Loading date... | Loading Hijri date... | Loading time...

المائدة

ಕನ್ನಡ Translation with Arabic Quran Text

ಕನ್ನಡ العربية
1 ಓ ಸತ್ಯವಿಶ್ವಾಸಿಗಳೇ! ಕರಾರುಗಳನ್ನು ನೆರವೇರಿಸಿರಿ. ನಿಮಗೆ ಓದಿಕೊಡಲಾಗುವ ಪ್ರಾಣಿಗಳ ಹೊರತಾದ ಮೇಯುವ ಜಾನುವಾರುಗಳನ್ನು ನಿಮಗೆ ಅನುಮತಿಸಲಾಗಿದೆ. ಆದರೆ ನೀವು ಇಹ್ರಾಮ್‍ನಲ್ಲಿರುವಾಗ[1] ಬೇಟೆಯಾಡುವುದಕ್ಕೆ ಅನುಮತಿಯಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅವನು ಬಯಸುವುದನ್ನು ಆದೇಶಿಸುತ್ತಾನೆ.
[1] ಹಜ್ಜ್ ಅಥವಾ ಉಮ್ರ ನಿರ್ವಹಿಸುತ್ತೇನೆ ಎಂಬ ಉದ್ದೇಶದಿಂದ (ನಿಯ್ಯತ್‌ನಿಂದ) ಸಾಂಕೇತಿಕವಾಗಿ ಹಜ್ ಅಥವಾ ಉಮ್ರ ಕರ್ಮದಲ್ಲಿ ಪ್ರವೇಶಿಸುವುದಕ್ಕೆ ‘ಇಹ್ರಾಮ್’ ಎಂದು ಹೇಳಲಾಗುತ್ತದೆ.
يَٰٓأَيُّهَا ٱلَّذِينَ ءَامَنُوٓا۟ أَوْفُوا۟ بِٱلْعُقُودِ ۚ أُحِلَّتْ لَكُم بَهِيمَةُ ٱلْأَنْعَٰمِ إِلَّا مَا يُتْلَىٰ عَلَيْكُمْ غَيْرَ مُحِلِّى ٱلصَّيْدِ وَأَنتُمْ حُرُمٌ ۗ إِنَّ ٱللَّهَ يَحْكُمُ مَا يُرِيدُ. ﴿1﴾
2 ಓ ಸತ್ಯವಿಶ್ವಾಸಿಗಳೇ! ಅಲ್ಲಾಹನ ಲಾಂಛನಗಳಿಗೆ ಅಗೌರವ ತೋರಬೇಡಿ. ಪವಿತ್ರ ತಿಂಗಳಿಗೆ, ಬಲಿಮೃಗಗಳಿಗೆ, (ಅವುಗಳ ಕೊರಳಲ್ಲಿರುವ) ಪದಕಗಳಿಗೆ, ಮತ್ತು ತಮ್ಮ ಪರಿಪಾಲಕನ (ಅಲ್ಲಾಹನ) ಔದಾರ್ಯ ಹಾಗೂ ಸಂಪ್ರೀತಿಯನ್ನು ಹುಡುಕುತ್ತಾ ಪವಿತ್ರ ಭವನಕ್ಕೆ ತೀರ್ಥಯಾತ್ರೆ ಮಾಡುವವರಿಗೆ (ಅಗೌರವ ತೋರಬೇಡಿ). ನೀವು ಇಹ್ರಾಮ್‍ನಿಂದ ಮುಕ್ತರಾದರೆ ಬೇಟೆಯಾಡಿರಿ. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದರು ಎಂಬ ಕಾರಣದಿಂದ ಕೆಲವು ಜನರೊಡನೆ ನಿಮಗಿರುವ ದ್ವೇಷವು ಅತಿರೇಕವೆಸಗುವಂತೆ ನಿಮ್ಮನ್ನು ಪ್ರೇರೇಪಿಸದಿರಲಿ. ಒಳಿತು ಮತ್ತು ದೇವಭಯದಲ್ಲಿ ಪರಸ್ಪರ ಸಹಕರಿಸಿರಿ. ಪಾಪ ಮತ್ತು ಅತಿರೇಕದಲ್ಲಿ ಪರಸ್ಪರ ಸಹಕರಿಸಬೇಡಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ. يَٰٓأَيُّهَا ٱلَّذِينَ ءَامَنُوا۟ لَا تُحِلُّوا۟ شَعَٰٓئِرَ ٱللَّهِ وَلَا ٱلشَّهْرَ ٱلْحَرَامَ وَلَا ٱلْهَدْىَ وَلَا ٱلْقَلَٰٓئِدَ وَلَآ ءَآمِّينَ ٱلْبَيْتَ ٱلْحَرَامَ يَبْتَغُونَ فَضْلًۭا مِّن رَّبِّهِمْ وَرِضْوَٰنًۭا ۚ وَإِذَا حَلَلْتُمْ فَٱصْطَادُوا۟ ۚ وَلَا يَجْرِمَنَّكُمْ شَنَـَٔانُ قَوْمٍ أَن صَدُّوكُمْ عَنِ ٱلْمَسْجِدِ ٱلْحَرَامِ أَن تَعْتَدُوا۟ ۘ وَتَعَاوَنُوا۟ عَلَى ٱلْبِرِّ وَٱلتَّقْوَىٰ ۖ وَلَا تَعَاوَنُوا۟ عَلَى ٱلْإِثْمِ وَٱلْعُدْوَٰنِ ۚ وَٱتَّقُوا۟ ٱللَّهَ ۖ إِنَّ ٱللَّهَ شَدِيدُ ٱلْعِقَابِ. ﴿2﴾
3 ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರಿಗೆ ಕೊಯ್ಯಲಾದವುಗಳನ್ನು ನಿಮಗೆ ನಿಷೇಧಿಸಲಾಗಿದೆ. ಹಾಗೆಯೇ, ಕತ್ತು ಹಿಸುಕಿ ಸಾಯಿಸಲಾದ, ಬಲವಾದ ಪ್ರಹಾರದಿಂದ ಸತ್ತ, ಎತ್ತರದಿಂದ ಬಿದ್ದು ಸತ್ತ, ಕೊಂಬಿನಿಂದ ತಿವಿತಕ್ಕೊಳಗಾಗಿ ಸತ್ತ, ಕಾಡುಪ್ರಾಣಿಗಳು ಹರಿದು ತಿಂದ ಪ್ರಾಣಿಗಳನ್ನು ನಿಮಗೆ ನಿಷೇಧಿಸಲಾಗಿದೆ. ಆದರೆ (ಸಾಯುವ ಮೊದಲೇ) ನೀವು ಕತ್ತು ಕೊಯ್ದ (ದಿಬ್ಹ ಮಾಡಿದ) ಪ್ರಾಣಿಗಳನ್ನು ಇದರಿಂದ ಹೊರತುಪಡಿಸಲಾಗಿದೆ. ಅದೇ ರೀತಿ, ವಿಗ್ರಹಗಳ ಮುಂದೆ ಬಲಿ ನೀಡಲಾದ ಪ್ರಾಣಿಗಳನ್ನು ಮತ್ತು ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು (ನಿಮಗೆ ನಿಷೇಧಿಸಲಾಗಿದೆ). ಇವೆಲ್ಲವೂ ಕೆಟ್ಟ ಪಾಪಗಳಾಗಿವೆ. ಇಂದು ಸತ್ಯನಿಷೇಧಿಗಳು ನಿಮ್ಮ ಧರ್ಮದ ಬಗ್ಗೆ ಹತಾಶರಾಗಿದ್ದಾರೆ. ಆದ್ದರಿಂದ ನೀವು ಅವರನ್ನು ಭಯಪಡಬೇಡಿ. ನನ್ನನ್ನು ಭಯಪಡಿರಿ. ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಇಸ್ಲಾಮನ್ನು ನಿಮಗೆ ಧರ್ಮವಾಗಿ ನಾನು ಅಂಗೀಕರಿಸಿದ್ದೇನೆ. ಹಸಿವು ತಡೆಯಲಾಗದೆ, ನಿಷೇಧಿತ ವಸ್ತುಗಳನ್ನು ತಿನ್ನಲು ನಿರ್ಬಂಧಿತನಾದವನು ಯಾರೋ—ಅವನು ಪಾಪಕ್ಕೆ ವಾಲುವವನಲ್ಲದಿದ್ದರೆ (ಪಾಪ ಮಾಡುವ ಉದ್ದೇಶವನ್ನು ಹೊಂದಿಲ್ಲದಿದ್ದರೆ) ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. حُرِّمَتْ عَلَيْكُمُ ٱلْمَيْتَةُ وَٱلدَّمُ وَلَحْمُ ٱلْخِنزِيرِ وَمَآ أُهِلَّ لِغَيْرِ ٱللَّهِ بِهِۦ وَٱلْمُنْخَنِقَةُ وَٱلْمَوْقُوذَةُ وَٱلْمُتَرَدِّيَةُ وَٱلنَّطِيحَةُ وَمَآ أَكَلَ ٱلسَّبُعُ إِلَّا مَا ذَكَّيْتُمْ وَمَا ذُبِحَ عَلَى ٱلنُّصُبِ وَأَن تَسْتَقْسِمُوا۟ بِٱلْأَزْلَٰمِ ۚ ذَٰلِكُمْ فِسْقٌ ۗ ٱلْيَوْمَ يَئِسَ ٱلَّذِينَ كَفَرُوا۟ مِن دِينِكُمْ فَلَا تَخْشَوْهُمْ وَٱخْشَوْنِ ۚ ٱلْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِى وَرَضِيتُ لَكُمُ ٱلْإِسْلَٰمَ دِينًۭا ۚ فَمَنِ ٱضْطُرَّ فِى مَخْمَصَةٍ غَيْرَ مُتَجَانِفٍۢ لِّإِثْمٍۢ ۙ فَإِنَّ ٱللَّهَ غَفُورٌۭ رَّحِيمٌۭ. ﴿3﴾
4 ಅವರಿಗೆ ಏನೆಲ್ಲಾ ಅನುಮತಿಸಲಾಗಿವೆಯೆಂದು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: “ಎಲ್ಲಾ ಉತ್ತಮ ವಸ್ತುಗಳನ್ನು ನಿಮಗೆ ಅನುಮತಿಸಲಾಗಿದೆ. ಅಲ್ಲಾಹು ನಿಮಗೆ ಕಲಿಸಿಕೊಟ್ಟ ರೀತಿಯಲ್ಲಿ ನೀವು ತರಬೇತಿ ನೀಡಿದ ಬೇಟೆ ಪ್ರಾಣಿಗಳು, ನೀವು ತರಬೇತಿ ನೀಡಿದಂತೆ ಬೇಟೆಯನ್ನು ಹಿಡಿದು ತಂದರೆ ಅವುಗಳನ್ನು ತಿನ್ನಿರಿ. (ಅವುಗಳನ್ನು ಬೇಟೆಗೆ ಕಳುಹಿಸುವಾಗ) ಅಲ್ಲಾಹನ ಹೆಸರನ್ನು ಉಚ್ಛರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ. يَسْـَٔلُونَكَ مَاذَآ أُحِلَّ لَهُمْ ۖ قُلْ أُحِلَّ لَكُمُ ٱلطَّيِّبَٰتُ ۙ وَمَا عَلَّمْتُم مِّنَ ٱلْجَوَارِحِ مُكَلِّبِينَ تُعَلِّمُونَهُنَّ مِمَّا عَلَّمَكُمُ ٱللَّهُ ۖ فَكُلُوا۟ مِمَّآ أَمْسَكْنَ عَلَيْكُمْ وَٱذْكُرُوا۟ ٱسْمَ ٱللَّهِ عَلَيْهِ ۖ وَٱتَّقُوا۟ ٱللَّهَ ۚ إِنَّ ٱللَّهَ سَرِيعُ ٱلْحِسَابِ. ﴿4﴾
5 ಇಂದು ನಿಮಗೆ ಎಲ್ಲಾ ಉತ್ತಮ ವಸ್ತುಗಳನ್ನು ಅನುಮತಿಸಲಾಗಿದೆ. ಗ್ರಂಥದವರು ತಯಾರಿಸಿದ ಆಹಾರವು ನಿಮಗೆ ಧರ್ಮಸಮ್ಮತವಾಗಿದೆ ಮತ್ತು ನೀವು ತಯಾರಿಸಿದ ಆಹಾರವು ಅವರಿಗೆ ಧರ್ಮಸಮ್ಮತವಾಗಿದೆ. ಸತ್ಯವಿಶ್ವಾಸಿಗಳಲ್ಲಿ ಸೇರಿದ ಪರಿಶುದ್ಧ ಮಹಿಳೆಯರು ನಿಮಗೆ ಧರ್ಮಸಮ್ಮತವಾಗಿದ್ದಾರೆ. ಅದೇ ರೀತಿ ನಿಮಗಿಂತ ಮೊದಲು ಗ್ರಂಥ ನೀಡಲಾದವರಲ್ಲಿ ಸೇರಿದ ಪರಿಶುದ್ಧ ಮಹಿಳೆಯರು—ನೀವು ಅವರಿಗೆ ಅವರ ವಧುದಕ್ಷಿಣೆಯನ್ನು (ಮಹರ್) ನೀಡಿದರೆ—ನಿಮಗೆ ಧರ್ಮಸಮ್ಮತವಾಗಿದ್ದಾರೆ. ಆದರೆ ನೀವು ಅವರನ್ನು ವಿವಾಹವಾಗಲು ಬಯಸುವವರಾಗಿರಬೇಕು. ಅವರೊಡನೆ ವ್ಯಭಿಚಾರ ಮಾಡಲು ಅಥವಾ ರಹಸ್ಯವಾಗಿ ಪ್ರೇಮಿಸಲು ಬಯಸುವವರಾಗಿರಬಾರದು. ಯಾರು ಸತ್ಯವಿಶ್ವಾಸವನ್ನು ತಿರಸ್ಕರಿಸುತ್ತಾನೋ ಅವನ ಕರ್ಮವು ನಿಷ್ಫಲವಾಗುವುದು. ಪರಲೋಕದಲ್ಲಿ ಅವನು ನಷ್ಟಹೊಂದಿದವರಲ್ಲಿ ಸೇರಿಕೊಳ್ಳುವನು. ٱلْيَوْمَ أُحِلَّ لَكُمُ ٱلطَّيِّبَٰتُ ۖ وَطَعَامُ ٱلَّذِينَ أُوتُوا۟ ٱلْكِتَٰبَ حِلٌّۭ لَّكُمْ وَطَعَامُكُمْ حِلٌّۭ لَّهُمْ ۖ وَٱلْمُحْصَنَٰتُ مِنَ ٱلْمُؤْمِنَٰتِ وَٱلْمُحْصَنَٰتُ مِنَ ٱلَّذِينَ أُوتُوا۟ ٱلْكِتَٰبَ مِن قَبْلِكُمْ إِذَآ ءَاتَيْتُمُوهُنَّ أُجُورَهُنَّ مُحْصِنِينَ غَيْرَ مُسَٰفِحِينَ وَلَا مُتَّخِذِىٓ أَخْدَانٍۢ ۗ وَمَن يَكْفُرْ بِٱلْإِيمَٰنِ فَقَدْ حَبِطَ عَمَلُهُۥ وَهُوَ فِى ٱلْءَاخِرَةِ مِنَ ٱلْخَٰسِرِينَ. ﴿5﴾
6 ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್‍ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಎರಡು ಕೈಗಳನ್ನು ತೊಳೆಯಿರಿ, ತಲೆಗಳನ್ನು ಸವರಿರಿ ಮತ್ತು ಎರಡು ಕಾಲುಗಳನ್ನು ಹರಡುಗಂಟಿನ ತನಕ ತೊಳೆಯಿರಿ. ನೀವು ದೊಡ್ಡ ಅಶುದ್ಧಿಯಲ್ಲಿದ್ದರೆ (ಸ್ನಾನ ಮಾಡಿ) ಶುದ್ಧರಾಗಿರಿ. ನೀವು ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ; ಅಥವಾ ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದಿದ್ದರೆ, ಅಥವಾ ಮಹಿಳೆಯರನ್ನು ಸ್ಪರ್ಶಿಸಿದ್ದರೆ (ಲೈಂಗಿಕ ಸಂಪರ್ಕ ಮಾಡಿದ್ದರೆ); ನಂತರ ನಿಮಗೆ ಶುದ್ಧಿಯಾಗಲು ನೀರು ದೊರೆಯದಿದ್ದರೆ, ಶುದ್ಧ ಮಣ್ಣಿನಿಂದ ತಯಮ್ಮುಮ್ ಮಾಡಿ, ಮುಖ ಮತ್ತು ಕೈಗಳನ್ನು ಸವರಿರಿ. ಅಲ್ಲಾಹು ನಿಮಗೆ ತೊಂದರೆ ಮಾಡಲು ಬಯಸುವುದಿಲ್ಲ. ಆದರೆ ಅವನು ನಿಮ್ಮನ್ನು ಶುದ್ಧೀಕರಿಸಲು ಮತ್ತು ತನ್ನ ಅನುಗ್ರಹವನ್ನು ನಿಮಗೆ ಪೂರ್ತಿ ಮಾಡಿಕೊಡಲು ಬಯಸುತ್ತಾನೆ. ನೀವು ಕೃತಜ್ಞರಾಗುವುದಕ್ಕಾಗಿ. يَٰٓأَيُّهَا ٱلَّذِينَ ءَامَنُوٓا۟ إِذَا قُمْتُمْ إِلَى ٱلصَّلَوٰةِ فَٱغْسِلُوا۟ وُجُوهَكُمْ وَأَيْدِيَكُمْ إِلَى ٱلْمَرَافِقِ وَٱمْسَحُوا۟ بِرُءُوسِكُمْ وَأَرْجُلَكُمْ إِلَى ٱلْكَعْبَيْنِ ۚ وَإِن كُنتُمْ جُنُبًۭا فَٱطَّهَّرُوا۟ ۚ وَإِن كُنتُم مَّرْضَىٰٓ أَوْ عَلَىٰ سَفَرٍ أَوْ جَآءَ أَحَدٌۭ مِّنكُم مِّنَ ٱلْغَآئِطِ أَوْ لَٰمَسْتُمُ ٱلنِّسَآءَ فَلَمْ تَجِدُوا۟ مَآءًۭ فَتَيَمَّمُوا۟ صَعِيدًۭا طَيِّبًۭا فَٱمْسَحُوا۟ بِوُجُوهِكُمْ وَأَيْدِيكُم مِّنْهُ ۚ مَا يُرِيدُ ٱللَّهُ لِيَجْعَلَ عَلَيْكُم مِّنْ حَرَجٍۢ وَلَٰكِن يُرِيدُ لِيُطَهِّرَكُمْ وَلِيُتِمَّ نِعْمَتَهُۥ عَلَيْكُمْ لَعَلَّكُمْ تَشْكُرُونَ. ﴿6﴾
7 “ನಾವು ಕೇಳಿದ್ದೇವೆ ಮತ್ತು ಅನುಸರಿಸಿದ್ದೇವೆ” ಎಂದು ನೀವು ಹೇಳಿದ ಸಂದರ್ಭ ಅಲ್ಲಾಹು ನಿಮಗೆ ನೀಡಿರುವ ಅನುಗ್ರಹವನ್ನು ಮತ್ತು ಅವನು ನಿಮ್ಮಿಂದ ಬಲಿಷ್ಠ ಕರಾರು ಪಡೆದಿರುವುದನ್ನು ಸ್ಮರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ. وَٱذْكُرُوا۟ نِعْمَةَ ٱللَّهِ عَلَيْكُمْ وَمِيثَٰقَهُ ٱلَّذِى وَاثَقَكُم بِهِۦٓ إِذْ قُلْتُمْ سَمِعْنَا وَأَطَعْنَا ۖ وَٱتَّقُوا۟ ٱللَّهَ ۚ إِنَّ ٱللَّهَ عَلِيمٌۢ بِذَاتِ ٱلصُّدُورِ. ﴿7﴾
8 ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗಾಗಿ ಸದಾ ದೃಢವಾಗಿ ನಿಂತು ನ್ಯಾಯ-ನಿಷ್ಠೆಗೆ ಸಾಕ್ಷಿಯಾಗಿರಿ. ಕೆಲವು ಜನರೊಡನೆ ನಿಮಗಿರುವ ದ್ವೇಷವು ನ್ಯಾಯಯುತವಾಗಿ ವರ್ತಿಸದಂತೆ ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯಯುತವಾಗಿ ನಡೆದುಕೊಳ್ಳಿ. ಅದು ದೇವಭಯಕ್ಕೆ ಅತ್ಯಂತ ಹತ್ತಿರದಲ್ಲಿದೆ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ. يَٰٓأَيُّهَا ٱلَّذِينَ ءَامَنُوا۟ كُونُوا۟ قَوَّٰمِينَ لِلَّهِ شُهَدَآءَ بِٱلْقِسْطِ ۖ وَلَا يَجْرِمَنَّكُمْ شَنَـَٔانُ قَوْمٍ عَلَىٰٓ أَلَّا تَعْدِلُوا۟ ۚ ٱعْدِلُوا۟ هُوَ أَقْرَبُ لِلتَّقْوَىٰ ۖ وَٱتَّقُوا۟ ٱللَّهَ ۚ إِنَّ ٱللَّهَ خَبِيرٌۢ بِمَا تَعْمَلُونَ. ﴿8﴾
9 ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಅಲ್ಲಾಹು ಕ್ಷಮೆ ಮತ್ತು ಮಹಾ ಪ್ರತಿಫಲದ ವಾಗ್ದಾನ ಮಾಡಿದ್ದಾನೆ. وَعَدَ ٱللَّهُ ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ ۙ لَهُم مَّغْفِرَةٌۭ وَأَجْرٌ عَظِيمٌۭ. ﴿9﴾
10 ಸತ್ಯನಿಷೇಧಿಗಳು ಮತ್ತು ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರೇ ನರಕವಾಸಿಗಳು. وَٱلَّذِينَ كَفَرُوا۟ وَكَذَّبُوا۟ بِـَٔايَٰتِنَآ أُو۟لَٰٓئِكَ أَصْحَٰبُ ٱلْجَحِيمِ. ﴿10﴾
11 ಓ ಸತ್ಯವಿಶ್ವಾಸಿಗಳೇ! ಜನರು ನಿಮ್ಮ ವಿರುದ್ಧ ತಮ್ಮ ಕೈಗಳನ್ನು ಚಾಚಲು ಮುಂದಾದ ಸಂದರ್ಭ, ಅವರ ಕೈಗಳನ್ನು ನಿಮ್ಮಿಂದ ತಡೆಯುವ ಮೂಲಕ ಅಲ್ಲಾಹು ನಿಮಗೆ ನೀಡಿದ ಅನುಗ್ರಹವನ್ನು ಸ್ಮರಿಸಿರಿ. ಅಲ್ಲಾಹನನ್ನು ಭಯಪಡಿರಿ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ. يَٰٓأَيُّهَا ٱلَّذِينَ ءَامَنُوا۟ ٱذْكُرُوا۟ نِعْمَتَ ٱللَّهِ عَلَيْكُمْ إِذْ هَمَّ قَوْمٌ أَن يَبْسُطُوٓا۟ إِلَيْكُمْ أَيْدِيَهُمْ فَكَفَّ أَيْدِيَهُمْ عَنكُمْ ۖ وَٱتَّقُوا۟ ٱللَّهَ ۚ وَعَلَى ٱللَّهِ فَلْيَتَوَكَّلِ ٱلْمُؤْمِنُونَ. ﴿11﴾
12 ಅಲ್ಲಾಹು ಇಸ್ರಾಯೇಲ್ ಮಕ್ಕಳಿಂದ ಈಗಾಗಲೇ ಕರಾರನ್ನು ಪಡೆದಿದ್ದಾನೆ. ನಾವು ಅವರಲ್ಲಿ ಹನ್ನೆರಡು ಜನರನ್ನು ಮುಖಂಡರನ್ನಾಗಿ ಮಾಡಿ ಕಳುಹಿಸಿದೆವು. ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನಾನು ನಿಮ್ಮ ಜೊತೆಯಲ್ಲಿದ್ದೇನೆ. ನೀವು ನಮಾಝ್ ಸಂಸ್ಥಾಪಿಸಿದರೆ, ಝಕಾತ್ ನೀಡಿದರೆ, ನನ್ನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಟ್ಟರೆ, ಅವರಿಗೆ ಬೆಂಬಲ ನೀಡಿದರೆ ಮತ್ತು ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡಿದರೆ, ನಿಶ್ಚಯವಾಗಿಯೂ ನಾನು ನಿಮ್ಮ ಪಾಪಗಳನ್ನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ನಿಮ್ಮನ್ನು ಪ್ರವೇಶ ಮಾಡಿಸುವೆನು. ಆದರೆ ಅದರ ಬಳಿಕವೂ ನಿಮ್ಮಲ್ಲಿ ಸತ್ಯವನ್ನು ನಿಷೇಧಿಸುವವನು ನೇರ ಮಾರ್ಗದಿಂದ ತಪ್ಪಿ ಹೋಗಿದ್ದಾನೆ.” ۞ وَلَقَدْ أَخَذَ ٱللَّهُ مِيثَٰقَ بَنِىٓ إِسْرَٰٓءِيلَ وَبَعَثْنَا مِنْهُمُ ٱثْنَىْ عَشَرَ نَقِيبًۭا ۖ وَقَالَ ٱللَّهُ إِنِّى مَعَكُمْ ۖ لَئِنْ أَقَمْتُمُ ٱلصَّلَوٰةَ وَءَاتَيْتُمُ ٱلزَّكَوٰةَ وَءَامَنتُم بِرُسُلِى وَعَزَّرْتُمُوهُمْ وَأَقْرَضْتُمُ ٱللَّهَ قَرْضًا حَسَنًۭا لَّأُكَفِّرَنَّ عَنكُمْ سَيِّـَٔاتِكُمْ وَلَأُدْخِلَنَّكُمْ جَنَّٰتٍۢ تَجْرِى مِن تَحْتِهَا ٱلْأَنْهَٰرُ ۚ فَمَن كَفَرَ بَعْدَ ذَٰلِكَ مِنكُمْ فَقَدْ ضَلَّ سَوَآءَ ٱلسَّبِيلِ. ﴿12﴾
13 ಅವರು ಕರಾರು ಉಲ್ಲಂಘಿಸಿದ ಕಾರಣ ನಾವು ಅವರನ್ನು ಶಪಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುತ್ತಾರೆ.[1] ಅವರಿಗೆ ಉಪದೇಶ ಮಾಡಲಾದ ಒಂದಂಶವನ್ನು ಅವರು ಮರೆತೇ ಬಿಟ್ಟರು. ಅವರು ಮಾಡುವ ವಂಚನೆಯನ್ನು ನೀವು ಗಮನಿಸುತ್ತಲೇ ಇರುವಿರಿ—ಅವರಲ್ಲಿ ಕೆಲವರ ಹೊರತು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು (ಅವರ ತಪ್ಪನ್ನು) ಕಡೆಗಣಿಸಿರಿ. ನಿಶ್ಚಯವಾಗಿಯೂ ಒಳಿತು ಮಾಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.
