الدخان
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಹಾ-ಮೀಮ್. | حمٓ. ﴿1﴾ |
| 2 ಸ್ಪಷ್ಟ ಗ್ರಂಥದ ಮೇಲಾಣೆ! | وَٱلْكِتَٰبِ ٱلْمُبِينِ. ﴿2﴾ |
| 3 ನಿಶ್ಚಯವಾಗಿಯೂ ನಾವು ಇದನ್ನು ಒಂದು ಸಮೃದ್ಧ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇನೆ. ನಿಶ್ಚಯವಾಗಿಯೂ ನಾವು ಮುನ್ನೆಚ್ಚರಿಕೆ ನೀಡುವವರಾಗಿದ್ದೇವೆ. | إِنَّآ أَنزَلْنَٰهُ فِى لَيْلَةٍۢ مُّبَٰرَكَةٍ ۚ إِنَّا كُنَّا مُنذِرِينَ. ﴿3﴾ |
| 4 ಆ ರಾತ್ರಿಯಲ್ಲಿ ಎಲ್ಲಾ ಕಟ್ಟುನಿಟ್ಟಿನ ಕಾರ್ಯಗಳನ್ನು ನಿರ್ಣಯಿಸಲಾಗುವುದು. | فِيهَا يُفْرَقُ كُلُّ أَمْرٍ حَكِيمٍ. ﴿4﴾ |
| 5 ನಮ್ಮ ಕಡೆಯ ಆಜ್ಞೆಯಿಂದ! ನಿಶ್ಚಯವಾಗಿಯೂ ನಾವೇ (ಸಂದೇಶವಾಹಕರನ್ನು) ಕಳುಹಿಸುವವರು. | أَمْرًۭا مِّنْ عِندِنَآ ۚ إِنَّا كُنَّا مُرْسِلِينَ. ﴿5﴾ |
| 6 ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯಿಂದ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ. | رَحْمَةًۭ مِّن رَّبِّكَ ۚ إِنَّهُۥ هُوَ ٱلسَّمِيعُ ٱلْعَلِيمُ. ﴿6﴾ |
| 7 ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ದೃಢವಾಗಿ ವಿಶ್ವಾಸವಿಡುವವರಾಗಿದ್ದರೆ. | رَبِّ ٱلسَّمَٰوَٰتِ وَٱلْأَرْضِ وَمَا بَيْنَهُمَآ ۖ إِن كُنتُم مُّوقِنِينَ. ﴿7﴾ |
| 8 ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ. ಅವನು ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕನಾಗಿದ್ದಾನೆ. | لَآ إِلَٰهَ إِلَّا هُوَ يُحْىِۦ وَيُمِيتُ ۖ رَبُّكُمْ وَرَبُّ ءَابَآئِكُمُ ٱلْأَوَّلِينَ. ﴿8﴾ |
| 9 ಆದರೆ ಅವರು ಸಂಶಯದಲ್ಲಿ ಬಿದ್ದು ಆಡುತ್ತಿದ್ದಾರೆ. | بَلْ هُمْ فِى شَكٍّۢ يَلْعَبُونَ. ﴿9﴾ |
| 10 ಆಕಾಶವು ಸ್ಪಷ್ಟವಾಗಿ ಕಾಣುವ ಹೊಗೆಯನ್ನು ತರುವ ದಿನವನ್ನು ನಿರೀಕ್ಷಿಸಿ. | فَٱرْتَقِبْ يَوْمَ تَأْتِى ٱلسَّمَآءُ بِدُخَانٍۢ مُّبِينٍۢ. ﴿10﴾ |
