Loading date... | Loading Hijri date... | Loading time...

الشعراء

ಕನ್ನಡ Translation with Arabic Quran Text

ಕನ್ನಡ العربية
1 ತ್ವಾ ಸೀನ್ ಮೀಮ್. طسٓمٓ. ﴿1﴾
2 ಇವು ಸ್ಪಷ್ಟ ಗ್ರಂಥದ ವಚನಗಳಾಗಿವೆ. تِلْكَ ءَايَٰتُ ٱلْكِتَٰبِ ٱلْمُبِينِ. ﴿2﴾
3 ಅವರು ಸತ್ಯವಿಶ್ವಾಸಿಗಳಾಗದ ಕಾರಣ ಬಹುಶಃ ನೀವು ನಿಮ್ಮ ಪ್ರಾಣವನ್ನೇ ಕಳಕೊಳ್ಳುತ್ತಿದ್ದೀರಿ. لَعَلَّكَ بَٰخِعٌۭ نَّفْسَكَ أَلَّا يَكُونُوا۟ مُؤْمِنِينَ. ﴿3﴾
4 ನಾವು ಇಚ್ಛಿಸಿದರೆ ಅವರಿಗೆ ಆಕಾಶದಿಂದ ಒಂದು ದೃಷ್ಟಾಂತವನ್ನು ಇಳಿಸಿಕೊಡುವೆವು. ಅದರ ಮುಂದೆ ಅವರ ಕೊರಳುಗಳು ವಿನಮ್ರವಾಗುವುವು. إِن نَّشَأْ نُنَزِّلْ عَلَيْهِم مِّنَ ٱلسَّمَآءِ ءَايَةًۭ فَظَلَّتْ أَعْنَٰقُهُمْ لَهَا خَٰضِعِينَ. ﴿4﴾
5 ಅವರ ಬಳಿಗೆ ಪರಮ ದಯಾಮಯನ (ಅಲ್ಲಾಹನ) ಕಡೆಯಿಂದ ಯಾವುದೇ ಹೊಸ ಉಪದೇಶವು ಬಂದಾಗಲೂ ಅವರು ಅದರಿಂದ ವಿಮುಖರಾಗುತ್ತಲೇ ಇದ್ದರು. وَمَا يَأْتِيهِم مِّن ذِكْرٍۢ مِّنَ ٱلرَّحْمَٰنِ مُحْدَثٍ إِلَّا كَانُوا۟ عَنْهُ مُعْرِضِينَ. ﴿5﴾
6 ಅವರು ನಿಷೇಧಿಸಿದರು. ಆದ್ದರಿಂದ ಅವರು ಏನನ್ನು ತಮಾಷೆ ಮಾಡುತ್ತಿದ್ದರೋ ಅದರ ಸಮಾಚಾರವು ಸದ್ಯವೇ ಅವರ ಬಳಿಗೆ ಬರುವುದು. فَقَدْ كَذَّبُوا۟ فَسَيَأْتِيهِمْ أَنۢبَٰٓؤُا۟ مَا كَانُوا۟ بِهِۦ يَسْتَهْزِءُونَ. ﴿6﴾
7 ಅವರು ಭೂಮಿಯನ್ನು ನೋಡುವುದಿಲ್ಲವೇ? ನಾವು ಅದರಲ್ಲಿ ಎಲ್ಲಾ ವಿಧಗಳ ಉತ್ತಮ ಸಸ್ಯವರ್ಗಗಳಿಂದ ಎಷ್ಟೆಲ್ಲಾ ಬೆಳೆಸಿದ್ದೇವೆಂದು. أَوَلَمْ يَرَوْا۟ إِلَى ٱلْأَرْضِ كَمْ أَنۢبَتْنَا فِيهَا مِن كُلِّ زَوْجٍۢ كَرِيمٍ. ﴿7﴾
8 ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ. إِنَّ فِى ذَٰلِكَ لَءَايَةًۭ ۖ وَمَا كَانَ أَكْثَرُهُم مُّؤْمِنِينَ. ﴿8﴾
9 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ. وَإِنَّ رَبَّكَ لَهُوَ ٱلْعَزِيزُ ٱلرَّحِيمُ. ﴿9﴾
10 ನಿಮ್ಮ ಪರಿಪಾಲಕನು (ಅಲ್ಲಾಹು) ಮೂಸಾರನ್ನು ಕರೆದು ಹೇಳಿದ ಸಂದರ್ಭ: “ಅತಿರೇಕಿಗಳಾದ ಆ ಜನರ ಬಳಿಗೆ ಹೋಗಿರಿ. وَإِذْ نَادَىٰ رَبُّكَ مُوسَىٰٓ أَنِ ٱئْتِ ٱلْقَوْمَ ٱلظَّٰلِمِينَ. ﴿10﴾
11 ಫರೋಹ‍ನ ಜನರ ಬಳಿಗೆ.” ಅವರು ಅಲ್ಲಾಹನನ್ನು ಭಯಪಡುವುದಿಲ್ಲವೇ? قَوْمَ فِرْعَوْنَ ۚ أَلَا يَتَّقُونَ. ﴿11﴾
12 ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನ್ನನ್ನು ನಿಷೇಧಿಸುವರೆಂದು ನನಗೆ ಭಯವಾಗುತ್ತಿದೆ. قَالَ رَبِّ إِنِّىٓ أَخَافُ أَن يُكَذِّبُونِ. ﴿12﴾
13 ನನಗೆ ಹೃದಯದಲ್ಲಿ ಇಕ್ಕಟ್ಟು ಅನುಭವವಾಗುತ್ತದೆ ಮತ್ತು ನನ್ನ ನಾಲಗೆ ಸರಿಯಾಗಿ ಚಲಿಸುವುದಿಲ್ಲ. ಆದ್ದರಿಂದ ನೀನು ಹಾರೂನರಿಗೂ ಸಂದೇಶ ಕಳುಹಿಸು. وَيَضِيقُ صَدْرِى وَلَا يَنطَلِقُ لِسَانِى فَأَرْسِلْ إِلَىٰ هَٰرُونَ. ﴿13﴾
14 ಅವರಿಗೆ ನನ್ನ ಮೇಲೆ ಒಂದು ಅಪರಾಧ ಮಾಡಿದ ಆರೋಪವೂ ಇದೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂದು ನನಗೆ ಭಯವಾಗುತ್ತಿದೆ.” وَلَهُمْ عَلَىَّ ذَنۢبٌۭ فَأَخَافُ أَن يَقْتُلُونِ. ﴿14﴾
15 ಅಲ್ಲಾಹು ಹೇಳಿದನು: “ಸಾಧ್ಯವೇ ಇಲ್ಲ. ನೀವಿಬ್ಬರೂ ನಮ್ಮ ದೃಷ್ಟಾಂತಗಳೊಂದಿಗೆ ಹೋಗಿರಿ. ನಿಶ್ಚಯವಾಗಿಯೂ ನಾವು ಎಲ್ಲವನ್ನೂ ಕೇಳುತ್ತಾ ನಿಮ್ಮ ಜೊತೆಗಿದ್ದೇವೆ.” قَالَ كَلَّا ۖ فَٱذْهَبَا بِـَٔايَٰتِنَآ ۖ إِنَّا مَعَكُم مُّسْتَمِعُونَ. ﴿15﴾
16 ನೀವು ಫರೋಹ‍ನ ಬಳಿಗೆ ಹೋಗಿರಿ. ನಂತರ ಹೇಳಿರಿ: “ನಾವು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಾಗಿದ್ದೇವೆ. فَأْتِيَا فِرْعَوْنَ فَقُولَآ إِنَّا رَسُولُ رَبِّ ٱلْعَٰلَمِينَ. ﴿16﴾
17 ಇಸ್ರಾಯೇಲ್ ಮಕ್ಕಳನ್ನು ನಮ್ಮ ಜೊತೆಗೆ ಕಳುಹಿಸಿಕೊಡಬೇಕು (ಎಂಬ ಆದೇಶದೊಂದಿಗೆ ಬಂದಿದ್ದೇವೆ).” أَنْ أَرْسِلْ مَعَنَا بَنِىٓ إِسْرَٰٓءِيلَ. ﴿17﴾
18 ಫರೋಹ ಹೇಳಿದನು: “ನೀನು ಮಗುವಾಗಿದ್ದಾಗ ನಾವು ನಿನ್ನನ್ನು ಸಾಕಲಿಲ್ಲವೇ? ನೀನಂತೂ ನಿನ್ನ ಆಯುಷ್ಯದಲ್ಲಿ ಅನೇಕ ವರ್ಷಗಳನ್ನು ನಮ್ಮ ಜೊತೆಗೇ ಕಳೆದಿರುವೆ. قَالَ أَلَمْ نُرَبِّكَ فِينَا وَلِيدًۭا وَلَبِثْتَ فِينَا مِنْ عُمُرِكَ سِنِينَ. ﴿18﴾
19 ನಂತರ ನೀನು ನಿನ್ನ ಆ ಕೆಟ್ಟ ಕೃತ್ಯವನ್ನು ಮಾಡಿದೆ. ನಿಜಕ್ಕೂ ನೀನು ಕೃತಜ್ಞತೆಯಿಲ್ಲದವನಾಗಿದ್ದೆ.” وَفَعَلْتَ فَعْلَتَكَ ٱلَّتِى فَعَلْتَ وَأَنتَ مِنَ ٱلْكَٰفِرِينَ. ﴿19﴾
20 ಮೂಸಾ ಹೇಳಿದರು: “ನಾನು ಆ ಕೃತ್ಯವನ್ನು ಮಾಡಿದ್ದು ನಿಜ. ಆದರೆ ಆಗ ನಾನು ಸರಿದಾರಿಯನ್ನು ತಿಳಿಯದ ಜನರಲ್ಲಿ ಸೇರಿದ್ದೆನು. قَالَ فَعَلْتُهَآ إِذًۭا وَأَنَا۠ مِنَ ٱلضَّآلِّينَ. ﴿20﴾
21 ನಂತರ ನಿಮ್ಮ ಭಯದಿಂದ ನಾನು ನಿಮ್ಮಿಂದ ದೂರ ಓಡಿದೆನು. ನಂತರ ನನ್ನ ಪರಿಪಾಲಕನು (ಅಲ್ಲಾಹು) ನನಗೆ ವಿವೇಕವನ್ನು ದಯಪಾಲಿಸಿದನು ಮತ್ತು ನನ್ನನ್ನು ಸಂದೇಶವಾಹಕರಲ್ಲಿ ಸೇರಿಸಿದನು. فَفَرَرْتُ مِنكُمْ لَمَّا خِفْتُكُمْ فَوَهَبَ لِى رَبِّى حُكْمًۭا وَجَعَلَنِى مِنَ ٱلْمُرْسَلِينَ. ﴿21﴾
22 ನೀನು ನನ್ನನ್ನು ಸಾಕಿ ಸಲಹಿದ್ದನ್ನು ನೀನು ನನಗೆ ಮಾಡಿದ ಉಪಕಾರವೆಂದು ಹೇಳುತ್ತಿರುವೆಯಾ? ಆದರೆ ವಾಸ್ತವವಾಗಿ, ನೀನು ಇಸ್ರಾಯೇಲ್ ಮಕ್ಕಳನ್ನು ನಿನ್ನ ಗುಲಾಮರನ್ನಾಗಿ ಮಾಡಿಕೊಂಡಿರುವೆ.” وَتِلْكَ نِعْمَةٌۭ تَمُنُّهَا عَلَىَّ أَنْ عَبَّدتَّ بَنِىٓ إِسْرَٰٓءِيلَ. ﴿22﴾
23 ಫರೋಹ ಕೇಳಿದನು: “ಸರ್ವಲೋಕಗಳ ಪರಿಪಾಲಕ ಎಂದರೇನು?” قَالَ فِرْعَوْنُ وَمَا رَبُّ ٱلْعَٰلَمِينَ. ﴿23﴾
