Loading date... | Loading Hijri date... | Loading time...

الحجر

ಕನ್ನಡ Translation with Arabic Quran Text

ಕನ್ನಡ العربية
1 ಅಲಿಫ್ ಲಾಮ್ ರಾ. ಇವು ದೈವಿಕ ಗ್ರಂಥದ ವಚನಗಳು ಮತ್ತು ಸ್ಪಷ್ಟ ಕುರ್‌ಆನ್ ಆಗಿದೆ. الٓر ۚ تِلْكَ ءَايَٰتُ ٱلْكِتَٰبِ وَقُرْءَانٍۢ مُّبِينٍۢ. ﴿1﴾
2 ”ನಾವು ಮುಸಲ್ಮಾನರಾಗಿದ್ದರೆ!” ಎಂದು ಕೆಲವೊಮ್ಮೆ ಸತ್ಯನಿಷೇಧಿಗಳು ಹಾರೈಸುವರು.[1]
[1] ಮರಣದ ಸಮಯದಲ್ಲಿ, ದೇವದೂತರು ನರಕಾಗ್ನಿಯನ್ನು ತೋರಿಸುವಾಗ, ಅವರನ್ನು ನರಕಾಗ್ನಿಗೆ ಎಸೆಯುವಾಗ, ಪಾಪಿಗಳಾದ ಸತ್ಯವಿಶ್ವಾಸಿಗಳನ್ನು ನರಕ ಶಿಕ್ಷೆಯಿಂದ ಬಿಡುಗಡೆಗೊಳಿಸುವಾಗ, ಮುಸಲ್ಮಾನರು ವಿಚಾರಣೆ ನಡೆದು ಸ್ವರ್ಗಕ್ಕೆ ಹೋಗುವಾಗ ಮುಂತಾದ ಸಂದರ್ಭಗಳಲ್ಲಿ ನಾವು ಮುಸಲ್ಮಾನರಾಗಿದ್ದರೆ ಎಂದು ಅವರು ಹಾರೈಸುವರು. ಆದರೆ ಈ ಹಾರೈಕೆಯಿಂದ ಅವರಿಗೆ ಯಾವುದೇ ಪ್ರಯೋಜನವಿರುವುದಿಲ್ಲ.
رُّبَمَا يَوَدُّ ٱلَّذِينَ كَفَرُوا۟ لَوْ كَانُوا۟ مُسْلِمِينَ. ﴿2﴾
3 ಅವರನ್ನು ಬಿಟ್ಟುಬಿಡಿ. ಅವರು ತಿನ್ನುತ್ತಲೂ, ಆನಂದಿಸುತ್ತಲೂ, ಹುಸಿ ಭರವಸೆಗಳಲ್ಲಿ ತಲ್ಲೀನರಾಗುತ್ತಲೂ ಇರಲಿ. ಸದ್ಯವೇ ಅವರು ತಿಳಿಯುವರು. ذَرْهُمْ يَأْكُلُوا۟ وَيَتَمَتَّعُوا۟ وَيُلْهِهِمُ ٱلْأَمَلُ ۖ فَسَوْفَ يَعْلَمُونَ. ﴿3﴾
4 ನಾವು ಯಾವುದೇ ಊರನ್ನು ಅದಕ್ಕೆ ಒಂದು ನಿಗದಿತ ಅವಧಿಯನ್ನು ನೀಡದೆ ನಾಶ ಮಾಡಿಲ್ಲ. وَمَآ أَهْلَكْنَا مِن قَرْيَةٍ إِلَّا وَلَهَا كِتَابٌۭ مَّعْلُومٌۭ. ﴿4﴾
5 ಯಾವುದೇ ಜನತೆ ತಮ್ಮ ನಿಗದಿತ ಅವಧಿಯನ್ನು ದಾಟಿಹೋಗುವುದಿಲ್ಲ, ಹಿಂದೆ ಉಳಿಯುವುದೂ ಇಲ್ಲ. مَّا تَسْبِقُ مِنْ أُمَّةٍ أَجَلَهَا وَمَا يَسْتَـْٔخِرُونَ. ﴿5﴾
6 ಸತ್ಯನಿಷೇಧಿಗಳು ಹೇಳಿದರು: “ಓ ದೇವವಾಣಿ ಅವತೀರ್ಣವಾಗುವವನೇ! ನಿಜಕ್ಕೂ ನೀನೊಬ್ಬ ಮಾನಸಿಕ ಅಸ್ವಸ್ಥ. وَقَالُوا۟ يَٰٓأَيُّهَا ٱلَّذِى نُزِّلَ عَلَيْهِ ٱلذِّكْرُ إِنَّكَ لَمَجْنُونٌۭ. ﴿6﴾
7 ನೀನು ಸತ್ಯವಂತನಾಗಿದ್ದರೆ ನೀನೇಕೆ ನಮ್ಮ ಬಳಿಗೆ ದೇವದೂತರುಗಳನ್ನು ತರುವುದಿಲ್ಲ?” لَّوْ مَا تَأْتِينَا بِٱلْمَلَٰٓئِكَةِ إِن كُنتَ مِنَ ٱلصَّٰدِقِينَ. ﴿7﴾
8 ನಾವು ದೇವದೂತರುಗಳನ್ನು ಸತ್ಯ ಸಮೇತವಾಗಿಯೇ ಇಳಿಸುತ್ತೇವೆ.[1] ಆಗ ಅವರಿಗೆ ಯಾವುದೇ ಕಾಲಾವಕಾಶ ನೀಡಲಾಗಿರುವುದಿಲ್ಲ.
[1] ಯಾವುದಾದರೂ ಶಿಕ್ಷೆಯನ್ನು ಕಳುಹಿಸುವುದಕ್ಕಾಗಿಯೇ ಹೊರತು ನಾವು ದೇವದೂತರುಗಳನ್ನು ಇಳಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅವರೆಲ್ಲರೂ ನಾಶವಾಗುತ್ತಾರೆ. ಅವರಿಗೆ ಪಶ್ಚಾತ್ತಾಪಪಡಲು ಯಾವುದೇ ಕಾಲಾವಕಾಶ ನೀಡಲಾಗುವುದಿಲ್ಲ.