| 11 ಅದು ಮನುಷ್ಯರನ್ನು ಆವರಿಸಿಕೊಳ್ಳುವುದು. ಇದು ಯಾತನಾಮಯ ಶಿಕ್ಷೆಯಾಗಿದೆ. | يَغْشَى ٱلنَّاسَ ۖ هَٰذَا عَذَابٌ أَلِيمٌۭ. ﴿11﴾ |
| 12 (ಅವರು ಹೇಳುವರು): “ನಮ್ಮ ಪರಿಪಾಲಕನೇ! ನಮ್ಮಿಂದ ಈ ಶಿಕ್ಷೆಯನ್ನು ನಿವಾರಿಸು. ನಿಶ್ಚಯವಾಗಿಯೂ ನಾವು ವಿಶ್ವಾಸವಿಡುತ್ತೇವೆ.” | رَّبَّنَا ٱكْشِفْ عَنَّا ٱلْعَذَابَ إِنَّا مُؤْمِنُونَ. ﴿12﴾ |
| 13 ಅವರಿಗೆ ಉಪದೇಶವು ಪ್ರಯೋಜನಪಡುವುದು ಹೇಗೆ? (ವಿಷಯವನ್ನು) ಸ್ಪಷ್ಟವಾಗಿ ವಿವರಿಸುವ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಿದ್ದರು. | أَنَّىٰ لَهُمُ ٱلذِّكْرَىٰ وَقَدْ جَآءَهُمْ رَسُولٌۭ مُّبِينٌۭ. ﴿13﴾ |
| 14 ಆದರೂ ಅವರು ಆ ಸಂದೇಶವಾಹಕರಿಂದ ವಿಮುಖರಾದರು. ಅವರು ಹೇಳಿದರು: “ಇವನು ಕಲಿಸಿಕೊಡಲಾದ ಮಾನಸಿಕ ಅಸ್ವಸ್ಥ!” | ثُمَّ تَوَلَّوْا۟ عَنْهُ وَقَالُوا۟ مُعَلَّمٌۭ مَّجْنُونٌ. ﴿14﴾ |
| 15 ನಿಶ್ಚಯವಾಗಿಯೂ ನಾವು ಶಿಕ್ಷೆಯನ್ನು ಸ್ವಲ್ಪ ನಿವಾರಿಸುವೆವು. ಆದರೆ ನೀವು ನಿಶ್ಚಯವಾಗಿಯೂ (ಹಿಂದಿನ ಸ್ಥಿತಿಗೇ) ಮರಳುವಿರಿ! | إِنَّا كَاشِفُوا۟ ٱلْعَذَابِ قَلِيلًا ۚ إِنَّكُمْ عَآئِدُونَ. ﴿15﴾ |
| 16 ನಾವು ಅತ್ಯಂತ ಬಲಿಷ್ಠ ಹಿಡಿತದೊಂದಿಗೆ ಹಿಡಿಯುವ ದಿನ! ನಿಶ್ಚಯವಾಗಿಯೂ ನಾವು ಪ್ರತೀಕಾರ ಪಡೆಯುವೆವು. | يَوْمَ نَبْطِشُ ٱلْبَطْشَةَ ٱلْكُبْرَىٰٓ إِنَّا مُنتَقِمُونَ. ﴿16﴾ |
| 17 ಅವರಿಗಿಂತ ಮೊದಲು ಫರೋಹನ ಜನರನ್ನು ನಾವು ಪರೀಕ್ಷಿಸಿದ್ದೆವು. ಒಬ್ಬ ಗೌರವಾನ್ವಿತ ಸಂದೇಶವಾಹಕರು (ಮೂಸಾ) ಅವರ ಬಳಿಗೆ ಬಂದಿದ್ದರು. | ۞ وَلَقَدْ فَتَنَّا قَبْلَهُمْ قَوْمَ فِرْعَوْنَ وَجَآءَهُمْ رَسُولٌۭ كَرِيمٌ. ﴿17﴾ |
| 18 (ಅವರು ಹೇಳಿದರು): “ಅಲ್ಲಾಹನ ದಾಸರನ್ನು ನನಗೆ ಒಪ್ಪಿಸಿರಿ. ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಬಂದ ಒಬ್ಬ ವಿಶ್ವಾಸಾರ್ಹ ಸಂದೇಶವಾಹಕನಾಗಿದ್ದೇನೆ. | أَنْ أَدُّوٓا۟ إِلَىَّ عِبَادَ ٱللَّهِ ۖ إِنِّى لَكُمْ رَسُولٌ أَمِينٌۭ. ﴿18﴾ |