24 ಮೂಸಾ ಹೇಳಿದರು: “ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ದೃಢವಿಶ್ವಾಸವುಳ್ಳವರಾಗಿದ್ದರೆ.” قَالَ رَبُّ ٱلسَّمَٰوَٰتِ وَٱلْأَرْضِ وَمَا بَيْنَهُمَآ ۖ إِن كُنتُم مُّوقِنِينَ. ﴿24﴾
25 ಫರೋಹ ತನ್ನ ಸುತ್ತಮುತ್ತಲಿರುವ ಜನರೊಡನೆ ಕೇಳಿದನು: “ಏನು? ನೀವು ಕಿವಿಗೊಡುವುದಿಲ್ಲವೇ?” قَالَ لِمَنْ حَوْلَهُۥٓ أَلَا تَسْتَمِعُونَ. ﴿25﴾
26 ಮೂಸಾ ಹೇಳಿದರು: “ಅವನೇ ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕ.” قَالَ رَبُّكُمْ وَرَبُّ ءَابَآئِكُمُ ٱلْأَوَّلِينَ. ﴿26﴾
27 ಫರೋಹ ಹೇಳಿದನು: “ನಿಮ್ಮ ಬಳಿಗೆ ಕಳುಹಿಸಲಾಗಿರುವ ಈ ನಿಮ್ಮ ಸಂದೇಶವಾಹಕ ನಿಜಕ್ಕೂ ಒಬ್ಬ ಮಾನಸಿಕ ಅಸ್ವಸ್ಥ.” قَالَ إِنَّ رَسُولَكُمُ ٱلَّذِىٓ أُرْسِلَ إِلَيْكُمْ لَمَجْنُونٌۭ. ﴿27﴾
28 ಮೂಸಾ ಹೇಳಿದರು: “ಅವನೇ ಪೂರ್ವ, ಪಶ್ಚಿಮ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ಆಲೋಚಿಸುವವರಾಗಿದ್ದರೆ.” قَالَ رَبُّ ٱلْمَشْرِقِ وَٱلْمَغْرِبِ وَمَا بَيْنَهُمَآ ۖ إِن كُنتُمْ تَعْقِلُونَ. ﴿28﴾
29 ಫರೋಹ ಹೇಳಿದನು: “ನೀನು ನನ್ನನ್ನು ಬಿಟ್ಟು ಬೇರೊಬ್ಬನನ್ನು ದೇವರೆಂದು ಸ್ವೀಕರಿಸಿದರೆ ನಾನು ನಿನ್ನನ್ನು ಖಂಡಿತ ಸೆರೆಮನೆಗೆ ತಳ್ಳುವೆನು.” قَالَ لَئِنِ ٱتَّخَذْتَ إِلَٰهًا غَيْرِى لَأَجْعَلَنَّكَ مِنَ ٱلْمَسْجُونِينَ. ﴿29﴾
30 ಮೂಸಾ ಹೇಳಿದರು: “ಒಂದು ವೇಳೆ ನಾನು ನಿಮ್ಮ ಬಳಿಗೆ ಒಂದು ಸ್ಪಷ್ಟ ಸಾಕ್ಷ್ಯವನ್ನು ತಂದು ತೋರಿಸಿದರೆ (ನೀವು ನನ್ನ ಮಾತನ್ನು ನಂಬುವಿರಾ)?” قَالَ أَوَلَوْ جِئْتُكَ بِشَىْءٍۢ مُّبِينٍۢ. ﴿30﴾
31 ಫರೋಹ ಹೇಳಿದನು: “ಸರಿ! ತಂದು ತೋರಿಸು. ನೀನು ಸತ್ಯವಂತನಾಗಿದ್ದರೆ.” قَالَ فَأْتِ بِهِۦٓ إِن كُنتَ مِنَ ٱلصَّٰدِقِينَ. ﴿31﴾
32 ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಅದು ತಕ್ಷಣ ಒಂದು ಸರ್ಪವಾಗಿ ಮಾರ್ಪಟ್ಟಿತು. فَأَلْقَىٰ عَصَاهُ فَإِذَا هِىَ ثُعْبَانٌۭ مُّبِينٌۭ. ﴿32﴾
33 ಅವರು ತಮ್ಮ ಕೈಯನ್ನು (ಪಾರ್ಶ್ವದಿಂದ) ಎಳೆದರು. ಆಗ ಅದು ನೋಡುಗರಿಗೆ ಬೆಳ್ಳಗೆ ಹೊಳೆಯುವಂತೆ ಕಂಡಿತು. وَنَزَعَ يَدَهُۥ فَإِذَا هِىَ بَيْضَآءُ لِلنَّٰظِرِينَ. ﴿33﴾
34 ಫರೋಹ ತನ್ನ ಸುತ್ತಮುತ್ತಲಿದ್ದ ಮುಖಂಡರೊಂದಿಗೆ ಹೇಳಿದನು: “ನಿಜಕ್ಕೂ ಇವನೊಬ್ಬ ಅಗಾಧ ಜ್ಞಾನವಿರುವ ಮಾಟಗಾರನಾಗಿದ್ದಾನೆ. قَالَ لِلْمَلَإِ حَوْلَهُۥٓ إِنَّ هَٰذَا لَسَٰحِرٌ عَلِيمٌۭ. ﴿34﴾
35 ತನ್ನ ಮಾಟಗಾರಿಕೆಯಿಂದ ನಿಮ್ಮನ್ನು ನಿಮ್ಮ ಊರಿನಿಂದ ಓಡಿಸುವುದು ಇವನ ಉದ್ದೇಶವಾಗಿದೆ. ಹೇಳಿ, ನೀವೇನು ಆದೇಶಿಸುತ್ತೀರಿ?” يُرِيدُ أَن يُخْرِجَكُم مِّنْ أَرْضِكُم بِسِحْرِهِۦ فَمَاذَا تَأْمُرُونَ. ﴿35﴾
36 ಮುಖಂಡರು ಹೇಳಿದರು: “ಇವನ ಮತ್ತು ಇವನ ಸಹೋದರನ ವಿಷಯವನ್ನು (ಸ್ವಲ್ಪ ಕಾಲ) ಮುಂದೂಡಿರಿ ಮತ್ತು (ಮಾಟಗಾರರನ್ನು) ಒಟ್ಟು ಸೇರಿಸಲು ನಗರಗಳಿಗೆ ಆಳುಗಳನ್ನು ಕಳುಹಿಸಿರಿ. قَالُوٓا۟ أَرْجِهْ وَأَخَاهُ وَٱبْعَثْ فِى ٱلْمَدَآئِنِ حَٰشِرِينَ. ﴿36﴾
37 ಅವರು ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ಕರೆದುಕೊಂಡು ಬರಲಿ.” يَأْتُوكَ بِكُلِّ سَحَّارٍ عَلِيمٍۢ. ﴿37﴾
38 ನಂತರ ಒಂದು ಸುಪರಿಚಿತ ದಿನದ ನಿಶ್ಚಿತ ಸಮಯದಲ್ಲಿ ಮಾಟಗಾರರನ್ನು ಒಟ್ಟು ಸೇರಿಸಲಾಯಿತು. فَجُمِعَ ٱلسَّحَرَةُ لِمِيقَٰتِ يَوْمٍۢ مَّعْلُومٍۢ. ﴿38﴾
39 ಪ್ರಜೆಗಳೊಡನೆ ಕೇಳಲಾಯಿತು: “ನೀವು ಕೂಡ ಒಟ್ಟುಗೂಡುತ್ತೀರಲ್ಲವೇ? وَقِيلَ لِلنَّاسِ هَلْ أَنتُم مُّجْتَمِعُونَ. ﴿39﴾
40 ಮಾಟಗಾರರು ಗೆದ್ದರೆ ನಮಗೆ ಅವರನ್ನೇ ಹಿಂಬಾಲಿಸಬಹುದು.” لَعَلَّنَا نَتَّبِعُ ٱلسَّحَرَةَ إِن كَانُوا۟ هُمُ ٱلْغَٰلِبِينَ. ﴿40﴾
41 ನಂತರ ಮಾಟಗಾರರು ಬಂದಾಗ, ಅವರು ಫರೋಹ‍ನೊಡನೆ ಕೇಳಿದರು: “ನಾವು ಗೆದ್ದರೆ ನಮಗೆ ಖಂಡಿತ ಪ್ರತಿಫಲವಿದೆಯಲ್ಲವೇ?” فَلَمَّا جَآءَ ٱلسَّحَرَةُ قَالُوا۟ لِفِرْعَوْنَ أَئِنَّ لَنَا لَأَجْرًا إِن كُنَّا نَحْنُ ٱلْغَٰلِبِينَ. ﴿41﴾
42 ಫರೋಹ ಹೇಳಿದನು: “ಹೌದು! ನೀವು ಖಂಡಿತ ನನ್ನ ಆಪ್ತರಾಗಿ ಬಿಡುವಿರಿ.” قَالَ نَعَمْ وَإِنَّكُمْ إِذًۭا لَّمِنَ ٱلْمُقَرَّبِينَ. ﴿42﴾
43 ಮೂಸಾ ಅವರೊಡನೆ ಹೇಳಿದರು: “ನಿಮಗೆ ಎಸೆಯಲಿರುವುದನ್ನು ಎಸೆಯಿರಿ.” قَالَ لَهُم مُّوسَىٰٓ أَلْقُوا۟ مَآ أَنتُم مُّلْقُونَ. ﴿43﴾
44 ಆಗ ಅವರು ಅವರ ಹಗ್ಗಗಳನ್ನು ಮತ್ತು ಕೋಲುಗಳನ್ನು ಎಸೆದರು. ಅವರು ಹೇಳಿದರು: “ಫರೋಹ‍ನ ಪ್ರತಿಷ್ಠೆಯ ಮೇಲಾಣೆ! ನಿಶ್ಚಯವಾಗಿಯೂ ನಾವೇ ಗೆಲ್ಲುವೆವು.” فَأَلْقَوْا۟ حِبَالَهُمْ وَعِصِيَّهُمْ وَقَالُوا۟ بِعِزَّةِ فِرْعَوْنَ إِنَّا لَنَحْنُ ٱلْغَٰلِبُونَ. ﴿44﴾
45 ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಆಗ ಅಗೋ! ಅವರು ಕಣ್ಕಟ್ಟಾಗಿ ನಿರ್ಮಿಸಿರುವುದೆಲ್ಲವನ್ನೂ ಅದು ನುಂಗತೊಡಗಿತು. فَأَلْقَىٰ مُوسَىٰ عَصَاهُ فَإِذَا هِىَ تَلْقَفُ مَا يَأْفِكُونَ. ﴿45﴾
46 ಆಗ ಮಾಟಗಾರರು ಸಾಷ್ಟಾಂಗ ಬಿದ್ದರು. فَأُلْقِىَ ٱلسَّحَرَةُ سَٰجِدِينَ. ﴿46﴾
47 ಅವರು ಹೇಳಿದರು: “ನಾವು ಸರ್ವಲೋಕಗಳ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ. قَالُوٓا۟ ءَامَنَّا بِرَبِّ ٱلْعَٰلَمِينَ. ﴿47﴾
48 ಮೂಸಾ ಮತ್ತು ಹಾರೂನರ ಪರಿಪಾಲಕನಲ್ಲಿ.” رَبِّ مُوسَىٰ وَهَٰرُونَ. ﴿48﴾