مَا نُنَزِّلُ ٱلْمَلَٰٓئِكَةَ إِلَّا بِٱلْحَقِّ وَمَا كَانُوٓا۟ إِذًۭا مُّنظَرِينَ. ﴿8﴾
9 ಈ ಕುರ್‌ಆನನ್ನು ಅವತೀರ್ಣಗೊಳಿಸಿದ್ದು ನಾವೇ. ನಾವೇ ಇದನ್ನು ಸಂರಕ್ಷಿಸುತ್ತೇವೆ. إِنَّا نَحْنُ نَزَّلْنَا ٱلذِّكْرَ وَإِنَّا لَهُۥ لَحَٰفِظُونَ. ﴿9﴾
10 ನಿಮಗಿಂತ ಮೊದಲು ನಾವು ಹಿಂದಿನ ಕಾಲದ ಜನರ ಅನೇಕ ಪಂಗಡಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದೆವು. وَلَقَدْ أَرْسَلْنَا مِن قَبْلِكَ فِى شِيَعِ ٱلْأَوَّلِينَ. ﴿10﴾
11 ಯಾವುದೇ ಸಂದೇಶವಾಹಕರು ಅವರ ಬಳಿಗೆ ಬಂದಾಗಲೆಲ್ಲಾ ಅವರು ತಮಾಷೆ ಮಾಡಿ ನಗುತ್ತಿದ್ದರು. وَمَا يَأْتِيهِم مِّن رَّسُولٍ إِلَّا كَانُوا۟ بِهِۦ يَسْتَهْزِءُونَ. ﴿11﴾
12 ಅಪರಾಧಿಗಳ ಹೃದಯಗಳಲ್ಲಿ ನಾವು ಈ ರೀತಿ ಅದನ್ನು (ತಮಾಷೆ ಮಾಡುವುದನ್ನು) ತೂರಿಸಿ ಬಿಡುತ್ತೇವೆ. كَذَٰلِكَ نَسْلُكُهُۥ فِى قُلُوبِ ٱلْمُجْرِمِينَ. ﴿12﴾
13 ಅವರು ಅದರಲ್ಲಿ ವಿಶ್ವಾಸವಿಡುವುದಿಲ್ಲ. ಹಿಂದಿನ ಕಾಲದ ಜನರ ಮೇಲಿನ ಶಿಕ್ಷಾಕ್ರಮವು ಈಗಾಗಲೇ ಜರುಗಿ ಬಿಟ್ಟಿದೆ. لَا يُؤْمِنُونَ بِهِۦ ۖ وَقَدْ خَلَتْ سُنَّةُ ٱلْأَوَّلِينَ. ﴿13﴾
14 ನಾವು ಅವರ ಮೇಲೆ ಆಕಾಶದ ದ್ವಾರವನ್ನು ತೆರೆದುಕೊಟ್ಟು ಅವರು ಅದಕ್ಕೆ ಏರಿಹೋದರೂ ಸಹ, وَلَوْ فَتَحْنَا عَلَيْهِم بَابًۭا مِّنَ ٱلسَّمَآءِ فَظَلُّوا۟ فِيهِ يَعْرُجُونَ. ﴿14﴾
15 ಅವರು ಹೇಳುವರು: “ನಮ್ಮನ್ನು ಮಂತ್ರಮುಗ್ಧಗೊಳಿಸಲಾಗಿದೆ. ಅಲ್ಲ, ನಮಗೆ ಮಾಟ ಮಾಡಲಾಗಿದೆ.”[1]
[1] ದೇವದೂತರು ಬರಬೇಕು ಎಂದು ಸತ್ಯನಿಷೇಧಿಗಳು ಆಗ್ರಹಿಸುವುದು ಕೇವಲ ಸತ್ಯವಿಶ್ವಾಸಿಗಳಾಗುವುದರಿಂದ ನುಣುಚಿಕೊಳ್ಳಲು ಮಾತ್ರ. ಅವರಿಗೆ ಆಕಾಶದ ಬಾಗಿಲುಗಳನ್ನು ತೆರೆದುಕೊಟ್ಟು ಅವರು ಅದಕ್ಕೆ ಏರಿ ಹೋಗಿ ಅಲ್ಲಿನ ಸ್ಥಿತಿಗಳನ್ನು ಕಣ್ಣಾರೆ ನೋಡಿದರೂ ಅವರು ಸಂದೇಶವಾಹಕರಲ್ಲಿ ವಿಶ್ವಾಸವಿಡುವುದಿಲ್ಲ. ನಮ್ಮನ್ನು ಮಂತ್ರಮುಗ್ಧಗೊಳಿಸಲಾಗಿದೆ ಅಥವಾ ನಮಗೆ ಮಾಟ ಮಾಡಲಾಗಿದೆ ಎಂದೇ ಅವರು ಹೇಳುವರು.
لَقَالُوٓا۟ إِنَّمَا سُكِّرَتْ أَبْصَٰرُنَا بَلْ نَحْنُ قَوْمٌۭ مَّسْحُورُونَ. ﴿15﴾
16 ನಾವು ಆಕಾಶದಲ್ಲಿ ನಕ್ಷತ್ರ ಪುಂಜಗಳನ್ನು ಮಾಡಿದ್ದೇವೆ ಮತ್ತು ನೋಡುಗರಿಗಾಗಿ ಅವುಗಳನ್ನು ಅಲಂಕರಿಸಿದ್ದೇವೆ. وَلَقَدْ جَعَلْنَا فِى ٱلسَّمَآءِ بُرُوجًۭا وَزَيَّنَّٰهَا لِلنَّٰظِرِينَ. ﴿16﴾
17 ಮತ್ತು ಅದನ್ನು (ಆಕಾಶವನ್ನು) ಎಲ್ಲಾ ಬಹಿಷ್ಕೃತ ಶೈತಾನರಿಂದ ಸಂರಕ್ಷಿಸಿದ್ದೇವೆ. وَحَفِظْنَٰهَا مِن كُلِّ شَيْطَٰنٍۢ رَّجِيمٍ. ﴿17﴾
18 ಯಾರಾದರೂ ಕದ್ದಾಲಿಸಲು ಪ್ರಯತ್ನಿಸಿದರೆ, ಅಗ್ನಿಜ್ವಾಲೆಯು ಅವನನ್ನು ಹಿಂಬಾಲಿಸುತ್ತದೆ. إِلَّا مَنِ ٱسْتَرَقَ ٱلسَّمْعَ فَأَتْبَعَهُۥ شِهَابٌۭ مُّبِينٌۭ. ﴿18﴾
19 ನಾವು ಭೂಮಿಯನ್ನು ವಿಸ್ತರಿಸಿದೆವು ಮತ್ತು ಅದರಲ್ಲಿ ಪರ್ವತಗಳನ್ನು ಹಾಕಿದೆವು. ಅದರಲ್ಲಿ ನಾವು ಎಲ್ಲವನ್ನೂ ಒಂದು ನಿಗದಿತ ಪ್ರಮಾಣದಲ್ಲಿ ಬೆಳೆಸಿದೆವು. وَٱلْأَرْضَ مَدَدْنَٰهَا وَأَلْقَيْنَا فِيهَا رَوَٰسِىَ وَأَنۢبَتْنَا فِيهَا مِن كُلِّ شَىْءٍۢ مَّوْزُونٍۢ. ﴿19﴾
20 ಅದರಲ್ಲಿ ನಾವು ನಿಮಗೆ ಮತ್ತು ನೀವು ಆಹಾರ ನೀಡದವರಿಗೆ[1] ಜೀವನ ಮಾರ್ಗಗಳನ್ನು ಮಾಡಿಕೊಟ್ಟೆವು.