[1] ಅಂದರೆ ಅವರು ಗ್ರಂಥದ ವಚನಗಳನ್ನು ಅಸಾಂದರ್ಭಿಕವಾಗಿ ಉಲ್ಲೇಖಿಸುತ್ತಾರೆ ಮತ್ತು ತಪ್ಪು ಅರ್ಥಗಳನ್ನು ನೀಡುತ್ತಾರೆ; ಅಥವಾ ವಚನಗಳನ್ನೇ ತಿದ್ದಿ ಬದಲಾಯಿಸುತ್ತಾರೆ.
فَبِمَا نَقْضِهِم مِّيثَٰقَهُمْ لَعَنَّٰهُمْ وَجَعَلْنَا قُلُوبَهُمْ قَٰسِيَةًۭ ۖ يُحَرِّفُونَ ٱلْكَلِمَ عَن مَّوَاضِعِهِۦ ۙ وَنَسُوا۟ حَظًّۭا مِّمَّا ذُكِّرُوا۟ بِهِۦ ۚ وَلَا تَزَالُ تَطَّلِعُ عَلَىٰ خَآئِنَةٍۢ مِّنْهُمْ إِلَّا قَلِيلًۭا مِّنْهُمْ ۖ فَٱعْفُ عَنْهُمْ وَٱصْفَحْ ۚ إِنَّ ٱللَّهَ يُحِبُّ ٱلْمُحْسِنِينَ. ﴿13﴾
14 “ನಾವು ಕ್ರೈಸ್ತರು” ಎಂದು ಹೇಳಿದವರಿಂದಲೂ ನಾವು ಕರಾರನ್ನು ಪಡೆದಿದ್ದೇವೆ. ಅವರಿಗೆ ಉಪದೇಶ ಮಾಡಲಾದ ಒಂದಂಶವನ್ನು ಅವರು ಮರೆತುಬಿಟ್ಟರು. ಆದ್ದರಿಂದ ಪುನರುತ್ಥಾನದ ದಿನದ ತನಕ ನಾವು ಅವರ ನಡುವೆ ವೈರ ಮತ್ತು ದ್ವೇಷವನ್ನು ಉಂಟುಮಾಡಿದೆವು. ಅವರು ಮಾಡಿದ ದುಷ್ಕರ್ಮಗಳ ಬಗ್ಗೆ ಅಲ್ಲಾಹು ಸದ್ಯವೇ ಅವರಿಗೆ ತಿಳಿಸಿಕೊಡುವನು. وَمِنَ ٱلَّذِينَ قَالُوٓا۟ إِنَّا نَصَٰرَىٰٓ أَخَذْنَا مِيثَٰقَهُمْ فَنَسُوا۟ حَظًّۭا مِّمَّا ذُكِّرُوا۟ بِهِۦ فَأَغْرَيْنَا بَيْنَهُمُ ٱلْعَدَاوَةَ وَٱلْبَغْضَآءَ إِلَىٰ يَوْمِ ٱلْقِيَٰمَةِ ۚ وَسَوْفَ يُنَبِّئُهُمُ ٱللَّهُ بِمَا كَانُوا۟ يَصْنَعُونَ. ﴿14﴾
15 ಓ ಗ್ರಂಥದವರೇ! ನೀವು ಗ್ರಂಥದಿಂದ ಮುಚ್ಚಿಡುವ ಅನೇಕ ವಿಷಯಗಳನ್ನು ಬಹಿರಂಗಪಡಿಸುತ್ತಾ ಮತ್ತು ಹೆಚ್ಚಿನದ್ದನ್ನೂ ಕ್ಷಮಿಸುತ್ತಾ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿದ್ದಾರೆ. ನಿಮಗೆ ಅಲ್ಲಾಹನಿಂದ ಒಂದು ಬೆಳಕು ಮತ್ತು ಸ್ಪಷ್ಟ ಗ್ರಂಥವು ಬಂದಿದೆ. يَٰٓأَهْلَ ٱلْكِتَٰبِ قَدْ جَآءَكُمْ رَسُولُنَا يُبَيِّنُ لَكُمْ كَثِيرًۭا مِّمَّا كُنتُمْ تُخْفُونَ مِنَ ٱلْكِتَٰبِ وَيَعْفُوا۟ عَن كَثِيرٍۢ ۚ قَدْ جَآءَكُم مِّنَ ٱللَّهِ نُورٌۭ وَكِتَٰبٌۭ مُّبِينٌۭ. ﴿15﴾
16 ತನ್ನ ಸಂಪ್ರೀತಿಯನ್ನು ಹಿಂಬಾಲಿಸುವವರಿಗೆ ಅಲ್ಲಾಹು ಅದರ ಮೂಲಕ ಶಾಂತಿಯ ಮಾರ್ಗಗಳನ್ನು ತೋರಿಸಿಕೊಡುವನು. ಅವನು ತನ್ನ ಅಪ್ಪಣೆಯಿಂದ ಅವರನ್ನು ಅಂಧಕಾರಗಳಿಂದ ಬೆಳಕಿಗೆ ಹೊರತರುವನು ಮತ್ತು ಅವರನ್ನು ನೇರಮಾರ್ಗಕ್ಕೆ ಮುನ್ನಡೆಸುವನು. يَهْدِى بِهِ ٱللَّهُ مَنِ ٱتَّبَعَ رِضْوَٰنَهُۥ سُبُلَ ٱلسَّلَٰمِ وَيُخْرِجُهُم مِّنَ ٱلظُّلُمَٰتِ إِلَى ٱلنُّورِ بِإِذْنِهِۦ وَيَهْدِيهِمْ إِلَىٰ صِرَٰطٍۢ مُّسْتَقِيمٍۢ. ﴿16﴾
17 “ಮರ್ಯಮರ ಮಗ ಮಸೀಹನೇ ಅಲ್ಲಾಹು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯವನ್ನು ನಿಷೇಧಿಸಿದ್ದಾರೆ. ಹೇಳಿರಿ: “ಅಲ್ಲಾಹು ಮರ್ಯಮರ ಮಗ ಮಸೀಹರನ್ನು, ಅವರ ತಾಯಿಯನ್ನು ಮತ್ತು ಭೂಮಿಯಲ್ಲಿರುವ ಸರ್ವ ಮಾನವರನ್ನು ನಾಶ ಮಾಡಲು ಬಯಸಿದರೆ ಅವನನ್ನು ತಡೆಯಲು ಯಾರಿಗೆ ಸಾಧ್ಯವಿದೆ?” ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. لَّقَدْ كَفَرَ ٱلَّذِينَ قَالُوٓا۟ إِنَّ ٱللَّهَ هُوَ ٱلْمَسِيحُ ٱبْنُ مَرْيَمَ ۚ قُلْ فَمَن يَمْلِكُ مِنَ ٱللَّهِ شَيْـًٔا إِنْ أَرَادَ أَن يُهْلِكَ ٱلْمَسِيحَ ٱبْنَ مَرْيَمَ وَأُمَّهُۥ وَمَن فِى ٱلْأَرْضِ جَمِيعًۭا ۗ وَلِلَّهِ مُلْكُ ٱلسَّمَٰوَٰتِ وَٱلْأَرْضِ وَمَا بَيْنَهُمَا ۚ يَخْلُقُ مَا يَشَآءُ ۚ وَٱللَّهُ عَلَىٰ كُلِّ شَىْءٍۢ قَدِيرٌۭ. ﴿17﴾
18 ಯಹೂದಿಗಳು ಮತ್ತು ಕ್ರೈಸ್ತರು ಹೇಳುತ್ತಾರೆ: “ನಾವು ಅಲ್ಲಾಹನ ಮಕ್ಕಳು ಮತ್ತು ಅವನ ಪ್ರೀತಿಪಾತ್ರರು.”[1] ಹೇಳಿರಿ: “ಹಾಗಾದರೆ, ನೀವು ತಪ್ಪು ಮಾಡಿದರೆ ಅವನು ನಿಮ್ಮನ್ನು ಶಿಕ್ಷಿಸುವುದೇಕೆ?” ಅಲ್ಲ, ವಾಸ್ತವವಾಗಿ ನೀವೆಲ್ಲರೂ ಅವನ ಸೃಷ್ಟಿಗಳಲ್ಲಿ ಸೇರಿದ ಮನುಷ್ಯರು. ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ನೀವೆಲ್ಲರೂ ಅವನ ಬಳಿಗೇ ಮರಳಿ ಹೋಗಬೇಕಾಗಿದೆ.
[1] ಯಹೂದಿಗಳು ಉಝೈರ್‌ರನ್ನು ಮತ್ತು ಕ್ರೈಸ್ತರು ಈಸಾರನ್ನು ಅಲ್ಲಾಹನ ಮಗನೆಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೆ, ಸ್ವತಃ ತಮ್ಮನ್ನು ದೇವರ ಮಕ್ಕಳು ಮತ್ತು ದೇವರ ಪ್ರೀತಿಪಾತ್ರರೆಂದು ಅಹಂಭಾವದಿಂದ ಹೇಳುತ್ತಿದ್ದರು.
وَقَالَتِ ٱلْيَهُودُ وَٱلنَّصَٰرَىٰ نَحْنُ أَبْنَٰٓؤُا۟ ٱللَّهِ وَأَحِبَّٰٓؤُهُۥ ۚ قُلْ فَلِمَ يُعَذِّبُكُم بِذُنُوبِكُم ۖ بَلْ أَنتُم بَشَرٌۭ مِّمَّنْ خَلَقَ ۚ يَغْفِرُ لِمَن يَشَآءُ وَيُعَذِّبُ مَن يَشَآءُ ۚ وَلِلَّهِ مُلْكُ ٱلسَّمَٰوَٰتِ وَٱلْأَرْضِ وَمَا بَيْنَهُمَا ۖ وَإِلَيْهِ ٱلْمَصِيرُ. ﴿18﴾
19 ಓ ಗ್ರಂಥದವರೇ! ಸಂದೇಶವಾಹಕರ ಆಗಮನವು ನಿಂತುಹೋದ ಬಳಿಕ ಇಗೋ ಸತ್ಯವನ್ನು ವಿವರಿಸಿಕೊಡುತ್ತಾ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿದ್ದಾರೆ. “ಒಬ್ಬ ಸುವಾರ್ತೆ ನೀಡುವವನು ಮತ್ತು ಮುನ್ನೆಚ್ಚರಿಕೆ ನೀಡುವವನು ನಮ್ಮ ಬಳಿಗೆ ಬರಲಿಲ್ಲ” ಎಂದು ನೀವು ಹೇಳದಿರುವುದಕ್ಕಾಗಿ. ಇಗೋ ನಿಮ್ಮ ಬಳಿಗೆ ಸುವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಪ್ರವಾದಿಯು ಬಂದಿದ್ದಾರೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. يَٰٓأَهْلَ ٱلْكِتَٰبِ قَدْ جَآءَكُمْ رَسُولُنَا يُبَيِّنُ لَكُمْ عَلَىٰ فَتْرَةٍۢ مِّنَ ٱلرُّسُلِ أَن تَقُولُوا۟ مَا جَآءَنَا مِنۢ بَشِيرٍۢ وَلَا نَذِيرٍۢ ۖ فَقَدْ جَآءَكُم بَشِيرٌۭ وَنَذِيرٌۭ ۗ وَٱللَّهُ عَلَىٰ كُلِّ شَىْءٍۢ قَدِيرٌۭ. ﴿19﴾
20 ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ಓ ನನ್ನ ಜನರೇ! ಅಲ್ಲಾಹು ನಿಮ್ಮ ಬಳಿಗೆ ಪ್ರವಾದಿಗಳನ್ನು ಕಳುಹಿಸಿದಾಗ, ನಿಮ್ಮನ್ನು ಅರಸರನ್ನಾಗಿ ಮಾಡಿದಾಗ ಮತ್ತು ಸರ್ವಲೋಕದವರಲ್ಲಿ ಯಾರಿಗೂ ನೀಡದ ಅನೇಕ ಸವಲತ್ತುಗಳನ್ನು ನೀಡಿ ನಿಮ್ಮನ್ನು ಹರಸಿದಾಗ ಅಲ್ಲಾಹು ನಿಮಗೆ ಮಾಡಿದ ಉಪಕಾರವನ್ನು ಸ್ಮರಿಸಿರಿ. وَإِذْ قَالَ مُوسَىٰ لِقَوْمِهِۦ يَٰقَوْمِ ٱذْكُرُوا۟ نِعْمَةَ ٱللَّهِ عَلَيْكُمْ إِذْ جَعَلَ فِيكُمْ أَنۢبِيَآءَ وَجَعَلَكُم مُّلُوكًۭا وَءَاتَىٰكُم مَّا لَمْ يُؤْتِ أَحَدًۭا مِّنَ ٱلْعَٰلَمِينَ. ﴿20﴾
21 ಓ ನನ್ನ ಜನರೇ! ಅಲ್ಲಾಹು ನಿಮಗೆ ಲಿಖಿತಗೊಳಿಸಿದ ಪವಿತ್ರ ಭೂಮಿಯನ್ನು ಪ್ರವೇಶಿಸಿರಿ. ನೀವು ಬೆನ್ನು ತಿರುಗಿಸಿ ಹಿಂದಿರುಗಬೇಡಿ. ಹಾಗೆ ಮಾಡಿದರೆ ನೀವು ನಷ್ಟಹೊಂದಿದವರಾಗಿ ಬಿಡುವಿರಿ.”[1]
[1] ಯೂಸುಫರು (ಅವರ ಮೇಲೆ ಶಾಂತಿಯಿರಲಿ) ಈಜಿಪ್ಟಿನಲ್ಲಿ ರಾಜನಾದಾಗ ಇಸ್ರಾಯೇಲ್ ಮಕ್ಕಳು ಅಲ್ಲಿಗೆ ತೆರಳಿ ಅಲ್ಲಿ ವಾಸಿಸತೊಡಗಿದರು. ನಂತರ ಈಜಿಪ್ಟನ್ನು ಆಳಿದ ಫರೋಹಗಳ ಕೈಯಲ್ಲಿ ಅವರು ಕ್ರೂರ ಹಿಂಸೆಯನ್ನು ಮತ್ತು ಗುಲಾಮಗಿರಿಯನ್ನು ಅನುಭವಿಸಬೇಕಾಗಿ ಬಂತು. ಪವಿತ್ರ ಭೂಮಿಯಲ್ಲಿ (ಪ್ಯಾಲಸ್ತೀನ್‍ನಲ್ಲಿ) ಅವರನ್ನು ವಾಸ ಮಾಡಿಸುವೆನೆಂದು ಅಲ್ಲಾಹು ಅವರಿಗೆ ಪ್ರವಾದಿಗಳ ಮೂಲಕ ವಾಗ್ದಾನ ಮಾಡಿದ್ದನು. ಆದರೆ ಅವರು ವೀರಾವೇಶದಿಂದ ಯುದ್ಧ ಮಾಡಿ ಆ ಭೂಮಿಯನ್ನು ಗೆಲ್ಲಬೇಕಾಗಿತ್ತು. ಆದರೆ ಇಸ್ರಾಯೇಲರು ಯುದ್ಧ ಮಾಡಲು ಹಿಂಜರಿದರು. ಅವರ ಅವಿಧೇಯತೆಯಿಂದಾಗಿ ಅಲ್ಲಾಹು ಅವರಿಗೆ ನಲ್ವತ್ತು ವರ್ಷಗಳ ಕಾಲ ಸೀನಾ ಮರುಭೂಮಿಯಲ್ಲಿ ಅಲೆಯುವ ಶಿಕ್ಷೆಯನ್ನು ನೀಡಿದನು. ಈ ಮಧ್ಯೆ ಮೂಸಾ ಮತ್ತು ಹಾರೂನ್ (ಅವರ ಮೇಲೆ ಶಾಂತಿಯಿರಲಿ) ನಿಧನರಾದರು. ನಂತರ ಯೂಶಅ್ ರ (ಅವರ ಮೇಲೆ ಶಾಂತಿಯಿರಲಿ) ಕಾಲದಲ್ಲಿ ಅವರಿಗೆ ಪವಿತ್ರ ಭೂಮಿಯಲ್ಲಿ ವಾಸ ಮಾಡಲು ಸಾಧ್ಯವಾಯಿತು.