49 ಫರೋಹ ಹೇಳಿದನು: “ನಾನು ಅಪ್ಪಣೆ ಕೊಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಅವನು ನಿಮಗೆ ಮಾಟಗಾರಿಕೆಯನ್ನು ಕಲಿಸಿಕೊಟ್ಟ ನಿಮ್ಮ ಮುಖಂಡನಾಗಿದ್ದಾನೆ. ನೀವು ಸದ್ಯವೇ ತಿಳಿಯುವಿರಿ. ಖಂಡಿತವಾಗಿಯೂ ನಾನು ನಿಮ್ಮ ಕೈ-ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು. قَالَ ءَامَنتُمْ لَهُۥ قَبْلَ أَنْ ءَاذَنَ لَكُمْ ۖ إِنَّهُۥ لَكَبِيرُكُمُ ٱلَّذِى عَلَّمَكُمُ ٱلسِّحْرَ فَلَسَوْفَ تَعْلَمُونَ ۚ لَأُقَطِّعَنَّ أَيْدِيَكُمْ وَأَرْجُلَكُم مِّنْ خِلَٰفٍۢ وَلَأُصَلِّبَنَّكُمْ أَجْمَعِينَ. ﴿49﴾
50 ಮಾಟಗಾರರು ಹೇಳಿದರು: “ಪರವಾಗಿಲ್ಲ. ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವೆವು. قَالُوا۟ لَا ضَيْرَ ۖ إِنَّآ إِلَىٰ رَبِّنَا مُنقَلِبُونَ. ﴿50﴾
51 ನಾವು ಮೊತ್ತಮೊದಲು ವಿಶ್ವಾಸವಿಟ್ಟ ಜನರಾಗಿರುವುದರಿಂದ ನಮ್ಮ ಪರಿಪಾಲಕನು (ಅಲ್ಲಾಹು) ನಮ್ಮ ಪಾಪಗಳನ್ನು ಕ್ಷಮಿಸುವನೆಂದು ನಮಗೆ ಭರವಸೆಯಿದೆ.” إِنَّا نَطْمَعُ أَن يَغْفِرَ لَنَا رَبُّنَا خَطَٰيَٰنَآ أَن كُنَّآ أَوَّلَ ٱلْمُؤْمِنِينَ. ﴿51﴾
52 ನಾವು ಮೂಸಾರಿಗೆ ದೇವವಾಣಿಯನ್ನು ನೀಡಿದೆವು: “ನೀವು ರಾತ್ರೋರಾತ್ರಿ ನನ್ನ ದಾಸರೊಡನೆ ಹೊರಡಿ. ಖಂಡಿತವಾಗಿಯೂ ಅವರು ನಿಮ್ಮನ್ನು ಹಿಂಬಾಲಿಸಿ ಬರುವರು.” ۞ وَأَوْحَيْنَآ إِلَىٰ مُوسَىٰٓ أَنْ أَسْرِ بِعِبَادِىٓ إِنَّكُم مُّتَّبَعُونَ. ﴿52﴾
53 ಆಗ ಫರೋಹ ಎಲ್ಲಾ ಪಟ್ಟಣಗಳಿಗೂ ಸೈನಿಕರನ್ನು ಕಳುಹಿಸಿದನು. فَأَرْسَلَ فِرْعَوْنُ فِى ٱلْمَدَآئِنِ حَٰشِرِينَ. ﴿53﴾
54 “ನಿಜಕ್ಕೂ ಇವರೊಂದು ಚಿಕ್ಕ ಸಂಖ್ಯೆಯ ಜನರು. إِنَّ هَٰٓؤُلَآءِ لَشِرْذِمَةٌۭ قَلِيلُونَ. ﴿54﴾
55 ಆದರೂ ಇವರು ನಮ್ಮನ್ನೇ ರೇಗಿಸುತ್ತಿದ್ದಾರೆ. وَإِنَّهُمْ لَنَا لَغَآئِظُونَ. ﴿55﴾
56 ನಿಶ್ಚಯವಾಗಿಯೂ ನಾವು ದೊಡ್ಡ ಸಂಖ್ಯೆಯಲ್ಲಿದ್ದು (ಇವರ ಪಿತೂರಿಯನ್ನು ಸೋಲಿಸಲು) ಸದಾ ಎಚ್ಚರವಾಗಿರಬೇಕಾಗಿದೆ.” وَإِنَّا لَجَمِيعٌ حَٰذِرُونَ. ﴿56﴾
57 ಕೊನೆಗೆ ನಾವು ಅವರನ್ನು ತೋಟಗಳಿಂದ ಮತ್ತು ನೀರಿನ ತೊರೆಗಳಿಂದ ಹೊರಹಾಕಿದೆವು. فَأَخْرَجْنَٰهُم مِّن جَنَّٰتٍۢ وَعُيُونٍۢ. ﴿57﴾
58 ಖಜಾನೆಗಳಿಂದ ಮತ್ತು ಉನ್ನತ ಸ್ಥಾನಮಾನಗಳಿಂದ. وَكُنُوزٍۢ وَمَقَامٍۢ كَرِيمٍۢ. ﴿58﴾
59 ಇದೇ ರೀತಿ. ನಂತರ ನಾವು ಇಸ್ರಾಯೇಲ್ ಮಕ್ಕಳನ್ನು ಆ ಎಲ್ಲಾ ವಸ್ತುಗಳ ವಾರೀಸುದಾರರನ್ನಾಗಿ ಮಾಡಿದೆವು. كَذَٰلِكَ وَأَوْرَثْنَٰهَا بَنِىٓ إِسْرَٰٓءِيلَ. ﴿59﴾
60 ಫರೋಹ ಮತ್ತು ಸೈನ್ಯವು ಸೂರ್ಯೋದಯವಾಗುತ್ತಿದ್ದಂತೆ ಅವರನ್ನು ಬೆನ್ನಟ್ಟಿದರು. فَأَتْبَعُوهُم مُّشْرِقِينَ. ﴿60﴾
61 ನಂತರ ಎರಡು ಗುಂಪುಗಳು ಪರಸ್ಪರ ಮುಖಾಮುಖಿಯಾದಾಗ ಮೂಸಾರ ಜೊತೆಗಿದ್ದವರು ಹೇಳಿದರು: “ಅಯ್ಯೋ! ನಾವು ಸಿಕ್ಕಿಬಿದ್ದೆವು.” فَلَمَّا تَرَٰٓءَا ٱلْجَمْعَانِ قَالَ أَصْحَٰبُ مُوسَىٰٓ إِنَّا لَمُدْرَكُونَ. ﴿61﴾
62 ಮೂಸಾ ಹೇಳಿದರು: “ಸಾಧ್ಯವೇ ಇಲ್ಲ. ನನ್ನ ಪರಿಪಾಲಕ (ಅಲ್ಲಾಹು) ನನ್ನ ಜೊತೆಯಲ್ಲೇ ಇದ್ದಾನೆ. ಅವನು ನನಗೆ ಖಂಡಿತ ದಾರಿ ತೋರಿಸುತ್ತಾನೆ.” قَالَ كَلَّآ ۖ إِنَّ مَعِىَ رَبِّى سَيَهْدِينِ. ﴿62﴾
63 ಆಗ ನಾವು ಮೂಸಾರಿಗೆ, “ನಿಮ್ಮ ಕೋಲಿನಿಂದ ಸಮುದ್ರಕ್ಕೆ ಬಡಿಯಿರಿ” ಎಂದು ದೇವವಾಣಿ ನೀಡಿದೆವು. ಆಗ ಸಮುದ್ರವು ಇಬ್ಭಾಗವಾಯಿತು. ಅದರ ಒಂದೊಂದು ಭಾಗವು ಬೃಹತ್ ಪರ್ವತದಂತೆ ನಿಂತಿತು. فَأَوْحَيْنَآ إِلَىٰ مُوسَىٰٓ أَنِ ٱضْرِب بِّعَصَاكَ ٱلْبَحْرَ ۖ فَٱنفَلَقَ فَكَانَ كُلُّ فِرْقٍۢ كَٱلطَّوْدِ ٱلْعَظِيمِ. ﴿63﴾
64 ನಾವು ಇತರರನ್ನು (ಫರೋಹ‍ನ ಜನರನ್ನು) ಕೂಡ ಅದರ ಸಮೀಪಕ್ಕೆ ತಂದೆವು. وَأَزْلَفْنَا ثَمَّ ٱلْءَاخَرِينَ. ﴿64﴾
65 ನಾವು ಮೂಸಾ ಮತ್ತು ಅವರ ಜೊತೆಗಿದ್ದ ಎಲ್ಲರನ್ನೂ ರಕ್ಷಿಸಿದೆವು. وَأَنجَيْنَا مُوسَىٰ وَمَن مَّعَهُۥٓ أَجْمَعِينَ. ﴿65﴾
66 ನಂತರ ಇತರರನ್ನು (ಫರೋಹ‍ ಮತ್ತು ಅವನ ಜನರನ್ನು) ಮುಳುಗಿಸಿ ಬಿಟ್ಟೆವು. ثُمَّ أَغْرَقْنَا ٱلْءَاخَرِينَ. ﴿66﴾
67 ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ. إِنَّ فِى ذَٰلِكَ لَءَايَةًۭ ۖ وَمَا كَانَ أَكْثَرُهُم مُّؤْمِنِينَ. ﴿67﴾
68 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ. وَإِنَّ رَبَّكَ لَهُوَ ٱلْعَزِيزُ ٱلرَّحِيمُ. ﴿68﴾
69 ಅವರಿಗೆ ಇಬ್ರಾಹೀಮರ ಸಮಾಚಾರವನ್ನು ಓದಿಕೊಡಿ. وَٱتْلُ عَلَيْهِمْ نَبَأَ إِبْرَٰهِيمَ. ﴿69﴾
70 ಅವರು ತಮ್ಮ ತಂದೆಯೊಂದಿಗೆ ಮತ್ತು ತಮ್ಮ ಜನರೊಂದಿಗೆ “ನೀವು ಏನನ್ನು ಆರಾಧಿಸುತ್ತಿದ್ದೀರಿ?” ಎಂದು ಕೇಳಿದ ಸಂದರ್ಭ. إِذْ قَالَ لِأَبِيهِ وَقَوْمِهِۦ مَا تَعْبُدُونَ. ﴿70﴾
71 ಅವರು ಹೇಳಿದರು: “ನಾವು ವಿಗ್ರಹಗಳನ್ನು ಆರಾಧಿಸುತ್ತಿದ್ದೇವೆ ಮತ್ತು ಅವುಗಳ ಮುಂದೆ ಧ್ಯಾನ ಮಾಡುತ್ತಾ ಕೂರುತ್ತೇವೆ.” قَالُوا۟ نَعْبُدُ أَصْنَامًۭا فَنَظَلُّ لَهَا عَٰكِفِينَ. ﴿71﴾
72 ಇಬ್ರಾಹೀಮ್ ಕೇಳಿದರು: “ನೀವು ಅವರನ್ನು ಕರೆದು ಪ್ರಾರ್ಥಿಸಿದರೆ ಅವರಿಗೆ ಕೇಳುತ್ತದೆಯೇ? قَالَ هَلْ يَسْمَعُونَكُمْ إِذْ تَدْعُونَ. ﴿72﴾
73 ಅಥವಾ ಅವರು ನಿಮಗೆ ಉಪಕಾರ ಅಥವಾ ತೊಂದರೆ ಮಾಡುತ್ತಾರೆಯೇ?” أَوْ يَنفَعُونَكُمْ أَوْ يَضُرُّونَ. ﴿73﴾
74 ಅವರು ಹೇಳಿದರು: “(ಅದರ ಬಗ್ಗೆ ನಮಗೇನೂ ತಿಳಿದಿಲ್ಲ). ಆದರೆ ನಮ್ಮ ಪೂರ್ವಜರು ಹೀಗೆ ಮಾಡುತ್ತಾ ಬಂದಿದ್ದನ್ನು ನಾವು ನೋಡಿದ್ದೇವೆ.” قَالُوا۟ بَلْ وَجَدْنَآ ءَابَآءَنَا كَذَٰلِكَ يَفْعَلُونَ. ﴿74﴾
75 ಇಬ್ರಾಹೀಮ್ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ ಎಂದು ನೀವು ಆಲೋಚಿಸಿ ನೋಡಿದ್ದೀರಾ? قَالَ أَفَرَءَيْتُم مَّا كُنتُمْ تَعْبُدُونَ. ﴿75﴾