[1] ಅಂದರೆ ನೌಕರರು, ಕೂಲಿಯಾಳುಗಳು, ಗುಲಾಮರು, ಜಾನುವಾರುಗಳು ಮುಂತಾದ ನಿಮ್ಮ ಅಧೀನದಲ್ಲಿರುವವರು. ಇವರಿಗೆ ಆಹಾರ ಕೊಡುವುದು ನೀವಾದರೂ ವಾಸ್ತವವಾಗಿ ಅದು ನೀವಲ್ಲ. ಬದಲಿಗೆ, ಅವರಿಗೆ ಆಹಾರ ಕೊಡುವುದು ಅಲ್ಲಾಹನಾಗಿದ್ದಾನೆ.
وَجَعَلْنَا لَكُمْ فِيهَا مَعَٰيِشَ وَمَن لَّسْتُمْ لَهُۥ بِرَٰزِقِينَ. ﴿20﴾
21 ಯಾವುದೇ ವಸ್ತುವಾದರೂ ಅದರ ಬೊಕ್ಕಸಗಳು ನಮ್ಮ ಬಳಿಯಲ್ಲೇ ಇವೆ. ನಾವು ಪ್ರತಿಯೊಂದು ವಸ್ತುವನ್ನೂ ಅದರ ನಿಗದಿತ ಪ್ರಮಾಣಕ್ಕೆ ಅನುಗುಣವಾಗಿಯೇ ಇಳಿಸುತ್ತೇವೆ. وَإِن مِّن شَىْءٍ إِلَّا عِندَنَا خَزَآئِنُهُۥ وَمَا نُنَزِّلُهُۥٓ إِلَّا بِقَدَرٍۢ مَّعْلُومٍۢ. ﴿21﴾
22 ನಾವು ಫಲವತ್ತಾಗಿಸುವ ಗಾಳಿಯನ್ನು ಕಳುಹಿಸುತ್ತೇವೆ. ನಂತರ ಆಕಾಶದಿಂದ ಮಳೆಯನ್ನು ಸುರಿಸಿ, ಅದನ್ನು ನಿಮಗೆ ಕುಡಿಯಲು ನೀಡುತ್ತೇವೆ. ನೀವು ಅದನ್ನು ಸಂಗ್ರಹಿಸಿಡುವವರಲ್ಲ. وَأَرْسَلْنَا ٱلرِّيَٰحَ لَوَٰقِحَ فَأَنزَلْنَا مِنَ ٱلسَّمَآءِ مَآءًۭ فَأَسْقَيْنَٰكُمُوهُ وَمَآ أَنتُمْ لَهُۥ بِخَٰزِنِينَ. ﴿22﴾
23 ನಿಶ್ಚಯವಾಗಿಯೂ ನಾವೇ ಜೀವನ ಮತ್ತು ಮರಣವನ್ನು ನೀಡುವವರು. ನಾವೇ (ಎಲ್ಲಾ ವಸ್ತುಗಳ) ಉತ್ತರಾಧಿಕಾರಿಗಳು. وَإِنَّا لَنَحْنُ نُحْىِۦ وَنُمِيتُ وَنَحْنُ ٱلْوَٰرِثُونَ. ﴿23﴾
24 ನಿಮ್ಮಲ್ಲಿ ಇದಕ್ಕೆ ಮೊದಲು ತೀರಿ ಹೋದವರು ಯಾರೆಂದು ನಮಗೆ ತಿಳಿದಿದೆ. ಮುಂದೆ ಬರಲಿರುವವರು ಯಾರೆಂದೂ ನಮಗೆ ತಿಳಿದಿದೆ. وَلَقَدْ عَلِمْنَا ٱلْمُسْتَقْدِمِينَ مِنكُمْ وَلَقَدْ عَلِمْنَا ٱلْمُسْتَـْٔخِرِينَ. ﴿24﴾
25 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರನ್ನು ಒಟ್ಟು ಸೇರಿಸುವನು. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ. وَإِنَّ رَبَّكَ هُوَ يَحْشُرُهُمْ ۚ إِنَّهُۥ حَكِيمٌ عَلِيمٌۭ. ﴿25﴾
26 ನಾವು ಮನುಷ್ಯನನ್ನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಸೃಷ್ಟಿಸಿದೆವು. وَلَقَدْ خَلَقْنَا ٱلْإِنسَٰنَ مِن صَلْصَٰلٍۢ مِّنْ حَمَإٍۢ مَّسْنُونٍۢ. ﴿26﴾
27 ನಾವು ಜಿನ್ನ್‌ಗಳನ್ನು ಇದಕ್ಕಿಂತ ಮೊದಲು ತೀಕ್ಷ್ಣ ತಾಪವಿರುವ ಬೆಂಕಿಯಿಂದ ಸೃಷ್ಟಿಸಿದೆವು. وَٱلْجَآنَّ خَلَقْنَٰهُ مِن قَبْلُ مِن نَّارِ ٱلسَّمُومِ. ﴿27﴾
28 ತಮ್ಮ ಪರಿಪಾಲಕನು (ಅಲ್ಲಾಹು) ದೇವದೂತರುಗಳೊಡನೆ ಹೇಳಿದ ಸಂದರ್ಭ: “ನಾನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸುತ್ತೇನೆ. وَإِذْ قَالَ رَبُّكَ لِلْمَلَٰٓئِكَةِ إِنِّى خَٰلِقٌۢ بَشَرًۭا مِّن صَلْصَٰلٍۢ مِّنْ حَمَإٍۢ مَّسْنُونٍۢ. ﴿28﴾
29 ನಾನು ಅವನಿಗೆ ಪೂರ್ಣ ರೂಪವನ್ನು ನೀಡಿ ಅವನಿಗೆ ನನ್ನ ಆತ್ಮವನ್ನು ಊದಿದರೆ, ನೀವೆಲ್ಲರೂ ಅವನಿಗೆ ಸಾಷ್ಟಾಂಗ ಮಾಡುತ್ತಾ ಬೀಳಿರಿ.” فَإِذَا سَوَّيْتُهُۥ وَنَفَخْتُ فِيهِ مِن رُّوحِى فَقَعُوا۟ لَهُۥ سَٰجِدِينَ. ﴿29﴾
30 ಆಗ ದೇವದೂತರುಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗ ಮಾಡಿದರು. فَسَجَدَ ٱلْمَلَٰٓئِكَةُ كُلُّهُمْ أَجْمَعُونَ. ﴿30﴾
