النجم
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ನಕ್ಷತ್ರದ ಮೇಲಾಣೆ! ಅದು ಮರೆಯಾಗುವಾಗ. | وَٱلنَّجْمِ إِذَا هَوَىٰ. ﴿1﴾ |
| 2 ನಿಮ್ಮ ಸಂಗಡಿಗನು (ಪ್ರವಾದಿ) ದಾರಿತಪ್ಪಿಲ್ಲ, ಅವರು ವಕ್ರ ದಾರಿಯಲ್ಲೂ ಇಲ್ಲ. | مَا ضَلَّ صَاحِبُكُمْ وَمَا غَوَىٰ. ﴿2﴾ |
| 3 ಅವರು ಮನಬಂದಂತೆ ಮಾತನಾಡುವುದಿಲ್ಲ. | وَمَا يَنطِقُ عَنِ ٱلْهَوَىٰٓ. ﴿3﴾ |
| 4 ಅದು ಅವರಿಗೆ ಅವತೀರ್ಣಗೊಳಿಸಲಾದ ದೇವವಾಣಿಯಾಗಿದೆ. | إِنْ هُوَ إِلَّا وَحْىٌۭ يُوحَىٰ. ﴿4﴾ |
| 5 ಅವರಿಗೆ ಮಹಾ ಶಕ್ತಿಶಾಲಿಯಾದ ದೇವದೂತರು (ಜಿಬ್ರೀಲ್) ಕಲಿಸಿದ್ದಾರೆ. | عَلَّمَهُۥ شَدِيدُ ٱلْقُوَىٰ. ﴿5﴾ |
| 6 ಅವರು ಅತ್ಯಂತ ಬಲಿಷ್ಠರು. ಅವರು (ತಮ್ಮ ನಿಜರೂಪದಲ್ಲಿ) ನೇರವಾಗಿ ನಿಂತರು. | ذُو مِرَّةٍۢ فَٱسْتَوَىٰ. ﴿6﴾ |
| 7 ಅವರು ಅತ್ಯುನ್ನತ ದಿಗಂತದಲ್ಲಿದ್ದರು. | وَهُوَ بِٱلْأُفُقِ ٱلْأَعْلَىٰ. ﴿7﴾ |
| 8 ನಂತರ ಅವರು ಹತ್ತಿರವಾದರು ಮತ್ತು ಇಳಿದು ಬಂದರು. | ثُمَّ دَنَا فَتَدَلَّىٰ. ﴿8﴾ |
| 9 ಅವರು ಎರಡು ಬಿಲ್ಲುಗಳ ದೂರದಲ್ಲಿ ಅಥವಾ ಅದಕ್ಕಿಂತಲೂ ಹತ್ತಿರವಾದರು. | فَكَانَ قَابَ قَوْسَيْنِ أَوْ أَدْنَىٰ. ﴿9﴾ |
| 10 ಅವರು ಅಲ್ಲಾಹನ ದಾಸರಿಗೆ (ಪ್ರವಾದಿಗೆ) ದೇವವಾಣಿಯಾಗಿ ತಲುಪಿಸಬೇಕಾದುದನ್ನು ತಲುಪಿಸಿದರು. | فَأَوْحَىٰٓ إِلَىٰ عَبْدِهِۦ مَآ أَوْحَىٰ. ﴿10﴾ |
| 11 ಅವರು (ಪ್ರವಾದಿ) ನೋಡಿದ ಆ ನೋಟವನ್ನು ಹೃದಯವು ನಿಷೇಧಿಸಲಿಲ್ಲ. | مَا كَذَبَ ٱلْفُؤَادُ مَا رَأَىٰٓ. ﴿11﴾ |