يَٰقَوْمِ ٱدْخُلُوا۟ ٱلْأَرْضَ ٱلْمُقَدَّسَةَ ٱلَّتِى كَتَبَ ٱللَّهُ لَكُمْ وَلَا تَرْتَدُّوا۟ عَلَىٰٓ أَدْبَارِكُمْ فَتَنقَلِبُوا۟ خَٰسِرِينَ. ﴿21﴾
22 ಅವರು ಹೇಳಿದರು: “ಓ ಮೂಸಾ! ಅಲ್ಲಿ ಮಹಾ ಪರಾಕ್ರಮಿಗಳಾದ ಜನರಿದ್ದಾರೆ. ಅವರು ಅಲ್ಲಿಂದ ಹೊರಟುಹೋಗುವ ತನಕ ನಾವು ಅದನ್ನು ಪ್ರವೇಶಿಸುವುದಿಲ್ಲ. ಅವರೇನಾದರೂ ಹೊರಟುಬಿಟ್ಟರೆ ನಾವು ಖಂಡಿತ ಅದನ್ನು ಪ್ರವೇಶಿಸುವೆವು.” قَالُوا۟ يَٰمُوسَىٰٓ إِنَّ فِيهَا قَوْمًۭا جَبَّارِينَ وَإِنَّا لَن نَّدْخُلَهَا حَتَّىٰ يَخْرُجُوا۟ مِنْهَا فَإِن يَخْرُجُوا۟ مِنْهَا فَإِنَّا دَٰخِلُونَ. ﴿22﴾
23 ದೇವಭಯವುಳ್ಳ ಜನರಲ್ಲಿ ಅಲ್ಲಾಹನ ಅನುಗ್ರಹಕ್ಕೆ ಪಾತ್ರರಾದ ಇಬ್ಬರು ಹೇಳಿದರು: “ನೀವು ಹೆಬ್ಬಾಗಿಲ ಮೂಲಕ ಅದರೊಳಗೆ ಪ್ರವೇಶಿಸಿರಿ. ನೀವು ಪ್ರವೇಶಿಸಿದರೆ, ನಿಶ್ಚಯವಾಗಿಯೂ ನೀವು ಜಯಶಾಲಿಗಳಾಗುವಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನಲ್ಲಿ ಭರವಸೆಯಿಡಿರಿ.” قَالَ رَجُلَانِ مِنَ ٱلَّذِينَ يَخَافُونَ أَنْعَمَ ٱللَّهُ عَلَيْهِمَا ٱدْخُلُوا۟ عَلَيْهِمُ ٱلْبَابَ فَإِذَا دَخَلْتُمُوهُ فَإِنَّكُمْ غَٰلِبُونَ ۚ وَعَلَى ٱللَّهِ فَتَوَكَّلُوٓا۟ إِن كُنتُم مُّؤْمِنِينَ. ﴿23﴾
24 ಅವರು ಹೇಳಿದರು: “ಓ ಮೂಸಾ! ಅವರು ಅಲ್ಲಿರುವ ತನಕ ನಾವು ಅದನ್ನು ಪ್ರವೇಶಿಸುವುದೇ ಇಲ್ಲ. ಆದ್ದರಿಂದ ನೀವು ಮತ್ತು ನಿಮ್ಮ ಪರಿಪಾಲಕ (ಅಲ್ಲಾಹು) ಹೋಗಿ ಯುದ್ಧ ಮಾಡಿರಿ. ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ.” قَالُوا۟ يَٰمُوسَىٰٓ إِنَّا لَن نَّدْخُلَهَآ أَبَدًۭا مَّا دَامُوا۟ فِيهَا ۖ فَٱذْهَبْ أَنتَ وَرَبُّكَ فَقَٰتِلَآ إِنَّا هَٰهُنَا قَٰعِدُونَ. ﴿24﴾
25 ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಾನು ಮತ್ತು ನನ್ನ ಸಹೋದರ ಮಾತ್ರ ನನ್ನ ನಿಯಂತ್ರಣದಲ್ಲಿದ್ದಾರೆ. ಆದ್ದರಿಂದ ನಮ್ಮನ್ನು ಮತ್ತು ವಿಧೇಯತೆಯಿಲ್ಲದ ಈ ಜನರನ್ನು ಪರಸ್ಪರ ಬೇರ್ಪಡಿಸು.” قَالَ رَبِّ إِنِّى لَآ أَمْلِكُ إِلَّا نَفْسِى وَأَخِى ۖ فَٱفْرُقْ بَيْنَنَا وَبَيْنَ ٱلْقَوْمِ ٱلْفَٰسِقِينَ. ﴿25﴾
26 ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನಲ್ವತ್ತು ವರ್ಷಗಳ ಕಾಲ ಆ ಭೂಮಿಯನ್ನು ಅವರಿಗೆ ನಿಷೇಧಿಸಲಾಗಿದೆ. (ಅಲ್ಲಿಯ ತನಕ) ಅವರು ಭೂಮಿಯಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡುವರು. ವಿಧೇಯತೆಯಿಲ್ಲದ ಆ ಜನರ ಬಗ್ಗೆ ನೀವು ವ್ಯಥೆಪಡಬೇಡಿ.” قَالَ فَإِنَّهَا مُحَرَّمَةٌ عَلَيْهِمْ ۛ أَرْبَعِينَ سَنَةًۭ ۛ يَتِيهُونَ فِى ٱلْأَرْضِ ۚ فَلَا تَأْسَ عَلَى ٱلْقَوْمِ ٱلْفَٰسِقِينَ. ﴿26﴾
27 ಅವರಿಗೆ ಆದಮರ ಇಬ್ಬರು ಮಕ್ಕಳ ಸಮಾಚಾರವನ್ನು ಸತ್ಯಸಹಿತ ಓದಿ ಕೊಡಿ. ಅವರಿಬ್ಬರು ಬಲಿ ಅರ್ಪಿಸಿದ ಸಂದರ್ಭ. ಆಗ ಅವರಲ್ಲಿ ಒಬ್ಬನ ಬಲಿ ಸ್ವೀಕಾರವಾದರೆ ಇನ್ನೊಬ್ಬನದ್ದು ಸ್ವೀಕಾರವಾಗಲಿಲ್ಲ. ಅವನು (ಬಲಿ ಸ್ವೀಕಾರವಾಗದವನು) ಹೇಳಿದನು: “ನಾನು ನಿನ್ನನ್ನು ಖಂಡಿತ ಕೊಲ್ಲುತ್ತೇನೆ.” ಇನ್ನೊಬ್ಬನು ಹೇಳಿದನು: “ಅಲ್ಲಾಹು ದೇವಭಯವುಳ್ಳವರಿಂದ ಮಾತ್ರ ಸ್ವೀಕರಿಸುತ್ತಾನೆ. ۞ وَٱتْلُ عَلَيْهِمْ نَبَأَ ٱبْنَىْ ءَادَمَ بِٱلْحَقِّ إِذْ قَرَّبَا قُرْبَانًۭا فَتُقُبِّلَ مِنْ أَحَدِهِمَا وَلَمْ يُتَقَبَّلْ مِنَ ٱلْءَاخَرِ قَالَ لَأَقْتُلَنَّكَ ۖ قَالَ إِنَّمَا يَتَقَبَّلُ ٱللَّهُ مِنَ ٱلْمُتَّقِينَ. ﴿27﴾
28 ನನ್ನನ್ನು ಕೊಲ್ಲಲು ನೀನು ನಿನ್ನ ಕೈಯನ್ನು ನನ್ನ ಕಡೆಗೆ ಚಾಚಿದರೂ ನಾನು ನಿನ್ನನ್ನು ಕೊಲ್ಲಲು ನನ್ನ ಕೈಯನ್ನು ನಿನ್ನ ಕಡೆಗೆ ಚಾಚುವುದಿಲ್ಲ. ನಿಶ್ಚಯವಾಗಿಯೂ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನನ್ನು ನಾನು ಭಯಪಡುತ್ತೇನೆ. لَئِنۢ بَسَطتَ إِلَىَّ يَدَكَ لِتَقْتُلَنِى مَآ أَنَا۠ بِبَاسِطٍۢ يَدِىَ إِلَيْكَ لِأَقْتُلَكَ ۖ إِنِّىٓ أَخَافُ ٱللَّهَ رَبَّ ٱلْعَٰلَمِينَ. ﴿28﴾
29 ನೀನು ನನ್ನ ಪಾಪ ಮತ್ತು ನಿನ್ನ ಪಾಪದೊಂದಿಗೆ ಹಿಂದಿರುಗಿ ನರಕವಾಸಿಗಳಲ್ಲಿ ಸೇರಬೇಕೆಂದು ನಾನು ಬಯಸುತ್ತೇನೆ. ಅದು ಅಕ್ರಮಿಗಳಿಗೆ ದೊರೆಯುವ ಪ್ರತಿಫಲವಾಗಿದೆ.” إِنِّىٓ أُرِيدُ أَن تَبُوٓأَ بِإِثْمِى وَإِثْمِكَ فَتَكُونَ مِنْ أَصْحَٰبِ ٱلنَّارِ ۚ وَذَٰلِكَ جَزَٰٓؤُا۟ ٱلظَّٰلِمِينَ. ﴿29﴾
30 ಆಗ ಅವನ ಸಹೋದರನನ್ನು ಕೊಲ್ಲುವಂತೆ ಅವನ ಮನಸ್ಸು ಅವನನ್ನು ಪ್ರೇರೇಪಿಸಿತು. ಅವನು ಅವನನ್ನು ಕೊಂದನು ಮತ್ತು ನಷ್ಟಹೊಂದಿದವರಲ್ಲಿ ಸೇರಿದವನಾದನು. فَطَوَّعَتْ لَهُۥ نَفْسُهُۥ قَتْلَ أَخِيهِ فَقَتَلَهُۥ فَأَصْبَحَ مِنَ ٱلْخَٰسِرِينَ. ﴿30﴾
31 ಆಗ ಅವನ ಸಹೋದರನ ಕಳೇಬರವನ್ನು ದಫನ ಮಾಡುವುದು ಹೇಗೆಂದು ಅವನಿಗೆ ತೋರಿಸಿಕೊಡಲು ಅಲ್ಲಾಹು ಭೂಮಿಯನ್ನು ಅಗೆಯುವ ಒಂದು ಕಾಗೆಯನ್ನು ಕಳುಹಿಸಿದನು. ಅವನು ಹೇಳಿದನು: “ಅಯ್ಯೋ ನನ್ನ ದುರ್ಗತಿಯೇ! ಈ ಕಾಗೆಯಂತೆ ನನ್ನ ಸಹೋದರನ ಕಳೇಬರವನ್ನು ದಫನ ಮಾಡಲು ಕೂಡ ನನಗೆ ಸಾಧ್ಯವಾಗಲಿಲ್ಲವೇ?” ಹೀಗೆ ಅವನು ವಿಷಾದಪಡುವವರಲ್ಲಿ ಸೇರಿದವನಾದನು. فَبَعَثَ ٱللَّهُ غُرَابًۭا يَبْحَثُ فِى ٱلْأَرْضِ لِيُرِيَهُۥ كَيْفَ يُوَٰرِى سَوْءَةَ أَخِيهِ ۚ قَالَ يَٰوَيْلَتَىٰٓ أَعَجَزْتُ أَنْ أَكُونَ مِثْلَ هَٰذَا ٱلْغُرَابِ فَأُوَٰرِىَ سَوْءَةَ أَخِى ۖ فَأَصْبَحَ مِنَ ٱلنَّٰدِمِينَ. ﴿31﴾
32 ಇದೇ ಕಾರಣದಿಂದ, ನಾವು ಇಸ್ರಾಯೇಲ್ ಮಕ್ಕಳಿಗೆ ಹೀಗೆ ವಿಧಿಸಿದೆವು: ಕೊಲೆಗೆ ಪ್ರತೀಕಾರವಾಗಿ ಅಥವಾ ಭೂಮಿಯಲ್ಲಿ ಕಿಡಿಗೇಡಿತನ ಮಾಡಿದ್ದಕ್ಕಾಗಿ ಹೊರತು ಒಬ್ಬ ವ್ಯಕ್ತಿಯನ್ನು ಯಾರಾದರೂ ಕೊಂದರೆ ಅದು ಸಂಪೂರ್ಣ ಮನುಕುಲವನ್ನು ಕೊಲ್ಲುವುದಕ್ಕೆ ಸಮಾನವಾಗಿದೆ ಮತ್ತು ಒಬ್ಬ ವ್ಯಕ್ತಿಯ ಜೀವವನ್ನು ಯಾರಾದರೂ ಉಳಿಸಿದರೆ ಅದು ಸಂಪೂರ್ಣ ಮನುಕುಲದ ಜೀವವನ್ನು ಉಳಿಸಿದ್ದಕ್ಕೆ ಸಮಾನವಾಗಿದೆ. ನಮ್ಮ ಸಂದೇಶವಾಹಕರು ಈಗಾಗಲೇ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದಾರೆ. ನಂತರ ಆ ಬಳಿಕವೂ ಅವರಲ್ಲಿ ಅನೇಕ ಮಂದಿ ಭೂಮಿಯಲ್ಲಿ ಅತಿರೇಕವೆಸಗುತ್ತಲೇ ಇದ್ದಾರೆ. مِنْ أَجْلِ ذَٰلِكَ كَتَبْنَا عَلَىٰ بَنِىٓ إِسْرَٰٓءِيلَ أَنَّهُۥ مَن قَتَلَ نَفْسًۢا بِغَيْرِ نَفْسٍ أَوْ فَسَادٍۢ فِى ٱلْأَرْضِ فَكَأَنَّمَا قَتَلَ ٱلنَّاسَ جَمِيعًۭا وَمَنْ أَحْيَاهَا فَكَأَنَّمَآ أَحْيَا ٱلنَّاسَ جَمِيعًۭا ۚ وَلَقَدْ جَآءَتْهُمْ رُسُلُنَا بِٱلْبَيِّنَٰتِ ثُمَّ إِنَّ كَثِيرًۭا مِّنْهُم بَعْدَ ذَٰلِكَ فِى ٱلْأَرْضِ لَمُسْرِفُونَ. ﴿32﴾
33 ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಹೋರಾಡುವವರು ಮತ್ತು ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಯತ್ನಿಸುವವರು ಯಾರೋ—ಅವರಿಗೆ ನೀಡಲಾಗುವ ಪ್ರತಿಫಲವು ಅವರನ್ನು ಸಾಯಿಸುವುದು, ಅಥವಾ ಶಿಲುಬೆಗೇರಿಸುವುದು, ಅಥವಾ ಅವರ ಕೈಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸುವುದು ಅಥವಾ ಅವರನ್ನು ಗಡಿಪಾರು ಮಾಡುವುದು ಮಾತ್ರವಾಗಿದೆ. ಅದು ಅವರಿಗೆ ಇಹಲೋಕದಲ್ಲಿರುವ ಅಪಮಾನವಾಗಿದೆ. ಪರಲೋಕದಲ್ಲಿ ಅವರಿಗೆ ಕಠೋರ ಶಿಕ್ಷೆಯಿದೆ. إِنَّمَا جَزَٰٓؤُا۟ ٱلَّذِينَ يُحَارِبُونَ ٱللَّهَ وَرَسُولَهُۥ وَيَسْعَوْنَ فِى ٱلْأَرْضِ فَسَادًا أَن يُقَتَّلُوٓا۟ أَوْ يُصَلَّبُوٓا۟ أَوْ تُقَطَّعَ أَيْدِيهِمْ وَأَرْجُلُهُم مِّنْ خِلَٰفٍ أَوْ يُنفَوْا۟ مِنَ ٱلْأَرْضِ ۚ ذَٰلِكَ لَهُمْ خِزْىٌۭ فِى ٱلدُّنْيَا ۖ وَلَهُمْ فِى ٱلْءَاخِرَةِ عَذَابٌ عَظِيمٌ. ﴿33﴾
34 ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗುವುದಕ್ಕೆ ಮೊದಲು ಪಶ್ಚಾತ್ತಾಪಪಟ್ಟು ಮರಳಿದವರು ಇದರಿಂದ ಹೊರತಾಗಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. إِلَّا ٱلَّذِينَ تَابُوا۟ مِن قَبْلِ أَن تَقْدِرُوا۟ عَلَيْهِمْ ۖ فَٱعْلَمُوٓا۟ أَنَّ ٱللَّهَ غَفُورٌۭ رَّحِيمٌۭ. ﴿34﴾
35 ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಅವನಿಗೆ ಸಮೀಪಗೊಳಿಸುವ ವಸೀಲ (ಮಾಧ್ಯಮ)ವನ್ನು ಹುಡುಕಿರಿ;[1] ಮತ್ತು ಅವನ ಮಾರ್ಗದಲ್ಲಿ ಹೋರಾಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
[1] ವಸೀಲ ಎಂದರೆ ಗುರಿ ಸಾಧನೆಗಿರುವ ಮಾಧ್ಯಮ; ಅಥವಾ ಗುರಿಯ ಕಡೆಗೆ ಹತ್ತಿರಗೊಳಿಸುವ ಮಾಧ್ಯಮ. ಅಲ್ಲಾಹನಿಗೆ ಹತ್ತಿರಗೊಳಿಸುವ ಮಾಧ್ಯಮ ಎಂದರೆ ಅಲ್ಲಾಹು ಆದೇಶಿಸಿದ ಕಾರ್ಯಗಳನ್ನು ಮಾಡುವುದು ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಿರುವುದು.
يَٰٓأَيُّهَا ٱلَّذِينَ ءَامَنُوا۟ ٱتَّقُوا۟ ٱللَّهَ وَٱبْتَغُوٓا۟ إِلَيْهِ ٱلْوَسِيلَةَ وَجَٰهِدُوا۟ فِى سَبِيلِهِۦ لَعَلَّكُمْ تُفْلِحُونَ. ﴿35﴾
36 ನಿಶ್ಚಯವಾಗಿಯೂ ಸತ್ಯನಿಷೇಧಿಗಳ ಬಳಿ ಭೂಮಿಯಲ್ಲಿರುವ ಎಲ್ಲಾ ವಸ್ತುಗಳೂ ಮತ್ತು ಅದರಷ್ಟೇ ಬೇರೆಯೂ ಇದ್ದು, ಪುನರುತ್ಥಾನ ದಿನದ ಶಿಕ್ಷೆಯಿಂದ ಪಾರಾಗಲು ಅವರು ಅದನ್ನು ಪರಿಹಾರವಾಗಿ ನೀಡಿದರೆ, ಅವರಿಂದ ಅದನ್ನು ಸ್ವೀಕರಿಸಲಾಗುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ. إِنَّ ٱلَّذِينَ كَفَرُوا۟ لَوْ أَنَّ لَهُم مَّا فِى ٱلْأَرْضِ جَمِيعًۭا وَمِثْلَهُۥ مَعَهُۥ لِيَفْتَدُوا۟ بِهِۦ مِنْ عَذَابِ يَوْمِ ٱلْقِيَٰمَةِ مَا تُقُبِّلَ مِنْهُمْ ۖ وَلَهُمْ عَذَابٌ أَلِيمٌۭ. ﴿36﴾
37 ಅವರು ನರಕದಿಂದ ಹೊರಬರಲು ಬಯಸುವರು. ಆದರೆ ಅದರಿಂದ ಹೊರಬರಲು ಅವರಿಗೆ ಸಾಧ್ಯವಿಲ್ಲ. ಅವರಿಗೆ ಶಾಶ್ವತ ಶಿಕ್ಷೆಯಿದೆ. يُرِيدُونَ أَن يَخْرُجُوا۟ مِنَ ٱلنَّارِ وَمَا هُم بِخَٰرِجِينَ مِنْهَا ۖ وَلَهُمْ عَذَابٌۭ مُّقِيمٌۭ. ﴿37﴾
38 ಕಳ್ಳತನ ಮಾಡುವವನ ಮತ್ತು ಕಳ್ಳತನ ಮಾಡುವವಳ ಕೈಗಳನ್ನು ಕತ್ತರಿಸಿರಿ. ಅದು ಅವರು ಮಾಡಿದ ದುಷ್ಕರ್ಮಕ್ಕೆ ಪ್ರತಿಫಲವಾಗಿದೆ ಮತ್ತು ಅಲ್ಲಾಹನ ಕಡೆಯ ಶಿಕ್ಷೆಯಾಗಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. وَٱلسَّارِقُ وَٱلسَّارِقَةُ فَٱقْطَعُوٓا۟ أَيْدِيَهُمَا جَزَآءًۢ بِمَا كَسَبَا نَكَٰلًۭا مِّنَ ٱللَّهِ ۗ وَٱللَّهُ عَزِيزٌ حَكِيمٌۭ. ﴿38﴾
39 ಆದರೆ ಅಕ್ರಮವೆಸಗಿದ ನಂತರ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಳ್ಳುವವರು ಯಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. فَمَن تَابَ مِنۢ بَعْدِ ظُلْمِهِۦ وَأَصْلَحَ فَإِنَّ ٱللَّهَ يَتُوبُ عَلَيْهِ ۗ إِنَّ ٱللَّهَ غَفُورٌۭ رَّحِيمٌ. ﴿39﴾
40 ಭೂಮ್ಯಾಕಾಶಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದೆಂದು ನಿಮಗೆ ತಿಳಿದಿಲ್ಲವೇ? ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. أَلَمْ تَعْلَمْ أَنَّ ٱللَّهَ لَهُۥ مُلْكُ ٱلسَّمَٰوَٰتِ وَٱلْأَرْضِ يُعَذِّبُ مَن يَشَآءُ وَيَغْفِرُ لِمَن يَشَآءُ ۗ وَٱللَّهُ عَلَىٰ كُلِّ شَىْءٍۢ قَدِيرٌۭ. ﴿40﴾
41 ಓ ಸಂದೇಶವಾಹಕರೇ! ನಾವು ಸತ್ಯವಿಶ್ವಾಸಿಗಳೆಂದು ಬಾಯಿಂದ ಹೇಳುವವರು—ಆದರೆ ಹೃದಯಗಳಲ್ಲಿ ವಿಶ್ವಾಸವಿಲ್ಲದವರು (ಕಪಟವಿಶ್ವಾಸಿಗಳು) ಮತ್ತು ಸುಳ್ಳನ್ನು ಕಿವಿಗೊಟ್ಟು ಕೇಳುವ, ನಿಮ್ಮ ಬಳಿಗೆ ಬರದ ಜನರ ಮಾತುಗಳನ್ನು ಕಿವಿಗೊಟ್ಟು ಕೇಳುವ, ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುವ ಮತ್ತು ನಿಮಗೆ ಪ್ರವಾದಿಯ ಬಳಿ ಇದೇ ತೀರ್ಪು ಸಿಕ್ಕಿದರೆ ಸ್ವೀಕರಿಸಿರಿ, ಇಲ್ಲದಿದ್ದರೆ ಜಾಗರೂಕರಾಗಿರಿ ಎಂದು ಹೇಳುವ ಯಹೂದಿಗಳು ಸತ್ಯನಿಷೇಧದಲ್ಲಿ ತ್ವರೆ ಮಾಡುವುದನ್ನು ಕಂಡು ನೀವು ಬೇಸರಪಡಬೇಡಿ. ಅಲ್ಲಾಹು ಯಾರನ್ನು ನಾಶ ಮಾಡಲು ಬಯಸುತ್ತಾನೋ—ಅವನನ್ನು ಅಲ್ಲಾಹನಿಂದ ರಕ್ಷಿಸಲು ನಿಮಗೆ ಸಾಧ್ಯವಿಲ್ಲ. ಅಲ್ಲಾಹು ಅವರ ಹೃದಯಗಳನ್ನು ಶುದ್ಧೀಕರಿಸಲು ಬಯಸುವುದಿಲ್ಲ. ಅವರಿಗೆ ಇಹಲೋಕದಲ್ಲಿ ಅವಮಾನವಿದೆ ಮತ್ತು ಪರಲೋಕದಲ್ಲಿ ಕಠೋರ ಶಿಕ್ಷೆಯಿದೆ. ۞ يَٰٓأَيُّهَا ٱلرَّسُولُ لَا يَحْزُنكَ ٱلَّذِينَ يُسَٰرِعُونَ فِى ٱلْكُفْرِ مِنَ ٱلَّذِينَ قَالُوٓا۟ ءَامَنَّا بِأَفْوَٰهِهِمْ وَلَمْ تُؤْمِن قُلُوبُهُمْ ۛ وَمِنَ ٱلَّذِينَ هَادُوا۟ ۛ سَمَّٰعُونَ لِلْكَذِبِ سَمَّٰعُونَ لِقَوْمٍ ءَاخَرِينَ لَمْ يَأْتُوكَ ۖ يُحَرِّفُونَ ٱلْكَلِمَ مِنۢ بَعْدِ مَوَاضِعِهِۦ ۖ يَقُولُونَ إِنْ أُوتِيتُمْ هَٰذَا فَخُذُوهُ وَإِن لَّمْ تُؤْتَوْهُ فَٱحْذَرُوا۟ ۚ وَمَن يُرِدِ ٱللَّهُ فِتْنَتَهُۥ فَلَن تَمْلِكَ لَهُۥ مِنَ ٱللَّهِ شَيْـًٔا ۚ أُو۟لَٰٓئِكَ ٱلَّذِينَ لَمْ يُرِدِ ٱللَّهُ أَن يُطَهِّرَ قُلُوبَهُمْ ۚ لَهُمْ فِى ٱلدُّنْيَا خِزْىٌۭ ۖ وَلَهُمْ فِى ٱلْءَاخِرَةِ عَذَابٌ عَظِيمٌۭ. ﴿41﴾
42 ಅವರು ಸುಳ್ಳನ್ನು ಕಿವಿಗೊಟ್ಟು ಕೇಳುವವರು ಮತ್ತು ನಿಷಿದ್ಧ ಧನವನ್ನು ತಿನ್ನುವವರಾಗಿದ್ದಾರೆ. ಅವರು ನಿಮ್ಮ ಬಳಿಗೆ (ತೀರ್ಪಿಗಾಗಿ) ಬಂದರೆ ನೀವು ಅವರ ನಡುವೆ ತೀರ್ಪು ನೀಡಿರಿ ಅಥವಾ ಅವರನ್ನು ನಿರ್ಲಕ್ಷಿಸಿರಿ. ನೀವು ಅವರನ್ನು ನಿರ್ಲಕ್ಷಿಸಿದರೆ ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಇನ್ನು ನೀವು ತೀರ್ಪು ನೀಡುವುದಾದರೆ ಅವರ ನಡುವೆ ನ್ಯಾಯಯುತವಾಗಿ ತೀರ್ಪು ನೀಡಿರಿ. ನಿಶ್ಚಯವಾಗಿಯೂ ನ್ಯಾಯಯುತವಾಗಿ ವರ್ತಿಸುವವರನ್ನು ಅಲ್ಲಾಹು ಇಷ್ಟಪಡುತ್ತಾನೆ. سَمَّٰعُونَ لِلْكَذِبِ أَكَّٰلُونَ لِلسُّحْتِ ۚ فَإِن جَآءُوكَ فَٱحْكُم بَيْنَهُمْ أَوْ أَعْرِضْ عَنْهُمْ ۖ وَإِن تُعْرِضْ عَنْهُمْ فَلَن يَضُرُّوكَ شَيْـًۭٔا ۖ وَإِنْ حَكَمْتَ فَٱحْكُم بَيْنَهُم بِٱلْقِسْطِ ۚ إِنَّ ٱللَّهَ يُحِبُّ ٱلْمُقْسِطِينَ. ﴿42﴾
43 ಆದರೆ ಅವರ ಬಳಿ ತೌರಾತ್ ಇದ್ದು ಅದರಲ್ಲಿ ಅಲ್ಲಾಹನ ತೀರ್ಪು ಇರುವಾಗ ಅವರು (ಅದನ್ನು ಬಿಟ್ಟು) ತೀರ್ಪಿಗಾಗಿ ನಿಮ್ಮ ಬಳಿಗೆ ಬರುವುದು ಹೇಗೆ? ನಂತರ ಅದರ ಬಳಿಕವೂ ಅವರು ವಿಮುಖರಾಗುತ್ತಾರೆ. ಅವರು ಸತ್ಯವಿಶ್ವಾಸಿಗಳೇ ಅಲ್ಲ. وَكَيْفَ يُحَكِّمُونَكَ وَعِندَهُمُ ٱلتَّوْرَىٰةُ فِيهَا حُكْمُ ٱللَّهِ ثُمَّ يَتَوَلَّوْنَ مِنۢ بَعْدِ ذَٰلِكَ ۚ وَمَآ أُو۟لَٰٓئِكَ بِٱلْمُؤْمِنِينَ. ﴿43﴾
44 ನಿಶ್ಚಯವಾಗಿಯೂ ನಾವು ತೌರಾತನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ಸನ್ಮಾರ್ಗ ಮತ್ತು ಬೆಳಕಿದೆ. (ಅಲ್ಲಾಹನಿಗೆ) ಶರಣಾದ ಪ್ರವಾದಿಗಳು, ದೇವನಿಷ್ಠರು ಮತ್ತು ವಿದ್ವಾಂಸರು ಅದರಲ್ಲಿರುವಂತೆ ಯಹೂದಿಗಳ ನಡುವೆ ತೀರ್ಪು ನೀಡುತ್ತಿದ್ದರು. ಏಕೆಂದರೆ ಅಲ್ಲಾಹನ ಗ್ರಂಥದ ಸಂರಕ್ಷಣೆಯನ್ನು ಅವರಿಗೆ ವಹಿಸಿಕೊಡಲಾಗಿತ್ತು. ಅವರು ಅದಕ್ಕೆ ಸಾಕ್ಷಿಗಳಾಗಿದ್ದರು. ಆದ್ದರಿಂದ ನೀವು ಜನರನ್ನು ಭಯಪಡಬೇಡಿ. ನನ್ನನ್ನು ಭಯಪಡಿರಿ. ನನ್ನ ವಚನಗಳನ್ನು ಕೀಳು ದರಕ್ಕೆ ಮಾರಾಟ ಮಾಡಬೇಡಿ. ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಸತ್ಯನಿಷೇಧಿಗಳು. إِنَّآ أَنزَلْنَا ٱلتَّوْرَىٰةَ فِيهَا هُدًۭى وَنُورٌۭ ۚ يَحْكُمُ بِهَا ٱلنَّبِيُّونَ ٱلَّذِينَ أَسْلَمُوا۟ لِلَّذِينَ هَادُوا۟ وَٱلرَّبَّٰنِيُّونَ وَٱلْأَحْبَارُ بِمَا ٱسْتُحْفِظُوا۟ مِن كِتَٰبِ ٱللَّهِ وَكَانُوا۟ عَلَيْهِ شُهَدَآءَ ۚ فَلَا تَخْشَوُا۟ ٱلنَّاسَ وَٱخْشَوْنِ وَلَا تَشْتَرُوا۟ بِـَٔايَٰتِى ثَمَنًۭا قَلِيلًۭا ۚ وَمَن لَّمْ يَحْكُم بِمَآ أَنزَلَ ٱللَّهُ فَأُو۟لَٰٓئِكَ هُمُ ٱلْكَٰفِرُونَ. ﴿44﴾
45 ನಾವು ಅವರಿಗೆ ಅದರಲ್ಲಿ (ತೌರಾತ್‍ನಲ್ಲಿ) ಜೀವಕ್ಕೆ ಜೀವ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ, ಹಲ್ಲಿಗೆ ಹಲ್ಲು ಮತ್ತು ಗಾಯಗಳಿಗೆ ಪ್ರತೀಕಾರ ಪಡೆಯಬೇಕೆಂದು ಆದೇಶಿಸಿದ್ದೇವೆ. ಯಾರಾದರೂ (ಪ್ರತೀಕಾರ ಪಡೆಯದೆ) ಕ್ಷಮಿಸಿದರೆ, ಅದು ಅವನಿಗೆ ಪರಿಹಾರವಾಗಿದೆ. ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಅಕ್ರಮಿಗಳು. وَكَتَبْنَا عَلَيْهِمْ فِيهَآ أَنَّ ٱلنَّفْسَ بِٱلنَّفْسِ وَٱلْعَيْنَ بِٱلْعَيْنِ وَٱلْأَنفَ بِٱلْأَنفِ وَٱلْأُذُنَ بِٱلْأُذُنِ وَٱلسِّنَّ بِٱلسِّنِّ وَٱلْجُرُوحَ قِصَاصٌۭ ۚ فَمَن تَصَدَّقَ بِهِۦ فَهُوَ كَفَّارَةٌۭ لَّهُۥ ۚ وَمَن لَّمْ يَحْكُم بِمَآ أَنزَلَ ٱللَّهُ فَأُو۟لَٰٓئِكَ هُمُ ٱلظَّٰلِمُونَ. ﴿45﴾
46 ನಂತರ ಅವರ ಹಿಂದೆಯೇ ನಾವು ಮರ್ಯಮರ ಮಗ ಈಸಾರನ್ನು—ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವುದಕ್ಕಾಗಿ ಕಳುಹಿಸಿದೆವು. ನಾವು ಅವರಿಗೆ ಇಂಜೀಲನ್ನು ನೀಡಿದೆವು. ಅದರಲ್ಲಿ ಸನ್ಮಾರ್ಗ ಮತ್ತು ಬೆಳಕಿತ್ತು. ಅದು ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವ ಗ್ರಂಥವಾಗಿದೆ ಮತ್ತು ದೇವಭಯವುಳ್ಳವರಿಗೆ ಮಾರ್ಗದರ್ಶನ ಮತ್ತು ಹಿತೋಪದೇಶವಾಗಿದೆ. وَقَفَّيْنَا عَلَىٰٓ ءَاثَٰرِهِم بِعِيسَى ٱبْنِ مَرْيَمَ مُصَدِّقًۭا لِّمَا بَيْنَ يَدَيْهِ مِنَ ٱلتَّوْرَىٰةِ ۖ وَءَاتَيْنَٰهُ ٱلْإِنجِيلَ فِيهِ هُدًۭى وَنُورٌۭ وَمُصَدِّقًۭا لِّمَا بَيْنَ يَدَيْهِ مِنَ ٱلتَّوْرَىٰةِ وَهُدًۭى وَمَوْعِظَةًۭ لِّلْمُتَّقِينَ. ﴿46﴾
47 ಇಂಜೀಲ್‍ನ ಅನುಯಾಯಿಗಳು ಅಲ್ಲಾಹು ಅದರಲ್ಲಿ ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ತೀರ್ಪು ನೀಡಲಿ.[1] ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ದುಷ್ಕರ್ಮಿಗಳು.