| 19 ನೀವು ಅಲ್ಲಾಹನ ಮುಂದೆ ದರ್ಪ ತೋರಬೇಡಿ. ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯವನ್ನು ತರುವೆನು. | وَأَن لَّا تَعْلُوا۟ عَلَى ٱللَّهِ ۖ إِنِّىٓ ءَاتِيكُم بِسُلْطَٰنٍۢ مُّبِينٍۢ. ﴿19﴾ |
| 20 ನೀವು ನನಗೆ ಕಲ್ಲೆಸೆಯದಿರಲು ನಾನು ನನ್ನ ಮತ್ತು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಯಾಚಿಸುತ್ತೇನೆ. | وَإِنِّى عُذْتُ بِرَبِّى وَرَبِّكُمْ أَن تَرْجُمُونِ. ﴿20﴾ |
| 21 ನೀವು ನನ್ನಲ್ಲಿ ವಿಶ್ವಾಸವಿಡುವುದಿಲ್ಲ ಎಂದಾದರೆ ನನ್ನಿಂದ ಬೇರೆ ಹೋಗಿರಿ.” | وَإِن لَّمْ تُؤْمِنُوا۟ لِى فَٱعْتَزِلُونِ. ﴿21﴾ |
| 22 ಇವರೆಲ್ಲರೂ ಅಪರಾಧಿಗಳಾದ ಜನರು ಎಂದು ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು. | فَدَعَا رَبَّهُۥٓ أَنَّ هَٰٓؤُلَآءِ قَوْمٌۭ مُّجْرِمُونَ. ﴿22﴾ |
| 23 (ಅಲ್ಲಾಹು ಹೇಳಿದನು): “ನೀವು ರಾತ್ರಿ ವೇಳೆ ನನ್ನ ದಾಸರೊಡನೆ ಹೊರಡಿರಿ. ನಿಶ್ಚಯವಾಗಿಯೂ ವೈರಿಗಳು ನಿಮ್ಮನ್ನು ಹಿಂಬಾಲಿಸುವರು. | فَأَسْرِ بِعِبَادِى لَيْلًا إِنَّكُم مُّتَّبَعُونَ. ﴿23﴾ |
| 24 ನೀವು ಸಮುದ್ರವನ್ನು ಶಾಂತ ಸ್ಥಿತಿಯಲ್ಲಿ ಬಿಟ್ಟುಬಿಡಿ. ನಿಶ್ಚಯವಾಗಿಯೂ ಈ ಸೈನ್ಯವನ್ನು ಮುಳುಗಿಸಲಾಗುವುದು. | وَٱتْرُكِ ٱلْبَحْرَ رَهْوًا ۖ إِنَّهُمْ جُندٌۭ مُّغْرَقُونَ. ﴿24﴾ |
| 25 ಅವರು ಎಷ್ಟೊಂದು ತೋಟಗಳನ್ನು ಮತ್ತು ತೊರೆಗಳನ್ನು ಬಿಟ್ಟು ಹೋದರು! | كَمْ تَرَكُوا۟ مِن جَنَّٰتٍۢ وَعُيُونٍۢ. ﴿25﴾ |
| 26 ಎಷ್ಟೊಂದು ಕೃಷಿಗಳನ್ನು ಮತ್ತು ಗೌರವಾನ್ವಿತ ವಸತಿಗಳನ್ನು! | وَزُرُوعٍۢ وَمَقَامٍۢ كَرِيمٍۢ. ﴿26﴾ |
| 27 ಅವರು ಆನಂದದಿಂದ ಅನುಭವಿಸುತ್ತಿದ್ದ ಎಷ್ಟೊಂದು ಸವಲತ್ತುಗಳನ್ನು! | وَنَعْمَةٍۢ كَانُوا۟ فِيهَا فَٰكِهِينَ. ﴿27﴾ |