| 12 ಅವರು (ಪ್ರವಾದಿ) ನೋಡಿರುವುದರ ವಿಷಯದಲ್ಲಿ ನೀವು ಅವರೊಡನೆ ತರ್ಕಿಸುತ್ತೀರಾ? | أَفَتُمَٰرُونَهُۥ عَلَىٰ مَا يَرَىٰ. ﴿12﴾ |
| 13 ಅವರು ಇನ್ನೊಂದು ಬಾರಿಯೂ ಅವರನ್ನು (ಜಿಬ್ರೀಲರನ್ನು) ನೋಡಿದ್ದರು. | وَلَقَدْ رَءَاهُ نَزْلَةً أُخْرَىٰ. ﴿13﴾ |
|
14
ಸಿದ್ರತುಲ್ ಮುಂತಹಾದ (ತುತ್ತುತುದಿಯ ಬೋರೆ ಮರದ) ಬಳಿಯಲ್ಲಿ.[1]
[1] ಮಿಅರಾಜ್ ರಾತ್ರಿಯಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಿದ್ರದುಲ್ ಮುಂತಹಾದ ಬಳಿ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ನಿಜರೂಪದಲ್ಲಿ ನೋಡಿದ್ದರು. ಸಿದ್ರತುಲ್ ಮುಂತಹಾ ಎಂದರೆ ಏಳನೇ ಆಕಾಶದಲ್ಲಿರುವ ಬೋರೆ ಮರ. ಇದು ಆಕಾಶದ ಕೊನೆಯ ಗಡಿಯಾಗಿದೆ. ಇದರ ಆಚೆಗೆ ದೇವದೂತರುಗಳಿಗೆ ಪ್ರವೇಶವಿಲ್ಲ.
|
عِندَ سِدْرَةِ ٱلْمُنتَهَىٰ. ﴿14﴾ |
|
15
ಅದರ ಬಳಿಯಲ್ಲೇ ಜನ್ನತುಲ್ ಮಅವಾ ಇದೆ.[1]
[1] ಜನ್ನತುಲ್ ಮಅವಾ ಎಂದರೆ ವಾಸ್ತವ್ಯದ ಸ್ವರ್ಗ. ಇದನ್ನು ಹೀಗೆ ಕರೆಯಲು ಕಾರಣವೇನೆಂದರೆ ಆದಮ್ (ಅವರ ಮೇಲೆ ಶಾಂತಿಯಿರಲಿ) ಇಲ್ಲಿ ವಾಸವಾಗಿದ್ದರು.
|
عِندَهَا جَنَّةُ ٱلْمَأْوَىٰٓ. ﴿15﴾ |
| 16 ಆ ಬೋರೆ ಮರವನ್ನು ಆವರಿಸಬೇಕಾದುದೆಲ್ಲವೂ ಆವರಿಸಿದಾಗ. | إِذْ يَغْشَى ٱلسِّدْرَةَ مَا يَغْشَىٰ. ﴿16﴾ |
|
17
(ಪ್ರವಾದಿಯ) ದೃಷ್ಟಿಯು ತಪ್ಪಿಹೋಗಲಿಲ್ಲ ಮತ್ತು ಎಲ್ಲೆ ಮೀರಲೂ ಇಲ್ಲ.[1]
[1] ಅಂದರೆ ಪ್ರವಾದಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೃಷ್ಟಿಯು ಅತ್ತಿತ್ತ ಚಲಿಸುವುದಾಗಲಿ, ಅವರಿಗೆ ನೋಡಲು ಅನುಮತಿಯಿಲ್ಲದ್ದನ್ನು ನೋಡುವುದಾಗಲಿ ಮಾಡಲಿಲ್ಲ ಎಂದರ್ಥ.