76 ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು? أَنتُمْ وَءَابَآؤُكُمُ ٱلْأَقْدَمُونَ. ﴿76﴾
77 ನಿಶ್ಚಯವಾಗಿಯೂ ಅವರು (ಆ ದೇವರುಗಳು) ನನ್ನ ವೈರಿಗಳಾಗಿದ್ದಾರೆ; ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಹೊರತು. فَإِنَّهُمْ عَدُوٌّۭ لِّىٓ إِلَّا رَبَّ ٱلْعَٰلَمِينَ. ﴿77﴾
78 ಅವನು (ಅಲ್ಲಾಹು) ಯಾರೆಂದರೆ, ನನ್ನನ್ನು ಸೃಷ್ಟಿಸಿ ನನಗೆ ದಾರಿ ತೋರಿಸಿದವನು. ٱلَّذِى خَلَقَنِى فَهُوَ يَهْدِينِ. ﴿78﴾
79 ನನಗೆ ಆಹಾರ-ಪಾನೀಯಗಳನ್ನು ನೀಡುವವನು. وَٱلَّذِى هُوَ يُطْعِمُنِى وَيَسْقِينِ. ﴿79﴾
80 ನನಗೆ ಕಾಯಿಲೆ ಬಂದರೆ ಅವನು ಅದನ್ನು ಗುಣಪಡಿಸುತ್ತಾನೆ. وَإِذَا مَرِضْتُ فَهُوَ يَشْفِينِ. ﴿80﴾
81 ಅವನು ನನ್ನನ್ನು ಮೃತಪಡಿಸುತ್ತಾನೆ, ನಂತರ ನನಗೆ ಪುನಃ ಜೀವ ನೀಡುತ್ತಾನೆ. وَٱلَّذِى يُمِيتُنِى ثُمَّ يُحْيِينِ. ﴿81﴾
82 ಅವನು ಯಾರೆಂದರೆ, ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸುವನೆಂದು ನಾನು ಭರವಸೆಯಿಟ್ಟವನು. وَٱلَّذِىٓ أَطْمَعُ أَن يَغْفِرَ لِى خَطِيٓـَٔتِى يَوْمَ ٱلدِّينِ. ﴿82﴾
83 ನನ್ನ ಪರಿಪಾಲಕನೇ! ನನಗೆ ತೀರ್ಪು ನೀಡುವ ಶಕ್ತಿಯನ್ನು ನೀಡು ಮತ್ತು ನನ್ನನ್ನು ನೀತಿವಂತರಲ್ಲಿ ಸೇರಿಸು. رَبِّ هَبْ لِى حُكْمًۭا وَأَلْحِقْنِى بِٱلصَّٰلِحِينَ. ﴿83﴾
84 ಮುಂಬರುವ ತಲೆಮಾರುಗಳಲ್ಲಿ ನನಗೆ ಅತ್ಯುತ್ತಮ ಕೀರ್ತಿಯನ್ನು ಕರುಣಿಸು. وَٱجْعَل لِّى لِسَانَ صِدْقٍۢ فِى ٱلْءَاخِرِينَ. ﴿84﴾
85 ಸುಖ ಸಂತೋಷಗಳಿಂದ ಕೂಡಿದ ಸ್ವರ್ಗದ ವಾರಸುದಾರರಲ್ಲಿ ನನ್ನನ್ನು ಸೇರಿಸು. وَٱجْعَلْنِى مِن وَرَثَةِ جَنَّةِ ٱلنَّعِيمِ. ﴿85﴾
86 ನನ್ನ ತಂದೆಯನ್ನು ಕ್ಷಮಿಸು. ನಿಜಕ್ಕೂ ಅವನು ದಾರಿತಪ್ಪಿದವರಲ್ಲಿ ಸೇರಿದ್ದಾನೆ. وَٱغْفِرْ لِأَبِىٓ إِنَّهُۥ كَانَ مِنَ ٱلضَّآلِّينَ. ﴿86﴾
87 ಮನುಷ್ಯರಿಗೆ ಜೀವ ನೀಡಿ ಎಬ್ಬಿಸುವ ದಿನದಂದು ನನಗೆ ಅವಮಾನ ಮಾಡಬೇಡ. وَلَا تُخْزِنِى يَوْمَ يُبْعَثُونَ. ﴿87﴾
88 ಅಂದರೆ, ಆಸ್ತಿ ಮತ್ತು ಮಕ್ಕಳು ಯಾವುದೇ ಉಪಕಾರ ಮಾಡದ ದಿನ! يَوْمَ لَا يَنفَعُ مَالٌۭ وَلَا بَنُونَ. ﴿88﴾
89 ಪಾಪಮುಕ್ತ ಹೃದಯದೊಂದಿಗೆ ಅಲ್ಲಾಹನ ಬಳಿ ಬರುವವನ ಹೊರತು. إِلَّا مَنْ أَتَى ٱللَّهَ بِقَلْبٍۢ سَلِيمٍۢ. ﴿89﴾
90 ದೇವಭಯವುಳ್ಳವರಿಗೆ ಸ್ವರ್ಗವನ್ನು ಹತ್ತಿರಗೊಳಿಸಲಾಗುವುದು. وَأُزْلِفَتِ ٱلْجَنَّةُ لِلْمُتَّقِينَ. ﴿90﴾
91 ದುರ್ಮಾರ್ಗಿಗಳಿಗೆ ನರಕವನ್ನು ತೆರೆದು ತೋರಿಸಲಾಗುವುದು. وَبُرِّزَتِ ٱلْجَحِيمُ لِلْغَاوِينَ. ﴿91﴾
92 ಅವರೊಡನೆ ಕೇಳಲಾಗುವುದು: “ನೀವು ಆರಾಧಿಸುತ್ತಿದ್ದವರು ಎಲ್ಲಿ ಹೋದರು? وَقِيلَ لَهُمْ أَيْنَ مَا كُنتُمْ تَعْبُدُونَ. ﴿92﴾
93 ಅಲ್ಲಾಹನನ್ನು ಬಿಟ್ಟು. ಅವರು ನಿಮಗೆ ಸಹಾಯ ಮಾಡುತ್ತಾರೆಯೇ? ಅಥವಾ ಅವರು ಅವರಿಗೇ ಸಹಾಯ ಮಾಡುವರೇ?” مِن دُونِ ٱللَّهِ هَلْ يَنصُرُونَكُمْ أَوْ يَنتَصِرُونَ. ﴿93﴾
94 ಆದ್ದರಿಂದ ಅವರನ್ನು (ಆ ದೇವರುಗಳನ್ನು) ಮತ್ತು ದುರ್ಮಾರ್ಗಿಗಳನ್ನು ನರಕಾಗ್ನಿಗೆ ತಲೆಕೆಳಗಾಗಿ ಎಸೆಯಲಾಗುವುದು. فَكُبْكِبُوا۟ فِيهَا هُمْ وَٱلْغَاوُۥنَ. ﴿94﴾
95 ಮತ್ತು ಇಬ್ಲೀಸನ ಸಂಪೂರ್ಣ ಸೈನ್ಯವನ್ನು. وَجُنُودُ إِبْلِيسَ أَجْمَعُونَ. ﴿95﴾
96 ಅಲ್ಲಿ ಅವರು ಪರಸ್ಪರ ತರ್ಕಿಸುತ್ತಾ ಹೇಳುವರು: قَالُوا۟ وَهُمْ فِيهَا يَخْتَصِمُونَ. ﴿96﴾
97 “ಅಲ್ಲಾಹನಾಣೆ! ನಿಜಕ್ಕೂ ನಾವು ಸ್ಪಷ್ಟವಾಗಿ ದಾರಿತಪ್ಪಿದ್ದೆವು. تَٱللَّهِ إِن كُنَّا لَفِى ضَلَٰلٍۢ مُّبِينٍ. ﴿97﴾
98 ನಾವು ನಿಮ್ಮನ್ನು ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಸಮಾನರೆಂದು ಕಲ್ಪಿಸಿದಾಗ. إِذْ نُسَوِّيكُم بِرَبِّ ٱلْعَٰلَمِينَ. ﴿98﴾
99 ಆ ಅಪರಾಧಿಗಳೇ ನಮ್ಮನ್ನು ದಾರಿತಪ್ಪಿಸಿದ್ದು. وَمَآ أَضَلَّنَآ إِلَّا ٱلْمُجْرِمُونَ. ﴿99﴾
100 ಈಗ ನಮಗೆ ಶಿಫಾರಸು ಮಾಡಲು ಯಾರೂ ಇಲ್ಲ. فَمَا لَنَا مِن شَٰفِعِينَ. ﴿100﴾
101 ಆತ್ಮೀಯ ಮಿತ್ರರೂ ಇಲ್ಲ. وَلَا صَدِيقٍ حَمِيمٍۢ. ﴿101﴾
102 ನಮಗೆ (ಇಹಲೋಕಕ್ಕೆ) ಮರಳಿ ಹೋಗುವ ಒಂದು ಅವಕಾಶವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು.” فَلَوْ أَنَّ لَنَا كَرَّةًۭ فَنَكُونَ مِنَ ٱلْمُؤْمِنِينَ. ﴿102﴾
103 ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ. إِنَّ فِى ذَٰلِكَ لَءَايَةًۭ ۖ وَمَا كَانَ أَكْثَرُهُم مُّؤْمِنِينَ. ﴿103﴾
104 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ. وَإِنَّ رَبَّكَ لَهُوَ ٱلْعَزِيزُ ٱلرَّحِيمُ. ﴿104﴾
105 ನೂಹರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು. كَذَّبَتْ قَوْمُ نُوحٍ ٱلْمُرْسَلِينَ. ﴿105﴾
106 ಅವರೊಡನೆ ಅವರ ಸಹೋದರ ನೂಹ್ ಹೇಳಿದ ಸಂದರ್ಭ.“ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? إِذْ قَالَ لَهُمْ أَخُوهُمْ نُوحٌ أَلَا تَتَّقُونَ. ﴿106﴾
107 ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ. إِنِّى لَكُمْ رَسُولٌ أَمِينٌۭ. ﴿107﴾
108 ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. فَٱتَّقُوا۟ ٱللَّهَ وَأَطِيعُونِ. ﴿108﴾
109 ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ. وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَٰلَمِينَ. ﴿109﴾