31 ಇಬ್ಲೀಸನ ಹೊರತು. ಅವನು ಸಾಷ್ಟಾಂಗ ಮಾಡುವವರೊಡನೆ ಸೇರಲು ನಿರಾಕರಿಸಿದನು. إِلَّآ إِبْلِيسَ أَبَىٰٓ أَن يَكُونَ مَعَ ٱلسَّٰجِدِينَ. ﴿31﴾
32 ಅಲ್ಲಾಹು ಕೇಳಿದನು: “ಓ ಇಬ್ಲೀಸ್! ನೀನು ಸಾಷ್ಟಾಂಗ ಮಾಡುವವರೊಡನೆ ಸೇರದಿರಲು ಕಾರಣವೇನು?” قَالَ يَٰٓإِبْلِيسُ مَا لَكَ أَلَّا تَكُونَ مَعَ ٱلسَّٰجِدِينَ. ﴿32﴾
33 ಅವನು ಹೇಳಿದನು: “ನೀನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಸೃಷ್ಟಿಸಿದ ಈ ಮಾನವನಿಗೆ ನಾನು ಸಾಷ್ಟಾಂಗ ಮಾಡಬೇಕಾದವನಲ್ಲ.” قَالَ لَمْ أَكُن لِّأَسْجُدَ لِبَشَرٍ خَلَقْتَهُۥ مِن صَلْصَٰلٍۢ مِّنْ حَمَإٍۢ مَّسْنُونٍۢ. ﴿33﴾
34 ಅಲ್ಲಾಹು ಹೇಳಿದನು: “ಇಲ್ಲಿಂದ ಹೊರಟುಹೋಗು. ನಿಜಕ್ಕೂ ನೀನು ಬಹಿಷ್ಕೃತನಾಗಿರುವೆ. قَالَ فَٱخْرُجْ مِنْهَا فَإِنَّكَ رَجِيمٌۭ. ﴿34﴾
35 ಪ್ರತಿಫಲದ ದಿನದ ತನಕ ನಿನ್ನ ಮೇಲೆ ಶಾಪವಿದೆ.” وَإِنَّ عَلَيْكَ ٱللَّعْنَةَ إِلَىٰ يَوْمِ ٱلدِّينِ. ﴿35﴾
36 ಅವನು ಹೇಳಿದನು: “ಓ ನನ್ನ ಪರಿಪಾಲಕನೇ! ಅವರನ್ನು ಜೀವಂತ ಎಬ್ಬಿಸಲಾಗುವ ದಿನದ ತನಕ ನನಗೆ ಕಾಲಾವಕಾಶ ನೀಡು.” قَالَ رَبِّ فَأَنظِرْنِىٓ إِلَىٰ يَوْمِ يُبْعَثُونَ. ﴿36﴾
37 ಅಲ್ಲಾಹು ಹೇಳಿದನು: “ಸರಿ. ನಿನ್ನನ್ನು ಕಾಲಾವಕಾಶ ನೀಡಲಾದವರಲ್ಲಿ ಸೇರಿಸಿದ್ದೇನೆ. قَالَ فَإِنَّكَ مِنَ ٱلْمُنظَرِينَ. ﴿37﴾
38 ಆ ನಿಗದಿತ ಸಮಯದ ದಿನದ ತನಕ.” إِلَىٰ يَوْمِ ٱلْوَقْتِ ٱلْمَعْلُومِ. ﴿38﴾
39 ಅವನು ಹೇಳಿದನು: “ಓ ನನ್ನ ಪರಿಪಾಲಕನೇ! ನೀನು ನನ್ನನ್ನು ದಾರಿತಪ್ಪಿಸಿದ ಕಾರಣ, ಭೂಮಿಯಲ್ಲಿ ನಾನು ಅವರೆಲ್ಲರಿಗೂ ಪಾಪಗಳನ್ನು ಅಂದವಾಗಿ ತೋರಿಸಿಕೊಡುವೆನು ಮತ್ತು ಅವರೆಲ್ಲರನ್ನೂ ದಾರಿತಪ್ಪಿಸುವೆನು. قَالَ رَبِّ بِمَآ أَغْوَيْتَنِى لَأُزَيِّنَنَّ لَهُمْ فِى ٱلْأَرْضِ وَلَأُغْوِيَنَّهُمْ أَجْمَعِينَ. ﴿39﴾
40 ಅವರಲ್ಲಿರುವ ನಿನ್ನ ನಿಷ್ಕಳಂಕ ದಾಸರ ಹೊರತು.” إِلَّا عِبَادَكَ مِنْهُمُ ٱلْمُخْلَصِينَ. ﴿40﴾
41 ಅಲ್ಲಾಹು ಹೇಳಿದನು: “ಇದು ನನ್ನ ಬಳಿಗೆ ತಲುಪುವ ನೇರ ಮಾರ್ಗವಾಗಿದೆ. قَالَ هَٰذَا صِرَٰطٌ عَلَىَّ مُسْتَقِيمٌ. ﴿41﴾
42 ನಿಶ್ಚಯವಾಗಿಯೂ, ನನ್ನ ದಾಸರ ಮೇಲೆ ನಿನಗೆ ಯಾವುದೇ ಅಧಿಕಾರವಿಲ್ಲ. ಅವರಲ್ಲಿ ನಿನ್ನನ್ನು ಹಿಂಬಾಲಿಸಿದ ದುರ್ಮಾರ್ಗಿಗಳ ಹೊರತು. إِنَّ عِبَادِى لَيْسَ لَكَ عَلَيْهِمْ سُلْطَٰنٌ إِلَّا مَنِ ٱتَّبَعَكَ مِنَ ٱلْغَاوِينَ. ﴿42﴾
43 ನಿಶ್ಚಯವಾಗಿಯೂ, ನರಕಾಗ್ನಿಯು ಅವರೆಲ್ಲರಿಗೂ ವಾಗ್ದಾನ ಮಾಡಲಾದ ಸ್ಥಳವಾಗಿದೆ. وَإِنَّ جَهَنَّمَ لَمَوْعِدُهُمْ أَجْمَعِينَ. ﴿43﴾
44 ಅದಕ್ಕೆ ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೂ ಅವರಲ್ಲಿರುವ ಒಂದು ವಿಭಾಗವನ್ನು ವಿಂಗಡಿಸಿಡಲಾಗಿದೆ. لَهَا سَبْعَةُ أَبْوَٰبٍۢ لِّكُلِّ بَابٍۢ مِّنْهُمْ جُزْءٌۭ مَّقْسُومٌ. ﴿44﴾
45 ನಿಶ್ಚಯವಾಗಿಯೂ, ದೇವಭಯವುಳ್ಳವರು ಉದ್ಯಾನಗಳಲ್ಲಿ ಮತ್ತು ಚಿಲುಮೆಗಳಲ್ಲಿರುತ್ತಾರೆ. إِنَّ ٱلْمُتَّقِينَ فِى جَنَّٰتٍۢ وَعُيُونٍ. ﴿45﴾