|
مَا زَاغَ ٱلْبَصَرُ وَمَا طَغَىٰ. ﴿17﴾ |
| 18 ಅವರು ಅವರ ಪರಿಪಾಲಕನ (ಅಲ್ಲಾಹನ) ಮಹಾ ದೃಷ್ಟಾಂತಗಳಲ್ಲಿ ಕೆಲವನ್ನು ನೋಡಿದರು. | لَقَدْ رَأَىٰ مِنْ ءَايَٰتِ رَبِّهِ ٱلْكُبْرَىٰٓ. ﴿18﴾ |
| 19 ನೀವು ಲಾತ್ ಮತ್ತು ಉಝ್ಝಾದ ಬಗ್ಗೆ ಆಲೋಚಿಸಿ ನೋಡಿದ್ದೀರಾ? | أَفَرَءَيْتُمُ ٱللَّٰتَ وَٱلْعُزَّىٰ. ﴿19﴾ |
|
20
ಇನ್ನೊಂದು ಮೂರನೆಯ (ದೇವರಾದ) ಮನಾತ್ ಬಗ್ಗೆ.[1]
[1] ಲಾತ್ ಒಬ್ಬ ನೀತಿವಂತನಾಗಿದ್ದ. ಈತ ಹಜ್ಜ್‌ಗೆ ಬರುವ ಜನರಿಗೆ ಪಾಯಸ ಬಡಿಸುತ್ತಿದ್ದ. ಈತ ಸತ್ತಾಗ ಜನರು ಅವನ ಸಮಾಧಿಯನ್ನು ಆರಾಧಿಸತೊಡಗಿದರು. ನಂತರ ಅವರು ಅವನ ವಿಗ್ರಹವನ್ನು ತಯಾರಿಸಿದರು. ಉಝ್ಝ ಎಂದರೆ ಗತ್ಫಾನ್‌ನಲ್ಲಿದ್ದ ಒಂದು ಮರವೆಂದು ಹೇಳಲಾಗುತ್ತದೆ. ಜನರು ಇದನ್ನು ಪೂಜಿಸುತ್ತಿದ್ದರು. ಮನಾತ್ ಎಂದರೆ ಮಕ್ಕಾ ಮತ್ತು ಮದೀನ ನಡುವಿನ ಪ್ರದೇಶದಲ್ಲಿದ್ದ ಒಂದು ವಿಗ್ರಹ. ಜನರು ಈ ವಿಗ್ರಹದ ಕೃಪೆಗೆ ಪಾತ್ರರಾಗಲು ಇದರ ಬಳಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದು ಜಾನುವಾರುಗಳನ್ನು ಬಲಿ ನೀಡುತ್ತಿದ್ದರು.
|
وَمَنَوٰةَ ٱلثَّالِثَةَ ٱلْأُخْرَىٰٓ. ﴿20﴾ |
| 21 ನಿಮಗೆ ಗಂಡು ಮಕ್ಕಳು ಮತ್ತು ಅಲ್ಲಾಹನಿಗೆ ಹೆಣ್ಣು ಮಕ್ಕಳೇ? | أَلَكُمُ ٱلذَّكَرُ وَلَهُ ٱلْأُنثَىٰ. ﴿21﴾ |
| 22 ಇದು ಬಹುದೊಡ್ಡ ಅನ್ಯಾಯದ ಹಂಚಿಕೆಯಾಗಿದೆ! | تِلْكَ إِذًۭا قِسْمَةٌۭ ضِيزَىٰٓ. ﴿22﴾ |
| 23 ಇವೆಲ್ಲವೂ ನೀವು ಮತ್ತು ನಿಮ್ಮ ಪೂರ್ವಜರು ನಾಮಕರಣ ಮಾಡಿದ ಕೆಲವು (ವಿಗ್ರಹಗಳ) ಹೆಸರುಗಳಲ್ಲದೆ ಇನ್ನೇನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಸಾಕ್ಷ್ಯಾಧಾರವನ್ನು ಇಳಿಸಿಕೊಟ್ಟಿಲ್ಲ. ಅವರು ಕೇವಲ ಊಹೆಯನ್ನು ಮತ್ತು ಅವರ ಮನಸ್ಸು ಬಯಸುವುದನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಅವರ ಬಳಿಗೆ ಅವರ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಸನ್ಮಾರ್ಗವು ಬಂದುಬಿಟ್ಟಿದೆ. | إِنْ هِىَ إِلَّآ أَسْمَآءٌۭ سَمَّيْتُمُوهَآ أَنتُمْ وَءَابَآؤُكُم مَّآ أَنزَلَ ٱللَّهُ بِهَا مِن سُلْطَٰنٍ ۚ إِن يَتَّبِعُونَ إِلَّا ٱلظَّنَّ وَمَا تَهْوَى ٱلْأَنفُسُ ۖ وَلَقَدْ جَآءَهُم مِّن رَّبِّهِمُ ٱلْهُدَىٰٓ. ﴿23﴾ |
|
24
ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಸಿಗುವುದೇ?[1]
[1] ಅಂದರೆ ಅವರು ಆರಾಧಿಸುತ್ತಿರುವ ಆ ದೇವರುಗಳು ಅವರ ಇಚ್ಛೆಗಳನ್ನು ಪೂರೈಸುತ್ತಾರೆ ಮತ್ತು ಅವರಿಗೆ ಶಿಫಾರಸು ಮಾಡುತ್ತಾರೆಂಬ ಅವರ ಬಯಕೆಗಳು ಈಡೇರುವುದಿಲ್ಲ.
