿಲ್ಲಿಸುತ್ತಾನೆ.
يُثَبِّتُ ٱللَّهُ ٱلَّذِينَ ءَامَنُوا۟ بِٱلْقَوْلِ ٱلثَّابِتِ فِى ٱلْحَيَوٰةِ ٱلدُّنْيَا وَفِى ٱلْءَاخِرَةِ ۖ وَيُضِلُّ ٱللَّهُ ٱلظَّٰلِمِينَ ۚ وَيَفْعَلُ ٱللَّهُ مَا يَشَآءُ. ﴿27﴾
28 ಅಲ್ಲಾಹನ ಅನುಗ್ರಹಕ್ಕೆ ಬದಲಿಯಾಗಿ ಕೃತಘ್ನತೆ ತೋರಿದ ಮತ್ತು ತಮ್ಮ ಜನರನ್ನು ನಾಶದ ಭವನಕ್ಕೆ ಇಳಿಸಿದವರನ್ನು ನೀವು ನೋಡಿಲ್ಲವೇ? ۞ أَلَمْ تَرَ إِلَى ٱلَّذِينَ بَدَّلُوا۟ نِعْمَتَ ٱللَّهِ كُفْرًۭا وَأَحَلُّوا۟ قَوْمَهُمْ دَارَ ٱلْبَوَارِ. ﴿28﴾
29 ಅಂದರೆ ನರಕಾಗ್ನಿಗೆ. ಅವರು ಅದರಲ್ಲಿ (ಪ್ರವೇಶಿಸಿ) ಉರಿಯುವರು. ಅದು ಬಹಳ ನಿಕೃಷ್ಟ ವಾಸಸ್ಥಳವಾಗಿದೆ. جَهَنَّمَ يَصْلَوْنَهَا ۖ وَبِئْسَ ٱلْقَرَارُ. ﴿29﴾
30 ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುವುದಕ್ಕಾಗಿ ಅವರು ಅಲ್ಲಾಹನಿಗೆ ಕೆಲವು ಸರಿಸಾಟಿಗಳನ್ನು ಮಾಡಿದರು. ಹೇಳಿರಿ: “ನೀವು ಆನಂದಿಸಿರಿ. ಕೊನೆಗೆ ನಿಮ್ಮ ಮರಳುವಿಕೆಯು ನರಕಕ್ಕೇ ಆಗಿದೆ.” وَجَعَلُوا۟ لِلَّهِ أَندَادًۭا لِّيُضِلُّوا۟ عَن سَبِيلِهِۦ ۗ قُلْ تَمَتَّعُوا۟ فَإِنَّ مَصِيرَكُمْ إِلَى ٱلنَّارِ. ﴿30﴾
31 ನನ್ನ ಸತ್ಯವಿಶ್ವಾಸಿ ದಾಸರೊಡನೆ—ಅವರು ನಮಾಝ್ ಸಂಸ್ಥಾಪಿಸಲಿ ಮತ್ತು ಯಾವುದೇ ಕ್ರಯ-ವಿಕ್ರಯ ಅಥವಾ ಗೆಳೆತನವು ಉಪಕಾರ ಮಾಡದ ದಿನವು ಆಗಮಿಸುವ ಮೊದಲೇ ನಾವು ಅವರಿಗೆ ಒದಗಿಸಿದ ಧನದಿಂದ ರಹಸ್ಯವಾಗಿ ಮತ್ತು ಬಹಿರಂಗವಾಗಿ ಖರ್ಚು ಮಾಡಲಿ ಎಂದು ಹೇಳಿರಿ. قُل لِّعِبَادِىَ ٱلَّذِينَ ءَامَنُوا۟ يُقِيمُوا۟ ٱلصَّلَوٰةَ وَيُنفِقُوا۟ مِمَّا رَزَقْنَٰهُمْ سِرًّۭا وَعَلَانِيَةًۭ مِّن قَبْلِ أَن يَأْتِىَ يَوْمٌۭ لَّا بَيْعٌۭ فِيهِ وَلَا خِلَٰلٌ. ﴿31﴾