46 (ಅವರೊಡನೆ ಹೇಳಲಾಗುವುದು): “ನಿರ್ಭಯ ಮತ್ತು ಶಾಂತಿಯಿಂದ ಅದರೊಳಗೆ ಪ್ರವೇಶಿಸಿರಿ.” ٱدْخُلُوهَا بِسَلَٰمٍ ءَامِنِينَ. ﴿46﴾
47 ಅವರ ಹೃದಯಗಳಲ್ಲಿ ಯಾವುದೇ ರೀತಿಯ ದ್ವೇಷವಿದ್ದರೆ ನಾವು ಅದನ್ನು ತೊಲಗಿಸುವೆವು. ಅವರು ಸಹೋದರರಂತೆ ಪರಸ್ಪರ ಮುಖಾಮುಖಿಯಾಗಿ ಸಿಂಹಾಸನಗಳಲ್ಲಿ ಕುಳಿತಿರುವರು. وَنَزَعْنَا مَا فِى صُدُورِهِم مِّنْ غِلٍّ إِخْوَٰنًا عَلَىٰ سُرُرٍۢ مُّتَقَٰبِلِينَ. ﴿47﴾
48 ಅಲ್ಲಿ ಅವರಿಗೆ ಯಾವುದೇ ರೀತಿಯ ಆಯಾಸ ಉಂಟಾಗುವುದಿಲ್ಲ. ಅವರನ್ನು ಅಲ್ಲಿಂದ ಹೊರದಬ್ಬಲಾಗುವುದೂ ಇಲ್ಲ. لَا يَمَسُّهُمْ فِيهَا نَصَبٌۭ وَمَا هُم مِّنْهَا بِمُخْرَجِينَ. ﴿48﴾
49 ನನ್ನ ದಾಸರಿಗೆ, ನಾನು ಅತ್ಯಂತ ಕ್ಷಮಿಸುವವನು ಮತ್ತು ಅತ್ಯಧಿಕ ದಯೆ ತೋರುವವನೆಂದು ತಿಳಿಸಿ. ۞ نَبِّئْ عِبَادِىٓ أَنِّىٓ أَنَا ٱلْغَفُورُ ٱلرَّحِيمُ. ﴿49﴾
50 ನನ್ನ ಶಿಕ್ಷೆಯು ಅತ್ಯಧಿಕ ನೋವಿನಿಂದ ಕೂಡಿದ ಶಿಕ್ಷೆಯಾಗಿದೆಯೆಂದೂ ತಿಳಿಸಿ. وَأَنَّ عَذَابِى هُوَ ٱلْعَذَابُ ٱلْأَلِيمُ. ﴿50﴾
51 ಇಬ್ರಾಹೀಮ‌ರ ಅತಿಥಿಗಳ ಬಗ್ಗೆ ಅವರಿಗೆ ತಿಳಿಸಿ. وَنَبِّئْهُمْ عَن ضَيْفِ إِبْرَٰهِيمَ. ﴿51﴾
52 ಅವರು ಇಬ್ರಾಹೀಮ‌ರ ಬಳಿಗೆ ಬಂದು “ಸಲಾಮ್” ಎಂದು ಹೇಳಿದ ಸಂದರ್ಭ. ಇಬ್ರಾಹೀಮ್ ಹೇಳಿದರು: “ನಿಜಕ್ಕೂ ನಮಗೆ ನಿಮ್ಮ ಬಗ್ಗೆ ಭಯವಾಗುತ್ತಿದೆ.” إِذْ دَخَلُوا۟ عَلَيْهِ فَقَالُوا۟ سَلَٰمًۭا قَالَ إِنَّا مِنكُمْ وَجِلُونَ. ﴿52﴾
53 ಅವರು ಉತ್ತರಿಸಿದರು: “ಭಯಪಡಬೇಡಿ! ನಾವು ನಿಮಗೆ ಒಬ್ಬ ಜ್ಞಾನವಂತ ಪುತ್ರನ ಜನನದ ಶುಭ ಸುದ್ದಿಯನ್ನು ತಿಳಿಸುತ್ತೇವೆ.” قَالُوا۟ لَا تَوْجَلْ إِنَّا نُبَشِّرُكَ بِغُلَٰمٍ عَلِيمٍۢ. ﴿53﴾
54 ಇಬ್ರಾಹೀಮ್ ಕೇಳಿದರು: “ನಾನು ಇಳಿ ವಯಸ್ಸನ್ನು ತಲುಪಿದ ಬಳಿಕ ನೀವು ನನಗೆ ಶುಭ ಸುದ್ದಿ ತಿಳಿಸುತ್ತಿದ್ದೀರಾ? ನೀವು ಎಂತಹ ಶುಭ ಸುದ್ದಿ ತಿಳಿಸುತ್ತೀರಿ?” قَالَ أَبَشَّرْتُمُونِى عَلَىٰٓ أَن مَّسَّنِىَ ٱلْكِبَرُ فَبِمَ تُبَشِّرُونَ. ﴿54﴾
55 ಅವರು ಹೇಳಿದರು: “ನಾವು ನಿಮಗೆ ಸತ್ಯವಾದ ಒಂದು ಶುಭ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಆದ್ದರಿಂದ ನೀವು ನಿರಾಶರಾದವರಲ್ಲಿ ಸೇರಬೇಡಿ.” قَالُوا۟ بَشَّرْنَٰكَ بِٱلْحَقِّ فَلَا تَكُن مِّنَ ٱلْقَٰنِطِينَ. ﴿55﴾
56 ಇಬ್ರಾಹೀಮ್ ಹೇಳಿದರು: “ತನ್ನ ಪರಿಪಾಲಕನ (ಅಲ್ಲಾಹನ) ಕರುಣೆಯ ಬಗ್ಗೆ ದಾರಿತಪ್ಪಿದವರ ಹೊರತು ಇನ್ನಾರು ನಿರಾಶರಾಗುತ್ತಾರೆ?” قَالَ وَمَن يَقْنَطُ مِن رَّحْمَةِ رَبِّهِۦٓ إِلَّا ٱلضَّآلُّونَ. ﴿56﴾
57 ಇಬ್ರಾಹೀಮ್ ಕೇಳಿದರು: “ಓ ದೂತರೇ! ಇಲ್ಲಿ ನಿಮಗೇನು ಕೆಲಸವಿದೆಯೆಂದು ಬಂದಿದ್ದೀರಿ?” قَالَ فَمَا خَطْبُكُمْ أَيُّهَا ٱلْمُرْسَلُونَ. ﴿57﴾
58 ಅವರು ಉತ್ತರಿಸಿದರು: “ನಮ್ಮನ್ನು ಅಪರಾಧಿಗಳಾದ ಜನರ ಬಳಿಗೆ ಕಳುಹಿಸಲಾಗಿದೆ. قَالُوٓا۟ إِنَّآ أُرْسِلْنَآ إِلَىٰ قَوْمٍۢ مُّجْرِمِينَ. ﴿58﴾