|
أَمْ لِلْإِنسَٰنِ مَا تَمَنَّىٰ. ﴿24﴾ |
| 25 ಪರಲೋಕ ಮತ್ತು ಇಹಲೋಕವು ಅಲ್ಲಾಹನ ವಶದಲ್ಲಿವೆ. | فَلِلَّهِ ٱلْءَاخِرَةُ وَٱلْأُولَىٰ. ﴿25﴾ |
| 26 ಆಕಾಶಗಳಲ್ಲಿ ಎಷ್ಟು ದೇವದೂತರುಗಳಿದ್ದಾರೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಮತ್ತು ಅವನ ಪ್ರೀತಿಗೆ ಪಾತ್ರರಾದವರಿಗೆ ಶಿಫಾರಸು ಮಾಡಲು ಅನುಮತಿ ನೀಡಿದವರ ಹೊರತು ಇತರರು ಮಾಡುವ ಶಿಫಾರಸಿನಿಂದ ಯಾವುದೇ ಪ್ರಯೋಜನವಿಲ್ಲ. | ۞ وَكَم مِّن مَّلَكٍۢ فِى ٱلسَّمَٰوَٰتِ لَا تُغْنِى شَفَٰعَتُهُمْ شَيْـًٔا إِلَّا مِنۢ بَعْدِ أَن يَأْذَنَ ٱللَّهُ لِمَن يَشَآءُ وَيَرْضَىٰٓ. ﴿26﴾ |
|
27
ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ—ಅವರು ದೇವದೂತರುಗಳಿಗೆ ಸ್ತ್ರೀಯರ ಹೆಸರನ್ನಿಡುತ್ತಾರೆ.[1]
[1] ಅರಬ್ ಬಹುದೇವವಿಶ್ವಾಸಿಗಳು ದೇವದೂತರುಗಳನ್ನು ಅಲ್ಲಾಹನ ಹೆಣ್ಣುಮಕ್ಕಳೆಂದು ಕರೆಯುತ್ತಿದ್ದರು.