[1] ಈಸಾರ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿತ್ವದ ಅವಧಿಯು ಊರ್ಜಿತದಲ್ಲಿದ್ದ ಕಾಲದಲ್ಲಿ ಅವರ ಅನುಯಾಯಿಗಳು ಇಂಜೀಲ್‌ನಲ್ಲಿರುವ ನಿಯಮಗಳ ಪ್ರಕಾರ ತೀರ್ಪು ನೀಡಬೇಕಾಗಿತ್ತು. ಆದರೆ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಪ್ರವಾದಿಯಾದಾಗ ಈಸಾರ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿತ್ವ ಮುಗಿಯುತ್ತದೆ ಮತ್ತು ಇಂಜೀಲ್‌ನ ನಿಯಮಗಳು ರದ್ದಾಗುತ್ತವೆ. ನಂತರ ಅವರ ಅನುಯಾಯಿಗಳು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ಅವತೀರ್ಣವಾದ ಕುರ್‌ಆನ್ ಪ್ರಕಾರ ತೀರ್ಪು ನೀಡಬೇಕಾಗಿದೆ.
وَلْيَحْكُمْ أَهْلُ ٱلْإِنجِيلِ بِمَآ أَنزَلَ ٱللَّهُ فِيهِ ۚ وَمَن لَّمْ يَحْكُم بِمَآ أَنزَلَ ٱللَّهُ فَأُو۟لَٰٓئِكَ هُمُ ٱلْفَٰسِقُونَ. ﴿47﴾
48 (ಪ್ರವಾದಿಯವರೇ) ನಿಮಗೂ ನಾವು ಗ್ರಂಥವನ್ನು ಸತ್ಯಸಹಿತ ಅವತೀರ್ಣಗೊಳಿಸಿದ್ದೇವೆ. ಅದು ತನ್ನ ಮುಂದಿರುವ ಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ. ಆದ್ದರಿಂದ ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ನೀವು ಅವರ ನಡುವೆ ತೀರ್ಪು ನೀಡಿರಿ. ನಿಮಗೆ ಅವತೀರ್ಣವಾದ ಸತ್ಯವನ್ನು ತೊರೆದು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ನಿಮ್ಮಲ್ಲಿ ಪ್ರತಿಯೊಂದು ಸಮುದಾಯಕ್ಕೂ ನಾವು ಒಂದು ಧರ್ಮಶಾಸ್ತ್ರ ಮತ್ತು ಕರ್ಮಮಾರ್ಗವನ್ನು ನಿಶ್ಚಯಿಸಿದ್ದೇವೆ. ಅಲ್ಲಾಹು ಇಚ್ಛಿಸಿದ್ದರೆ ನಿಮ್ಮೆಲ್ಲರನ್ನೂ ಒಂದೇ ಸಮುದಾಯವಾಗಿ ಮಾಡುತ್ತಿದ್ದನು. ಆದರೆ ಅವನು ನಿಮಗೆ ಏನು ನೀಡಿದ್ದಾನೋ ಅದರಲ್ಲಿ ನಿಮ್ಮನ್ನು ಪರೀಕ್ಷಿಸಲು (ಇಚ್ಛಿಸುತ್ತಾನೆ). ಆದ್ದರಿಂದ ನೀವು ಸತ್ಕರ್ಮಗಳಲ್ಲಿ ತ್ವರೆಯಿಂದ ಮುನ್ನುಗ್ಗಿರಿ. ನೀವೆಲ್ಲರೂ ಅಲ್ಲಾಹನ ಬಳಿಗೇ ಮರಳಬೇಕಾಗಿದೆ. ಆಗ ನೀವು ಭಿನ್ನಮತ ತಳೆದ ವಿಷಯಗಳ ಬಗ್ಗೆ ಅವನು ನಿಮಗೆ ತಿಳಿಸಿಕೊಡುವನು. وَأَنزَلْنَآ إِلَيْكَ ٱلْكِتَٰبَ بِٱلْحَقِّ مُصَدِّقًۭا لِّمَا بَيْنَ يَدَيْهِ مِنَ ٱلْكِتَٰبِ وَمُهَيْمِنًا عَلَيْهِ ۖ فَٱحْكُم بَيْنَهُم بِمَآ أَنزَلَ ٱللَّهُ ۖ وَلَا تَتَّبِعْ أَهْوَآءَهُمْ عَمَّا جَآءَكَ مِنَ ٱلْحَقِّ ۚ لِكُلٍّۢ جَعَلْنَا مِنكُمْ شِرْعَةًۭ وَمِنْهَاجًۭا ۚ وَلَوْ شَآءَ ٱللَّهُ لَجَعَلَكُمْ أُمَّةًۭ وَٰحِدَةًۭ وَلَٰكِن لِّيَبْلُوَكُمْ فِى مَآ ءَاتَىٰكُمْ ۖ فَٱسْتَبِقُوا۟ ٱلْخَيْرَٰتِ ۚ إِلَى ٱللَّهِ مَرْجِعُكُمْ جَمِيعًۭا فَيُنَبِّئُكُم بِمَا كُنتُمْ فِيهِ تَخْتَلِفُونَ. ﴿48﴾
49 ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಅವರ ನಡುವೆ ತೀರ್ಪು ನೀಡಿರಿ. ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಅಲ್ಲಾಹು ನಿಮಗೆ ಅವತೀರ್ಣಗೊಳಿಸಿದ ಯಾವುದಾದರೂ ಆದೇಶದಿಂದ ಅವರು ನಿಮ್ಮನ್ನು ತಪ್ಪಿಸಿಬಿಡುವ ಬಗ್ಗೆ ಜಾಗರೂಕರಾಗಿರಿ. ಅವರೇನಾದರೂ ವಿಮುಖರಾದರೆ, ತಿಳಿಯಿರಿ! ಅವರ ಕೆಲವು ಪಾಪಗಳ ಕಾರಣದಿಂದ ಅಲ್ಲಾಹು ಅವರನ್ನು ಶಿಕ್ಷಿಸಲು ಬಯಸುತ್ತಿದ್ದಾನೆ. ನಿಶ್ಚಯವಾಗಿಯೂ ಮನುಷ್ಯರಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿದ್ದಾರೆ. وَأَنِ ٱحْكُم بَيْنَهُم بِمَآ أَنزَلَ ٱللَّهُ وَلَا تَتَّبِعْ أَهْوَآءَهُمْ وَٱحْذَرْهُمْ أَن يَفْتِنُوكَ عَنۢ بَعْضِ مَآ أَنزَلَ ٱللَّهُ إِلَيْكَ ۖ فَإِن تَوَلَّوْا۟ فَٱعْلَمْ أَنَّمَا يُرِيدُ ٱللَّهُ أَن يُصِيبَهُم بِبَعْضِ ذُنُوبِهِمْ ۗ وَإِنَّ كَثِيرًۭا مِّنَ ٱلنَّاسِ لَفَٰسِقُونَ. ﴿49﴾
50 ಅವರು ಅಜ್ಞಾನಕಾಲದ ತೀರ್ಪನ್ನು ಬಯಸುತ್ತಿದ್ದಾರೆಯೇ? ದೃಢವಿಶ್ವಾಸವಿಡುವ ಜನರಿಗೆ ಅಲ್ಲಾಹನಿಗಿಂತಲೂ ಉತ್ತಮವಾಗಿ ತೀರ್ಪು ನೀಡುವವನು ಯಾರು? أَفَحُكْمَ ٱلْجَٰهِلِيَّةِ يَبْغُونَ ۚ وَمَنْ أَحْسَنُ مِنَ ٱللَّهِ حُكْمًۭا لِّقَوْمٍۢ يُوقِنُونَ. ﴿50﴾
51 ಓ ಸತ್ಯವಿಶ್ವಾಸಿಗಳೇ! ಯಹೂದಿಗಳನ್ನು ಮತ್ತು ಕ್ರೈಸ್ತರನ್ನು ಆಪ್ತಮಿತ್ರರಾಗಿ ಸ್ವೀಕರಿಸಬೇಡಿ. ಅವರು ಪರಸ್ಪರ ಆಪ್ತಮಿತ್ರರಾಗಿದ್ದಾರೆ. ನಿಮ್ಮಲ್ಲಿ ಯಾರು ಅವರನ್ನು ಆಪ್ತಮಿತ್ರರಾಗಿ ಸ್ವೀಕರಿಸುತ್ತಾನೋ ಅವನು ಅವರಲ್ಲಿ ಸೇರುತ್ತಾನೆ. ನಿಶ್ಚಯವಾಗಿಯೂ ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗ ತೋರಿಸುವುದಿಲ್ಲ. ۞ يَٰٓأَيُّهَا ٱلَّذِينَ ءَامَنُوا۟ لَا تَتَّخِذُوا۟ ٱلْيَهُودَ وَٱلنَّصَٰرَىٰٓ أَوْلِيَآءَ ۘ بَعْضُهُمْ أَوْلِيَآءُ بَعْضٍۢ ۚ وَمَن يَتَوَلَّهُم مِّنكُمْ فَإِنَّهُۥ مِنْهُمْ ۗ إِنَّ ٱللَّهَ لَا يَهْدِى ٱلْقَوْمَ ٱلظَّٰلِمِينَ. ﴿51﴾
52 ಹೃದಯಗಳಲ್ಲಿ ರೋಗವಿರುವವರು (ಕಪಟವಿಶ್ವಾಸಿಗಳು) ಅವರೊಡನೆ ಸೇರಲು ತ್ವರೆ ಮಾಡುವುದನ್ನು ನೀವು ಕಾಣುವಿರಿ. ಅವರು ಹೇಳುತ್ತಾರೆ: “ನಮಗೇನಾದರೂ ಆಪತ್ತು ಸಂಭವಿಸಬಹುದೆಂದು ನಮಗೆ ಭಯವಾಗುತ್ತಿದೆ.” ಆದರೆ ಅಲ್ಲಾಹು ನಿಮಗೆ ಗೆಲುವನ್ನು ಅಥವಾ ತನ್ನ ಕಡೆಯ ಏನಾದರೂ ಆದೇಶವನ್ನು ನೀಡಬಹುದು. ಆಗ ಅವರು ತಮ್ಮ ಮನಸ್ಸಿನಲ್ಲಿ ರಹಸ್ಯವಾಗಿಟ್ಟ ವಿಚಾರಗಳನ್ನು ನೆನೆದು ವಿಷಾದಪಡುವರು. فَتَرَى ٱلَّذِينَ فِى قُلُوبِهِم مَّرَضٌۭ يُسَٰرِعُونَ فِيهِمْ يَقُولُونَ نَخْشَىٰٓ أَن تُصِيبَنَا دَآئِرَةٌۭ ۚ فَعَسَى ٱللَّهُ أَن يَأْتِىَ بِٱلْفَتْحِ أَوْ أَمْرٍۢ مِّنْ عِندِهِۦ فَيُصْبِحُوا۟ عَلَىٰ مَآ أَسَرُّوا۟ فِىٓ أَنفُسِهِمْ نَٰدِمِينَ. ﴿52﴾
53 ಸತ್ಯವಿಶ್ವಾಸಿಗಳು ಹೇಳುವರು: “ನಾವು ನಿಮ್ಮ ಜೊತೆಯಲ್ಲೇ ಇದ್ದೇವೆ ಎಂದು ಅಲ್ಲಾಹನ ಮೇಲೆ ಬಲವಾಗಿ ಆಣೆ ಮಾಡಿದವರು ಇವರೇ ಏನು?” ಅವರ ಕರ್ಮಗಳು ನಿಷ್ಫಲವಾದವು ಮತ್ತು ಅವರು ನಷ್ಟಹೊಂದಿದವರಾಗಿ ಬಿಟ್ಟರು. وَيَقُولُ ٱلَّذِينَ ءَامَنُوٓا۟ أَهَٰٓؤُلَآءِ ٱلَّذِينَ أَقْسَمُوا۟ بِٱللَّهِ جَهْدَ أَيْمَٰنِهِمْ ۙ إِنَّهُمْ لَمَعَكُمْ ۚ حَبِطَتْ أَعْمَٰلُهُمْ فَأَصْبَحُوا۟ خَٰسِرِينَ. ﴿53﴾
54 ಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲಿ ಯಾರಾದರೂ ಧರ್ಮಪರಿತ್ಯಾಗ ಮಾಡಿದರೆ, ಸದ್ಯವೇ ಅಲ್ಲಾಹು (ನಿಮ್ಮ ಬದಲಿಗೆ) ಬೇರೆ ಜನರನ್ನು ತರುವನು. ಅವನು ಅವರನ್ನು ಪ್ರೀತಿಸುವನು ಮತ್ತು ಅವರು ಅವನನ್ನು ಪ್ರೀತಿಸುವರು. ಅವರು ಸತ್ಯವಿಶ್ವಾಸಿಗಳ ಮುಂದೆ ದೈನ್ಯತೆ ಮತ್ತು ಸತ್ಯನಿಷೇಧಿಗಳ ಮುಂದೆ ಪೌರುಷವನ್ನು ಪ್ರಕಟಿಸುವರು. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವರು ಮತ್ತು ಆಕ್ಷೇಪಿಸುವವನ ಯಾವುದೇ ಆಕ್ಷೇಪಕ್ಕೂ ಭಯಪಡಲಾರರು. ಅದು ಅಲ್ಲಾಹನ ಔದಾರ್ಯವಾಗಿದೆ. ಅವನು ಇಚ್ಛಿಸುವವರಿಗೆ ಅದನ್ನು ನೀಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.[1]
[1] ಇಸ್ಲಾಂ ಧರ್ಮದ ಅಸ್ತಿತ್ವವು ನಿಮ್ಮನ್ನು ಅವಲಂಬಿಸಿಲ್ಲ. ನೀವು ಧರ್ಮಪರಿತ್ಯಾಗ ಮಾಡಿದರೆ ಅಲ್ಲಾಹು ನಿಮ್ಮ ಸ್ಥಾನದಲ್ಲಿ ಬೇರೆ ಜನರನ್ನು ತರುವನು. ಅವರಿಗೆ ನಾಲ್ಕು ವಿಶೇಷತೆಗಳಿರುವುದು. 1. ಅವರನ್ನು ಅಲ್ಲಾಹು ಪ್ರೀತಿಸುತ್ತಾನೆ ಮತ್ತು ಅವರು ಅಲ್ಲಾಹನನ್ನು ಪ್ರೀತಿಸುತ್ತಾರೆ. 2. ಅವರು ಸತ್ಯವಿಶ್ವಾಸಿಗಳೊಂದಿಗೆ ಮೃದುವಾಗಿ ವರ್ತಿಸುತ್ತಾರೆ ಮತ್ತು ಸತ್ಯನಿಷೇಧಿಗಳೊಂದಿಗೆ ಕಠೋರವಾಗಿ ವರ್ತಿಸುತ್ತಾರೆ. 3. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. 4. ಅವರು ಅಲ್ಲಾಹನ ವಿಷಯದಲ್ಲಿ ಯಾರನ್ನೂ ಭಯಪಡುವುದಿಲ್ಲ.