59 ಆದರೆ ಲೂತ್‍ರ ಕುಟುಂಬವು ಇದರಿಂದ ಹೊರತಾಗಿದೆ. ನಾವು ಅವರೆಲ್ಲರನ್ನೂ ಖಂಡಿತ ರಕ್ಷಿಸುವೆವು. إِلَّآ ءَالَ لُوطٍ إِنَّا لَمُنَجُّوهُمْ أَجْمَعِينَ. ﴿59﴾
60 ಆದರೆ ಅವರ ಹೆಂಡತಿಯ ಹೊರತು.” ನಾವು ಅವಳನ್ನು ಬಾಕಿಯಾಗುವವರಲ್ಲಿ (ಶಿಕ್ಷೆಗೆ ಗುರಿಯಾಗುವವರಲ್ಲಿ) ನಿರ್ಣಯಿಸಿದ್ದೇವೆ. إِلَّا ٱمْرَأَتَهُۥ قَدَّرْنَآ ۙ إِنَّهَا لَمِنَ ٱلْغَٰبِرِينَ. ﴿60﴾
61 ನಂತರ ಆ ದೂತರು ಲೂತರ ಕುಟುಂಬದವರ ಬಳಿಗೆ ಬಂದಾಗ, فَلَمَّا جَآءَ ءَالَ لُوطٍ ٱلْمُرْسَلُونَ. ﴿61﴾
62 ಲೂತ್ ಹೇಳಿದರು: “ನಿಜಕ್ಕೂ ನೀವು ಅಪರಿಚಿತ ಜನರಂತೆ ಕಾಣುತ್ತೀರಿ.” قَالَ إِنَّكُمْ قَوْمٌۭ مُّنكَرُونَ. ﴿62﴾
63 ಅವರು ಉತ್ತರಿಸಿದರು: “ಅಲ್ಲ, ವಾಸ್ತವವಾಗಿ ಈ ಜನರು ಯಾವುದರ ಬಗ್ಗೆ ಸಂಶಯಪಡುತ್ತಿದ್ದಾರೋ ಅದನ್ನೇ ನಾವು ತಂದಿದ್ದೇವೆ. قَالُوا۟ بَلْ جِئْنَٰكَ بِمَا كَانُوا۟ فِيهِ يَمْتَرُونَ. ﴿63﴾
64 ನಾವು ನಿಮ್ಮ ಬಳಿಗೆ ಸತ್ಯದೊಂದಿಗೆ ಬಂದಿದ್ದೇವೆ. ನಿಶ್ಚಯವಾಗಿಯೂ ನಾವು ಸತ್ಯವಂತರಾಗಿದ್ದೇವೆ. وَأَتَيْنَٰكَ بِٱلْحَقِّ وَإِنَّا لَصَٰدِقُونَ. ﴿64﴾
65 ಆದ್ದರಿಂದ ರಾತ್ರಿಯ ಒಂದು ಭಾಗದಲ್ಲಿ ನೀವು ತಮ್ಮ ಕುಟುಂಬ ಸಮೇತ ಇಲ್ಲಿಂದ ಹೊರಡಿ. ನೀವು ಅವರನ್ನು (ಕುಟುಂಬವನ್ನು) ಹಿಂದಿನಿಂದ ಹಿಂಬಾಲಿಸಿರಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡದಿರಲಿ. ನಿಮಗೆ ಆದೇಶಿಸಲಾಗುವ ಕಡೆಗೆ ಸಾಗಿರಿ.” فَأَسْرِ بِأَهْلِكَ بِقِطْعٍۢ مِّنَ ٱلَّيْلِ وَٱتَّبِعْ أَدْبَٰرَهُمْ وَلَا يَلْتَفِتْ مِنكُمْ أَحَدٌۭ وَٱمْضُوا۟ حَيْثُ تُؤْمَرُونَ. ﴿65﴾
66 ನಾವು ಲೂತರಿಗೆ ಆ ವಿಷಯದ ತೀರ್ಮಾನವನ್ನು ತಿಳಿಸಿದೆವು—ಅದೇನೆಂದರೆ, ಬೆಳಗಾಗುತ್ತಿದ್ದಂತೆ ಇವರ ಬುಡವನ್ನೇ ಕತ್ತರಿಸಿ ಬಿಡಲಾಗುವುದೆಂದು. وَقَضَيْنَآ إِلَيْهِ ذَٰلِكَ ٱلْأَمْرَ أَنَّ دَابِرَ هَٰٓؤُلَآءِ مَقْطُوعٌۭ مُّصْبِحِينَ. ﴿66﴾
67 ನಗರ ವಾಸಿಗಳು ಕೇಕೆ ಹಾಕುತ್ತಾ ಬಂದರು. وَجَآءَ أَهْلُ ٱلْمَدِينَةِ يَسْتَبْشِرُونَ. ﴿67﴾
68 ಲೂತ್ ಹೇಳಿದರು: “ಇವರು ನನ್ನ ಅತಿಥಿಗಳು! ದಯವಿಟ್ಟು ನನಗೆ ಅವಮಾನ ಮಾಡಬೇಡಿ. قَالَ إِنَّ هَٰٓؤُلَآءِ ضَيْفِى فَلَا تَفْضَحُونِ. ﴿68﴾
69 ಅಲ್ಲಾಹನನ್ನು ಭಯಪಡಿರಿ. ನನ್ನನ್ನು ತಮಾಷೆ ಮಾಡಬೇಡಿ.” وَٱتَّقُوا۟ ٱللَّهَ وَلَا تُخْزُونِ. ﴿69﴾
70 ಅವರು ಹೇಳಿದರು: “ಜಗತ್ತಿನಲ್ಲಿರುವವರ ವಿಷಯದಲ್ಲಿ (ಹಸ್ತಕ್ಷೇಪ ಮಾಡಬಾರದೆಂದು) ನಾವು ನಿನ್ನನ್ನು ತಡೆದಿಲ್ಲವೇ?” قَالُوٓا۟ أَوَلَمْ نَنْهَكَ عَنِ ٱلْعَٰلَمِينَ. ﴿70﴾
71 ಲೂತ್ ಹೇಳಿದರು: “ನಿಮಗೆ ಅದನ್ನು ಮಾಡಲೇಬೇಕೆಂದಿದ್ದರೆ ಇಲ್ಲಿ ನನ್ನ ಹೆಣ್ಣುಮಕ್ಕಳಿದ್ದಾರೆ.” قَالَ هَٰٓؤُلَآءِ بَنَاتِىٓ إِن كُنتُمْ فَٰعِلِينَ. ﴿71﴾
72 (ಪ್ರವಾದಿಯವರೇ) ನಿಮ್ಮ ಆಯುಷ್ಯದ ಮೇಲಾಣೆ! ಅವರು ಕಾಮೋನ್ಮಾದದಿಂದ ಅಂಧರಾಗಿ ಅಲೆಯುತ್ತಿದ್ದರು. لَعَمْرُكَ إِنَّهُمْ لَفِى سَكْرَتِهِمْ يَعْمَهُونَ. ﴿72﴾
73 ಸೂರ್ಯೋದಯವಾಗುತ್ತಿದ್ದಂತೆ ಆ ಮಹಾ ಚೀತ್ಕಾರವು ಅವರನ್ನು ಹಿಡಿದುಬಿಟ್ಟಿತು. فَأَخَذَتْهُمُ ٱلصَّيْحَةُ مُشْرِقِينَ. ﴿73﴾