|
إِنَّ ٱلَّذِينَ لَا يُؤْمِنُونَ بِٱلْءَاخِرَةِ لَيُسَمُّونَ ٱلْمَلَٰٓئِكَةَ تَسْمِيَةَ ٱلْأُنثَىٰ. ﴿27﴾ |
| 28 ಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರು ಕೇವಲ ಊಹೆಯನ್ನು ಮಾತ್ರ ಹಿಂಬಾಲಿಸುತ್ತಾರೆ. ನಿಶ್ಚಯವಾಗಿಯೂ ಸತ್ಯದೆದುರು ಊಹೆಯು ಯಾವುದೇ ಉಪಕಾರ ಮಾಡುವುದಿಲ್ಲ. | وَمَا لَهُم بِهِۦ مِنْ عِلْمٍ ۖ إِن يَتَّبِعُونَ إِلَّا ٱلظَّنَّ ۖ وَإِنَّ ٱلظَّنَّ لَا يُغْنِى مِنَ ٱلْحَقِّ شَيْـًۭٔا. ﴿28﴾ |
| 29 ನಮ್ಮ ಸ್ಮರಣೆಯಿಂದ ವಿಮುಖರಾದವರು ಮತ್ತು ಇಹಲೋಕವನ್ನು ಮಾತ್ರ ಬಯಸುವವರು ಯಾರೋ—ಅವರಿಂದ ನೀವು ವಿಮುಖರಾಗಿರಿ. | فَأَعْرِضْ عَن مَّن تَوَلَّىٰ عَن ذِكْرِنَا وَلَمْ يُرِدْ إِلَّا ٱلْحَيَوٰةَ ٱلدُّنْيَا. ﴿29﴾ |
| 30 ಅದೇ ಅವರ ಜ್ಞಾನದ ಪರಾಕಾಷ್ಠೆ. ತನ್ನ ಮಾರ್ಗದಿಂದ ತಪ್ಪಿಹೋದವರ ಬಗ್ಗೆ ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನು ಬಹಳ ಚೆನ್ನಾಗಿ ತಿಳಿದಿದ್ದಾನೆ. | ذَٰلِكَ مَبْلَغُهُم مِّنَ ٱلْعِلْمِ ۚ إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِۦ وَهُوَ أَعْلَمُ بِمَنِ ٱهْتَدَىٰ. ﴿30﴾ |
| 31 ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ದುಷ್ಕರ್ಮಿಗಳಿಗೆ ಅವರು ಮಾಡಿದ ದುಷ್ಕರ್ಮದ ಪ್ರತಿಫಲವನ್ನು ನೀಡಲು ಮತ್ತು ಸತ್ಕರ್ಮಿಗಳಿಗೆ ಅತ್ಯುತ್ತಮವಾದ ಪ್ರತಿಫಲವನ್ನು ನೀಡಲು. | وَلِلَّهِ مَا فِى ٱلسَّمَٰوَٰتِ وَمَا فِى ٱلْأَرْضِ لِيَجْزِىَ ٱلَّذِينَ أَسَٰٓـُٔوا۟ بِمَا عَمِلُوا۟ وَيَجْزِىَ ٱلَّذِينَ أَحْسَنُوا۟ بِٱلْحُسْنَى. ﴿31﴾ |
| 32 ಅವರು (ಸತ್ಕರ್ಮಿಗಳು) ಯಾರೆಂದರೆ, ಮಹಾಪಾಪಗಳಿಂದ ಮತ್ತು ಅಶ್ಲೀಲಕೃತ್ಯಗಳಿಂದ ದೂರವಿರುವವರು. ಕೆಲವು ಚಿಕ್ಕಪುಟ್ಟ ಪಾಪಗಳ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿಶಾಲವಾಗಿ ಕ್ಷಮಿಸುವವನಾಗಿದ್ದಾನೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗ ಮತ್ತು ನೀವು ನಿಮ್ಮ ತಾಯಂದಿರ ಉದರಗಳಲ್ಲಿ ಭ್ರೂಣಗಳಾಗಿದ್ದಾಗ ಅವನಿಗೆ ನಿಮ್ಮ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. ಆದ್ದರಿಂದ ನೀವು ನಿಮ್ಮನ್ನು ಪರಿಶುದ್ಧರೆಂದು ಘೋಷಿಸಬೇಡಿ. ದೇವಭಯವುಳ್ಳವರ ಬಗ್ಗೆ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ. | ٱلَّذِينَ يَجْتَنِبُونَ كَبَٰٓئِرَ ٱلْإِثْمِ وَٱلْفَوَٰحِشَ إِلَّا ٱللَّمَمَ ۚ إِنَّ رَبَّكَ وَٰسِعُ ٱلْمَغْفِرَةِ ۚ هُوَ أَعْلَمُ بِكُمْ إِذْ أَنشَأَكُم مِّنَ ٱلْأَرْضِ وَإِذْ أَنتُمْ أَجِنَّةٌۭ فِى بُطُونِ أُمَّهَٰتِكُمْ ۖ فَلَا تُزَكُّوٓا۟ أَنفُسَكُمْ ۖ هُوَ أَعْلَمُ بِمَنِ ٱتَّقَىٰٓ. ﴿32﴾ |
| 33 ಮುಖ ತಿರುಗಿಸಿ ಹೋದವನನ್ನು ನೀವು ನೋಡಿದ್ದೀರಾ? | أَفَرَءَيْتَ ٱلَّذِى تَوَلَّىٰ. ﴿33﴾ |
| 34 ಅವನು ಬಹಳ ಕಡಿಮೆ ಕೊಟ್ಟನು ಮತ್ತು ನಿಲ್ಲಿಸಿದನು. | وَأَعْطَىٰ قَلِيلًۭا وَأَكْدَىٰٓ. ﴿34﴾ |
| 35 ಅವನ ಬಳಿ ಅದೃಶ್ಯ ಜ್ಞಾನವಿದ್ದು ಅವನು ಅದರ ಮೂಲಕ (ಎಲ್ಲವನ್ನು) ನೋಡುತ್ತಿದ್ದಾನೆಯೇ? | أَعِندَهُۥ عِلْمُ ٱلْغَيْبِ فَهُوَ يَرَىٰٓ. ﴿35﴾ |
| 36 ಮೂಸಾರ ಗ್ರಂಥಗಳಲ್ಲಿರುವುದರ ಬಗ್ಗೆ ಅವನಿಗೆ ತಿಳಿಸಲಾಗಿಲ್ಲವೇ? | أَمْ لَمْ يُنَبَّأْ بِمَا فِى صُحُفِ مُوسَىٰ. ﴿36﴾ |
| 37 (ಕರ್ತವ್ಯಗಳನ್ನು) ನೆರವೇರಿಸಿದ ಇಬ್ರಾಹೀಮರ ಗ್ರಂಥಗಳಲ್ಲಿರುವುದನ್ನು. | وَإِبْرَٰهِيمَ ٱلَّذِى وَفَّىٰٓ. ﴿37﴾ |
| 38 ಪಾಪಭಾರವನ್ನು ಹೊರುವ ಯಾರೂ ಇನ್ನೊಬ್ಬರ ಪಾಪಭಾರವನ್ನು ಹೊರುವುದಿಲ್ಲವೆಂದು, | أَلَّا تَزِرُ وَازِرَةٌۭ وِزْرَ أُخْرَىٰ. ﴿38﴾ |
| 39 ಮನುಷ್ಯನಿಗೆ ಅವನು ಮಾಡುವ ಪರಿಶ್ರಮಗಳಲ್ಲದೆ ಬೇರೇನೂ ಇಲ್ಲವೆಂದು, | وَأَن لَّيْسَ لِلْإِنسَٰنِ إِلَّا مَا سَعَىٰ. ﴿39﴾ |
| 40 ಅವನ ಪರಿಶ್ರಮವನ್ನು ಸದ್ಯವೇ ಅವನಿಗೆ ತೋರಿಸಲಾಗುವುದೆಂದು, | وَأَنَّ سَعْيَهُۥ سَوْفَ يُرَىٰ. ﴿40﴾ |