يَٰٓأَيُّهَا ٱلَّذِينَ ءَامَنُوا۟ مَن يَرْتَدَّ مِنكُمْ عَن دِينِهِۦ فَسَوْفَ يَأْتِى ٱللَّهُ بِقَوْمٍۢ يُحِبُّهُمْ وَيُحِبُّونَهُۥٓ أَذِلَّةٍ عَلَى ٱلْمُؤْمِنِينَ أَعِزَّةٍ عَلَى ٱلْكَٰفِرِينَ يُجَٰهِدُونَ فِى سَبِيلِ ٱللَّهِ وَلَا يَخَافُونَ لَوْمَةَ لَآئِمٍۢ ۚ ذَٰلِكَ فَضْلُ ٱللَّهِ يُؤْتِيهِ مَن يَشَآءُ ۚ وَٱللَّهُ وَٰسِعٌ عَلِيمٌ. ﴿54﴾
55 ಅಲ್ಲಾಹು, ಅವನ ಸಂದೇಶವಾಹಕರು ಮತ್ತು ನಮಾಝ್ ಸಂಸ್ಥಾಪಿಸುವ, ಝಕಾತ್ ನೀಡುವ ಹಾಗೂ ಭಯಭಕ್ತಿಯಿಂದ ತಲೆಬಾಗುವ ಸತ್ಯವಿಶ್ವಾಸಿಗಳೇ ನಿಮ್ಮ ಆಪ್ತಮಿತ್ರರು. إِنَّمَا وَلِيُّكُمُ ٱللَّهُ وَرَسُولُهُۥ وَٱلَّذِينَ ءَامَنُوا۟ ٱلَّذِينَ يُقِيمُونَ ٱلصَّلَوٰةَ وَيُؤْتُونَ ٱلزَّكَوٰةَ وَهُمْ رَٰكِعُونَ. ﴿55﴾
56 ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಯಾರು ಆಪ್ತಮಿತ್ರರಾಗಿ ಸ್ವೀಕರಿಸುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹನ ಪಕ್ಷದವರೇ ವಿಜಯಿಗಳು. وَمَن يَتَوَلَّ ٱللَّهَ وَرَسُولَهُۥ وَٱلَّذِينَ ءَامَنُوا۟ فَإِنَّ حِزْبَ ٱللَّهِ هُمُ ٱلْغَٰلِبُونَ. ﴿56﴾
57 ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮೊದಲು ಗ್ರಂಥ ನೀಡಲಾದವರಲ್ಲಿ (ಯಹೂದಿಗಳು ಮತ್ತು ಕ್ರೈಸ್ತರಲ್ಲಿ) ನಿಮ್ಮ ಧರ್ಮವನ್ನು ತಮಾಷೆ ಮತ್ತು ಆಟದ ವಸ್ತುವಾಗಿ ಸ್ವೀಕರಿಸಿದವರನ್ನು ಮತ್ತು ಸತ್ಯನಿಷೇಧಿಗಳನ್ನು ನೀವು ಆಪ್ತಮಿತ್ರರಾಗಿ ಸ್ವೀಕರಿಸಬೇಡಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ. يَٰٓأَيُّهَا ٱلَّذِينَ ءَامَنُوا۟ لَا تَتَّخِذُوا۟ ٱلَّذِينَ ٱتَّخَذُوا۟ دِينَكُمْ هُزُوًۭا وَلَعِبًۭا مِّنَ ٱلَّذِينَ أُوتُوا۟ ٱلْكِتَٰبَ مِن قَبْلِكُمْ وَٱلْكُفَّارَ أَوْلِيَآءَ ۚ وَٱتَّقُوا۟ ٱللَّهَ إِن كُنتُم مُّؤْمِنِينَ. ﴿57﴾
58 ನೀವು ನಮಾಝ್‍ಗಾಗಿ ಕರೆ ನೀಡಿದರೆ, ಅವರು ಅದನ್ನು ತಮಾಷೆ ಮತ್ತು ಆಟದ ವಸ್ತುವಾಗಿ ಸ್ವೀಕರಿಸುತ್ತಾರೆ. ಅದೇಕೆಂದರೆ ಅವರು ಬುದ್ಧಿಯಿಲ್ಲದ ಜನರಾಗಿದ್ದಾರೆ. وَإِذَا نَادَيْتُمْ إِلَى ٱلصَّلَوٰةِ ٱتَّخَذُوهَا هُزُوًۭا وَلَعِبًۭا ۚ ذَٰلِكَ بِأَنَّهُمْ قَوْمٌۭ لَّا يَعْقِلُونَ. ﴿58﴾
59 ಹೇಳಿರಿ: “ಓ ಗ್ರಂಥದವರೇ! ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಮಗಿಂತ ಮೊದಲು ಅವತೀರ್ಣವಾದ ಗ್ರಂಥದಲ್ಲಿ ವಿಶ್ವಾಸವಿಟ್ಟಿದ್ದೇವೆಂಬ ಕಾರಣದಿಂದ ಮತ್ತು ನಿಮ್ಮಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿರುವ ಕಾರಣದಿಂದ ನೀವು ನಮ್ಮನ್ನು ದ್ವೇಷಿಸುತ್ತೀರಾ?” قُلْ يَٰٓأَهْلَ ٱلْكِتَٰبِ هَلْ تَنقِمُونَ مِنَّآ إِلَّآ أَنْ ءَامَنَّا بِٱللَّهِ وَمَآ أُنزِلَ إِلَيْنَا وَمَآ أُنزِلَ مِن قَبْلُ وَأَنَّ أَكْثَرَكُمْ فَٰسِقُونَ. ﴿59﴾
60 ಹೇಳಿರಿ: “ಅಲ್ಲಾಹನ ಬಳಿ ಅದಕ್ಕಿಂತಲೂ ಕೆಟ್ಟ ಪ್ರತಿಫಲವನ್ನು ಹೊಂದಿರುವವರ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ? ಯಾರನ್ನು ಅಲ್ಲಾಹು ಶಪಿಸಿದನೋ, ಯಾರ ಮೇಲೆ ಅವನು ಸಿಟ್ಟಾದನೋ, ಯಾವ ಗುಂಪಿಗೆ ಸೇರಿದವರನ್ನು ಅವನು ಕಪಿಗಳನ್ನಾಗಿ ಮತ್ತು ಹಂದಿಗಳನ್ನಾಗಿ ಮಾಡಿದನೋ, ಯಾರು ಮಿಥ್ಯ ದೇವರುಗಳನ್ನು ಆರಾಧಿಸಿದರೋ, ಅವರೇ ಅತ್ಯಂತ ತುಚ್ಛ ಸ್ಥಾನದಲ್ಲಿರುವವರು ಮತ್ತು ನೇರಮಾರ್ಗದಿಂದ ಅತಿಯಾಗಿ ತಪ್ಪಿಹೋದವರು.” قُلْ هَلْ أُنَبِّئُكُم بِشَرٍّۢ مِّن ذَٰلِكَ مَثُوبَةً عِندَ ٱللَّهِ ۚ مَن لَّعَنَهُ ٱللَّهُ وَغَضِبَ عَلَيْهِ وَجَعَلَ مِنْهُمُ ٱلْقِرَدَةَ وَٱلْخَنَازِيرَ وَعَبَدَ ٱلطَّٰغُوتَ ۚ أُو۟لَٰٓئِكَ شَرٌّۭ مَّكَانًۭا وَأَضَلُّ عَن سَوَآءِ ٱلسَّبِيلِ. ﴿60﴾
61 ನಿಮ್ಮ ಬಳಿ ಬಂದಾಗ, ಅವರು ಹೇಳುತ್ತಾರೆ: “ನಾವು ವಿಶ್ವಾಸವಿಟ್ಟಿದ್ದೇವೆ.” ವಾಸ್ತವವಾಗಿ ಅವರು ಸತ್ಯನಿಷೇಧದೊಂದಿಗೇ ಬಂದಿದ್ದರು ಮತ್ತು ಅವರು ಸತ್ಯನಿಷೇಧದೊಂದಿಗೇ ಹೊರಟುಹೋದರು. ಅವರು ಅಡಗಿಸಿಡುವ ವಿಷಯಗಳನ್ನು ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ. وَإِذَا جَآءُوكُمْ قَالُوٓا۟ ءَامَنَّا وَقَد دَّخَلُوا۟ بِٱلْكُفْرِ وَهُمْ قَدْ خَرَجُوا۟ بِهِۦ ۚ وَٱللَّهُ أَعْلَمُ بِمَا كَانُوا۟ يَكْتُمُونَ. ﴿61﴾
62 ಅವರಲ್ಲಿ ಹೆಚ್ಚಿನವರೂ ಪಾಪಗಳಲ್ಲಿ, ಅತಿಕ್ರಮಗಳಲ್ಲಿ ಮತ್ತು ನಿಷಿದ್ಧ ಧನವನ್ನು ತಿನ್ನುವುದರಲ್ಲಿ ತ್ವರೆ ಮಾಡುವುದನ್ನು ನೀವು ಕಾಣುವಿರಿ. ಅವರು ಮಾಡುವ ಕರ್ಮಗಳು ಬಹಳ ನಿಕೃಷ್ಟವಾಗಿವೆ! وَتَرَىٰ كَثِيرًۭا مِّنْهُمْ يُسَٰرِعُونَ فِى ٱلْإِثْمِ وَٱلْعُدْوَٰنِ وَأَكْلِهِمُ ٱلسُّحْتَ ۚ لَبِئْسَ مَا كَانُوا۟ يَعْمَلُونَ. ﴿62﴾
63 ಅವರು ಕೆಟ್ಟ ಮಾತುಗಳನ್ನು ಹೇಳುವುದನ್ನು ಮತ್ತು ನಿಷಿದ್ಧ ಧನ ತಿನ್ನುವುದನ್ನು ಅವರಲ್ಲಿರುವ ದೇವನಿಷ್ಠರು ಮತ್ತು ವಿದ್ವಾಂಸರು ಏಕೆ ವಿರೋಧಿಸುವುದಿಲ್ಲ? ಅವರು ಮಾಡುವ ಕೆಲಸಗಳು ಬಹಳ ನಿಕೃಷ್ಟವಾಗಿವೆ. لَوْلَا يَنْهَىٰهُمُ ٱلرَّبَّٰنِيُّونَ وَٱلْأَحْبَارُ عَن قَوْلِهِمُ ٱلْإِثْمَ وَأَكْلِهِمُ ٱلسُّحْتَ ۚ لَبِئْسَ مَا كَانُوا۟ يَصْنَعُونَ. ﴿63﴾
64 “ಅಲ್ಲಾಹನ ಕೈಗಳನ್ನು ಸಂಕೋಲೆಯಿಂದ ಬಂಧಿಸಲಾಗಿದೆ” ಎಂದು ಯಹೂದಿಗಳು ಹೇಳಿದರು.[1] ಅವರ ಕೈಗಳನ್ನೇ ಸಂಕೋಲೆಯಿಂದ ಬಂಧಿಸಲಾಗಿದೆ ಮತ್ತು ಅವರ ಈ ಮಾತಿನಿಂದಾಗಿ ಅವರು ಅಲ್ಲಾಹನ ಶಾಪಕ್ಕೆ ಗುರಿಯಾಗಿದ್ದಾರೆ. ಅಲ್ಲ, ವಾಸ್ತವವಾಗಿ ಅಲ್ಲಾಹನ ಎರಡು ಕೈಗಳೂ ಚಾಚಿಕೊಂಡಿವೆ. ಅವನು ಇಚ್ಛಿಸುವಂತೆ ಅವನು ಖರ್ಚು ಮಾಡುತ್ತಾನೆ. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವು ಅವರಲ್ಲಿ ಹೆಚ್ಚಿನವರಿಗೆ ಅತಿರೇಕ ಮತ್ತು ಸತ್ಯನಿಷೇಧವನ್ನು ಹೆಚ್ಚಿಸುತ್ತಿದೆ. ಪುನರುತ್ಥಾನದ ದಿನದ ತನಕ ನಾವು ಅವರ ನಡುವೆ ವೈರ ಮತ್ತು ದ್ವೇಷವನ್ನು ಉಂಟು ಮಾಡಿದ್ದೇವೆ. ಅವರು ಯುದ್ಧಕ್ಕೆ ಬೆಂಕಿ ಉರಿಸಿದಾಗಲೆಲ್ಲಾ ಅಲ್ಲಾಹು ಅದನ್ನು ನಂದಿಸುತ್ತಾನೆ. ಅವರು ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಪರಿಶ್ರಮಿಸುತ್ತಾರೆ. ಆದರೆ ಅಲ್ಲಾಹು ಕಿಡಿಗೇಡಿಗಳನ್ನು ಇಷ್ಟಪಡುವುದಿಲ್ಲ.
[1] ಬರಗಾಲ ಮತ್ತು ಸಂಕಷ್ಟಗಳು ಸಂಭವಿಸಿದಾಗ, ಅಲ್ಲಾಹನ ಕೈಗಳನ್ನು ಸಂಕೋಲೆಯಿಂದ ಬಂಧಿಸಲಾಗಿದೆಯೆಂದು ಯಹೂದಿಗಳು ಹೇಳುತ್ತಿದ್ದರು.
وَقَالَتِ ٱلْيَهُودُ يَدُ ٱللَّهِ مَغْلُولَةٌ ۚ غُلَّتْ أَيْدِيهِمْ وَلُعِنُوا۟ بِمَا قَالُوا۟ ۘ بَلْ يَدَاهُ مَبْسُوطَتَانِ يُنفِقُ كَيْفَ يَشَآءُ ۚ وَلَيَزِيدَنَّ كَثِيرًۭا مِّنْهُم مَّآ أُنزِلَ إِلَيْكَ مِن رَّبِّكَ طُغْيَٰنًۭا وَكُفْرًۭا ۚ وَأَلْقَيْنَا بَيْنَهُمُ ٱلْعَدَٰوَةَ وَٱلْبَغْضَآءَ إِلَىٰ يَوْمِ ٱلْقِيَٰمَةِ ۚ كُلَّمَآ أَوْقَدُوا۟ نَارًۭا لِّلْحَرْبِ أَطْفَأَهَا ٱللَّهُ ۚ وَيَسْعَوْنَ فِى ٱلْأَرْضِ فَسَادًۭا ۚ وَٱللَّهُ لَا يُحِبُّ ٱلْمُفْسِدِينَ. ﴿64﴾
65 ಗ್ರಂಥದವರು ವಿಶ್ವಾಸವಿಟ್ಟಿದ್ದರೆ ಮತ್ತು ದೇವಭಯದಿಂದ ಜೀವಿಸಿದ್ದರೆ ನಾವು ಅವರ ಪಾಪಗಳನ್ನು ಅಳಿಸುತ್ತಿದ್ದೆವು ಮತ್ತು ಅನುಗ್ರಹಪೂರ್ಣ ಸ್ವರ್ಗೋದ್ಯಾನಗಳಿಗೆ ಅವರನ್ನು ಪ್ರವೇಶ ಮಾಡಿಸುತ್ತಿದ್ದೆವು. وَلَوْ أَنَّ أَهْلَ ٱلْكِتَٰبِ ءَامَنُوا۟ وَٱتَّقَوْا۟ لَكَفَّرْنَا عَنْهُمْ سَيِّـَٔاتِهِمْ وَلَأَدْخَلْنَٰهُمْ جَنَّٰتِ ٱلنَّعِيمِ. ﴿65﴾
66 ಅವರು ತೌರಾತ್, ಇಂಜೀಲ್ ಮತ್ತು ಅವರಿಗೆ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶಗಳನ್ನು ಸರಿಯಾಗಿ ಸಂಸ್ಥಾಪಿಸುತ್ತಿದ್ದರೆ ಅವರ ಮೇಲ್ಭಾಗದಿಂದ ಮತ್ತು ಕಾಲುಗಳ ಅಡಿಭಾಗದಿಂದ ಅವರಿಗೆ ತಿನ್ನಲು ಆಹಾರವು ದೊರೆಯುತ್ತಿತ್ತು. ಅವರಲ್ಲಿ ಮಿತವಾದಿಗಳಾದ ಜನರಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರ ಕರ್ಮಗಳೂ ಅತ್ಯಂತ ನಿಕೃಷ್ಟವಾಗಿವೆ. وَلَوْ أَنَّهُمْ أَقَامُوا۟ ٱلتَّوْرَىٰةَ وَٱلْإِنجِيلَ وَمَآ أُنزِلَ إِلَيْهِم مِّن رَّبِّهِمْ لَأَكَلُوا۟ مِن فَوْقِهِمْ وَمِن تَحْتِ أَرْجُلِهِم ۚ مِّنْهُمْ أُمَّةٌۭ مُّقْتَصِدَةٌۭ ۖ وَكَثِيرٌۭ مِّنْهُمْ سَآءَ مَا يَعْمَلُونَ. ﴿66﴾
67 ಓ ಸಂದೇಶವಾಹಕರೇ! ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವತೀರ್ಣವಾದುದನ್ನು (ಜನರಿಗೆ) ತಲುಪಿಸಿರಿ. ನೀವು ಹಾಗೆ ಮಾಡದಿದ್ದರೆ ನೀವು ಅವನ ಸಂದೇಶವನ್ನು ತಲುಪಿಸಿಲ್ಲ. ಅಲ್ಲಾಹು ನಿಮ್ಮನ್ನು ಜನರಿಂದ ರಕ್ಷಿಸುವನು. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳಾದ ಜನರಿಗೆ ಸನ್ಮಾರ್ಗ ತೋರಿಸುವುದಿಲ್ಲ. ۞ يَٰٓأَيُّهَا ٱلرَّسُولُ بَلِّغْ مَآ أُنزِلَ إِلَيْكَ مِن رَّبِّكَ ۖ وَإِن لَّمْ تَفْعَلْ فَمَا بَلَّغْتَ رِسَالَتَهُۥ ۚ وَٱللَّهُ يَعْصِمُكَ مِنَ ٱلنَّاسِ ۗ إِنَّ ٱللَّهَ لَا يَهْدِى ٱلْقَوْمَ ٱلْكَٰفِرِينَ. ﴿67﴾
68 ಹೇಳಿರಿ: “ಓ ಗ್ರಂಥದವರೇ! ನೀವು ತೌರಾತ್, ಇಂಜೀಲ್ ಮತ್ತು ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶಗಳನ್ನು ಸರಿಯಾಗಿ ಸಂಸ್ಥಾಪಿಸುವ ತನಕ ನಿಮಗೆ ಯಾವುದೇ ಅಸ್ತಿತ್ವವಿಲ್ಲ.” (ಪ್ರವಾದಿಯವರೇ) ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವು ಅವರಲ್ಲಿ ಹೆಚ್ಚಿನವರಿಗೆ ಅತಿರೇಕ ಮತ್ತು ಸತ್ಯನಿಷೇಧವನ್ನು ಹೆಚ್ಚಿಸುತ್ತಿದೆ. ಆದ್ದರಿಂದ ಆ ಸತ್ಯನಿಷೇಧಿಗಳ ಬಗ್ಗೆ ನೀವು ದುಃಖಿಸಬೇಡಿ. قُلْ يَٰٓأَهْلَ ٱلْكِتَٰبِ لَسْتُمْ عَلَىٰ شَىْءٍ حَتَّىٰ تُقِيمُوا۟ ٱلتَّوْرَىٰةَ وَٱلْإِنجِيلَ وَمَآ أُنزِلَ إِلَيْكُم مِّن رَّبِّكُمْ ۗ وَلَيَزِيدَنَّ كَثِيرًۭا مِّنْهُم مَّآ أُنزِلَ إِلَيْكَ مِن رَّبِّكَ طُغْيَٰنًۭا وَكُفْرًۭا ۖ فَلَا تَأْسَ عَلَى ٱلْقَوْمِ ٱلْكَٰفِرِينَ. ﴿68﴾
69 ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಯಹೂದಿಗಳು, ಸಾಬಿಗಳು, ಕ್ರೈಸ್ತರು—ಇವರಲ್ಲಿ ಯಾರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೋ ಮತ್ತು ಸತ್ಕರ್ಮವೆಸಗುತ್ತಾರೋ ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.[1]
[1] 2:62 ವಚನದ ಟಿಪ್ಪಣಿ ನೋಡಿ.
إِنَّ ٱلَّذِينَ ءَامَنُوا۟ وَٱلَّذِينَ هَادُوا۟ وَٱلصَّٰبِـُٔونَ وَٱلنَّصَٰرَىٰ مَنْ ءَامَنَ بِٱللَّهِ وَٱلْيَوْمِ ٱلْءَاخِرِ وَعَمِلَ صَٰلِحًۭا فَلَا خَوْفٌ عَلَيْهِمْ وَلَا هُمْ يَحْزَنُونَ. ﴿69﴾
70 ನಾವು ಇಸ್ರಾಯೇಲ್ ಮಕ್ಕಳಿಂದ ಕರಾರನ್ನು ಪಡೆದೆವು ಮತ್ತು ಅವರ ಬಳಿಗೆ ಸಂದೇಶವಾಹಕರನ್ನು ಕಳುಹಿಸಿದೆವು. ಅವರಿಗೆ ಇಷ್ಟವಿಲ್ಲದ ವಿಷಯಗಳೊಂದಿಗೆ ಸಂದೇಶವಾಹಕರು ಅವರ ಬಳಿಗೆ ಬಂದಾಗಲೆಲ್ಲಾ, ಅವರಲ್ಲಿ ಕೆಲವರನ್ನು ಅವರು ನಿಷೇಧಿಸಿದರು ಮತ್ತು ಕೆಲವರನ್ನು ಕೊಲೆ ಮಾಡಿದರು. لَقَدْ أَخَذْنَا مِيثَٰقَ بَنِىٓ إِسْرَٰٓءِيلَ وَأَرْسَلْنَآ إِلَيْهِمْ رُسُلًۭا ۖ كُلَّمَا جَآءَهُمْ رَسُولٌۢ بِمَا لَا تَهْوَىٰٓ أَنفُسُهُمْ فَرِيقًۭا كَذَّبُوا۟ وَفَرِيقًۭا يَقْتُلُونَ. ﴿70﴾
71 ಯಾವುದೇ ಶಿಕ್ಷೆ ಎರಗುವುದಿಲ್ಲವೆಂದು ಅವರು ಭಾವಿಸಿದರು. ಆದ್ದರಿಂದ ಅವರು ಕುರುಡರು ಮತ್ತು ಕಿವುಡರಾದರು. ನಂತರ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅನಂತರ ಪುನಃ ಅವರಲ್ಲಿ ಹೆಚ್ಚಿನವರು ಕುರುಡರು ಮತ್ತು ಕಿವುಡರಾದರು. ಅಲ್ಲಾಹು ಅವರು ಮಾಡುತ್ತಿರುವುದನ್ನು ನೋಡುತ್ತಿದ್ದಾನೆ. وَحَسِبُوٓا۟ أَلَّا تَكُونَ فِتْنَةٌۭ فَعَمُوا۟ وَصَمُّوا۟ ثُمَّ تَابَ ٱللَّهُ عَلَيْهِمْ ثُمَّ عَمُوا۟ وَصَمُّوا۟ كَثِيرٌۭ مِّنْهُمْ ۚ وَٱللَّهُ بَصِيرٌۢ بِمَا يَعْمَلُونَ. ﴿71﴾
72 “ಮರ್ಯಮರ ಮಗ ಮಸೀಹನೇ ಅಲ್ಲಾಹು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯವನ್ನು ನಿಷೇಧಿಸಿದ್ದಾರೆ. ಆದರೆ ಮಸೀಹರು ಹೇಳಿದ್ದೇನೆಂದರೆ: “ಓ ಇಸ್ರಾಯೇಲ್ ಮಕ್ಕಳೇ! ನೀವು ನನ್ನ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಆರಾಧಿಸಿರಿ.” ಯಾರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾನೋ, ಅವನಿಗೆ ಅಲ್ಲಾಹು ಸ್ವರ್ಗವನ್ನು ಖಂಡಿತ ನಿಷೇಧಿಸಿದ್ದಾನೆ. ಅವನ ವಾಸಸ್ಥಳ ನರಕಾಗ್ನಿಯಾಗಿದೆ.[1] ಅಕ್ರಮಿಗಳಿಗೆ ಯಾವುದೇ ಸಹಾಯಕರಿಲ್ಲ.
[1] ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು ಎಂದರೆ ಅಲ್ಲಾಹನ ಪ್ರಭುತ್ವ, ದೈವತ್ವ ಮತ್ತು ಹೆಸರು ಹಾಗೂ ಗುಣಲಕ್ಷಣಗಳಲ್ಲಿ ಇತರರನ್ನು ಸಹಭಾಗಿಯಾಗಿ ಮಾಡುವುದು. ಈಸಾರನ್ನು ಅಲ್ಲಾಹನ ಮಗ ಅಥವಾ ಅಲ್ಲಾಹು ಎಂದು ಕಲ್ಪಿಸುವುದು ಅಲ್ಲಾಹನೊಂದಿಗೆ ಮಾಡುವ ಸಹಭಾಗಿತ್ವವಾಗಿದೆ. ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡುವವರಿಗೆ ಸ್ವರ್ಗವನ್ನು ನಿಷೇಧಿಸಲಾಗಿದೆ. ಅವರು ಶಾಶ್ವತ ನರಕಶಿಕ್ಷೆಗೆ ಗುರಿಯಾಗುತ್ತಾರೆ.
لَقَدْ كَفَرَ ٱلَّذِينَ قَالُوٓا۟ إِنَّ ٱللَّهَ هُوَ ٱلْمَسِيحُ ٱبْنُ مَرْيَمَ ۖ وَقَالَ ٱلْمَسِيحُ يَٰبَنِىٓ إِسْرَٰٓءِيلَ ٱعْبُدُوا۟ ٱللَّهَ رَبِّى وَرَبَّكُمْ ۖ إِنَّهُۥ مَن يُشْرِكْ بِٱللَّهِ فَقَدْ حَرَّمَ ٱللَّهُ عَلَيْهِ ٱلْجَنَّةَ وَمَأْوَىٰهُ ٱلنَّارُ ۖ وَمَا لِلظَّٰلِمِينَ مِنْ أَنصَارٍۢ. ﴿72﴾
73 “ಅಲ್ಲಾಹು ಮೂವರಲ್ಲಿ ಒಬ್ಬನು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯನಿಷೇಧಿಗಳಾಗಿದ್ದಾರೆ.[1] ಆದರೆ ಏಕೈಕ ಆರಾಧ್ಯನಾದ ಅಲ್ಲಾಹನ ಹೊರತು ಅನ್ಯ ದೇವರಿಲ್ಲ. ಅವರು ಹಾಗೆ ಹೇಳುವುದನ್ನು ನಿಲ್ಲಿಸದಿದ್ದರೆ, ಅವರಲ್ಲಿರುವ ಸತ್ಯನಿಷೇಧಿಗಳನ್ನು ಯಾತನಾಮಯ ಶಿಕ್ಷೆಯು ಸ್ಪರ್ಶಿಸುವುದು ನಿಶ್ಚಿತ.