74 ನಂತರ ನಾವು ಆ ಊರನ್ನು ಬುಡಮೇಲು ಮಾಡಿದೆವು ಮತ್ತು ಅವರ ಮೇಲೆ ಕಲ್ಲುಗಳ ಮಳೆಯನ್ನು ಸುರಿಸಿದೆವು. فَجَعَلْنَا عَٰلِيَهَا سَافِلَهَا وَأَمْطَرْنَا عَلَيْهِمْ حِجَارَةًۭ مِّن سِجِّيلٍ. ﴿74﴾
75 ನಿಶ್ಚಯವಾಗಿಯೂ ಅಂತರ್ದೃಷ್ಟಿಯುಳ್ಳವರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ. إِنَّ فِى ذَٰلِكَ لَءَايَٰتٍۢ لِّلْمُتَوَسِّمِينَ. ﴿75﴾
76 ನಿಶ್ಚಯವಾಗಿಯೂ ಆ ಊರು ಸಮಾನಾಂತರದಲ್ಲಿ ಚಲಿಸುವ (ಚಿರಪರಿಚಿತ) ರಸ್ತೆಯಲ್ಲಿದೆ. وَإِنَّهَا لَبِسَبِيلٍۢ مُّقِيمٍ. ﴿76﴾
77 ನಿಶ್ಚಯವಾಗಿಯೂ ಅದರಲ್ಲಿ ಸತ್ಯವಿಶ್ವಾಸಿಗಳಿಗೆ ದೃಷ್ಟಾಂತವಿದೆ. إِنَّ فِى ذَٰلِكَ لَءَايَةًۭ لِّلْمُؤْمِنِينَ. ﴿77﴾
78 ಐಕತ್‌ನ ಜನರು (ಮದ್ಯನ್ ದೇಶದವರು) ಅಕ್ರಮಿಗಳಾಗಿದ್ದರು. وَإِن كَانَ أَصْحَٰبُ ٱلْأَيْكَةِ لَظَٰلِمِينَ. ﴿78﴾
79 ಆದ್ದರಿಂದ, ನಾವು ಅವರಿಂದ ಪ್ರತೀಕಾರ ಪಡೆದೆವು. ಈ ಎರಡು ಊರುಗಳೂ[1] ಬಯಲು ರಸ್ತೆಯಲ್ಲಿವೆ.
[1] ಲೂತ್ (ಅವರ ಮೇಲೆ ಶಾಂತಿಯಿರಲಿ) ವಾಸವಾಗಿದ್ದ ಸದೂಮ್ ಮತ್ತು ಐಕತ್‌ನವರು ವಾಸವಾಗಿದ್ದ ಮದ್ಯನ್.
فَٱنتَقَمْنَا مِنْهُمْ وَإِنَّهُمَا لَبِإِمَامٍۢ مُّبِينٍۢ. ﴿79﴾
80 ಹಿಜ್ರ್ ನಿವಾಸಿಗಳು (ಸಮೂದ್ ಗೋತ್ರದವರು) ಸಂದೇಶವಾಹಕರುಗಳನ್ನು ನಿಷೇಧಿಸಿದರು. وَلَقَدْ كَذَّبَ أَصْحَٰبُ ٱلْحِجْرِ ٱلْمُرْسَلِينَ. ﴿80﴾
81 ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ನೀಡಿದ್ದೆವು. ಆದರೆ ಅವರು ಅವುಗಳನ್ನು ಲೆಕ್ಕಿಸದೆ ವಿಮುಖರಾದರು. وَءَاتَيْنَٰهُمْ ءَايَٰتِنَا فَكَانُوا۟ عَنْهَا مُعْرِضِينَ. ﴿81﴾
82 ಅವರು ನಿರ್ಭೀತವಾಗಿ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತಿದ್ದರು. وَكَانُوا۟ يَنْحِتُونَ مِنَ ٱلْجِبَالِ بُيُوتًا ءَامِنِينَ. ﴿82﴾
83 ಆಗ ಬೆಳಗ್ಗಿನ ವೇಳೆ ಆ ಮಹಾ ಚೀತ್ಕಾರವು ಅವರನ್ನು ಹಿಡಿದುಬಿಟ್ಟಿತು. فَأَخَذَتْهُمُ ٱلصَّيْحَةُ مُصْبِحِينَ. ﴿83﴾
84 ಅವರ ಯಾವುದೇ ಕರ್ಮಗಳು ಅವರಿಗೆ ಉಪಕಾರ ಮಾಡಲಿಲ್ಲ. فَمَآ أَغْنَىٰ عَنْهُم مَّا كَانُوا۟ يَكْسِبُونَ. ﴿84﴾
85 ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಸತ್ಯದೊಂದಿಗೇ ಸೃಷ್ಟಿಸಿದ್ದೇವೆ. ಅಂತ್ಯಸಮಯವು ಖಂಡಿತ ಬಂದೇ ಬರುತ್ತದೆ. ಆದ್ದರಿಂದ ನೀವು ಅತಿಸುಂದರವಾದ ರೀತಿಯಲ್ಲಿ ಕ್ಷಮಿಸಿಬಿಡಿ. وَمَا خَلَقْنَا ٱلسَّمَٰوَٰتِ وَٱلْأَرْضَ وَمَا بَيْنَهُمَآ إِلَّا بِٱلْحَقِّ ۗ وَإِنَّ ٱلسَّاعَةَ لَءَاتِيَةٌۭ ۖ فَٱصْفَحِ ٱلصَّفْحَ ٱلْجَمِيلَ. ﴿85﴾
86 ನಿಶ್ಚಯವಾಗಿಯೂ, ನಿಮ್ಮ ಪರಿಪಾಲಕನು (ಅಲ್ಲಾಹು) ಸೃಷ್ಟಿಕರ್ತನು ಮತ್ತು ಸರ್ವಜ್ಞನಾಗಿದ್ದಾನೆ. إِنَّ رَبَّكَ هُوَ ٱلْخَلَّٰقُ ٱلْعَلِيمُ. ﴿86﴾
87 ನಾವು ನಿಮಗೆ ಪುನರಾವರ್ತಿಸಿ ಪಠಿಸಲಾಗುವ ಏಳು ವಚನಗಳನ್ನು[1] ಮತ್ತು ಶ್ರೇಷ್ಠ ಕುರ್‌ಆನನ್ನು ನೀಡಿದ್ದೇವೆ.
[1] ಪುನರಾವರ್ತಿಸಿ ಪಠಿಸಲಾಗುವ ಏಳು ವಚನಗಳು ಎಂದರೆ ಸೂರ ಫಾತಿಹ.