| 28 ಈ ರೀತಿ ಅದು ಸಂಭವಿಸಿತು. ನಾವು ಅವೆಲ್ಲವನ್ನೂ ಬೇರೆ ಜನರಿಗೆ ಉತ್ತರಾಧಿಕಾರವಾಗಿ ನೀಡಿದೆವು. | كَذَٰلِكَ ۖ وَأَوْرَثْنَٰهَا قَوْمًا ءَاخَرِينَ. ﴿28﴾ |
| 29 ಆಕಾಶ ಅಥವಾ ಭೂಮಿ ಅವರಿಗಾಗಿ ಅಳಲಿಲ್ಲ. ಅವರಿಗೆ ಕಾಲಾವಕಾಶವೂ ದೊರೆಯಲಿಲ್ಲ. | فَمَا بَكَتْ عَلَيْهِمُ ٱلسَّمَآءُ وَٱلْأَرْضُ وَمَا كَانُوا۟ مُنظَرِينَ. ﴿29﴾ |
| 30 ನಾವು ಇಸ್ರಾಯೇಲ್ ಮಕ್ಕಳನ್ನು ಅವಮಾನಕರ ಶಿಕ್ಷೆಯಿಂದ ಪಾರು ಮಾಡಿದೆವು. | وَلَقَدْ نَجَّيْنَا بَنِىٓ إِسْرَٰٓءِيلَ مِنَ ٱلْعَذَابِ ٱلْمُهِينِ. ﴿30﴾ |
| 31 ಫರೋಹನಿಂದ. ನಿಶ್ಚಯವಾಗಿಯೂ ಅವನು ಅಹಂಕಾರಿಯಾಗಿದ್ದು ಎಲ್ಲೆ ಮೀರಿದವರಲ್ಲಿ ಸೇರಿದ್ದನು. | مِن فِرْعَوْنَ ۚ إِنَّهُۥ كَانَ عَالِيًۭا مِّنَ ٱلْمُسْرِفِينَ. ﴿31﴾ |
| 32 ನಿಶ್ಚಯವಾಗಿಯೂ ನಾವು ತಿಳಿದೂ ಸಹ ಇಸ್ರಾಯೇಲ್ ಮಕ್ಕಳನ್ನು (ಸಮಕಾಲೀನ) ಜಗತ್ತಿನಲ್ಲಿ ಶ್ರೇಷ್ಠಗೊಳಿಸಿದೆವು. | وَلَقَدِ ٱخْتَرْنَٰهُمْ عَلَىٰ عِلْمٍ عَلَى ٱلْعَٰلَمِينَ. ﴿32﴾ |
| 33 ನಾವು ಅವರಿಗೆ ಸ್ಪಷ್ಟ ಪರೀಕ್ಷೆಯನ್ನು ಹೊಂದಿದ್ದ ದೃಷ್ಟಾಂತಗಳನ್ನು ನೀಡಿದೆವು. | وَءَاتَيْنَٰهُم مِّنَ ٱلْءَايَٰتِ مَا فِيهِ بَلَٰٓؤٌۭا۟ مُّبِينٌ. ﴿33﴾ |
| 34 ನಿಶ್ಚಯವಾಗಿಯೂ ಇವರು (ಸತ್ಯನಿಷೇಧಿಗಳು) ಹೇಳುತ್ತಾರೆ: | إِنَّ هَٰٓؤُلَآءِ لَيَقُولُونَ. ﴿34﴾ |
| 35 “ನಮ್ಮ ಮೊದಲ ಸಾವಲ್ಲದೆ ಬೇರೇನೂ ಇಲ್ಲ. ನಮ್ಮನ್ನು ಪುನಃ ಜೀವಂತಗೊಳಿಸಲಾಗುವುದೂ ಇಲ್ಲ. | إِنْ هِىَ إِلَّا مَوْتَتُنَا ٱلْأُولَىٰ وَمَا نَحْنُ بِمُنشَرِينَ. ﴿35﴾ |
| 36 ನೀವು ಸತ್ಯವಂತರಾಗಿದ್ದರೆ (ಸತ್ತು ಹೋದ) ನಮ್ಮ ಪೂರ್ವಜರನ್ನು ಕರೆದುಕೊಂಡು ಬನ್ನಿ.” | فَأْتُوا۟ بِـَٔابَآئِنَآ إِن كُنتُمْ صَٰدِقِينَ. ﴿36﴾ |
|
37
ಇವರು ಶ್ರೇಷ್ಠರೋ? ಅಥವಾ ತುಬ್ಬಅ್‌ನ ಜನರು[1] ಮತ್ತು ಅವರಿಗಿಂತ ಮೊದಲಿನವರೋ? ನಾವು ಅವರೆಲ್ಲರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅವರು ಅಪರಾಧಿಗಳಾಗಿದ್ದರು.