32 ಅಲ್ಲಾಹನೇ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು. ಅವನು ಆಕಾಶದಿಂದ ಮಳೆಯನ್ನು ಸುರಿಸಿದನು. ನಂತರ ಅದರಿಂದ ನಿಮ್ಮ ಉಪಜೀವನಕ್ಕಾಗಿ ಹಣ್ಣುಗಳನ್ನು ಉತ್ಪಾದಿಸಿದನು. ಕಡಲಲ್ಲಿ ಅವನ ಆಜ್ಞೆಯಂತೆ ಚಲಿಸಲು ಅವನು ನಿಮಗೆ ನಾವೆಯನ್ನು ನಿಯಂತ್ರಿಸಿಕೊಟ್ಟನು. ಅವನು ನದಿಗಳನ್ನು ಕೂಡ ನಿಮ್ಮ ನಿಯಂತ್ರಣಕ್ಕೆ ನೀಡಿದನು. ٱللَّهُ ٱلَّذِى خَلَقَ ٱلسَّمَٰوَٰتِ وَٱلْأَرْضَ وَأَنزَلَ مِنَ ٱلسَّمَآءِ مَآءًۭ فَأَخْرَجَ بِهِۦ مِنَ ٱلثَّمَرَٰتِ رِزْقًۭا لَّكُمْ ۖ وَسَخَّرَ لَكُمُ ٱلْفُلْكَ لِتَجْرِىَ فِى ٱلْبَحْرِ بِأَمْرِهِۦ ۖ وَسَخَّرَ لَكُمُ ٱلْأَنْهَٰرَ. ﴿32﴾
33 ನಿರಂತರವಾಗಿ ಚಲಿಸುವ ರೀತಿಯಲ್ಲಿ ಸೂರ್ಯ-ಚಂದ್ರರನ್ನು ಅವನು ನಿಮಗೆ ನಿಯಂತ್ರಿಸಿಕೊಟ್ಟನು. ರಾತ್ರಿ-ಹಗಲಗಳನ್ನು ಕೂಡ ಅವನು ನಿಮಗೆ ನಿಯಂತ್ರಿಸಿಕೊಟ್ಟನು. وَسَخَّرَ لَكُمُ ٱلشَّمْسَ وَٱلْقَمَرَ دَآئِبَيْنِ ۖ وَسَخَّرَ لَكُمُ ٱلَّيْلَ وَٱلنَّهَارَ. ﴿33﴾
34 ನೀವು ಅವನೊಂದಿಗೆ ಕೇಳಿದ್ದೆಲ್ಲವನ್ನೂ ಅವನು ನಿಮಗೆ ನೀಡಿದನು. ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸತೊಡಗಿದರೆ ಅವುಗಳನ್ನು ಲೆಕ್ಕ ಮಾಡಲು ನಿಮಗೆ ಸಾಧ್ಯವಿಲ್ಲ. ಮನುಷ್ಯನು ನಿಜಕ್ಕೂ ಕಡು ಅಕ್ರಮಿ ಮತ್ತು ಕೃತಘ್ನನಾಗಿದ್ದಾನೆ. وَءَاتَىٰكُم مِّن كُلِّ مَا سَأَلْتُمُوهُ ۚ وَإِن تَعُدُّوا۟ نِعْمَتَ ٱللَّهِ لَا تُحْصُوهَآ ۗ إِنَّ ٱلْإِنسَٰنَ لَظَلُومٌۭ كَفَّارٌۭ. ﴿34﴾