وَلَقَدْ ءَاتَيْنَٰكَ سَبْعًۭا مِّنَ ٱلْمَثَانِى وَٱلْقُرْءَانَ ٱلْعَظِيمَ. ﴿87﴾
88 ಅವರಲ್ಲಿರುವ ಪಂಗಡಗಳಿಗೆ ನಾವು ಏನೇನು ಸವಲತ್ತುಗಳನ್ನು ಒದಗಿಸಿದ್ದೇವೆಯೋ ಅದರ ಕಡೆಗೆ ನೀವು ನಿಮ್ಮ ದೃಷ್ಟಿಯನ್ನು ಹರಿಸಬೇಡಿ. ಅವರ ವಿಷಯದಲ್ಲಿ ಬೇಸರಪಡಬೇಡಿ. ಸತ್ಯವಿಶ್ವಾಸಿಗಳಿಗೆ ನಿಮ್ಮ ರೆಕ್ಕೆಗಳನ್ನು ತಗ್ಗಿಸಿಕೊಡಿ. لَا تَمُدَّنَّ عَيْنَيْكَ إِلَىٰ مَا مَتَّعْنَا بِهِۦٓ أَزْوَٰجًۭا مِّنْهُمْ وَلَا تَحْزَنْ عَلَيْهِمْ وَٱخْفِضْ جَنَاحَكَ لِلْمُؤْمِنِينَ. ﴿88﴾
89 ಹೇಳಿರಿ: “ನಿಶ್ಚಯವಾಗಿಯೂ ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.” وَقُلْ إِنِّىٓ أَنَا ٱلنَّذِيرُ ٱلْمُبِينُ. ﴿89﴾
90 ವಿಂಗಡನೆ ಮಾಡಿದವರ ಮೇಲೆ ನಾವು (ಶಿಕ್ಷೆಯನ್ನು) ಇಳಿಸಿದಂತೆ, كَمَآ أَنزَلْنَا عَلَى ٱلْمُقْتَسِمِينَ. ﴿90﴾
91 ಅಂದರೆ ಕುರ್‌ಆನನ್ನು ವಿವಿಧ ಭಾಗಗಳನ್ನಾಗಿ ಮಾಡಿದವರ ಮೇಲೆ.[1]
[1] ವಿಂಗಡನೆ ಮಾಡಿದವರು ಯಾರೆಂಬ ವಿಷಯದಲ್ಲಿ ವ್ಯಾಖ್ಯಾನಕಾರರಿಗೆ ಭಿನ್ನಮತವಿದೆ. ಕೆಲವರು ಅದು ಸತ್ಯನಿಷೇಧಿಗಳು ಎಂದಿದ್ದಾರೆ. ಏಕೆಂದರೆ ಅವರು ಕುರ್‌ಆನನ್ನು ಕವಿತೆ, ಮಾಟಗಾರಿಕೆ, ಪ್ರಾಚೀನ ಕಾಲದ ಜನರ ಪುರಾಣ ಮುಂತಾದ ರೀತಿಯಲ್ಲಿ ವರ್ಣಿಸುತ್ತಾ ವಿಂಗಡಿಸಿದ್ದಾರೆ. ಇನ್ನೊಂದು ಅಭಿಪ್ರಾಯದ ಪ್ರಕಾರ ಅವರು ಯಹೂದಿ-ಕ್ರೈಸ್ತರಾಗಿದ್ದಾರೆ. ಏಕೆಂದರೆ, ಅವರು ಅವರಿಗೆ ಅವತೀರ್ಣವಾದ ದೈವಿಕ ಗ್ರಂಥವನ್ನು ಹಲವು ವಿಭಾಗಗಳಾಗಿ ವಿಂಗಡಿಸಿ ತಮಗೆ ಬೇಕಾದುದನ್ನು ಸ್ವೀಕರಿಸಿದರು ಮತ್ತು ಬೇಡದ್ದನ್ನು ತಿರಸ್ಕರಿಸಿದರು.
ٱلَّذِينَ جَعَلُوا۟ ٱلْقُرْءَانَ عِضِينَ. ﴿91﴾
92 ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನಾವು ಅವರಲ್ಲಿ ಎಲ್ಲರನ್ನೂ ಖಂಡಿತ ವಿಚಾರಣೆ ಮಾಡುವೆವು. فَوَرَبِّكَ لَنَسْـَٔلَنَّهُمْ أَجْمَعِينَ. ﴿92﴾
93 ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ. عَمَّا كَانُوا۟ يَعْمَلُونَ. ﴿93﴾
94 ಆದ್ದರಿಂದ ನಿಮಗೆ ಆಜ್ಞಾಪಿಸಲಾಗುವುದನ್ನು ಬಹಿರಂಗವಾಗಿ ಘೋಷಿಸಿರಿ ಮತ್ತು ಬಹುದೇವಾರಾಧಕರಿಂದ ವಿಮುಖರಾಗಿರಿ. فَٱصْدَعْ بِمَا تُؤْمَرُ وَأَعْرِضْ عَنِ ٱلْمُشْرِكِينَ. ﴿94﴾
95 ನಿಮ್ಮನ್ನು ತಮಾಷೆ ಮಾಡುವವರನ್ನು ನೋಡಿಕೊಳ್ಳಲು ನಿಮಗೆ ನಾವು ಸಾಕು. إِنَّا كَفَيْنَٰكَ ٱلْمُسْتَهْزِءِينَ. ﴿95﴾
96 ಅವರು ಯಾರೆಂದರೆ, ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಸ್ಥಾಪಿಸುವವರು. ಅವರು ಸದ್ಯವೇ ತಿಳಿದುಕೊಳ್ಳುವರು. ٱلَّذِينَ يَجْعَلُونَ مَعَ ٱللَّهِ إِلَٰهًا ءَاخَرَ ۚ فَسَوْفَ يَعْلَمُونَ. ﴿96﴾
97 (ಪ್ರವಾದಿಯವರೇ) ಅವರು ಹೇಳುವ ಮಾತುಗಳಿಂದ ನಿಮ್ಮ ಹೃದಯವು ಇಕ್ಕಟ್ಟು ಅನುಭವಿಸುತ್ತಿದೆಯೆಂದು ನಮಗೆ ತಿಳಿದಿದೆ. وَلَقَدْ نَعْلَمُ أَنَّكَ يَضِيقُ صَدْرُكَ بِمَا يَقُولُونَ. ﴿97﴾
98 ಆದ್ದರಿಂದ ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ ಮತ್ತು ಸಾಷ್ಟಾಂಗ ಮಾಡುವವರಲ್ಲಿ ಸೇರಿರಿ. فَسَبِّحْ بِحَمْدِ رَبِّكَ وَكُن مِّنَ ٱلسَّٰجِدِينَ. ﴿98﴾
99 ಮರಣವು ಬರುವ ತನಕ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ. وَٱعْبُدْ رَبَّكَ حَتَّىٰ يَأْتِيَكَ ٱلْيَقِينُ. ﴿99﴾