110 ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.” فَٱتَّقُوا۟ ٱللَّهَ وَأَطِيعُونِ. ﴿110﴾
111 ಅವರು ಹೇಳಿದರು: “ನಾವು ನಿನ್ನನ್ನು ಅನುಸರಿಸಬೇಕೇ? ನಿನ್ನ ಹಿಂದೆಯಿರುವುದು ಕೆಳವರ್ಗದ ಜನರು ಮಾತ್ರ.” ۞ قَالُوٓا۟ أَنُؤْمِنُ لَكَ وَٱتَّبَعَكَ ٱلْأَرْذَلُونَ. ﴿111﴾
112 ನೂಹ್ ಹೇಳಿದರು: “ಅವರು ಮೊದಲು ಏನು ಮಾಡುತ್ತಿದ್ದರೆಂದು ನನಗೇನು ಗೊತ್ತು? قَالَ وَمَا عِلْمِى بِمَا كَانُوا۟ يَعْمَلُونَ. ﴿112﴾
113 ಅವರನ್ನು ವಿಚಾರಣೆ ಮಾಡಬೇಕಾದ ಹೊಣೆ ನನ್ನ ಪರಿಪಾಲಕನದ್ದು (ಅಲ್ಲಾಹನದ್ದು). ನಿಮಗೆ ಹಾಗೆ ಅನ್ನಿಸುತ್ತಿದ್ದರೆ! إِنْ حِسَابُهُمْ إِلَّا عَلَىٰ رَبِّى ۖ لَوْ تَشْعُرُونَ. ﴿113﴾
114 ನಾನು ಸತ್ಯವಿಶ್ವಾಸಿಗಳನ್ನು ದೂರ ತಳ್ಳುವುದಿಲ್ಲ. وَمَآ أَنَا۠ بِطَارِدِ ٱلْمُؤْمِنِينَ. ﴿114﴾
115 ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರ.” إِنْ أَنَا۠ إِلَّا نَذِيرٌۭ مُّبِينٌۭ. ﴿115﴾
116 ಅವರು ಹೇಳಿದರು: “ಓ ನೂಹ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುವೆವು.” قَالُوا۟ لَئِن لَّمْ تَنتَهِ يَٰنُوحُ لَتَكُونَنَّ مِنَ ٱلْمَرْجُومِينَ. ﴿116﴾
117 ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನನ್ನ ಜನರು ನನ್ನನ್ನು ನಿಷೇಧಿಸಿದ್ದಾರೆ. قَالَ رَبِّ إِنَّ قَوْمِى كَذَّبُونِ. ﴿117﴾
118 ಆದ್ದರಿಂದ ನನ್ನ ಮತ್ತು ಅವರ ನಡುವೆ ನಿರ್ಣಾಯಕವಾದ ತೀರ್ಪನ್ನು ನೀಡು. ನನ್ನನ್ನು ಮತ್ತು ನನ್ನ ಜೊತೆಯಲ್ಲಿರುವ ಸತ್ಯವಿಶ್ವಾಸಿಗಳನ್ನು ರಕ್ಷಿಸು.” فَٱفْتَحْ بَيْنِى وَبَيْنَهُمْ فَتْحًۭا وَنَجِّنِى وَمَن مَّعِىَ مِنَ ٱلْمُؤْمِنِينَ. ﴿118﴾
119 ಆಗ ನಾವು ಅವರನ್ನು ಮತ್ತು ಅವರ ಜೊತೆಯಲ್ಲಿದ್ದವರನ್ನು ತುಂಬಿ ತುಳುಕುವ ನಾವೆಯಲ್ಲಿ ರಕ್ಷಿಸಿದೆವು. فَأَنجَيْنَٰهُ وَمَن مَّعَهُۥ فِى ٱلْفُلْكِ ٱلْمَشْحُونِ. ﴿119﴾
120 ನಂತರ, ಉಳಿದವರನ್ನು ಮುಳುಗಿಸಿ ಕೊಂದೆವು. ثُمَّ أَغْرَقْنَا بَعْدُ ٱلْبَاقِينَ. ﴿120﴾
121 ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ. إِنَّ فِى ذَٰلِكَ لَءَايَةًۭ ۖ وَمَا كَانَ أَكْثَرُهُم مُّؤْمِنِينَ. ﴿121﴾
122 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ. وَإِنَّ رَبَّكَ لَهُوَ ٱلْعَزِيزُ ٱلرَّحِيمُ. ﴿122﴾
123 ಆದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು. كَذَّبَتْ عَادٌ ٱلْمُرْسَلِينَ. ﴿123﴾
124 ಅವರೊಡನೆ ಅವರ ಸಹೋದರ ಹೂದ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? إِذْ قَالَ لَهُمْ أَخُوهُمْ هُودٌ أَلَا تَتَّقُونَ. ﴿124﴾
125 ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ. إِنِّى لَكُمْ رَسُولٌ أَمِينٌۭ. ﴿125﴾
126 ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. فَٱتَّقُوا۟ ٱللَّهَ وَأَطِيعُونِ. ﴿126﴾
127 ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ. وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَٰلَمِينَ. ﴿127﴾
128 ನೀವು ಎಲ್ಲಾ ಗುಡ್ಡಗಳಲ್ಲೂ ಮೋಜು ಮಸ್ತಿಗಾಗಿ ನಿಶಾನಿಗಳನ್ನು (ಕಟ್ಟಡಗಳನ್ನು) ನಿರ್ಮಿಸುತ್ತಿದ್ದೀರಾ? أَتَبْنُونَ بِكُلِّ رِيعٍ ءَايَةًۭ تَعْبَثُونَ. ﴿128﴾
129 ನೀವು ಮಹಾ ರಚನೆಗಳನ್ನು (ಭವ್ಯ ಸೌಧಗಳನ್ನು) ನಿರ್ಮಿಸುತ್ತಿದ್ದೀರಾ? ನೀವು ಇಲ್ಲೇ ಶಾಶ್ವತವಾಗಿ ವಾಸಿಸುವಿರಿ ಎಂಬ ಕಲ್ಪನೆಯಲ್ಲಿ? وَتَتَّخِذُونَ مَصَانِعَ لَعَلَّكُمْ تَخْلُدُونَ. ﴿129﴾
130 ನೀವು ಯಾರನ್ನಾದರೂ ಹಿಡಿಯುವಾಗ ಬಹಳ ಕಠೋರವಾಗಿ ಹಿಡಿಯುತ್ತೀರಿ. وَإِذَا بَطَشْتُم بَطَشْتُمْ جَبَّارِينَ. ﴿130﴾
131 ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. فَٱتَّقُوا۟ ٱللَّهَ وَأَطِيعُونِ. ﴿131﴾
132 ನಿಮಗೆ ತಿಳಿದೇ ಇರುವ ವಸ್ತುಗಳ ಮೂಲಕ ನಿಮಗೆ ಸಹಾಯ ಮಾಡಿದವನನ್ನು (ಅಲ್ಲಾಹನನ್ನು) ಭಯಪಡಿರಿ. وَٱتَّقُوا۟ ٱلَّذِىٓ أَمَدَّكُم بِمَا تَعْلَمُونَ. ﴿132﴾
133 ಅವನು ನಿಮಗೆ ಜಾನುವಾರುಗಳು ಮತ್ತು ಮಕ್ಕಳು-ಮರಿಗಳನ್ನು ನೀಡಿ ಸಹಾಯ ಮಾಡಿದ್ದಾನೆ. أَمَدَّكُم بِأَنْعَٰمٍۢ وَبَنِينَ. ﴿133﴾
134 ತೋಟಗಳು ಮತ್ತು ಚಿಲುಮೆಗಳನ್ನು ನೀಡಿ. وَجَنَّٰتٍۢ وَعُيُونٍ. ﴿134﴾
135 ಆ ಭಯಾನಕ ದಿನದ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ.” إِنِّىٓ أَخَافُ عَلَيْكُمْ عَذَابَ يَوْمٍ عَظِيمٍۢ. ﴿135﴾
136 ಅವರು ಹೇಳಿದರು: “ನೀನು ನಮಗೆ ಉಪದೇಶ ಮಾಡಿದರೂ ಅಥವಾ ಉಪದೇಶ ಮಾಡದಿದ್ದರೂ ನಮ್ಮ ಮಟ್ಟಿಗೆ ಅದು ಸಮಾನವಾಗಿದೆ. قَالُوا۟ سَوَآءٌ عَلَيْنَآ أَوَعَظْتَ أَمْ لَمْ تَكُن مِّنَ ٱلْوَٰعِظِينَ. ﴿136﴾
137 ಇದು ಪ್ರಾಚೀನ ಕಾಲದ ಜನರ ವರ್ತನೆಯಾಗಿದೆ. إِنْ هَٰذَآ إِلَّا خُلُقُ ٱلْأَوَّلِينَ. ﴿137﴾
138 ನಾವು ಎಂದಿಗೂ ಶಿಕ್ಷೆಗೆ ಗುರಿಯಾಗುವುದಿಲ್ಲ.” وَمَا نَحْنُ بِمُعَذَّبِينَ. ﴿138﴾
139 ಅವರು ಹೂದರನ್ನು ನಿಷೇಧಿಸಿದರು. ಆದ್ದರಿಂದ ನಾವು ಅವರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ. فَكَذَّبُوهُ فَأَهْلَكْنَٰهُمْ ۗ إِنَّ فِى ذَٰلِكَ لَءَايَةًۭ ۖ وَمَا كَانَ أَكْثَرُهُم مُّؤْمِنِينَ. ﴿139﴾
140 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ. وَإِنَّ رَبَّكَ لَهُوَ ٱلْعَزِيزُ ٱلرَّحِيمُ. ﴿140﴾