35 ಇಬ್ರಾಹೀಮ್ ಪ್ರಾರ್ಥಿಸಿದ ಸಂದರ್ಭ(ವನ್ನು ಸ್ಮರಿಸಿ): “ಓ ನನ್ನ ಪರಿಪಾಲಕನೇ! ಈ ನಗರವನ್ನು (ಮಕ್ಕಾ) ನಿರ್ಭಯವಾಗಿ ಮಾಡು ಮತ್ತು ನನ್ನನ್ನು ಹಾಗೂ ನನ್ನ ಮಕ್ಕಳನ್ನು ವಿಗ್ರಹಾರಾಧನೆ ಮಾಡುವುದರಿಂದ ದೂರವಿರಿಸು. وَإِذْ قَالَ إِبْرَٰهِيمُ رَبِّ ٱجْعَلْ هَٰذَا ٱلْبَلَدَ ءَامِنًۭا وَٱجْنُبْنِى وَبَنِىَّ أَن نَّعْبُدَ ٱلْأَصْنَامَ. ﴿35﴾
36 ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ, ಅವು ಜನರಲ್ಲಿ ಹೆಚ್ಚಿನವರನ್ನು ದಾರಿತಪ್ಪಿಸಿವೆ. ಆದ್ದರಿಂದ ಯಾರು ನನ್ನನ್ನು ಹಿಂಬಾಲಿಸುತ್ತಾನೋ ಅವನು ನನ್ನವನು. ಯಾರು ನನಗೆ ಅವಿಧೇಯತೆ ತೋರುತ್ತಾನೋ—ನಿಶ್ಚಯವಾಗಿಯೂ ನೀನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿರುವೆ. رَبِّ إِنَّهُنَّ أَضْلَلْنَ كَثِيرًۭا مِّنَ ٱلنَّاسِ ۖ فَمَن تَبِعَنِى فَإِنَّهُۥ مِنِّى ۖ وَمَنْ عَصَانِى فَإِنَّكَ غَفُورٌۭ رَّحِيمٌۭ. ﴿36﴾
37 ಓ ನಮ್ಮ ಪರಿಪಾಲಕನೇ! ನಾನು ನನ್ನ ಮಕ್ಕಳಲ್ಲಿ ಕೆಲವರನ್ನು ಹೊಲಗಳಿಲ್ಲದ ಈ ಕಣಿವೆಯಲ್ಲಿ ನಿನ್ನ ಪವಿತ್ರ ಭವನದ ಬಳಿ ವಾಸ ಮಾಡಿಸಿದ್ದೇನೆ. ಓ ನಮ್ಮ ಪರಿಪಾಲಕನೇ! ಅವರು ನಮಾಝ್ ಸಂಸ್ಥಾಪಿಸುವುದಕ್ಕಾಗಿ. ಆದ್ದರಿಂದ ಜನರಲ್ಲಿ ಕೆಲವರ ಹೃದಯಗಳು ಅವರ ಕಡೆಗೆ ಒಲಿಯುವಂತೆ ಮಾಡು. ಅವರ ಉಪಜೀವನಕ್ಕಾಗಿ ಹಣ್ಣು-ಹಂಪಲುಗಳನ್ನು ನೀಡು. ಅವರು ಕೃತಜ್ಞರಾಗಲೂಬಹುದು.[1]
[1] ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ರವರು ಪತ್ನಿ ಹಾಜರ ಮತ್ತು ಪುತ್ರ ಇಸ್ಮಾಈಲರನ್ನು ಮಕ್ಕಾದ ನಿರ್ಜನ ಕಣಿವೆಯಲ್ಲಿ ಬಿಟ್ಟು ಹೊರಟುಹೋದರು. ಹೋಗುವಾಗ ಅವರು ಈ ಪ್ರಾರ್ಥನೆಯನ್ನು ಪ್ರಾರ್ಥಿಸಿದರು. ಅಲ್ಲಾಹು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು. ಮುಂದೆ ಮಕ್ಕಾ ಎಲ್ಲಾ ರೀತಿಯ ಹಣ್ಣು-ಹಂಪಲುಗಳು ದೊರೆಯುವ ಒಂದು ಜನನಿಬಿಡ ಪ್ರದೇಶವಾಗಿ ಮಾರ್ಪಟ್ಟಿತು.