[1] ಕ್ರೈಸ್ತರಲ್ಲಿ ಕೆಲವರು ತ್ರಿಯೇಕತ್ವದ ಪರಿಕಲ್ಪನೆಯನ್ನು ಹೊಂದಿದ್ದಾರೆ. ಅಂದರೆ ತಂದೆ (ಅಲ್ಲಾಹು), ಮಗ (ಈಸಾ) ಮತ್ತು ಪವಿತ್ರಾತ್ಮ (ಜಿಬ್ರೀಲ್) ಎಲ್ಲರೂ ದೇವರು ಎಂಬ ಪರಿಕಲ್ಪನೆ.
لَّقَدْ كَفَرَ ٱلَّذِينَ قَالُوٓا۟ إِنَّ ٱللَّهَ ثَالِثُ ثَلَٰثَةٍۢ ۘ وَمَا مِنْ إِلَٰهٍ إِلَّآ إِلَٰهٌۭ وَٰحِدٌۭ ۚ وَإِن لَّمْ يَنتَهُوا۟ عَمَّا يَقُولُونَ لَيَمَسَّنَّ ٱلَّذِينَ كَفَرُوا۟ مِنْهُمْ عَذَابٌ أَلِيمٌ. ﴿73﴾
74 ಅವರಿಗೆ ಅಲ್ಲಾಹನ ಕಡೆಗೆ ಪಶ್ಚಾತ್ತಾಪದಿಂದ ಮರಳಿ ಅವನಲ್ಲಿ ಕ್ಷಮೆಯಾಚಿಸಬಾರದೇ? ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. أَفَلَا يَتُوبُونَ إِلَى ٱللَّهِ وَيَسْتَغْفِرُونَهُۥ ۚ وَٱللَّهُ غَفُورٌۭ رَّحِيمٌۭ. ﴿74﴾
75 ಮರ್ಯಮರ ಮಗ ಮಸೀಹರು ಒಬ್ಬ ಸಂದೇಶವಾಹಕರು ಮಾತ್ರ. ಅವರಿಗಿಂತ ಮೊದಲು ಅನೇಕ ಸಂದೇಶವಾಹಕರು ಬಂದು ಹೋಗಿದ್ದಾರೆ. ಅವರ ತಾಯಿ ಸತ್ಯವಂತೆ. ಅವರಿಬ್ಬರೂ ಆಹಾರ ಸೇವಿಸುತ್ತಿದ್ದರು. ನಾವು ಅವರಿಗೆ ಹೇಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆಂದು ನೋಡಿ. ನಂತರ ಅವರು ಹೇಗೆ (ಸತ್ಯದಿಂದ) ತಪ್ಪಿಹೋಗುತ್ತಿದ್ದಾರೆಂದು ನೋಡಿ.[1]
[1] ಈಸಾ (ಯೇಸು) ದೇವರಲ್ಲ ಎನ್ನುವುದಕ್ಕೆ ಇದು ಸ್ಪಷ್ಟ ಸಾಕ್ಷ್ಯವಾಗಿದೆ. ದೇವನು ನಿರಪೇಕ್ಷ. ಅವನು ಹಸಿವೆ, ನಿದ್ದೆ ಮುಂತಾದ ಮನುಷ್ಯ ಗುಣಗಳಿಂದ ಮುಕ್ತನಾಗಿದ್ದಾನೆ. ಹಸಿವೆಯಿರುವವನು, ಆಹಾರ ಸೇವಿಸುವವನು ದೇವನಾಗಲು ಸಾಧ್ಯವಿಲ್ಲ. ಏಕೆಂದರೆ ಅದು ದೈವಿಕ ಗುಣಕ್ಕೆ ವಿರುದ್ಧವಾಗಿದೆ.
مَّا ٱلْمَسِيحُ ٱبْنُ مَرْيَمَ إِلَّا رَسُولٌۭ قَدْ خَلَتْ مِن قَبْلِهِ ٱلرُّسُلُ وَأُمُّهُۥ صِدِّيقَةٌۭ ۖ كَانَا يَأْكُلَانِ ٱلطَّعَامَ ۗ ٱنظُرْ كَيْفَ نُبَيِّنُ لَهُمُ ٱلْءَايَٰتِ ثُمَّ ٱنظُرْ أَنَّىٰ يُؤْفَكُونَ. ﴿75﴾
76 ಹೇಳಿರಿ: “ನೀವು ಅಲ್ಲಾಹನನ್ನು ಬಿಟ್ಟು, ನಿಮಗೆ ಉಪಕಾರ ಅಥವಾ ತೊಂದರೆ ಮಾಡದವುಗಳನ್ನು ಆರಾಧಿಸುತ್ತಿದ್ದೀರಾ? ಅಲ್ಲಾಹನಾದರೋ ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.” قُلْ أَتَعْبُدُونَ مِن دُونِ ٱللَّهِ مَا لَا يَمْلِكُ لَكُمْ ضَرًّۭا وَلَا نَفْعًۭا ۚ وَٱللَّهُ هُوَ ٱلسَّمِيعُ ٱلْعَلِيمُ. ﴿76﴾
77 ಹೇಳಿರಿ: “ಓ ಗ್ರಂಥದವರೇ! ನೀವು ನಿಮ್ಮ ಧರ್ಮದಲ್ಲಿ ಸತ್ಯಕ್ಕೆ ವಿರುದ್ಧವಾಗಿ ಹದ್ದುಮೀರಬೇಡಿ. ಈಗಾಗಲೇ ದಾರಿತಪ್ಪಿರುವ, ಅನೇಕ ಜನರನ್ನು ದಾರಿತಪ್ಪಿಸುತ್ತಿರುವ ಮತ್ತು ನೇರಮಾರ್ಗದಿಂದ ತಪ್ಪಿಹೋಗಿರುವ ಜನರ ಸ್ವೇಚ್ಛಾಚಾರಗಳನ್ನು ಹಿಂಬಾಲಿಸಬೇಡಿ. قُلْ يَٰٓأَهْلَ ٱلْكِتَٰبِ لَا تَغْلُوا۟ فِى دِينِكُمْ غَيْرَ ٱلْحَقِّ وَلَا تَتَّبِعُوٓا۟ أَهْوَآءَ قَوْمٍۢ قَدْ ضَلُّوا۟ مِن قَبْلُ وَأَضَلُّوا۟ كَثِيرًۭا وَضَلُّوا۟ عَن سَوَآءِ ٱلسَّبِيلِ. ﴿77﴾
78 ಇಸ್ರಾಯೇಲ್ ಮಕ್ಕಳಲ್ಲಿರುವ ಸತ್ಯನಿಷೇಧಿಗಳು ದಾವೂದರ ಮತ್ತು ಮರ್ಯಮರ ಮಗ ಈಸಾರ ನಾಲಗೆಯಿಂದ ಶಾಪಕ್ಕೆ ಗುರಿಯಾಗಿದ್ದಾರೆ. ಅದು ಅವರು ಅವಿಧೇಯತೆ ತೋರಿದ ಮತ್ತು ಅತಿರೇಕವೆಸಗಿದ ಕಾರಣದಿಂದಾಗಿದೆ. لُعِنَ ٱلَّذِينَ كَفَرُوا۟ مِنۢ بَنِىٓ إِسْرَٰٓءِيلَ عَلَىٰ لِسَانِ دَاوُۥدَ وَعِيسَى ٱبْنِ مَرْيَمَ ۚ ذَٰلِكَ بِمَا عَصَوا۟ وَّكَانُوا۟ يَعْتَدُونَ. ﴿78﴾
79 ಅವರು ಮಾಡುತ್ತಿದ್ದ ದುಷ್ಕರ್ಮಗಳನ್ನು ಅವರು ಪರಸ್ಪರ ವಿರೋಧಿಸುತ್ತಿರಲಿಲ್ಲ. ಅವರು ಮಾಡುವ ಕರ್ಮಗಳು ಬಹಳ ನಿಕೃಷ್ಟವಾಗಿವೆ. كَانُوا۟ لَا يَتَنَاهَوْنَ عَن مُّنكَرٍۢ فَعَلُوهُ ۚ لَبِئْسَ مَا كَانُوا۟ يَفْعَلُونَ. ﴿79﴾
80 ಅವರಲ್ಲಿ ಹೆಚ್ಚಿನವರು ಸತ್ಯನಿಷೇಧಿಗಳನ್ನು ಆಪ್ತಮಿತ್ರರಾಗಿ ಸ್ವೀಕರಿಸುವುದನ್ನು ನೀವು ಕಾಣುವಿರಿ. ಅವರು ಸ್ವತಃ ಅವರಿಗಾಗಿ ಮುಂದಕ್ಕೆ ಕಳುಹಿಸಿರುವ ಕರ್ಮಗಳು ಬಹಳ ನಿಕೃಷ್ಟವಾಗಿವೆ. (ಇದರಿಂದಾಗಿ) ಅವರು ಅಲ್ಲಾಹನ ಕೋಪಕ್ಕೆ ಪಾತ್ರರಾದರು ಮತ್ತು ಅವರು ಶಾಶ್ವತ ಶಿಕ್ಷೆಯನ್ನು ಅನುಭವಿಸುವರು. تَرَىٰ كَثِيرًۭا مِّنْهُمْ يَتَوَلَّوْنَ ٱلَّذِينَ كَفَرُوا۟ ۚ لَبِئْسَ مَا قَدَّمَتْ لَهُمْ أَنفُسُهُمْ أَن سَخِطَ ٱللَّهُ عَلَيْهِمْ وَفِى ٱلْعَذَابِ هُمْ خَٰلِدُونَ. ﴿80﴾
81 ಅವರು ಅಲ್ಲಾಹನಲ್ಲಿ, ಪ್ರವಾದಿಯಲ್ಲಿ ಮತ್ತು ಅವರಿಗೆ (ಪ್ರವಾದಿಗೆ) ಅವತೀರ್ಣವಾಗಿರುವುದರಲ್ಲಿ ವಿಶ್ವಾಸವಿಡುತ್ತಿದ್ದರೆ ಅವರನ್ನು (ಸತ್ಯನಿಷೇಧಿಗಳನ್ನು) ಆಪ್ತಮಿತ್ರರಾಗಿ ಸ್ವೀಕರಿಸುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರು ದುಷ್ಕರ್ಮಿಗಳಾಗಿದ್ದಾರೆ. وَلَوْ كَانُوا۟ يُؤْمِنُونَ بِٱللَّهِ وَٱلنَّبِىِّ وَمَآ أُنزِلَ إِلَيْهِ مَا ٱتَّخَذُوهُمْ أَوْلِيَآءَ وَلَٰكِنَّ كَثِيرًۭا مِّنْهُمْ فَٰسِقُونَ. ﴿81﴾
82 ಯಹೂದಿಗಳು ಮತ್ತು ಬಹುದೇವಾರಾಧಕರು ಸತ್ಯವಿಶ್ವಾಸಿಗಳ ಕಡುವೈರಿಗಳಾಗಿರುವುದನ್ನು ನೀವು ಕಾಣುವಿರಿ. “ನಾವು ಕ್ರೈಸ್ತರು” ಎಂದು ಹೇಳುವವರು ಸತ್ಯವಿಶ್ವಾಸಿಗಳೊಂದಿಗೆ ಅತಿಹತ್ತಿರದ ಮಮತೆಯುಳ್ಳವರಾಗಿ ಕಾಣುವಿರಿ. ಅವರಲ್ಲಿ ವಿದ್ವಾಂಸರು ಮತ್ತು ಸನ್ಯಾಸಿಗಳಿದ್ದಾರೆ ಮತ್ತು ಅವರು ಅಹಂಕಾರಿಗಳಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. ۞ لَتَجِدَنَّ أَشَدَّ ٱلنَّاسِ عَدَٰوَةًۭ لِّلَّذِينَ ءَامَنُوا۟ ٱلْيَهُودَ وَٱلَّذِينَ أَشْرَكُوا۟ ۖ وَلَتَجِدَنَّ أَقْرَبَهُم مَّوَدَّةًۭ لِّلَّذِينَ ءَامَنُوا۟ ٱلَّذِينَ قَالُوٓا۟ إِنَّا نَصَٰرَىٰ ۚ ذَٰلِكَ بِأَنَّ مِنْهُمْ قِسِّيسِينَ وَرُهْبَانًۭا وَأَنَّهُمْ لَا يَسْتَكْبِرُونَ. ﴿82﴾
83 ಸಂದೇಶವಾಹಕರಿಗೆ ಅವತೀರ್ಣವಾದ ಸಂದೇಶಕ್ಕೆ ಕಿವಿಗೊಟ್ಟಾಗ, ಸತ್ಯವನ್ನು ತಿಳಿದು ಅವರ ಕಣ್ಣುಗಳಿಂದ ಕಣ್ಣೀರು ಹರಿಯುವುದನ್ನು ನೀವು ಕಾಣುವಿರಿ. ಅವರು ಹೇಳುವರು: “ಓ ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಸತ್ಯಕ್ಕೆ ಸಾಕ್ಷಿಯಾದವರಲ್ಲಿ ನಮ್ಮನ್ನೂ ಸೇರಿಸು. وَإِذَا سَمِعُوا۟ مَآ أُنزِلَ إِلَى ٱلرَّسُولِ تَرَىٰٓ أَعْيُنَهُمْ تَفِيضُ مِنَ ٱلدَّمْعِ مِمَّا عَرَفُوا۟ مِنَ ٱلْحَقِّ ۖ يَقُولُونَ رَبَّنَآ ءَامَنَّا فَٱكْتُبْنَا مَعَ ٱلشَّٰهِدِينَ. ﴿83﴾
84 ಅಲ್ಲಾಹನಲ್ಲಿ ಮತ್ತು ನಮಗೆ ಬಂದ ಸಂದೇಶದಲ್ಲಿ ವಿಶ್ವಾಸವಿಡದಿರಲು ನಮಗೇನಾಗಿದೆ? ನಮ್ಮ ಪರಿಪಾಲಕನು (ಅಲ್ಲಾಹು) ನಮ್ಮನ್ನು ನೀತಿವಂತರೊಂದಿಗೆ ಸ್ವರ್ಗ ಪ್ರವೇಶ ಮಾಡಿಸಬೇಕೆಂದು ನಾವು ಆಸೆಪಡುತ್ತೇವೆ.” وَمَا لَنَا لَا نُؤْمِنُ بِٱللَّهِ وَمَا جَآءَنَا مِنَ ٱلْحَقِّ وَنَطْمَعُ أَن يُدْخِلَنَا رَبُّنَا مَعَ ٱلْقَوْمِ ٱلصَّٰلِحِينَ. ﴿84﴾
85 ಅವರು ಹೇಳಿದ ಮಾತಿನಿಂದಾಗಿ ಅಲ್ಲಾಹು ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಪ್ರತಿಫಲವಾಗಿ ನೀಡಿದನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಒಳಿತು ಮಾಡುವವರಿಗಿರುವ ಪ್ರತಿಫಲವಾಗಿದೆ. فَأَثَٰبَهُمُ ٱللَّهُ بِمَا قَالُوا۟ جَنَّٰتٍۢ تَجْرِى مِن تَحْتِهَا ٱلْأَنْهَٰرُ خَٰلِدِينَ فِيهَا ۚ وَذَٰلِكَ جَزَآءُ ٱلْمُحْسِنِينَ. ﴿85﴾
86 ಸತ್ಯನಿಷೇಧಿಗಳು ಮತ್ತು ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ ಅವರೇ ನರಕವಾಸಿಗಳು. وَٱلَّذِينَ كَفَرُوا۟ وَكَذَّبُوا۟ بِـَٔايَٰتِنَآ أُو۟لَٰٓئِكَ أَصْحَٰبُ ٱلْجَحِيمِ. ﴿86﴾
87 ಓ ಸತ್ಯವಿಶ್ವಾಸಿಗಳೇ! ಅಲ್ಲಾಹು ನಿಮಗೆ ಅನುಮತಿಸಿದ ಉತ್ತಮ ವಸ್ತುಗಳನ್ನು ನಿಷೇಧಿಸಬೇಡಿ ಮತ್ತು ಎಲ್ಲೆ ಮೀರಬೇಡಿ. ನಿಶ್ಚಯವಾಗಿಯೂ ಎಲ್ಲೆ ಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ. يَٰٓأَيُّهَا ٱلَّذِينَ ءَامَنُوا۟ لَا تُحَرِّمُوا۟ طَيِّبَٰتِ مَآ أَحَلَّ ٱللَّهُ لَكُمْ وَلَا تَعْتَدُوٓا۟ ۚ إِنَّ ٱللَّهَ لَا يُحِبُّ ٱلْمُعْتَدِينَ. ﴿87﴾
88 ಅಲ್ಲಾಹು ನಿಮಗೆ ಒದಗಿಸಿದ ಧರ್ಮಸಮ್ಮತ ಮತ್ತು ಶುದ್ಧ ವಸ್ತುಗಳನ್ನು ತಿನ್ನಿರಿ. ಯಾರ ಮೇಲೆ ನೀವು ವಿಶ್ವಾಸವಿಡುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ. وَكُلُوا۟ مِمَّا رَزَقَكُمُ ٱللَّهُ حَلَٰلًۭا طَيِّبًۭا ۚ وَٱتَّقُوا۟ ٱللَّهَ ٱلَّذِىٓ أَنتُم بِهِۦ مُؤْمِنُونَ. ﴿88﴾
89 ನೀವು ಅರ್ಥವಿಲ್ಲದೆ[1] ಮಾಡುವ ಪ್ರತಿಜ್ಞೆಗಳಿಗಾಗಿ ಅಲ್ಲಾಹು ನಿಮ್ಮನ್ನು ಹಿಡಿಯುವುದಿಲ್ಲ. ಆದರೆ ನೀವು ದೃಢನಿರ್ಧಾರದಿಂದ ಮಾಡಿದ ಪ್ರತಿಜ್ಞೆಗಳಿಗಾಗಿ ಅವನು ನಿಮ್ಮನ್ನು ಹಿಡಿಯುತ್ತಾನೆ. ಅದಕ್ಕೆ ಪರಿಹಾರವೇನೆಂದರೆ, ಹತ್ತು ಮಂದಿ ಬಡವರಿಗೆ ನೀವು ನಿಮ್ಮ ಮನೆಯವರಿಗೆ ಉಣಿಸುವ ಮಧ್ಯಮ ರೀತಿಯ ಆಹಾರವನ್ನು ಉಣಿಸುವುದು, ಅಥವಾ ಅವರಿಗೆ ಬಟ್ಟೆ-ಬರೆ ನೀಡುವುದು, ಅಥವಾ ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸುವುದು. ಯಾರಿಗೆ ಇದು ಸಾಧ್ಯವಿಲ್ಲವೋ ಅವನು ಮೂರು ದಿನ ಉಪವಾಸ ಆಚರಿಸಬೇಕು. ಇದು ನೀವು ನಿಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ನೀಡಬೇಕಾದ ಪರಿಹಾರವಾಗಿದೆ. ನಿಮ್ಮ ಪ್ರತಿಜ್ಞೆಗಳನ್ನು ಕಾಯ್ದುಕೊಳ್ಳಿರಿ. ಹೀಗೆ ಅಲ್ಲಾಹು ನಿಮಗೆ ಅವನ ವಚನಗಳನ್ನು ವಿವರಿಸಿಕೊಡುತ್ತಾನೆ. ನೀವು ಕೃತಜ್ಞರಾಗುವುದಕ್ಕಾಗಿ.
[1] ಅಂದರೆ ದೃಢನಿರ್ಧಾರವಿಲ್ಲದೆ ಅಭ್ಯಾಸಬಲದಿಂದ ಮಾಡುವ ಪ್ರತಿಜ್ಞೆಗಳು.
لَا يُؤَاخِذُكُمُ ٱللَّهُ بِٱللَّغْوِ فِىٓ أَيْمَٰنِكُمْ وَلَٰكِن يُؤَاخِذُكُم بِمَا عَقَّدتُّمُ ٱلْأَيْمَٰنَ ۖ فَكَفَّٰرَتُهُۥٓ إِطْعَامُ عَشَرَةِ مَسَٰكِينَ مِنْ أَوْسَطِ مَا تُطْعِمُونَ أَهْلِيكُمْ أَوْ كِسْوَتُهُمْ أَوْ تَحْرِيرُ رَقَبَةٍۢ ۖ فَمَن لَّمْ يَجِدْ فَصِيَامُ ثَلَٰثَةِ أَيَّامٍۢ ۚ ذَٰلِكَ كَفَّٰرَةُ أَيْمَٰنِكُمْ إِذَا حَلَفْتُمْ ۚ وَٱحْفَظُوٓا۟ أَيْمَٰنَكُمْ ۚ كَذَٰلِكَ يُبَيِّنُ ٱللَّهُ لَكُمْ ءَايَٰتِهِۦ لَعَلَّكُمْ تَشْكُرُونَ. ﴿89﴾
90 ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ಮದ್ಯ, ಜೂಜು, ಬಲಿಪೀಠಗಳು ಮತ್ತು ಅದೃಷ್ಟ ಪರೀಕ್ಷಿಸುವ ಬಾಣಗಳು ಪೈಶಾಚಿಕವಾದ ಹೊಲಸು ಕೃತ್ಯಗಳಾಗಿವೆ. ಆದ್ದರಿಂದ ನೀವು ಅವುಗಳಿಂದ ದೂರವಿರಿ. ನೀವು ಯಶಸ್ವಿಯಾಗುವುದಕ್ಕಾಗಿ.[1]
[1] ಅಮಲು ಪದಾರ್ಥಗಳೆಲ್ಲವೂ ಮದ್ಯದ ವ್ಯಾಪ್ತಿಯಲ್ಲಿ ಬರುತ್ತವೆ. ಲಾಟರಿ, ಮಟ್ಕಾ ಮುಂತಾದ ಹಣವಿಟ್ಟು ಆಡುವ ಆಟಗಳೆಲ್ಲವೂ ಜೂಜಿನ ವ್ಯಾಪ್ತಿಯಲ್ಲಿ ಬರುತ್ತವೆ. ಬಲಿಪೀಠಗಳು ಎಂದರೆ ಬಹುದೇವಾರಾಧಕರು ತಮ್ಮ ವಿಗ್ರಹಗಳಿಗೆ ಬಲಿ ನೀಡುವ ಪೀಠಗಳು. ಅದೃಷ್ಟ ಪರೀಕ್ಷಿಸುವ ಬಾಣಗಳು ಎಂದರೆ ಶುಭ ಮತ್ತು ಅಶುಭವನ್ನು ಪರೀಕ್ಷಿಸುವುದಕ್ಕಾಗಿ ಚೀಟಿಯೆತ್ತುವುದು. ಶುಭ ಎಂದು ಬಂದರೆ ಕೆಲಸದಲ್ಲಿ ಮುಂದುವರಿಯುವುದು ಮತ್ತು ಅಶುಭ ಎಂದು ಬಂದರೆ ಕೆಲಸವನ್ನು ಮೊಟಕುಗೊಳಿಸುವುದು.