| 41 ನಂತರ ಅವನಿಗೆ ಪೂರ್ಣರೂಪದಲ್ಲಿ ಪ್ರತಿಫಲ ನೀಡಲಾಗುವುದೆಂದು, | ثُمَّ يُجْزَىٰهُ ٱلْجَزَآءَ ٱلْأَوْفَىٰ. ﴿41﴾ |
| 42 ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೇ ತಲುಪಬೇಕೆಂದು, | وَأَنَّ إِلَىٰ رَبِّكَ ٱلْمُنتَهَىٰ. ﴿42﴾ |
| 43 ಅವನೇ ನಗುವಂತೆ ಮತ್ತು ಅಳುವಂತೆ ಮಾಡುವವನೆಂದು, | وَأَنَّهُۥ هُوَ أَضْحَكَ وَأَبْكَىٰ. ﴿43﴾ |
| 44 ಅವನೇ ಮರಣ ಮತ್ತು ಜೀವನವನ್ನು ನೀಡುವವನೆಂದು, | وَأَنَّهُۥ هُوَ أَمَاتَ وَأَحْيَا. ﴿44﴾ |
| 45 ಅವನೇ ಗಂಡು-ಹೆಣ್ಣುಗಳೆಂಬ ಜೋಡಿಯನ್ನು ಸೃಷ್ಟಿಸಿದವನೆಂದು, | وَأَنَّهُۥ خَلَقَ ٱلزَّوْجَيْنِ ٱلذَّكَرَ وَٱلْأُنثَىٰ. ﴿45﴾ |
| 46 ವೀರ್ಯದಿಂದ—ಅದನ್ನು ಸೃವಿಸಲಾದಾಗ. | مِن نُّطْفَةٍ إِذَا تُمْنَىٰ. ﴿46﴾ |
| 47 ಎರಡನೆಯ ಬಾರಿ ಜೀವ ನೀಡುವುದು ಅವನ ಹೊಣೆಗಾರಿಕೆಯೆಂದು, | وَأَنَّ عَلَيْهِ ٱلنَّشْأَةَ ٱلْأُخْرَىٰ. ﴿47﴾ |
| 48 ಅವನೇ ಐಶ್ವರ್ಯ ಮತ್ತು ಸಂತೃಪ್ತತೆಯನ್ನು ನೀಡುವವನೆಂದು, | وَأَنَّهُۥ هُوَ أَغْنَىٰ وَأَقْنَىٰ. ﴿48﴾ |
|
49
ಅವನೇ ಶಿಅರಾ[1] ನಕ್ಷತ್ರದ ಒಡೆಯನೆಂದು,
[1] ಶಿಅರಾ (Sirius) ಎಂದರೆ ಲುಬ್ದಕ ನಕ್ಷತ್ರ. ಅರಬ್ ಬಹುದೇವಾರಾಧಕರಲ್ಲಿ ಕೆಲವರು ಇದನ್ನು ಆರಾಧಿಸುತ್ತಿದ್ದರು.
|
وَأَنَّهُۥ هُوَ رَبُّ ٱلشِّعْرَىٰ. ﴿49﴾ |
| 50 ಅವನೇ ಪ್ರಾಚೀನ ಆದ್ ಗೋತ್ರವನ್ನು ನಾಶ ಮಾಡಿದವನೆಂದು, | وَأَنَّهُۥٓ أَهْلَكَ عَادًا ٱلْأُولَىٰ. ﴿50﴾ |
| 51 ಮತ್ತು ಸಮೂದ್ ಗೋತ್ರವನ್ನು. ಅವನು ಅವರಲ್ಲಿ ಒಬ್ಬನನ್ನೂ ಬಾಕಿಯುಳಿಸಲಿಲ್ಲ. | وَثَمُودَا۟ فَمَآ أَبْقَىٰ. ﴿51﴾ |
| 52 ಅದಕ್ಕಿಂತ ಮೊದಲು ನೂಹರ ಜನರನ್ನು. ನಿಶ್ಚಯವಾಗಿಯೂ ಅವರು ಮಹಾ ಅಕ್ರಮಿಗಳು ಮತ್ತು ಅತಿರೇಕಿಗಳಾಗಿದ್ದರು. | وَقَوْمَ نُوحٍۢ مِّن قَبْلُ ۖ إِنَّهُمْ كَانُوا۟ هُمْ أَظْلَمَ وَأَطْغَىٰ. ﴿52﴾ |
|
53
ಮತ್ತು ಬುಡಮೇಲಾದ ದೇಶವನ್ನು.[1] ಅವನು ಅದನ್ನು ಬುಡಮೇಲುಗೊಳಿಸಿದನು.