رَّبَّنَآ إِنِّىٓ أَسْكَنتُ مِن ذُرِّيَّتِى بِوَادٍ غَيْرِ ذِى زَرْعٍ عِندَ بَيْتِكَ ٱلْمُحَرَّمِ رَبَّنَا لِيُقِيمُوا۟ ٱلصَّلَوٰةَ فَٱجْعَلْ أَفْـِٔدَةًۭ مِّنَ ٱلنَّاسِ تَهْوِىٓ إِلَيْهِمْ وَٱرْزُقْهُم مِّنَ ٱلثَّمَرَٰتِ لَعَلَّهُمْ يَشْكُرُونَ. ﴿37﴾
38 ಓ ನಮ್ಮ ಪರಿಪಾಲಕನೇ! ನಾವು ಬಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ನೀನು ತಿಳಿಯುವೆ. ಭೂಮಿಯಲ್ಲಿ ಅಥವಾ ಆಕಾಶದಲ್ಲಿರುವ ಯಾವುದೇ ವಸ್ತು ಅಲ್ಲಾಹನಿಂದ ಮರೆಯಾಗಿಲ್ಲ. رَبَّنَآ إِنَّكَ تَعْلَمُ مَا نُخْفِى وَمَا نُعْلِنُ ۗ وَمَا يَخْفَىٰ عَلَى ٱللَّهِ مِن شَىْءٍۢ فِى ٱلْأَرْضِ وَلَا فِى ٱلسَّمَآءِ. ﴿38﴾
39 ಇಳಿ ವಯಸ್ಸಿನಲ್ಲಿ ನನಗೆ ಇಸ್ಮಾಈಲ್ ಮತ್ತು ಇಸ್‍ಹಾಕರನ್ನು ದಯಪಾಲಿಸಿದ ಅಲ್ಲಾಹನಿಗೆ ಸರ್ವಸ್ತುತಿ. ನನ್ನ ಪರಿಪಾಲಕನು ನಿಜಕ್ಕೂ ಪ್ರಾರ್ಥನೆಗಳನ್ನು ಕೇಳುತ್ತಾನೆ. ٱلْحَمْدُ لِلَّهِ ٱلَّذِى وَهَبَ لِى عَلَى ٱلْكِبَرِ إِسْمَٰعِيلَ وَإِسْحَٰقَ ۚ إِنَّ رَبِّى لَسَمِيعُ ٱلدُّعَآءِ. ﴿39﴾
40 ಓ ನನ್ನ ಪರಿಪಾಲಕನೇ! ನನ್ನನ್ನು ನಮಾಝ್ ಸಂಸ್ಥಾಪಿಸುವವನನ್ನಾಗಿ ಮಾಡು. ನನ್ನ ಸಂತಾನದಲ್ಲೂ ಕೂಡ. ಓ ನಮ್ಮ ಪರಿಪಾಲಕನೇ! ನನ್ನ ಪ್ರಾರ್ಥನೆಯನ್ನು ಸ್ವೀಕರಿಸು. رَبِّ ٱجْعَلْنِى مُقِيمَ ٱلصَّلَوٰةِ وَمِن ذُرِّيَّتِى ۚ رَبَّنَا وَتَقَبَّلْ دُعَآءِ. ﴿40﴾
41 ಓ ನಮ್ಮ ಪರಿಪಾಲಕನೇ! ವಿಚಾರಣೆ ನಡೆಯುವ ದಿನ ನನ್ನನ್ನು, ನನ್ನ ತಂದೆ-ತಾಯಿಗಳನ್ನು ಮತ್ತು ಸತ್ಯವಿಶ್ವಾಸಿಗಳನ್ನು ಕ್ಷಮಿಸು.” رَبَّنَا ٱغْفِرْ لِى وَلِوَٰلِدَىَّ وَلِلْمُؤْمِنِينَ يَوْمَ يَقُومُ ٱلْحِسَابُ. ﴿41﴾
42 ಅಕ್ರಮಿಗಳು ಮಾಡುವ ದುಷ್ಕರ್ಮಗಳನ್ನು ಅಲ್ಲಾಹು ಗಮನಿಸುತ್ತಿಲ್ಲ ಎಂದು ನೀವು ಎಂದಿಗೂ ಭಾವಿಸಬೇಡಿ. ಅವನು ಅವರ ವಿಚಾರಣೆಯನ್ನು ವಿಳಂಬ ಮಾಡುವುದು ಕಣ್ಣುಗಳು ಭಯದಿಂದ ದುರುಗುಟ್ಟಿ ನೋಡುವ ದಿನದವರೆಗೆ ಮಾತ್ರ. وَلَا تَحْسَبَنَّ ٱللَّهَ غَٰفِلًا عَمَّا يَعْمَلُ ٱلظَّٰلِمُونَ ۚ إِنَّمَا يُؤَخِّرُهُمْ لِيَوْمٍۢ تَشْخَصُ فِيهِ ٱلْأَبْصَٰرُ. ﴿42﴾