يَٰٓأَيُّهَا ٱلَّذِينَ ءَامَنُوٓا۟ إِنَّمَا ٱلْخَمْرُ وَٱلْمَيْسِرُ وَٱلْأَنصَابُ وَٱلْأَزْلَٰمُ رِجْسٌۭ مِّنْ عَمَلِ ٱلشَّيْطَٰنِ فَٱجْتَنِبُوهُ لَعَلَّكُمْ تُفْلِحُونَ. ﴿90﴾
91 ಮದ್ಯ ಮತ್ತು ಜೂಜಿನ ಮೂಲಕ ನಿಮ್ಮ ನಡುವೆ ವೈರ ಹಾಗೂ ದ್ವೇಷವನ್ನು ಬಿತ್ತಲು ಮತ್ತು ನಿಮ್ಮನ್ನು ಅಲ್ಲಾಹನ ಸ್ಮರಣೆ ಹಾಗೂ ನಮಾಝ್‍ನಿಂದ ತಡೆಯಲು ಶೈತಾನನು ಬಯಸುತ್ತಾನೆ. ಆದ್ದರಿಂದ (ಇನ್ನಾದರೂ) ನೀವು ಅದನ್ನು ನಿಲ್ಲಿಸುವಿರಾ? إِنَّمَا يُرِيدُ ٱلشَّيْطَٰنُ أَن يُوقِعَ بَيْنَكُمُ ٱلْعَدَٰوَةَ وَٱلْبَغْضَآءَ فِى ٱلْخَمْرِ وَٱلْمَيْسِرِ وَيَصُدَّكُمْ عَن ذِكْرِ ٱللَّهِ وَعَنِ ٱلصَّلَوٰةِ ۖ فَهَلْ أَنتُم مُّنتَهُونَ. ﴿91﴾
92 ನೀವು ಅಲ್ಲಾಹನ ಆಜ್ಞೆಗಳನ್ನು ಮತ್ತು ಸಂದೇಶವಾಹಕರ ಆಜ್ಞೆಗಳನ್ನು ಪಾಲಿಸಿರಿ ಮತ್ತು ಜಾಗರೂಕರಾಗಿರಿ. ನೀವು ವಿಮುಖರಾದರೆ ತಿಳಿಯಿರಿ! ನಮ್ಮ ಸಂದೇಶವಾಹಕರ ಕರ್ತವ್ಯವು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರವಾಗಿದೆ. وَأَطِيعُوا۟ ٱللَّهَ وَأَطِيعُوا۟ ٱلرَّسُولَ وَٱحْذَرُوا۟ ۚ فَإِن تَوَلَّيْتُمْ فَٱعْلَمُوٓا۟ أَنَّمَا عَلَىٰ رَسُولِنَا ٱلْبَلَٰغُ ٱلْمُبِينُ. ﴿92﴾
93 ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಈ ಹಿಂದೆ ಏನು ಸೇವಿಸಿದ್ದಾರೋ ಅದರಲ್ಲಿ ಅವರಿಗೆ ದೋಷವಿಲ್ಲ—ಅವರು ಅಲ್ಲಾಹನನ್ನು ಭಯಪಟ್ಟು, ವಿಶ್ವಾಸವಿಟ್ಟು, ಸತ್ಕರ್ಮವೆಸಗಿದರೆ, ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ವಿಶ್ವಾಸವಿಟ್ಟರೆ ಮತ್ತು ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ಒಳಿತು ಮಾಡಿದರೆ. ಒಳಿತು ಮಾಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.[1]
[1] ಇಸ್ಲಾಮ್ ಮದ್ಯಪಾನವನ್ನು ಹಂತ ಹಂತವಾಗಿ ನಿಷೇಧಿಸಿತು. ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಮೊದಲು ಅದರ ಹಾನಿಗಳ ಬಗ್ಗೆ ಎಚ್ಚರಿಸಲಾಯಿತು. ಪಾನಮತ್ತರಾದ ಸ್ಥಿತಿಯಲ್ಲಿ ನಮಾಝ್ ಮಾಡುವುದನ್ನು ವಿರೋಧಿಸಲಾಯಿತು. ಇನ್ನಾದರೂ ನೀವು ಅದನ್ನು ನಿಲ್ಲಿಸುವಿರಾ ಎಂಬ ವಚನದ (91) ಮೂಲಕ ಸಂಪೂರ್ಣ ಪಾನನಿಷೇಧ ಜಾರಿಗೆ ಬಂತು. ಪಾನನಿಷೇಧ ಸಂಪೂರ್ಣ ಜಾರಿಯಾಗುವ ಮೊದಲು ಮದ್ಯಪಾನ ಮಾಡಿದವರಿಗೆ ಶಿಕ್ಷೆಯಿಲ್ಲ ಎಂದು ಈ ವಚನವು ಸ್ಪಷ್ಟಪಡಿಸುತ್ತದೆ.
لَيْسَ عَلَى ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ جُنَاحٌۭ فِيمَا طَعِمُوٓا۟ إِذَا مَا ٱتَّقَوا۟ وَّءَامَنُوا۟ وَعَمِلُوا۟ ٱلصَّٰلِحَٰتِ ثُمَّ ٱتَّقَوا۟ وَّءَامَنُوا۟ ثُمَّ ٱتَّقَوا۟ وَّأَحْسَنُوا۟ ۗ وَٱللَّهُ يُحِبُّ ٱلْمُحْسِنِينَ. ﴿93﴾
94 ಓ ಸತ್ಯವಿಶ್ವಾಸಿಗಳೇ! ಅದೃಶ್ಯ ಸ್ಥಿತಿಯಲ್ಲಿ ಅಲ್ಲಾಹನನ್ನು ಭಯಪಡುವವರು ಯಾರೆಂದು ತಿಳಿಯಲು, ನಿಮ್ಮ ಕೈಗಳು ಮತ್ತು ಈಟಿಗಳು ತಲುಪುವ ರೀತಿಯಲ್ಲಿರುವ ಬೇಟೆ ಪ್ರಾಣಿಯ ಮೂಲಕ ಅಲ್ಲಾಹು ನಿಮ್ಮನ್ನು ಖಂಡಿತ ಪರೀಕ್ಷಿಸುವನು. ಅದರ ಬಳಿಕವೂ ಯಾರಾದರೂ ಅತಿರೇಕವೆಸಗಿದರೆ ಅವನಿಗೆ ಯಾತನಾಮಯ ಶಿಕ್ಷೆಯಿದೆ. يَٰٓأَيُّهَا ٱلَّذِينَ ءَامَنُوا۟ لَيَبْلُوَنَّكُمُ ٱللَّهُ بِشَىْءٍۢ مِّنَ ٱلصَّيْدِ تَنَالُهُۥٓ أَيْدِيكُمْ وَرِمَاحُكُمْ لِيَعْلَمَ ٱللَّهُ مَن يَخَافُهُۥ بِٱلْغَيْبِ ۚ فَمَنِ ٱعْتَدَىٰ بَعْدَ ذَٰلِكَ فَلَهُۥ عَذَابٌ أَلِيمٌۭ. ﴿94﴾
95 ಓ ಸತ್ಯವಿಶ್ವಾಸಿಗಳೇ! ನೀವು ಇಹ್ರಾಮ್‍ನಲ್ಲಿರುವಾಗ ಬೇಟೆಯಾಡಿ ಪ್ರಾಣಿಯನ್ನು ಕೊಲ್ಲಬೇಡಿ. ನಿಮ್ಮಲ್ಲಿ ಯಾರಾದರೂ ಉದ್ದೇಶಪೂರ್ವಕ ಬೇಟೆಯಾಡಿ ಪ್ರಾಣಿಯನ್ನು ಕೊಂದರೆ, ಅದಕ್ಕಿರುವ ಪರಿಹಾರವು ಅವನು ಕೊಂದ ಮೃಗವನ್ನು ಹೋಲುತ್ತದೆಯೆಂದು ಇಬ್ಬರು ನ್ಯಾಯಸಮ್ಮತ ಜನರು ತೀರ್ಪು ನೀಡುವ ಪ್ರಾಣಿಯನ್ನು ಕಅಬಾಲಯಕ್ಕೆ ಹರಕೆಯ ರೂಪದಲ್ಲಿ ತಲುಪುವ ಬಲಿಮೃಗವಾಗಿ ನೀಡುವುದು; ಅಥವಾ ಅದಕ್ಕೆ ಪರಿಹಾರವಾಗಿ ಬಡವರಿಗೆ ಅನ್ನದಾನ ಮಾಡುವುದು; ಅಥವಾ ಅದಕ್ಕೆ ಸಮಾನವಾಗುವಷ್ಟು ಸಂಖ್ಯೆಯ ಉಪವಾಸ ಆಚರಿಸುವುದು.[1] ಅದು ಅವನು ಮಾಡಿದ ಕರ್ಮದ ಫಲವನ್ನು ಅವನು ಅನುಭವಿಸಲಿಕ್ಕಾಗಿ. ಈ ಹಿಂದೆ ಸಂಭವಿಸಿದ ತಪ್ಪುಗಳನ್ನು ಅಲ್ಲಾಹು ಕ್ಷಮಿಸಿದ್ದಾನೆ. ಆದರೆ ಯಾರಾದರೂ ಅದನ್ನು ಪುನರಾವರ್ತಿಸಿದರೆ, ಅಲ್ಲಾಹು ಅವನಿಂದ ಪ್ರತೀಕಾರವನ್ನು ಪಡೆಯುವನು. ಅಲ್ಲಾಹು ಪ್ರಬಲನು ಮತ್ತು ಪ್ರತೀಕಾರ ಪಡೆಯುವವನಾಗಿದ್ದಾನೆ.
[1] ಇಹ್ರಾಮ್‌ನಲ್ಲಿರುವಾಗ ಉದ್ದೇಶಪೂರ್ವಕ ಬೇಟೆಯಾಡಿದರೆ, ಅದಕ್ಕೆ ನೀಡಬೇಕಾದ ಪರಿಹಾರವೇನೆಂದರೆ, ಕೊಂದ ಪ್ರಾಣಿಗೆ ಸಮಾನವೆಂದು ಇಬ್ಬರು ನ್ಯಾಯಸಮ್ಮತ ವ್ಯಕ್ತಿಗಳು ತೀರ್ಪು ನೀಡುವ ಜಾನುವಾರನ್ನು (ಕುರಿ, ಹಸು, ಒಂಟೆ) ಬಲಿ ನೀಡಿ ಹರಮ್‌ನಲ್ಲಿರುವ ಬಡವರಿಗೆ ಹಂಚುವುದು. ಸಮಾನವಾದ ಜಾನುವಾರು ಸಿಗದಿದ್ದರೆ, ಆ ಜಾನುವಾರಿನ ಮೌಲ್ಯದ ಆಹಾರವನ್ನು ಒಬ್ಬ ಬಡವನಿಗೆ ಅರ್ಧ ಸಾಅ್ ಎಂಬಂತೆ ದಾನ ಮಾಡುವುದು. ಅಥವಾ ಪ್ರತಿ ಅರ್ಧ ಸಾಅ್‌ಗೆ ಒಂದು ಉಪವಾಸ ಎಂಬಂತೆ ಉಪವಾಸ ಆಚರಿಸುವುದು.
يَٰٓأَيُّهَا ٱلَّذِينَ ءَامَنُوا۟ لَا تَقْتُلُوا۟ ٱلصَّيْدَ وَأَنتُمْ حُرُمٌۭ ۚ وَمَن قَتَلَهُۥ مِنكُم مُّتَعَمِّدًۭا فَجَزَآءٌۭ مِّثْلُ مَا قَتَلَ مِنَ ٱلنَّعَمِ يَحْكُمُ بِهِۦ ذَوَا عَدْلٍۢ مِّنكُمْ هَدْيًۢا بَٰلِغَ ٱلْكَعْبَةِ أَوْ كَفَّٰرَةٌۭ طَعَامُ مَسَٰكِينَ أَوْ عَدْلُ ذَٰلِكَ صِيَامًۭا لِّيَذُوقَ وَبَالَ أَمْرِهِۦ ۗ عَفَا ٱللَّهُ عَمَّا سَلَفَ ۚ وَمَنْ عَادَ فَيَنتَقِمُ ٱللَّهُ مِنْهُ ۗ وَٱللَّهُ عَزِيزٌۭ ذُو ٱنتِقَامٍ. ﴿95﴾
96 ನಿಮಗೆ ಸಮುದ್ರ ಬೇಟೆ ಮತ್ತು ಅದರ ಆಹಾರವು ಧರ್ಮಸಮ್ಮತವಾಗಿದೆ. ಇದು ನಿಮಗೆ ಮತ್ತು ಪ್ರಯಾಣಿಕರಿಗೆ ಒಂದು ಅನುಕೂಲವಾಗಿರುವುದಕ್ಕಾಗಿ. ನೀವು ಇಹ್ರಾಮ್‍ನಲ್ಲಿರುವ ತನಕ ನಿಮಗೆ ನೆಲದಲ್ಲಿ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಯಾರ ಬಳಿಗೆ ನಿಮ್ಮನ್ನು ಒಟ್ಟುಗೂಡಿಸಲಾಗುತ್ತದೋ ಆ ಅಲ್ಲಾಹನನ್ನು ಭಯಪಡಿರಿ. أُحِلَّ لَكُمْ صَيْدُ ٱلْبَحْرِ وَطَعَامُهُۥ مَتَٰعًۭا لَّكُمْ وَلِلسَّيَّارَةِ ۖ وَحُرِّمَ عَلَيْكُمْ صَيْدُ ٱلْبَرِّ مَا دُمْتُمْ حُرُمًۭا ۗ وَٱتَّقُوا۟ ٱللَّهَ ٱلَّذِىٓ إِلَيْهِ تُحْشَرُونَ. ﴿96﴾
97 ಪವಿತ್ರ ಭವನವಾದ ಕಅಬಾಲಯವನ್ನು ಮತ್ತು ಯುದ್ಧ ನಿಷೇಧಿತ ತಿಂಗಳನ್ನು ಅಲ್ಲಾಹು ಜನರ ಅಸ್ತಿತ್ವಕ್ಕೆ ಆಧಾರವಾಗಿ ಮಾಡಿದ್ದಾನೆ. (ಅದೇ ರೀತಿ) ಬಲಿಮೃಗವನ್ನು ಮತ್ತು (ಅವುಗಳ) ಕೊರಳಪಟ್ಟಿಗಳನ್ನು ಸಹ. ಇದೇಕೆಂದರೆ, ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವುದೆಲ್ಲವನ್ನೂ ಅಲ್ಲಾಹು ತಿಳಿದಿದ್ದಾನೆ ಮತ್ತು ನಿಶ್ಚಯವಾಗಿಯೂ ಅಲ್ಲಾಹನಿಗೆ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಜ್ಞಾನವಿದೆಯೆಂದು ನೀವು ತಿಳಿಯುವುದಕ್ಕಾಗಿದೆ. ۞ جَعَلَ ٱللَّهُ ٱلْكَعْبَةَ ٱلْبَيْتَ ٱلْحَرَامَ قِيَٰمًۭا لِّلنَّاسِ وَٱلشَّهْرَ ٱلْحَرَامَ وَٱلْهَدْىَ وَٱلْقَلَٰٓئِدَ ۚ ذَٰلِكَ لِتَعْلَمُوٓا۟ أَنَّ ٱللَّهَ يَعْلَمُ مَا فِى ٱلسَّمَٰوَٰتِ وَمَا فِى ٱلْأَرْضِ وَأَنَّ ٱللَّهَ بِكُلِّ شَىْءٍ عَلِيمٌ. ﴿97﴾
98 ತಿಳಿಯಿರಿ! ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ ಮತ್ತು ಅಲ್ಲಾಹು ಕ್ಷಮಿಸುವವನು ಹಾಗೂ ದಯೆ ತೋರುವವನಾಗಿದ್ದಾನೆ. ٱعْلَمُوٓا۟ أَنَّ ٱللَّهَ شَدِيدُ ٱلْعِقَابِ وَأَنَّ ٱللَّهَ غَفُورٌۭ رَّحِيمٌۭ. ﴿98﴾
99 ಸಂದೇಶವಾಹಕರ ಕರ್ತವ್ಯವು ಸಂದೇಶವನ್ನು ತಲುಪಿಸಿಕೊಡುವುದು ಮಾತ್ರ. ನೀವು ಬಹಿರಂಗಪಡಿಸುವುದನ್ನು ಹಾಗೂ ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ. مَّا عَلَى ٱلرَّسُولِ إِلَّا ٱلْبَلَٰغُ ۗ وَٱللَّهُ يَعْلَمُ مَا تُبْدُونَ وَمَا تَكْتُمُونَ. ﴿99﴾
100 ಹೇಳಿರಿ: “ಹೊಲಸು ಮತ್ತು ಶುದ್ಧ ವಸ್ತುಗಳು ಸಮಾನವಲ್ಲ. ಹೊಲಸುಗಳ ಹೆಚ್ಚಳವು ನಿಮ್ಮನ್ನು ಅಚ್ಚರಿಗೊಳಿಸಿದರೂ ಸಹ!” ಆದ್ದರಿಂದ ಓ ಬುದ್ಧಿವಂತರೇ! ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ. قُل لَّا يَسْتَوِى ٱلْخَبِيثُ وَٱلطَّيِّبُ وَلَوْ أَعْجَبَكَ كَثْرَةُ ٱلْخَبِيثِ ۚ فَٱتَّقُوا۟ ٱللَّهَ يَٰٓأُو۟لِى ٱلْأَلْبَٰبِ لَعَلَّكُمْ تُفْلِحُونَ. ﴿100﴾
101 ಓ ಸತ್ಯವಿಶ್ವಾಸಿಗಳೇ! ಕೆಲವು ವಿಷಯಗಳ ಬಗ್ಗೆ ನೀವು ಪ್ರಶ್ನಿಸಬೇಡಿ. ಅವುಗಳನ್ನು ನಿಮಗೆ ವಿವರಿಸಲಾದರೆ ನಿಮಗೆ ಸಂಕಷ್ಟವಾಗಬಹುದು. ಕುರ್‌ಆನ್ ಅವತೀರ್ಣವಾಗುವಾಗ ನೀವು ಅವುಗಳ ಬಗ್ಗೆ ಪ್ರಶ್ನಿಸಿದರೆ, ಅವುಗಳನ್ನು ನಿಮಗೆ ವಿವರಿಸಿಕೊಡಲಾಗುವುದು. (ಹಿಂದೆ ಸಂಭವಿಸಿದ್ದಕ್ಕೆ) ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳನಾಗಿದ್ದಾನೆ. يَٰٓأَيُّهَا ٱلَّذِينَ ءَامَنُوا۟ لَا تَسْـَٔلُوا۟ عَنْ أَشْيَآءَ إِن تُبْدَ لَكُمْ تَسُؤْكُمْ وَإِن تَسْـَٔلُوا۟ عَنْهَا حِينَ يُنَزَّلُ ٱلْقُرْءَانُ تُبْدَ لَكُمْ عَفَا ٱللَّهُ عَنْهَا ۗ وَٱللَّهُ غَفُورٌ حَلِيمٌۭ. ﴿101﴾
102 ನಿಮಗಿಂತ ಮೊದಲಿನ ಜನರು ಅವುಗಳ ಬಗ್ಗೆ ಪ್ರಶ್ನಿಸಿದ್ದರು. ನಂತರ ಅವುಗಳ ಕಾರಣದಿಂದ ಅವರು ಸತ್ಯನಿಷೇಧಿಗಳಾದರು. قَدْ سَأَلَهَا قَوْمٌۭ مِّن قَبْلِكُمْ ثُمَّ أَصْبَحُوا۟ بِهَا كَٰفِرِينَ. ﴿102﴾
103 ಬಹೀರ, ಸಾಇಬ, ವಸೀಲ, ಹಾಮ್ ಮುಂತಾದ ಹರಕೆ ಮೃಗಗಳನ್ನು ಅಲ್ಲಾಹು ನೇಮಿಸಿಲ್ಲ.[1] ಆದರೆ ಸತ್ಯನಿಷೇಧಿಗಳು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರೂ ಅರ್ಥಮಾಡಿಕೊಳ್ಳದವರಾಗಿದ್ದಾರೆ.
[1] ಅನೇಕ ಮರಿಗಳಿಗೆ ಜನ್ಮ ನೀಡಿದ ಜಾನುವಾರಿನ ಕಿವಿಯನ್ನು ಹರಿದು ಮಕ್ಕಾದ ಬಹುದೇವಾರಾಧಕರು ಅದನ್ನು ವಿಗ್ರಹಗಳಿಗೆ ಹರಕೆ ಮಾಡುತ್ತಿದ್ದರು. ಅವರು ಅದನ್ನು ಬಹೀರ ಎಂದು ಕರೆಯುತ್ತಿದ್ದರು. ಕೆಲವು ಜಾನುವಾರುಗಳನ್ನು ಅವರು ವಿಗ್ರಹಗಳಿಗೆ ಹರಕೆ ಮಾಡಿ ಬಿಟ್ಟು ಬಿಡುತ್ತಿದ್ದರು. ಯಾರೂ ಅದನ್ನು ಮುಟ್ಟುತ್ತಿರಲಿಲ್ಲ ಮತ್ತು ತೊಂದರೆ ಕೊಡುತ್ತಿರಲಿಲ್ಲ. ಅವರು ಅದನ್ನು ಸಾಇಬ ಎಂದು ಕರೆಯುತ್ತಿದ್ದರು. ಒಂದು ಪ್ರಾಣಿ ನಿರಂತರ ಹೆಣ್ಣು ಮರಿಗಳಿಗೆ ಜನ್ಮ ನೀಡಿದರೆ ಅವರು ಅದನ್ನು ವಸೀಲ ಎಂದು ಕರೆದು ವಿಗ್ರಹಗಳಿಗೆ ಹರಕೆ ಮಾಡುತ್ತಿದ್ದರು. ಒಂದು ಗಂಡು ಒಂಟೆಯಿಂದ ಅನೇಕ ಮರಿಗಳುಂಟಾದರೆ ಅವರು ಅದನ್ನು ಹಾಮ್ ಎಂದು ಕರೆದು ಹರಕೆ ಮಾಡುತ್ತಿದ್ದರು.