141 ಸಮೂದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು. كَذَّبَتْ ثَمُودُ ٱلْمُرْسَلِينَ. ﴿141﴾
142 ಅವರೊಡನೆ ಅವರ ಸಹೋದರ ಸಾಲಿಹ್ ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? إِذْ قَالَ لَهُمْ أَخُوهُمْ صَٰلِحٌ أَلَا تَتَّقُونَ. ﴿142﴾
143 ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ. إِنِّى لَكُمْ رَسُولٌ أَمِينٌۭ. ﴿143﴾
144 ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. فَٱتَّقُوا۟ ٱللَّهَ وَأَطِيعُونِ. ﴿144﴾
145 ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ. وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَٰلَمِينَ. ﴿145﴾
146 ಇಲ್ಲಿರುವ ವಸ್ತುಗಳೊಂದಿಗೆ ನಿರ್ಭಯದಿಂದ ಜೀವಿಸಲು ನಿಮ್ಮನ್ನು ಬಿಟ್ಟುಬಿಡಲಾಗುವುದೇ? أَتُتْرَكُونَ فِى مَا هَٰهُنَآ ءَامِنِينَ. ﴿146﴾
147 ಅಂದರೆ ಈ ತೋಟಗಳು ಮತ್ತು ಕಾಲುವೆಗಳೊಂದಿಗೆ. فِى جَنَّٰتٍۢ وَعُيُونٍۢ. ﴿147﴾
148 ಈ ಹೊಲಗಳು ಮತ್ತು ಮೃದು ಹಾಗೂ ರುಚಿಯಾದ ಹಣ್ಣುಗಳಿರುವ ಖರ್ಜೂರದ ಮರಗಳೊಂದಿಗೆ. وَزُرُوعٍۢ وَنَخْلٍۢ طَلْعُهَا هَضِيمٌۭ. ﴿148﴾
149 ನೀವು ಕೌಶಲ್ಯದಿಂದ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತೀರಿ. وَتَنْحِتُونَ مِنَ ٱلْجِبَالِ بُيُوتًۭا فَٰرِهِينَ. ﴿149﴾
150 ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. فَٱتَّقُوا۟ ٱللَّهَ وَأَطِيعُونِ. ﴿150﴾
151 ಹದ್ದು ಮೀರಿದವರ ಆಜ್ಞೆಗಳನ್ನು ಅನುಸರಿಸಬೇಡಿ. وَلَا تُطِيعُوٓا۟ أَمْرَ ٱلْمُسْرِفِينَ. ﴿151﴾
152 ಅವರು ಯಾರೆಂದರೆ, ಭೂಮಿಯಲ್ಲಿ ಕಿಡಿಗೇಡಿತನ ಮಾಡುವವರು; ಸುಧಾರಣೆ ಮಾಡದವರು.” ٱلَّذِينَ يُفْسِدُونَ فِى ٱلْأَرْضِ وَلَا يُصْلِحُونَ. ﴿152﴾
153 ಅವರು ಹೇಳಿದರು: “ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ. قَالُوٓا۟ إِنَّمَآ أَنتَ مِنَ ٱلْمُسَحَّرِينَ. ﴿153﴾
154 ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನೀನು ಸತ್ಯವನ್ನೇ ಹೇಳುತ್ತಿದ್ದರೆ ಯಾವುದಾದರೂ ದೃಷ್ಟಾಂತವನ್ನು ತಂದು ತೋರಿಸು.” مَآ أَنتَ إِلَّا بَشَرٌۭ مِّثْلُنَا فَأْتِ بِـَٔايَةٍ إِن كُنتَ مِنَ ٱلصَّٰدِقِينَ. ﴿154﴾
155 ಸಾಲಿಹ್ ಹೇಳಿದರು: “ನೋಡಿ! ಇದು ಒಂಟೆ. ಇದಕ್ಕೆ ನೀರು ಕುಡಿಯಲು ಒಂದು ಸರದಿಯಿದೆ. ನಿಮಗೂ ಕೂಡ ನೀರು ಕುಡಿಯುವ ಒಂದು ನಿಶ್ಚಿತ ದಿನವಿದೆ. قَالَ هَٰذِهِۦ نَاقَةٌۭ لَّهَا شِرْبٌۭ وَلَكُمْ شِرْبُ يَوْمٍۢ مَّعْلُومٍۢ. ﴿155﴾
156 ಆದ್ದರಿಂದ ಇದಕ್ಕೆ ಯಾವುದೇ ತೊಂದರೆ ಕೊಡಬೇಡಿ. ಹಾಗೇನಾದರೂ ಆದರೆ ಭಯಾನಕ ದಿನದ ಶಿಕ್ಷೆಯು ನಿಮ್ಮನ್ನು ಹಿಡಿಯುವುದು.” وَلَا تَمَسُّوهَا بِسُوٓءٍۢ فَيَأْخُذَكُمْ عَذَابُ يَوْمٍ عَظِيمٍۢ. ﴿156﴾
157 ಆದರೂ ಅವರು ಅದರ ಕಾಲುಗಳನ್ನು ಕಡಿದು ಸಾಯಿಸಿದರು. ನಂತರ (ಶಿಕ್ಷೆಯನ್ನು ಕಂಡಾಗ) ಅವರು ಮರುಗಿದರು. فَعَقَرُوهَا فَأَصْبَحُوا۟ نَٰدِمِينَ. ﴿157﴾
158 ಶಿಕ್ಷೆಯು ಅವರನ್ನು ಹಿಡಿದು ಬಿಟ್ಟಿತು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ. فَأَخَذَهُمُ ٱلْعَذَابُ ۗ إِنَّ فِى ذَٰلِكَ لَءَايَةًۭ ۖ وَمَا كَانَ أَكْثَرُهُم مُّؤْمِنِينَ. ﴿158﴾
159 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ. وَإِنَّ رَبَّكَ لَهُوَ ٱلْعَزِيزُ ٱلرَّحِيمُ. ﴿159﴾
160 ಲೂತರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು. كَذَّبَتْ قَوْمُ لُوطٍ ٱلْمُرْسَلِينَ. ﴿160﴾
161 ಅವರೊಡನೆ ಅವರ ಸಹೋದರ ಲೂತ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? إِذْ قَالَ لَهُمْ أَخُوهُمْ لُوطٌ أَلَا تَتَّقُونَ. ﴿161﴾
162 ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ. إِنِّى لَكُمْ رَسُولٌ أَمِينٌۭ. ﴿162﴾
163 ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. فَٱتَّقُوا۟ ٱللَّهَ وَأَطِيعُونِ. ﴿163﴾
164 ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ. وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَٰلَمِينَ. ﴿164﴾
165 ನೀವು (ತೆವಲು ತೀರಿಸಿಕೊಳ್ಳಲು) ಸರ್ವಲೋಕದವರ ಪೈಕಿ ಕೇವಲ ಪುರುಷರ ಬಳಿಗೆ ಹೋಗುತ್ತೀರಾ? أَتَأْتُونَ ٱلذُّكْرَانَ مِنَ ٱلْعَٰلَمِينَ. ﴿165﴾
166 ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೋಸ್ಕರ ಸೃಷ್ಟಿಸಿದ ನಿಮ್ಮ ಪತ್ನಿಯರನ್ನು ಬಿಟ್ಟುಬಿಡುತ್ತೀರಾ? ಅಲ್ಲ, ವಾಸ್ತವವಾಗಿ ನೀವು ಹದ್ದು ಮೀರಿದ ಜನರಾಗಿದ್ದೀರಿ.” وَتَذَرُونَ مَا خَلَقَ لَكُمْ رَبُّكُم مِّنْ أَزْوَٰجِكُم ۚ بَلْ أَنتُمْ قَوْمٌ عَادُونَ. ﴿166﴾
167 ಅವರು ಹೇಳಿದರು: “ಓ ಲೂತ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಖಂಡಿತ ಊರಿನಿಂದ ಓಡಿಸುವೆವು.” قَالُوا۟ لَئِن لَّمْ تَنتَهِ يَٰلُوطُ لَتَكُونَنَّ مِنَ ٱلْمُخْرَجِينَ. ﴿167﴾
168 ಲೂತ್ ಹೇಳಿದರು: “ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಈ ಕೃತ್ಯವನ್ನು ನಾನು ಬಹಳ ದ್ವೇಷಿಸುತ್ತೇನೆ. قَالَ إِنِّى لِعَمَلِكُم مِّنَ ٱلْقَالِينَ. ﴿168﴾
169 ಓ ನನ್ನ ಪರಿಪಾಲಕನೇ! ನನ್ನನ್ನು ಮತ್ತು ನನ್ನ ಕುಟುಂಬವನ್ನು ಇವರು ಮಾಡುವ ಈ ಕೃತ್ಯದಿಂದ ರಕ್ಷಿಸು.” رَبِّ نَجِّنِى وَأَهْلِى مِمَّا يَعْمَلُونَ. ﴿169﴾