43 ಅವರು ತಮ್ಮ ತಲೆಗಳನ್ನು ಎತ್ತಿಹಿಡಿದು ಓಡೋಡಿ ಧಾವಿಸುವರು. ಅವರ ದೃಷ್ಟಿಗಳು ಅವರ ಬಳಿಗೆ ಮರಳುವುದಿಲ್ಲ. ಅವರ ಹೃದಯಗಳು ಬರಿದಾಗಿರುವುವು. مُهْطِعِينَ مُقْنِعِى رُءُوسِهِمْ لَا يَرْتَدُّ إِلَيْهِمْ طَرْفُهُمْ ۖ وَأَفْـِٔدَتُهُمْ هَوَآءٌۭ. ﴿43﴾
44 ಜನರಿಗೆ ಶಿಕ್ಷೆಯು ಬರುವ ದಿನದ ಬಗ್ಗೆ ಎಚ್ಚರಿಕೆ ನೀಡಿರಿ. ಆಗ ಅಕ್ರಮವೆಸಗಿದವರು ಹೇಳುವರು: “ಓ ನಮ್ಮ ಪರಿಪಾಲಕನೇ! ಸಮೀಪದ ಒಂದು ಅವಧಿಯವರೆಗೆ ನಮಗೆ ಕಾಲಾವಕಾಶ ನೀಡು. ನಾವು ನಿನ್ನ ಕರೆಗೆ ಉತ್ತರಿಸುತ್ತೇವೆ ಮತ್ತು ಸಂದೇಶವಾಹಕರುಗಳನ್ನು ಅನುಸರಿಸುತ್ತೇವೆ.” (ಆಗ ಅವರೊಡನೆ ಹೇಳಲಾಗುವುದು): “ನೀವು ಇಹಲೋಕದಿಂದ (ಪರಲೋಕಕ್ಕೆ) ತೆರಳುವುದೇ ಇಲ್ಲವೆಂದು ಇದಕ್ಕೆ ಮೊದಲು ನೀವು ಆಣೆ ಮಾಡಿ ಹೇಳುತ್ತಿದ್ದಿರಲ್ಲವೇ?” وَأَنذِرِ ٱلنَّاسَ يَوْمَ يَأْتِيهِمُ ٱلْعَذَابُ فَيَقُولُ ٱلَّذِينَ ظَلَمُوا۟ رَبَّنَآ أَخِّرْنَآ إِلَىٰٓ أَجَلٍۢ قَرِيبٍۢ نُّجِبْ دَعْوَتَكَ وَنَتَّبِعِ ٱلرُّسُلَ ۗ أَوَلَمْ تَكُونُوٓا۟ أَقْسَمْتُم مِّن قَبْلُ مَا لَكُم مِّن زَوَالٍۢ. ﴿44﴾
45 ಸ್ವಯಂ ಅಕ್ರಮವೆಸಗಿದವರ ವಾಸಸ್ಥಳಗಳಲ್ಲೇ ನೀವೂ ವಾಸವಾಗಿದ್ದಿರಿ. ಅವರೊಡನೆ ನಾವು ಹೇಗೆ ವರ್ತಿಸಿದೆವೆಂದು ನಿಮಗೆ ಸ್ಪಷ್ಟವಾಗಿ ತಿಳಿದಿತ್ತು. ನಾವು ನಿಮಗೆ ಉದಾಹರಣೆಗಳನ್ನೂ ನೀಡಿದ್ದೆವು. وَسَكَنتُمْ فِى مَسَٰكِنِ ٱلَّذِينَ ظَلَمُوٓا۟ أَنفُسَهُمْ وَتَبَيَّنَ لَكُمْ كَيْفَ فَعَلْنَا بِهِمْ وَضَرَبْنَا لَكُمُ ٱلْأَمْثَالَ. ﴿45﴾
46 ಅವರು ತಮ್ಮ ತಂತ್ರಗಳನ್ನು ಪ್ರಯೋಗಿಸುತ್ತಿದ್ದರು. ಅವರ ಎಲ್ಲಾ ತಂತ್ರಗಳ ಬಗ್ಗೆ ಅಲ್ಲಾಹನಿಗೆ ತಿಳಿದಿದೆ. ಅವರ ತಂತ್ರಗಳಿಗೆ ಪರ್ವತಗಳನ್ನು ಅವುಗಳ ಸ್ಥಳದಿಂದ ಚಲಿಸುವಂತೆ ಮಾಡುವ ಶಕ್ತಿಯೇನೂ ಇಲ್ಲ. وَقَدْ مَكَرُوا۟ مَكْرَهُمْ وَعِندَ ٱللَّهِ مَكْرُهُمْ وَإِن كَانَ مَكْرُهُمْ لِتَزُولَ مِنْهُ ٱلْجِبَالُ. ﴿46﴾