[1] ತುಬ್ಬಅ್ ಎಂದರೆ ಹಳೆಯ ಸಬಾ ಸಾಮ್ರಾಜ್ಯಕ್ಕೆ ಸೇರಿದ ಹಿಮ್ಯರ್ ಗೋತ್ರದ ಆಡಳಿತಗಾರರು.
|
أَهُمْ خَيْرٌ أَمْ قَوْمُ تُبَّعٍۢ وَٱلَّذِينَ مِن قَبْلِهِمْ ۚ أَهْلَكْنَٰهُمْ ۖ إِنَّهُمْ كَانُوا۟ مُجْرِمِينَ. ﴿37﴾ |
| 38 ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಆಟಕ್ಕಾಗಿ ಸೃಷ್ಟಿಸಿಲ್ಲ. | وَمَا خَلَقْنَا ٱلسَّمَٰوَٰتِ وَٱلْأَرْضَ وَمَا بَيْنَهُمَا لَٰعِبِينَ. ﴿38﴾ |
| 39 ನಾವು ಅವುಗಳನ್ನು ಸರಿಯಾದ ಉದ್ದೇಶದಿಂದಲೇ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. | مَا خَلَقْنَٰهُمَآ إِلَّا بِٱلْحَقِّ وَلَٰكِنَّ أَكْثَرَهُمْ لَا يَعْلَمُونَ. ﴿39﴾ |
| 40 ನಿಶ್ಚಯವಾಗಿಯೂ ತೀರ್ಪು ನೀಡುವ ದಿನವು ಅವರೆಲ್ಲರಿಗೂ ನಿಶ್ಚಯಿಸಲಾದ ದಿನವಾಗಿದೆ. | إِنَّ يَوْمَ ٱلْفَصْلِ مِيقَٰتُهُمْ أَجْمَعِينَ. ﴿40﴾ |
| 41 ಅಂದು ಒಬ್ಬ ಗೆಳೆಯ ಇನ್ನೊಬ್ಬ ಗೆಳೆಯನಿಗೆ ಯಾವುದೇ ಉಪಕಾರ ಮಾಡುವುದಿಲ್ಲ. ಅವರಿಗೆ ಸಹಾಯವೂ ದೊರೆಯುವುದಿಲ್ಲ. | يَوْمَ لَا يُغْنِى مَوْلًى عَن مَّوْلًۭى شَيْـًۭٔا وَلَا هُمْ يُنصَرُونَ. ﴿41﴾ |
| 42 ಅಲ್ಲಾಹು ದಯೆ ತೋರಿದವರ ಹೊರತು. ನಿಶ್ಚಯವಾಗಿಯೂ ಅವನು ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ. | إِلَّا مَن رَّحِمَ ٱللَّهُ ۚ إِنَّهُۥ هُوَ ٱلْعَزِيزُ ٱلرَّحِيمُ. ﴿42﴾ |
| 43 ನಿಶ್ಚಯವಾಗಿಯೂ ಝಕ್ಕೂಮ್ ಮರವು, | إِنَّ شَجَرَتَ ٱلزَّقُّومِ. ﴿43﴾ |
| 44 ಪಾಪಿಗಳ ಆಹಾರವಾಗಿದೆ. | طَعَامُ ٱلْأَثِيمِ. ﴿44﴾ |
| 45 ಅದು ಕಾಯಿಸಿದ ಲೋಹದಂತಿದೆ. ಅದು ಹೊಟ್ಟೆಯಲ್ಲಿ ಕುದಿಯುತ್ತದೆ. | كَٱلْمُهْلِ يَغْلِى فِى ٱلْبُطُونِ. ﴿45﴾ |
| 46 ಬಿಸಿ ನೀರು ಕುದಿಯುವಂತೆ. | كَغَلْىِ ٱلْحَمِيمِ. ﴿46﴾ |
| 47 “ಅವನನ್ನು ಹಿಡಿಯಿರಿ ಮತ್ತು ನರಕಾಗ್ನಿಯ ಮಧ್ಯಭಾಗಕ್ಕೆ ಎಳೆದೊಯ್ಯಿರಿ! | خُذُوهُ فَٱعْتِلُوهُ إِلَىٰ سَوَآءِ ٱلْجَحِيمِ. ﴿47﴾ |
| 48 ನಂತರ ಅವನ ತಲೆಯ ಮೇಲೆ ಕುದಿಯುವ ನೀರಿನ ಶಿಕ್ಷೆಯನ್ನು ಸುರಿಯಿರಿ!” | ثُمَّ صُبُّوا۟ فَوْقَ رَأْسِهِۦ مِنْ عَذَابِ ٱلْحَمِيمِ. ﴿48﴾ |