مَا جَعَلَ ٱللَّهُ مِنۢ بَحِيرَةٍۢ وَلَا سَآئِبَةٍۢ وَلَا وَصِيلَةٍۢ وَلَا حَامٍۢ ۙ وَلَٰكِنَّ ٱلَّذِينَ كَفَرُوا۟ يَفْتَرُونَ عَلَى ٱللَّهِ ٱلْكَذِبَ ۖ وَأَكْثَرُهُمْ لَا يَعْقِلُونَ. ﴿103﴾
104 “ಅಲ್ಲಾಹು ಅವತೀರ್ಣಗೊಳಿಸಿದ ಸಂದೇಶಕ್ಕೆ ಮತ್ತು ಸಂದೇಶವಾಹಕರ ಬಳಿಗೆ ಬನ್ನಿರಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ನಮ್ಮ ಪೂರ್ವಜರು ಏನು ಮಾಡುವುದಾಗಿ ನಾವು ಕಂಡೆವೋ ಅದು ನಮಗೆ ಸಾಕು.” ಆದರೆ ಅವರ ಪೂರ್ವಜರು ಏನೂ ತಿಳಿಯದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಸಹ (ಅವರಿಗೆ ಅದು ಸಾಕೇ?) وَإِذَا قِيلَ لَهُمْ تَعَالَوْا۟ إِلَىٰ مَآ أَنزَلَ ٱللَّهُ وَإِلَى ٱلرَّسُولِ قَالُوا۟ حَسْبُنَا مَا وَجَدْنَا عَلَيْهِ ءَابَآءَنَآ ۚ أَوَلَوْ كَانَ ءَابَآؤُهُمْ لَا يَعْلَمُونَ شَيْـًۭٔا وَلَا يَهْتَدُونَ. ﴿104﴾
105 ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಿ. ನೀವು ಸನ್ಮಾರ್ಗಿಗಳಾದರೆ, ದುರ್ಮಾರ್ಗದಲ್ಲಿರುವವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ನೀವೆಲ್ಲರೂ ಅಲ್ಲಾಹನ ಬಳಿಗೆ ಮರಳಿಹೋಗುವಿರಿ. ಆಗ ಅವನು ನೀವು ಮಾಡಿದ ಕರ್ಮಗಳನ್ನು ನಿಮಗೆ ತಿಳಿಸಿಕೊಡುವನು. يَٰٓأَيُّهَا ٱلَّذِينَ ءَامَنُوا۟ عَلَيْكُمْ أَنفُسَكُمْ ۖ لَا يَضُرُّكُم مَّن ضَلَّ إِذَا ٱهْتَدَيْتُمْ ۚ إِلَى ٱللَّهِ مَرْجِعُكُمْ جَمِيعًۭا فَيُنَبِّئُكُم بِمَا كُنتُمْ تَعْمَلُونَ. ﴿105﴾
106 ಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲೊಬ್ಬನು ಮರಣಶಯ್ಯೆಯಲ್ಲಿದ್ದು ಉಯಿಲು ಮಾಡುವಾಗ, ನಿಮ್ಮಲ್ಲಿನ ಇಬ್ಬರು ನ್ಯಾಯವಂತರು ಅಥವಾ ನಿಮ್ಮವರಲ್ಲದ ಇಬ್ಬರು ಸಾಕ್ಷಿ ನಿಲ್ಲಲಿ—ನೀವು ಭೂಮಿಯಲ್ಲಿ ಪ್ರಯಾಣ ಮಾಡುತ್ತಿರುವಾಗ ನಿಮಗೆ ಮರಣವು ಸನ್ನಿಹಿತವಾದರೆ. ಇನ್ನು ನಿಮಗೆ (ಅವರ ಸಾಕ್ಷಿಯಲ್ಲಿ) ಸಂಶಯವಾದರೆ ನಮಾಝ್ ನಿರ್ವಹಿಸಿದ ನಂತರ ಅವರಿಬ್ಬರನ್ನು ತಡೆದು ನಿಲ್ಲಿಸಿರಿ; ಆಗ ಅವರು ಅಲ್ಲಾಹನ ಮೇಲೆ ಆಣೆ ಮಾಡಿ ಹೀಗೆ ಹೇಳಲಿ: “ನಾವು ಈ ಸಾಕ್ಷಿಗೆ ಬದಲಿಯಾಗಿ ಯಾವುದೇ ಬೆಲೆಯನ್ನು ಪಡೆಯುವುದಿಲ್ಲ, ಅವನು ಹತ್ತಿರದ ಸಂಬಂಧಿಕನಾದರೂ ಸಹ. ಅಲ್ಲಾಹನಿಗಾಗಿರುವ ಸಾಕ್ಷ್ಯವನ್ನು ನಾವು ಅಡಗಿಸುವುದಿಲ್ಲ. ನಾವೇನಾದರೂ ಹಾಗೆ ಮಾಡಿದರೆ ನಿಶ್ಚಯವಾಗಿಯೂ ನಾವು ಪಾಪಿಗಳಲ್ಲಿ ಸೇರುವೆವು.” يَٰٓأَيُّهَا ٱلَّذِينَ ءَامَنُوا۟ شَهَٰدَةُ بَيْنِكُمْ إِذَا حَضَرَ أَحَدَكُمُ ٱلْمَوْتُ حِينَ ٱلْوَصِيَّةِ ٱثْنَانِ ذَوَا عَدْلٍۢ مِّنكُمْ أَوْ ءَاخَرَانِ مِنْ غَيْرِكُمْ إِنْ أَنتُمْ ضَرَبْتُمْ فِى ٱلْأَرْضِ فَأَصَٰبَتْكُم مُّصِيبَةُ ٱلْمَوْتِ ۚ تَحْبِسُونَهُمَا مِنۢ بَعْدِ ٱلصَّلَوٰةِ فَيُقْسِمَانِ بِٱللَّهِ إِنِ ٱرْتَبْتُمْ لَا نَشْتَرِى بِهِۦ ثَمَنًۭا وَلَوْ كَانَ ذَا قُرْبَىٰ ۙ وَلَا نَكْتُمُ شَهَٰدَةَ ٱللَّهِ إِنَّآ إِذًۭا لَّمِنَ ٱلْءَاثِمِينَ. ﴿106﴾
107 ಅವರಿಬ್ಬರು ದೋಷಿಗಳೆಂದು ಸಾಬೀತಾದರೆ, ಅವರು ಯಾರಿಗೆ ಅನ್ಯಾಯ ಮಾಡಿದರೋ ಅವರ ಪೈಕಿ ಮೃತ ವ್ಯಕ್ತಿಗೆ ಹೆಚ್ಚು ಆಪ್ತರಾಗಿರುವ ಇಬ್ಬರು ಅವರ ಸ್ಥಾನದಲ್ಲಿ ನಿಂತು, ಅಲ್ಲಾಹನ ಮೇಲೆ ಆಣೆ ಮಾಡಿ, “ಅವರ ಸಾಕ್ಷಿಗಿಂತ ನಮ್ಮ ಸಾಕ್ಷಿಯೇ ಹೆಚ್ಚು ಸತ್ಯವಾಗಿದೆ, ನಾವು ಯಾವುದೇ ಅತಿರೇಕವನ್ನೆಸಗಿಲ್ಲ; ನಾವೇನಾದರೂ ಹಾಗೆ ಮಾಡಿದರೆ ನಾವು ಅಕ್ರಮವೆಸಗಿದವರಲ್ಲಿ ಸೇರುವೆವು” ಎಂದು ಸಾಕ್ಷಿ ಹೇಳಲಿ. فَإِنْ عُثِرَ عَلَىٰٓ أَنَّهُمَا ٱسْتَحَقَّآ إِثْمًۭا فَـَٔاخَرَانِ يَقُومَانِ مَقَامَهُمَا مِنَ ٱلَّذِينَ ٱسْتَحَقَّ عَلَيْهِمُ ٱلْأَوْلَيَٰنِ فَيُقْسِمَانِ بِٱللَّهِ لَشَهَٰدَتُنَآ أَحَقُّ مِن شَهَٰدَتِهِمَا وَمَا ٱعْتَدَيْنَآ إِنَّآ إِذًۭا لَّمِنَ ٱلظَّٰلِمِينَ. ﴿107﴾
108 ಅವರು ಸರಿಯಾದ ವಿಧದಲ್ಲಿ ಸಾಕ್ಷಿ ನುಡಿಯಲು, ಅಥವಾ ಅವರು ಆಣೆ ಮಾಡಿದ ಬಳಿಕ (ವಾರಸುದಾರರಿಗೆ) ಆಣೆ ಮಾಡಲು ಅವಕಾಶ ನೀಡಲಾಗುವುದೆಂಬ ಭಯವು ಅವರಲ್ಲುಂಟಾಗಲು ಇದು ಹೆಚ್ಚು ಸೂಕ್ತವಾಗಿದೆ. ನೀವು ಅಲ್ಲಾಹನನ್ನು ಭಯಪಡಿರಿ ಮತ್ತು (ಅವನ ಆದೇಶಗಳಿಗೆ) ಕಿವಿಗೊಡಿರಿ. ವಿಧೇಯತೆಯಿಲ್ಲದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. ذَٰلِكَ أَدْنَىٰٓ أَن يَأْتُوا۟ بِٱلشَّهَٰدَةِ عَلَىٰ وَجْهِهَآ أَوْ يَخَافُوٓا۟ أَن تُرَدَّ أَيْمَٰنٌۢ بَعْدَ أَيْمَٰنِهِمْ ۗ وَٱتَّقُوا۟ ٱللَّهَ وَٱسْمَعُوا۟ ۗ وَٱللَّهُ لَا يَهْدِى ٱلْقَوْمَ ٱلْفَٰسِقِينَ. ﴿108﴾
109 ಅಲ್ಲಾಹು ಸಂದೇಶವಾಹಕರನ್ನು ಒಟ್ಟುಗೂಡಿಸಿ, “ನಿಮಗೇನು ಉತ್ತರ ಸಿಕ್ಕಿತು?” ಎಂದು ಕೇಳುವ ದಿನ. ಅವರು ಹೇಳುವರು: “ನಮಗೇನೂ ತಿಳಿದಿಲ್ಲ. ನೀನೇ ಅದೃಶ್ಯ ವಿಷಯಗಳನ್ನು ಚೆನ್ನಾಗಿ ತಿಳಿದವನು.” ۞ يَوْمَ يَجْمَعُ ٱللَّهُ ٱلرُّسُلَ فَيَقُولُ مَاذَآ أُجِبْتُمْ ۖ قَالُوا۟ لَا عِلْمَ لَنَآ ۖ إِنَّكَ أَنتَ عَلَّٰمُ ٱلْغُيُوبِ. ﴿109﴾
110 ಅಲ್ಲಾಹು (ಈಸಾರೊಂದಿಗೆ) ಹೇಳುವ ಸಂದರ್ಭ: “ಓ ಮರ್ಯಮರ ಮಗ ಈಸಾ! ನಾನು ಪವಿತ್ರಾತ್ಮನ ಮೂಲಕ ನಿಮಗೆ ಬೆಂಬಲ ನೀಡಿ ನೀವು ತೊಟ್ಟಿಲಲ್ಲಿಯೂ ಮಧ್ಯವಯಸ್ಸಿನಲ್ಲಿಯೂ ಜನರೊಂದಿಗೆ ಮಾತನಾಡುತ್ತಿದ್ದ ಸಂದರ್ಭ; ನಾನು ನಿಮಗೆ ಗ್ರಂಥವನ್ನು, ವಿವೇಕವನ್ನು, ತೌರಾತ್ ಮತ್ತು ಇಂಜೀಲನ್ನು ಕಲಿಸಿಕೊಟ್ಟ ಸಂದರ್ಭ; ನನ್ನ ಅಪ್ಪಣೆಯಂತೆ ನೀವು ಜೇಡಿಮಣ್ಣಿನಿಂದ ಹಕ್ಕಿಯ ರೂಪವನ್ನು ತಯಾರಿಸಿ ಅದರಲ್ಲಿ ಊದಿದಾಗ ನನ್ನ ಅಪ್ಪಣೆಯಿಂದ ಅದು ಹಕ್ಕಿಯಾಗಿ ಮಾರ್ಪಡುತ್ತಿದ್ದ ಸಂದರ್ಭ; ನನ್ನ ಅಪ್ಪಣೆಯಂತೆ ನೀವು ಹುಟ್ಟು ಕುರುಡನನ್ನು ಮತ್ತು ಕುಷ್ಠರೋಗಿಯನ್ನು ಗುಣಪಡಿಸುತ್ತಿದ್ದ ಸಂದರ್ಭ; ನನ್ನ ಅಪ್ಪಣೆಯಂತೆ ನೀವು ಸತ್ತವರನ್ನು (ಸಮಾಧಿಯಿಂದ) ಹೊರತರುತ್ತಿದ್ದ ಸಂದರ್ಭ ಮತ್ತು ನೀವು ಇಸ್ರಾಯೇಲ್ ಮಕ್ಕಳ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಹೋದಾಗ ಅವರಲ್ಲಿರುವ ಸತ್ಯನಿಷೇಧಿಗಳು, ಇದು ಸ್ಪಷ್ಟ ವಾಮಾಚಾರವಾಗಿದೆಯೆಂದು ಹೇಳಿದಾಗ ನಿಮ್ಮನ್ನು ಅವರಿಂದ ಪಾರು ಮಾಡಿದ ಸಂದರ್ಭ ನಾನು ನಿಮಗೆ ಮತ್ತು ನಿಮ್ಮ ತಾಯಿಗೆ ಅನುಗ್ರಹಿಸಿದ ಅನುಗ್ರಹಗಳನ್ನು ಸ್ಮರಿಸಿರಿ.” إِذْ قَالَ ٱللَّهُ يَٰعِيسَى ٱبْنَ مَرْيَمَ ٱذْكُرْ نِعْمَتِى عَلَيْكَ وَعَلَىٰ وَٰلِدَتِكَ إِذْ أَيَّدتُّكَ بِرُوحِ ٱلْقُدُسِ تُكَلِّمُ ٱلنَّاسَ فِى ٱلْمَهْدِ وَكَهْلًۭا ۖ وَإِذْ عَلَّمْتُكَ ٱلْكِتَٰبَ وَٱلْحِكْمَةَ وَٱلتَّوْرَىٰةَ وَٱلْإِنجِيلَ ۖ وَإِذْ تَخْلُقُ مِنَ ٱلطِّينِ كَهَيْـَٔةِ ٱلطَّيْرِ بِإِذْنِى فَتَنفُخُ فِيهَا فَتَكُونُ طَيْرًۢا بِإِذْنِى ۖ وَتُبْرِئُ ٱلْأَكْمَهَ وَٱلْأَبْرَصَ بِإِذْنِى ۖ وَإِذْ تُخْرِجُ ٱلْمَوْتَىٰ بِإِذْنِى ۖ وَإِذْ كَفَفْتُ بَنِىٓ إِسْرَٰٓءِيلَ عَنكَ إِذْ جِئْتَهُم بِٱلْبَيِّنَٰتِ فَقَالَ ٱلَّذِينَ كَفَرُوا۟ مِنْهُمْ إِنْ هَٰذَآ إِلَّا سِحْرٌۭ مُّبِينٌۭ. ﴿110﴾
111 “ನನ್ನಲ್ಲಿ ಮತ್ತು ನನ್ನ ಸಂದೇಶವಾಹಕರಲ್ಲಿ ವಿಶ್ವಾಸವಿಡಿ” ಎಂದು ನಾನು ಹವಾರಿಗಳಿಗೆ ದಿವ್ಯಪ್ರೇರಣೆ ನೀಡಿದ ಸಂದರ್ಭ. ಅವರು ಹೇಳಿದರು: “ನಾವು ವಿಶ್ವಾಸವಿಟ್ಟಿದ್ದೇವೆ. ನಾವು ಮುಸ್ಲಿಮರು ಎಂಬುದಕ್ಕೆ ನೀವು ಸಾಕ್ಷಿಯಾಗಿರಿ.” وَإِذْ أَوْحَيْتُ إِلَى ٱلْحَوَارِيِّۦنَ أَنْ ءَامِنُوا۟ بِى وَبِرَسُولِى قَالُوٓا۟ ءَامَنَّا وَٱشْهَدْ بِأَنَّنَا مُسْلِمُونَ. ﴿111﴾
112 ಹವಾರಿಗಳು ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಓ ಮರ್ಯಮರ ಮಗ ಈಸಾ! ನಮಗೆ ಆಕಾಶದಿಂದ ಒಂದು ಆಹಾರದ ತಟ್ಟೆಯನ್ನು ಇಳಿಸಿಕೊಡಲು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸಾಧ್ಯವೇ?” ಈಸಾ ಹೇಳಿದರು: “ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.” إِذْ قَالَ ٱلْحَوَارِيُّونَ يَٰعِيسَى ٱبْنَ مَرْيَمَ هَلْ يَسْتَطِيعُ رَبُّكَ أَن يُنَزِّلَ عَلَيْنَا مَآئِدَةًۭ مِّنَ ٱلسَّمَآءِ ۖ قَالَ ٱتَّقُوا۟ ٱللَّهَ إِن كُنتُم مُّؤْمِنِينَ. ﴿112﴾
113 ಅವರು ಹೇಳಿದರು: “ಅದರಿಂದ ಆಹಾರ ಸೇವಿಸಿ ನಮ್ಮ ಮನಸ್ಸನ್ನು ಸಮಾಧಾನಪಡಿಸಲು, ನೀವು ನಮಗೆ ತಿಳಿಸಿದ್ದೆಲ್ಲವೂ ಸತ್ಯವೆಂದು ಮನದಟ್ಟು ಮಾಡಿಕೊಳ್ಳಲು ಮತ್ತು ನಾವು ಅದಕ್ಕೆ ಸಾಕ್ಷಿಗಳಾಗಲು ಬಯಸುತ್ತೇವೆ.” قَالُوا۟ نُرِيدُ أَن نَّأْكُلَ مِنْهَا وَتَطْمَئِنَّ قُلُوبُنَا وَنَعْلَمَ أَن قَدْ صَدَقْتَنَا وَنَكُونَ عَلَيْهَا مِنَ ٱلشَّٰهِدِينَ. ﴿113﴾
114 ಮರ್ಯಮರ ಮಗ ಈಸಾ ಹೇಳಿದರು: “ಓ ನಮ್ಮ ಪರಿಪಾಲಕನಾದ ಅಲ್ಲಾಹನೇ! ನಮಗೆ ಆಕಾಶದಿಂದ ಒಂದು ಆಹಾರದ ತಟ್ಟೆಯನ್ನು ಇಳಿಸಿಕೊಡು. ಅದು ನಮ್ಮಲ್ಲಿ ಮೊದಲಿನವರಿಗೆ ಮತ್ತು ಕೊನೆಯವರಿಗೆ ಒಂದು ಹಬ್ಬವಾಗಲಿ ಮತ್ತು ನಿನ್ನ ಕಡೆಯ ಒಂದು ದೃಷ್ಟಾಂತವಾಗಲಿ. ನಮಗೆ ಆಹಾರವನ್ನು ನೀಡು. ಆಹಾರ ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ.” قَالَ عِيسَى ٱبْنُ مَرْيَمَ ٱللَّهُمَّ رَبَّنَآ أَنزِلْ عَلَيْنَا مَآئِدَةًۭ مِّنَ ٱلسَّمَآءِ تَكُونُ لَنَا عِيدًۭا لِّأَوَّلِنَا وَءَاخِرِنَا وَءَايَةًۭ مِّنكَ ۖ وَٱرْزُقْنَا وَأَنتَ خَيْرُ ٱلرَّٰزِقِينَ. ﴿114﴾
115 ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನಾನು ನಿಮಗೆ ಅದನ್ನು ಇಳಿಸಿಕೊಡುವೆನು. ಆದರೆ, ಅದರ ನಂತರವೂ ನಿಮ್ಮಲ್ಲಿ ಯಾರಾದರೂ ಸತ್ಯನಿಷೇಧಿಯಾದರೆ, ಸರ್ವಲೋಕದವರಲ್ಲಿ ಯಾರಿಗೂ ನೀಡದ ಕಠೋರ ಶಿಕ್ಷೆಯನ್ನು ನಾನು ಅವನಿಗೆ ನೀಡುವೆನು.” قَالَ ٱللَّهُ إِنِّى مُنَزِّلُهَا عَلَيْكُمْ ۖ فَمَن يَكْفُرْ بَعْدُ مِنكُمْ فَإِنِّىٓ أُعَذِّبُهُۥ عَذَابًۭا لَّآ أُعَذِّبُهُۥٓ أَحَدًۭا مِّنَ ٱلْعَٰلَمِينَ. ﴿115﴾
116 ಅಲ್ಲಾಹು ಹೇಳುವ ಸಂದರ್ಭ: “ಓ ಮರ್ಯಮರ ಮಗ ಈಸಾ! ಅಲ್ಲಾಹನನ್ನು ಬಿಟ್ಟು ನನ್ನನ್ನು ಮತ್ತು ನನ್ನ ತಾಯಿಯನ್ನು ದೇವರಾಗಿ ಸ್ವೀಕರಿಸಿರಿ ಎಂದು ನೀವು ಜನರಿಗೆ ಹೇಳಿದ್ದೀರಾ?” ಈಸಾ ಹೇಳುವರು: “ನೀನು ಮಹಾ ಪರಿಶುದ್ಧನು. ನನಗೆ ಹೇಳಲು ಹಕ್ಕಿಲ್ಲದ ಒಂದು ಮಾತನ್ನು ನಾನು ಹೇಗೆ ಹೇಳುವೆನು? ನಾನು ಹಾಗೆ ಹೇಳಿದ್ದರೆ ನಿಶ್ಚಯವಾಗಿಯೂ ನಿನಗೆ ಅದು ತಿಳಿದಿರುತ್ತಿತ್ತು. ನನ್ನ ಮನಸ್ಸಿನಲ್ಲಿರುವುದು ನಿನಗೆ ತಿಳಿಯುತ್ತದೆ. ಆದರೆ ನಿನ್ನ ಮನಸ್ಸಿನಲ್ಲಿರುವುದು ನನಗೆ ತಿಳಿಯುವುದಿಲ್ಲ. ನಿಶ್ಚಯವಾಗಿಯೂ ನೀನು ಅದೃಶ್ಯ ವಿಷಯಗಳನ್ನು ತಿಳಿದವನಾಗಿರುವೆ. وَإِذْ قَالَ ٱللَّهُ يَٰعِيسَى ٱبْنَ مَرْيَمَ ءَأَنتَ قُلْتَ لِلنَّاسِ ٱتَّخِذُونِى وَأُمِّىَ إِلَٰهَيْنِ مِن دُونِ ٱللَّهِ ۖ قَالَ سُبْحَٰنَكَ مَا يَكُونُ لِىٓ أَنْ أَقُولَ مَا لَيْسَ لِى بِحَقٍّ ۚ إِن كُنتُ قُلْتُهُۥ فَقَدْ عَلِمْتَهُۥ ۚ تَعْلَمُ مَا فِى نَفْسِى وَلَآ أَعْلَمُ مَا فِى نَفْسِكَ ۚ إِنَّكَ أَنتَ عَلَّٰمُ ٱلْغُيُوبِ. ﴿116﴾
117 ನೀನು ನನಗೆ ಆದೇಶಿಸಿದ್ದನ್ನು—ಅಂದರೆ ನನ್ನ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಎಂಬುದನ್ನು ಬಿಟ್ಟು ಬೇರೇನನ್ನೂ ನಾನು ಅವರಿಗೆ ಹೇಳಿಲ್ಲ. ನಾನು ಎಲ್ಲಿಯ ತನಕ ಅವರೊಂದಿಗೆ ಇದ್ದೆನೋ ಅಲ್ಲಿಯ ತನಕ ನಾನು ಅವರ ಮೇಲೆ ಸಾಕ್ಷಿಯಾಗಿದ್ದೆ. ನಂತರ ನೀನು ನನ್ನನ್ನು ಎತ್ತಿಕೊಂಡ ಬಳಿಕ ನೀನೇ ಅವರ ವೀಕ್ಷಕನಾಗಿದ್ದೆ. ನೀನು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿರುವೆ. مَا قُلْتُ لَهُمْ إِلَّا مَآ أَمَرْتَنِى بِهِۦٓ أَنِ ٱعْبُدُوا۟ ٱللَّهَ رَبِّى وَرَبَّكُمْ ۚ وَكُنتُ عَلَيْهِمْ شَهِيدًۭا مَّا دُمْتُ فِيهِمْ ۖ فَلَمَّا تَوَفَّيْتَنِى كُنتَ أَنتَ ٱلرَّقِيبَ عَلَيْهِمْ ۚ وَأَنتَ عَلَىٰ كُلِّ شَىْءٍۢ شَهِيدٌ. ﴿117﴾
118 ನೀನು ಅವರನ್ನು ಶಿಕ್ಷಿಸುವುದಾದರೆ ನಿಶ್ಚಯವಾಗಿಯೂ ಅವರು ನಿನ್ನ ದಾಸರಾಗಿದ್ದಾರೆ. ಆದರೆ ನೀನು ಅವರನ್ನು ಕ್ಷಮಿಸುವುದಾದರೆ, ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ.” إِن تُعَذِّبْهُمْ فَإِنَّهُمْ عِبَادُكَ ۖ وَإِن تَغْفِرْ لَهُمْ فَإِنَّكَ أَنتَ ٱلْعَزِيزُ ٱلْحَكِيمُ. ﴿118﴾
119 ಅಲ್ಲಾಹು ಹೇಳುವನು: “ಇದು ಸತ್ಯವಂತರಿಗೆ ಅವರ ಸತ್ಯವು ಪ್ರಯೋಜನ ನೀಡುವ ದಿನವಾಗಿದೆ. ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಿದ್ದಾನೆ ಮತ್ತು ಅವರು ಅಲ್ಲಾಹನ ಬಗ್ಗೆ ಸಂಪ್ರೀತರಾಗಿದ್ದಾರೆ. ಅದೇ ಮಹಾ ವಿಜಯ.” قَالَ ٱللَّهُ هَٰذَا يَوْمُ يَنفَعُ ٱلصَّٰدِقِينَ صِدْقُهُمْ ۚ لَهُمْ جَنَّٰتٌۭ تَجْرِى مِن تَحْتِهَا ٱلْأَنْهَٰرُ خَٰلِدِينَ فِيهَآ أَبَدًۭا ۚ رَّضِىَ ٱللَّهُ عَنْهُمْ وَرَضُوا۟ عَنْهُ ۚ ذَٰلِكَ ٱلْفَوْزُ ٱلْعَظِيمُ. ﴿119﴾
120 ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. لِلَّهِ مُلْكُ ٱلسَّمَٰوَٰتِ وَٱلْأَرْضِ وَمَا فِيهِنَّ ۚ وَهُوَ عَلَىٰ كُلِّ شَىْءٍۢ قَدِيرٌۢ. ﴿120﴾