170 ಆದ್ದರಿಂದ ನಾವು ಅವರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿಸಿದೆವು. فَنَجَّيْنَٰهُ وَأَهْلَهُۥٓ أَجْمَعِينَ. ﴿170﴾
171 ಒಬ್ಬ ಮುದುಕಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರಿದಳು. إِلَّا عَجُوزًۭا فِى ٱلْغَٰبِرِينَ. ﴿171﴾
172 ನಂತರ ನಾವು ಅವರೆಲ್ಲರನ್ನೂ ನಾಶ ಮಾಡಿದೆವು. ثُمَّ دَمَّرْنَا ٱلْءَاخَرِينَ. ﴿172﴾
173 ನಾವು ಅವರ ಮೇಲೆ ಒಂದು ವಿಶೇಷ ಮಳೆಯನ್ನು ಸುರಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಸುರಿದ ಆ ಮಳೆಯು ಬಹಳ ನಿಕೃಷ್ಟವಾಗಿದೆ. وَأَمْطَرْنَا عَلَيْهِم مَّطَرًۭا ۖ فَسَآءَ مَطَرُ ٱلْمُنذَرِينَ. ﴿173﴾
174 ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ. إِنَّ فِى ذَٰلِكَ لَءَايَةًۭ ۖ وَمَا كَانَ أَكْثَرُهُم مُّؤْمِنِينَ. ﴿174﴾
175 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ. وَإِنَّ رَبَّكَ لَهُوَ ٱلْعَزِيزُ ٱلرَّحِيمُ. ﴿175﴾
176 ಐಕತ್‌ನ ಜನರು (ಮದ್ಯನ್ ದೇಶದವರು) ಸಂದೇಶವಾಹಕರುಗಳನ್ನು ನಿಷೇಧಿಸಿದರು. كَذَّبَ أَصْحَٰبُ لْـَٔيْكَةِ ٱلْمُرْسَلِينَ. ﴿176﴾
177 ಅವರೊಡನೆ ಶುಐಬರು ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? إِذْ قَالَ لَهُمْ شُعَيْبٌ أَلَا تَتَّقُونَ. ﴿177﴾
178 ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ. إِنِّى لَكُمْ رَسُولٌ أَمِينٌۭ. ﴿178﴾
179 ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. فَٱتَّقُوا۟ ٱللَّهَ وَأَطِيعُونِ. ﴿179﴾
180 ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ. وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَٰلَمِينَ. ﴿180﴾
181 ಅಳತೆಯನ್ನು ಪೂರ್ತಿಯಾಗಿ ಕೊಡಿ. ಜನರಿಗೆ ನಷ್ಟ ಮಾಡುವವರಲ್ಲಿ ಸೇರಬೇಡಿ. ۞ أَوْفُوا۟ ٱلْكَيْلَ وَلَا تَكُونُوا۟ مِنَ ٱلْمُخْسِرِينَ. ﴿181﴾
182 ಸರಿಯಾದ ತಕ್ಕಡಿಯಲ್ಲಿ ತೂಕ ಮಾಡಿರಿ. وَزِنُوا۟ بِٱلْقِسْطَاسِ ٱلْمُسْتَقِيمِ. ﴿182﴾
183 ಜನರಿಗೆ ಅವರ ವಸ್ತುಗಳನ್ನು ಕಡಿಮೆ ಮಾಡಬೇಡಿ. ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲೆಯಬೇಡಿ. وَلَا تَبْخَسُوا۟ ٱلنَّاسَ أَشْيَآءَهُمْ وَلَا تَعْثَوْا۟ فِى ٱلْأَرْضِ مُفْسِدِينَ. ﴿183﴾
184 ನಿಮ್ಮನ್ನು ಮತ್ತು ನಿಮಗಿಂತ ಮೊದಲಿನ ಜನರನ್ನು ಸೃಷ್ಟಿಸಿದ ಅಲ್ಲಾಹನನ್ನು ಭಯಪಡಿರಿ.” وَٱتَّقُوا۟ ٱلَّذِى خَلَقَكُمْ وَٱلْجِبِلَّةَ ٱلْأَوَّلِينَ. ﴿184﴾
185 ಅವರು ಹೇಳಿದರು: “ನಿಶ್ಚಯವಾಗಿಯೂ ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ. قَالُوٓا۟ إِنَّمَآ أَنتَ مِنَ ٱلْمُسَحَّرِينَ. ﴿185﴾
186 ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನಿಶ್ಚಯವಾಗಿಯೂ ನೀನು ಸುಳ್ಳು ಹೇಳುತ್ತಿದ್ದೀಯೆಂದೇ ನಾವು ಭಾವಿಸುತ್ತೇವೆ. وَمَآ أَنتَ إِلَّا بَشَرٌۭ مِّثْلُنَا وَإِن نَّظُنُّكَ لَمِنَ ٱلْكَٰذِبِينَ. ﴿186﴾
187 ನೀನು ಹೇಳುವುದು ನಿಜವೇ ಆಗಿದ್ದರೆ ಆಕಾಶದಿಂದ (ನಮ್ಮ ಮೇಲೆ) ತುಣುಕುಗಳು ಬೀಳುವಂತೆ ಮಾಡು.” فَأَسْقِطْ عَلَيْنَا كِسَفًۭا مِّنَ ٱلسَّمَآءِ إِن كُنتَ مِنَ ٱلصَّٰدِقِينَ. ﴿187﴾
188 ಶುಐಬ್ ಹೇಳಿದರು: “ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನನ್ನ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ.” قَالَ رَبِّىٓ أَعْلَمُ بِمَا تَعْمَلُونَ. ﴿188﴾
189 ಅವರು ಶುಐಬರನ್ನು ನಿಷೇಧಿಸಿದರು. ಆದ್ದರಿಂದ ಮೋಡದ ನೆರಳು ಮುಸುಕಿದ ದಿನದ ಶಿಕ್ಷೆಯು ಅವರನ್ನು ಹಿಡಿಯಿತು. ನಿಜಕ್ಕೂ ಅದೊಂದು ಭಯಾನಕ ದಿನದ ಶಿಕ್ಷೆಯಾಗಿತ್ತು. فَكَذَّبُوهُ فَأَخَذَهُمْ عَذَابُ يَوْمِ ٱلظُّلَّةِ ۚ إِنَّهُۥ كَانَ عَذَابَ يَوْمٍ عَظِيمٍ. ﴿189﴾
190 ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ. إِنَّ فِى ذَٰلِكَ لَءَايَةًۭ ۖ وَمَا كَانَ أَكْثَرُهُم مُّؤْمِنِينَ. ﴿190﴾
191 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ. وَإِنَّ رَبَّكَ لَهُوَ ٱلْعَزِيزُ ٱلرَّحِيمُ. ﴿191﴾
192 ನಿಶ್ಚಯವಾಗಿಯೂ ಈ ಕುರ್‌ಆನ್ ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ. وَإِنَّهُۥ لَتَنزِيلُ رَبِّ ٱلْعَٰلَمِينَ. ﴿192﴾
193 ವಿಶ್ವಸ್ತ ಆತ್ಮ (ಜಿಬ್ರೀಲ್) ಇದರೊಂದಿಗೆ ಇಳಿದು ಬಂದಿದ್ದಾರೆ. نَزَلَ بِهِ ٱلرُّوحُ ٱلْأَمِينُ. ﴿193﴾
194 ನಿಮ್ಮ (ಪ್ರವಾದಿಯ) ಹೃದಯಕ್ಕೆ. ನೀವು ಮುನ್ನೆಚ್ಚರಿಕೆ ನೀಡುವವರಲ್ಲಿ ಸೇರಲೆಂದು. عَلَىٰ قَلْبِكَ لِتَكُونَ مِنَ ٱلْمُنذِرِينَ. ﴿194﴾
195 ಸ್ಪಷ್ಟ ಅರಬ್ಬಿ ಭಾಷೆಯಲ್ಲಿ. بِلِسَانٍ عَرَبِىٍّۢ مُّبِينٍۢ. ﴿195﴾
196 ನಿಶ್ಚಯವಾಗಿಯೂ ಪೂರ್ವಕಾಲದವರ ಗ್ರಂಥಗಳಲ್ಲಿ ಇದರ ಬಗ್ಗೆ ಉಲ್ಲೇಖವಿದೆ. وَإِنَّهُۥ لَفِى زُبُرِ ٱلْأَوَّلِينَ. ﴿196﴾
197 ಇಸ್ರಾಯೇಲ್ ಮಕ್ಕಳಲ್ಲಿರುವ ವಿದ್ವಾಂಸರು ಕೂಡ ಇದರ ಸತ್ಯತೆಯನ್ನು ತಿಳಿದಿದ್ದಾರೆ ಎನ್ನುವುದು ಇವರಿಗೆ (ಸತ್ಯನಿಷೇಧಿಗಳಿಗೆ) ಒಂದು ದೃಷ್ಟಾಂತವಾಗುವುದಿಲ್ಲವೇ? أَوَلَمْ يَكُن لَّهُمْ ءَايَةً أَن يَعْلَمَهُۥ عُلَمَٰٓؤُا۟ بَنِىٓ إِسْرَٰٓءِيلَ. ﴿197﴾