| 49 (ಅವನೊಡನೆ ಹೇಳಲಾಗುವುದು): “ಇದರ ರುಚಿ ನೋಡು! ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ಗೌರವಾನ್ವಿತನಾಗಿದ್ದೆ! | ذُقْ إِنَّكَ أَنتَ ٱلْعَزِيزُ ٱلْكَرِيمُ. ﴿49﴾ |
| 50 ನಿಶ್ಚಯವಾಗಿಯೂ ಇದು ನೀವು ಸಂಶಯಪಡುತ್ತಿದ್ದ ವಿಷಯವಾಗಿದೆ.” | إِنَّ هَٰذَا مَا كُنتُم بِهِۦ تَمْتَرُونَ. ﴿50﴾ |
| 51 ನಿಶ್ಚಯವಾಗಿಯೂ ದೇವಭಯವುಳ್ಳವರು ನಿರ್ಭಯ ಸ್ಥಳದಲ್ಲಿರುವರು. | إِنَّ ٱلْمُتَّقِينَ فِى مَقَامٍ أَمِينٍۢ. ﴿51﴾ |
| 52 ತೋಟಗಳಲ್ಲಿ ಮತ್ತು ತೊರೆಗಳಲ್ಲಿ. | فِى جَنَّٰتٍۢ وَعُيُونٍۢ. ﴿52﴾ |
| 53 ನಯ ಮತ್ತು ದಪ್ಪ ರೇಷ್ಮೆ ಉಡುಪುಗಳನ್ನು ಧರಿಸಿ, ಪರಸ್ಪರ ಎದುರು-ಬದುರು ಕುಳಿತಿರುವರು. | يَلْبَسُونَ مِن سُندُسٍۢ وَإِسْتَبْرَقٍۢ مُّتَقَٰبِلِينَ. ﴿53﴾ |
| 54 (ಅವರ ಸ್ಥಿತಿ) ಈ ರೀತಿಯಾಗಿದೆ. ನಾವು ಅರಳಿದ ಕಣ್ಣುಗಳ ಬೆಳ್ಳಗಿನ ಸ್ತ್ರೀಯರನ್ನು ಅವರಿಗೆ ವಿವಾಹ ಮಾಡಿಕೊಡುವೆವು. | كَذَٰلِكَ وَزَوَّجْنَٰهُم بِحُورٍ عِينٍۢ. ﴿54﴾ |
| 55 ಅವರು ನಿರ್ಭಯ ಸ್ಥಿತಿಯಲ್ಲಿದ್ದು ಎಲ್ಲ ತರಹದ ಹಣ್ಣುಗಳನ್ನು ಬೇಡುವರು. | يَدْعُونَ فِيهَا بِكُلِّ فَٰكِهَةٍ ءَامِنِينَ. ﴿55﴾ |
| 56 ಅವರು ಮೊದಲನೆಯ ಮರಣದ ಹೊರತು ಬೇರೊಂದು ಮರಣದ ರುಚಿಯನ್ನು ನೋಡುವುದಿಲ್ಲ. ಅವನು ಅವರನ್ನು ನರಕ ಶಿಕ್ಷೆಯಿಂದ ಪಾರು ಮಾಡುವನು. | لَا يَذُوقُونَ فِيهَا ٱلْمَوْتَ إِلَّا ٱلْمَوْتَةَ ٱلْأُولَىٰ ۖ وَوَقَىٰهُمْ عَذَابَ ٱلْجَحِيمِ. ﴿56﴾ |
| 57 ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಔದಾರ್ಯವಾಗಿದೆ. ಇದೇ ಮಹಾ ಯಶಸ್ಸು. | فَضْلًۭا مِّن رَّبِّكَ ۚ ذَٰلِكَ هُوَ ٱلْفَوْزُ ٱلْعَظِيمُ. ﴿57﴾ |
| 58 ಅವರು ಉಪದೇಶವನ್ನು ಪಡೆಯುವುದಕ್ಕಾಗಿ ನಾವು ಇದನ್ನು (ಕುರ್‌ಆನನ್ನು) ನಿಮ್ಮ ಭಾಷೆಯಲ್ಲಿ ಸರಳಗೊಳಿಸಿದ್ದೇವೆ. | فَإِنَّمَا يَسَّرْنَٰهُ بِلِسَانِكَ لَعَلَّهُمْ يَتَذَكَّرُونَ. ﴿58﴾ |
| 59 ನೀವು ಕಾಯಿರಿ. ಅವರು ಕೂಡ ಕಾಯುತ್ತಿದ್ದಾರೆ. | فَٱرْتَقِبْ إِنَّهُم مُّرْتَقِبُونَ. ﴿59﴾ |