[1] ಅಂದರೆ ಲೂತ್ (ಅವರ ಮೇಲೆ ಶಾಂತಿಯಿರಲಿ) ವಾಸವಾಗಿದ್ದ ಸದೂಮ್ (Sodom) ದೇಶ.
|
وَٱلْمُؤْتَفِكَةَ أَهْوَىٰ. ﴿53﴾ |
| 54 ನಂತರ ಅದನ್ನು ಆವರಿಸಬೇಕಾದುದೆಲ್ಲವೂ ಆವರಿಸುವಂತೆ ಮಾಡಿದನು. | فَغَشَّىٰهَا مَا غَشَّىٰ. ﴿54﴾ |
| 55 ಆದ್ದರಿಂದ (ಓ ಮಾನವನೇ), ನೀನು ನಿನ್ನ ಪರಿಪಾಲಕನ (ಅಲ್ಲಾಹನ) ಅನುಗ್ರಹಗಳಲ್ಲಿ ಯಾವುದರ ಬಗ್ಗೆ ಸಂಶಯಪಡುವೆ? | فَبِأَىِّ ءَالَآءِ رَبِّكَ تَتَمَارَىٰ. ﴿55﴾ |
| 56 ಇವರು (ಪ್ರವಾದಿ) ಪೂರ್ವಿಕ ಮುನ್ನೆಚ್ಚರಿಕೆಗಾರರಲ್ಲಿ (ಪ್ರವಾದಿಗಳಲ್ಲಿ) ಸೇರಿದ ಒಬ್ಬ ಮುನ್ನೆಚ್ಚರಿಕೆಗಾರರಾಗಿದ್ದಾರೆ. | هَٰذَا نَذِيرٌۭ مِّنَ ٱلنُّذُرِ ٱلْأُولَىٰٓ. ﴿56﴾ |
| 57 ಹತ್ತಿರವಾಗುವ ಆ ಸಮಯವು (ಪುನರುತ್ಥಾನ ದಿನ) ಹತ್ತಿರವಾಗಿದೆ. | أَزِفَتِ ٱلْءَازِفَةُ. ﴿57﴾ |
| 58 ಅದನ್ನು (ಅದರ ನಿಶ್ಚಿತ ಸಮಯದಲ್ಲಿ) ಅಲ್ಲಾಹನ ಹೊರತು ಯಾರೂ ತೋರಿಸುವವರಿಲ್ಲ. | لَيْسَ لَهَا مِن دُونِ ٱللَّهِ كَاشِفَةٌ. ﴿58﴾ |
| 59 ಹಾಗಾದರೆ ಈ ಸಮಾಚಾರದಿಂದ ನಿಮಗೆ ಅಚ್ಚರಿಯಾಗುತ್ತಿದೆಯೇ? | أَفَمِنْ هَٰذَا ٱلْحَدِيثِ تَعْجَبُونَ. ﴿59﴾ |
| 60 ನೀವು ನಗುತ್ತಿದ್ದೀರಿ. ನೀವು ಅಳುತ್ತಿಲ್ಲ. | وَتَضْحَكُونَ وَلَا تَبْكُونَ. ﴿60﴾ |
| 61 ನೀವು ಆಟವಾಡುತ್ತಿದ್ದೀರಿ. | وَأَنتُمْ سَٰمِدُونَ. ﴿61﴾ |
| 62 ನೀವು ಅಲ್ಲಾಹನಿಗೆ ಸಾಷ್ಟಾಂಗ ಮಾಡಿರಿ ಮತ್ತು ಅವನನ್ನು ಆರಾಧಿಸಿರಿ. | فَٱسْجُدُوا۟ لِلَّهِ وَٱعْبُدُوا۟ ۩. ﴿62﴾ |