47 ಅಲ್ಲಾಹು ತನ್ನ ಸಂದೇಶವಾಹಕರುಗಳಿಗೆ ನೀಡಿದ ವಾಗ್ದಾನವನ್ನು ಉಲ್ಲಂಘಿಸುತ್ತಾನೆಂದು ನೀವು ಎಂದಿಗೂ ಭಾವಿಸಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ಪ್ರತೀಕಾರ ಪಡೆಯುವವನಾಗಿದ್ದಾನೆ. فَلَا تَحْسَبَنَّ ٱللَّهَ مُخْلِفَ وَعْدِهِۦ رُسُلَهُۥٓ ۗ إِنَّ ٱللَّهَ عَزِيزٌۭ ذُو ٱنتِقَامٍۢ. ﴿47﴾
48 ಭೂಮಿಯು ಈ ಭೂಮಿಯಲ್ಲದ ಬೇರೆಯಾಗಿ ಮತ್ತು ಅದರಂತೆ ಆಕಾಶಗಳು ಕೂಡ ಬದಲಾಗುವ ಹಾಗೂ ಮನುಷ್ಯರೆಲ್ಲರೂ ಏಕೈಕನು ಮತ್ತು ಮಹಾ ಶಕ್ತಿಶಾಲಿಯಾದ ಅಲ್ಲಾಹನ ಮುಂಭಾಗಕ್ಕೆ ಬರುವ ದಿನ. يَوْمَ تُبَدَّلُ ٱلْأَرْضُ غَيْرَ ٱلْأَرْضِ وَٱلسَّمَٰوَٰتُ ۖ وَبَرَزُوا۟ لِلَّهِ ٱلْوَٰحِدِ ٱلْقَهَّارِ. ﴿48﴾
49 ಅಂದು ಅಪರಾಧಿಗಳನ್ನು ಸಂಕೋಲೆಗಳಲ್ಲಿ ಒಟ್ಟೊಟ್ಟಿಗೆ ಬಂಧಿಸಿಟ್ಟಿರುವುದನ್ನು ನೀವು ಕಾಣುವಿರಿ. وَتَرَى ٱلْمُجْرِمِينَ يَوْمَئِذٍۢ مُّقَرَّنِينَ فِى ٱلْأَصْفَادِ. ﴿49﴾
50 ಅವರ ಉಡುಪುಗಳು ಕಪ್ಪು ರಾಳದ್ದಾಗಿರುವುವು ಮತ್ತು ಬೆಂಕಿ ಅವರ ಮುಖಗಳನ್ನು ಮುಚ್ಚಿಕೊಳ್ಳುವುದು. سَرَابِيلُهُم مِّن قَطِرَانٍۢ وَتَغْشَىٰ وُجُوهَهُمُ ٱلنَّارُ. ﴿50﴾
51 ಅಲ್ಲಾಹು ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡುವುದಕ್ಕಾಗಿ. ನಿಶ್ಚಯವಾಗಿಯೂ, ಅಲ್ಲಾಹು ಅತಿಶೀಘ್ರವಾಗಿ ವಿಚಾರಣೆ ಮಾಡುವವನಾಗಿದ್ದಾನೆ. لِيَجْزِىَ ٱللَّهُ كُلَّ نَفْسٍۢ مَّا كَسَبَتْ ۚ إِنَّ ٱللَّهَ سَرِيعُ ٱلْحِسَابِ. ﴿51﴾
52 ಈ ಕುರ್‌ಆನ್ ಸಂಪೂರ್ಣ ಮನುಕುಲಕ್ಕೆ ಒಂದು ಸೂಚನಾಪತ್ರವಾಗಿದೆ. ಇದರ ಮೂಲಕ ಅವರಿಗೆ ಎಚ್ಚರಿಕೆ ನೀಡುವುದಕ್ಕಾಗಿ, ಏಕೈಕ ದೇವನು ಅಲ್ಲಾಹು ಮಾತ್ರವೆಂದು ಅವರು ತಿಳಿಯುವುದಕ್ಕಾಗಿ ಮತ್ತು ಬುದ್ಧಿವಂತರು ಉಪದೇಶ ಸ್ವೀಕರಿಸುವುದಕ್ಕಾಗಿ. هَٰذَا بَلَٰغٌۭ لِّلنَّاسِ وَلِيُنذَرُوا۟ بِهِۦ وَلِيَعْلَمُوٓا۟ أَنَّمَا هُوَ إِلَٰهٌۭ وَٰحِدٌۭ وَلِيَذَّكَّرَ أُو۟لُوا۟ ٱلْأَلْبَٰبِ. ﴿52﴾