198 ನಾವು ಅದನ್ನು ಅರಬ್ಬೇತರ ವ್ಯಕ್ತಿಗೆ ಅವತೀರ್ಣಗೊಳಿಸಿ, وَلَوْ نَزَّلْنَٰهُ عَلَىٰ بَعْضِ ٱلْأَعْجَمِينَ. ﴿198﴾
199 ನಂತರ ಆತ ಅದನ್ನು ಇವರಿಗೆ ಓದಿಕೊಟ್ಟರೂ ಇವರು ಅದರಲ್ಲಿ ವಿಶ್ವಾಸವಿಡುವುದಿಲ್ಲ. فَقَرَأَهُۥ عَلَيْهِم مَّا كَانُوا۟ بِهِۦ مُؤْمِنِينَ. ﴿199﴾
200 ಈ ರೀತಿ ನಾವು ಅಪರಾಧಿಗಳ ಹೃದಯಗಳಲ್ಲಿ ಅದನ್ನು (ಸತ್ಯನಿಷೇಧವನ್ನು) ತೂರಿಸಿದ್ದೇವೆ. كَذَٰلِكَ سَلَكْنَٰهُ فِى قُلُوبِ ٱلْمُجْرِمِينَ. ﴿200﴾
201 ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ಅದರಲ್ಲಿ ವಿಶ್ವಾಸವಿಡುವುದಿಲ್ಲ. لَا يُؤْمِنُونَ بِهِۦ حَتَّىٰ يَرَوُا۟ ٱلْعَذَابَ ٱلْأَلِيمَ. ﴿201﴾
202 ಅದು ಹಠಾತ್ತನೆ ಅವರ ಬಳಿಗೆ ಬರುತ್ತದೆ. ಅವರು ಅದನ್ನು ನಿರೀಕ್ಷಿಸಿಯೇ ಇರುವುದಿಲ್ಲ. فَيَأْتِيَهُم بَغْتَةًۭ وَهُمْ لَا يَشْعُرُونَ. ﴿202﴾
203 ಅವರು ಕೇಳುತ್ತಾರೆ: “ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?” فَيَقُولُوا۟ هَلْ نَحْنُ مُنظَرُونَ. ﴿203﴾
204 ಹಾಗಾದರೆ ಅವರು ನಮ್ಮ ಶಿಕ್ಷೆಗಾಗಿ ತ್ವರೆ ಮಾಡುತ್ತಿದ್ದಾರೆಯೇ? أَفَبِعَذَابِنَا يَسْتَعْجِلُونَ. ﴿204﴾
205 ನೀವು ಆಲೋಚಿಸಿ ನೋಡಿದ್ದೀರಾ? ನಾವು ಅವರಿಗೆ ಅನೇಕ ವರ್ಷಗಳ ತನಕ ಸವಲತ್ತುಗಳನ್ನು ನೀಡಿ, أَفَرَءَيْتَ إِن مَّتَّعْنَٰهُمْ سِنِينَ. ﴿205﴾
206 ನಂತರ ಅವರಿಗೆ ವಾಗ್ದಾನ ಮಾಡಲಾದ ಶಿಕ್ಷೆಯು ಅವರ ಬಳಿಗೆ ಬಂದರೆ, ثُمَّ جَآءَهُم مَّا كَانُوا۟ يُوعَدُونَ. ﴿206﴾
207 ಅವರಿಗೆ ನೀಡಲಾದ ಯಾವುದೇ ಸವಲತ್ತುಗಳು ಅವರಿಗೆ ಪ್ರಯೋಜನ ನೀಡುವುದಿಲ್ಲ. مَآ أَغْنَىٰ عَنْهُم مَّا كَانُوا۟ يُمَتَّعُونَ. ﴿207﴾
208 ನಾವು ಯಾವುದೇ ಊರನ್ನು, ಅದಕ್ಕೆ ಮುನ್ನೆಚ್ಚರಿಕೆ ನೀಡುವವರನ್ನು (ಪ್ರವಾದಿಗಳನ್ನು) ಕಳುಹಿಸಿದ ನಂತರವಲ್ಲದೆ ನಾಶ ಮಾಡಿಲ್ಲ. وَمَآ أَهْلَكْنَا مِن قَرْيَةٍ إِلَّا لَهَا مُنذِرُونَ. ﴿208﴾
209 ಇದೊಂದು ಉಪದೇಶ ಮಾತ್ರ. ನಾವು ಎಂದಿಗೂ ಅನ್ಯಾಯ ಮಾಡುವುದಿಲ್ಲ. ذِكْرَىٰ وَمَا كُنَّا ظَٰلِمِينَ. ﴿209﴾
210 ಶೈತಾನರು ಈ ಕುರ್‌ಆನನ್ನು ತಂದಿಲ್ಲ. وَمَا تَنَزَّلَتْ بِهِ ٱلشَّيَٰطِينُ. ﴿210﴾
211 ಅದು ಅವರಿಗೆ ಯೋಗ್ಯವೂ ಅಲ್ಲ. ಅವರಿಗೆ ಅಂತಹ ಸಾಮರ್ಥ್ಯವೂ ಇಲ್ಲ. وَمَا يَنۢبَغِى لَهُمْ وَمَا يَسْتَطِيعُونَ. ﴿211﴾
212 ವಾಸ್ತವವಾಗಿ, ಅವರನ್ನು (ದೇವವಾಣಿಗೆ) ಕಿವಿಗೊಡದಂತೆ ದೂರ ಸರಿಸಲಾಗಿದೆ. إِنَّهُمْ عَنِ ٱلسَّمْعِ لَمَعْزُولُونَ. ﴿212﴾
213 ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸಬೇಡಿ. ಹಾಗೇನಾದರೂ ಆದರೆ ನೀವು ಶಿಕ್ಷಗೆ ಗುರಿಯಾದವರಲ್ಲಿ ಸೇರುವಿರಿ. فَلَا تَدْعُ مَعَ ٱللَّهِ إِلَٰهًا ءَاخَرَ فَتَكُونَ مِنَ ٱلْمُعَذَّبِينَ. ﴿213﴾
214 ನಿಮ್ಮ ಹತ್ತಿರದ ಸಂಬಂಧಿಕರಿಗೆ ಎಚ್ಚರಿಕೆ ನೀಡಿರಿ. وَأَنذِرْ عَشِيرَتَكَ ٱلْأَقْرَبِينَ. ﴿214﴾
215 ನಿಮ್ಮನ್ನು ಅನುಸರಿಸಿದ ಸತ್ಯವಿಶ್ವಾಸಿಗಳಿಗೆ ನಿಮ್ಮ ರೆಕ್ಕೆಯನ್ನು ತಗ್ಗಿಸಿಕೊಡಿ (ಅವರೊಡನೆ ಸೌಮ್ಯವಾಗಿ ವರ್ತಿಸಿ). وَٱخْفِضْ جَنَاحَكَ لِمَنِ ٱتَّبَعَكَ مِنَ ٱلْمُؤْمِنِينَ. ﴿215﴾
216 ಅವರು ನಿಮ್ಮ ಮಾತನ್ನು ಕೇಳದಿದ್ದರೆ, ಹೇಳಿರಿ: “ನೀವು ಮಾಡುವ ಕರ್ಮಗಳಿಗೆ ನಾನು ಹೊಣೆಯಲ್ಲ.” فَإِنْ عَصَوْكَ فَقُلْ إِنِّى بَرِىٓءٌۭ مِّمَّا تَعْمَلُونَ. ﴿216﴾
217 ಪ್ರಬಲನು ಮತ್ತು ದಯೆ ತೋರುವವನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡಿ. وَتَوَكَّلْ عَلَى ٱلْعَزِيزِ ٱلرَّحِيمِ. ﴿217﴾
218 ಅವನು ಯಾರೆಂದರೆ, ನೀವು ನಿಲ್ಲುವಾಗ ನಿಮ್ಮನ್ನು ನೋಡುವವನು. ٱلَّذِى يَرَىٰكَ حِينَ تَقُومُ. ﴿218﴾
219 ಸಾಷ್ಟಾಂಗ ಮಾಡುವವರ ಜೊತೆಗಿನ ತಮ್ಮ ಚಲನವಲನಗಳನ್ನೂ ಕೂಡ. وَتَقَلُّبَكَ فِى ٱلسَّٰجِدِينَ. ﴿219﴾
220 ನಿಶ್ಚಯವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಸರ್ವಜ್ಞನಾಗಿದ್ದಾನೆ. إِنَّهُۥ هُوَ ٱلسَّمِيعُ ٱلْعَلِيمُ. ﴿220﴾
221 ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿಕೊಡಲೇ? هَلْ أُنَبِّئُكُمْ عَلَىٰ مَن تَنَزَّلُ ٱلشَّيَٰطِينُ. ﴿221﴾
222 ಪ್ರತಿಯೊಬ್ಬ ಸುಳ್ಳುಗಾರ ಪಾಪಿಯ ಮೇಲೆ ಅವರು ಇಳಿಯುತ್ತಾರೆ. تَنَزَّلُ عَلَىٰ كُلِّ أَفَّاكٍ أَثِيمٍۢ. ﴿222﴾
223 ಅವರು ಕೇಳಿದ್ದೆಲ್ಲವನ್ನೂ ತಲುಪಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಸುಳ್ಳರಾಗಿದ್ದಾರೆ. يُلْقُونَ ٱلسَّمْعَ وَأَكْثَرُهُمْ كَٰذِبُونَ. ﴿223﴾
224 ಕವಿಗಳನ್ನು ದುರ್ಮಾರ್ಗಿಗಳು ಹಿಂಬಾಲಿಸುತ್ತಾರೆ. وَٱلشُّعَرَآءُ يَتَّبِعُهُمُ ٱلْغَاوُۥنَ. ﴿224﴾
225 ಅವರು (ಕವಿಗಳು) ಎಲ್ಲ ಕಣಿವೆಗಳಲ್ಲೂ ವಿಹರಿಸುವುದನ್ನು ನೀವು ನೋಡಿಲ್ಲವೇ? أَلَمْ تَرَ أَنَّهُمْ فِى كُلِّ وَادٍۢ يَهِيمُونَ. ﴿225﴾
226 ಅವರು ಮಾಡದ ಕೆಲಸಗಳನ್ನು ಅವರು ಹೇಳುತ್ತಾರೆ. وَأَنَّهُمْ يَقُولُونَ مَا لَا يَفْعَلُونَ. ﴿226﴾
227 ಆದರೆ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವವರು, ಮರ್ದನಕ್ಕೊಳಗಾದ ಬಳಿಕ ಪ್ರತೀಕಾರ ಪಡೆಯುವವರು ಇದರಿಂದ ಹೊರತಾಗಿದ್ದಾರೆ. ಅಕ್ರಮವೆಸಗಿದವರು ಸದ್ಯವೇ ಅವರು ಯಾವ ಸ್ಥಳಕ್ಕೆ ಮರಳಲಿದ್ದಾರೆಂದು ತಿಳಿದುಕೊಳ್ಳುವರು. إِلَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ وَذَكَرُوا۟ ٱللَّهَ كَثِيرًۭا وَٱنتَصَرُوا۟ مِنۢ بَعْدِ مَا ظُلِمُوا۟ ۗ وَسَيَعْلَمُ ٱلَّذِينَ ظَلَمُوٓا۟ أَىَّ مُنقَلَبٍۢ يَنقَلِبُونَ. ﴿227﴾