القمر
ಕನ್ನಡ Translation with Arabic Quran Text
| ಕನ್ನಡ | العربية |
|---|---|
|
1
ಅಂತ್ಯಸಮಯವು ಹತ್ತಿರವಾಗಿದೆ ಮತ್ತು ಚಂದ್ರ ಇಬ್ಭಾಗವಾಗಿದೆ.[1]
[1] ಮಕ್ಕಾದ ಸತ್ಯನಿಷೇಧಿಗಳ ಬೇಡಿಕೆಯ ಮೇರೆಗೆ ಈ ಪವಾಡವು ಸಂಭವಿಸಿತ್ತು. ಚಂದ್ರ ಇಬ್ಭಾಗವಾಗಿ ಅದರ ಎರಡು ಭಾಗಗಳನ್ನು ಜನರು ಹಿರಾ ಬೆಟ್ಟದ ಎರಡು ಬದಿಗಳಲ್ಲಿ ಕಂಡರು.
|
ٱقْتَرَبَتِ ٱلسَّاعَةُ وَٱنشَقَّ ٱلْقَمَرُ. ﴿1﴾ |
| 2 ಅವರು ಯಾವುದೇ ದೃಷ್ಟಾಂತವನ್ನು ನೋಡಿದರೂ ವಿಮುಖರಾಗುತ್ತಾರೆ ಮತ್ತು “ಇದು ಹಿಂದಿನಿಂದಲೇ ನಡೆದು ಬರುತ್ತಿರುವ ಮಾಟಗಾರಿಕೆ” ಎಂದು ಹೇಳುತ್ತಾರೆ. | وَإِن يَرَوْا۟ ءَايَةًۭ يُعْرِضُوا۟ وَيَقُولُوا۟ سِحْرٌۭ مُّسْتَمِرٌّۭ. ﴿2﴾ |
| 3 ಅವರು ನಿಷೇಧಿಸಿದರು ಮತ್ತು ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಎಲ್ಲಾ ವಿಷಯಗಳಿಗೂ ಒಂದು ನಿಶ್ಚಿತ ಸಮಯವನ್ನು ನಿರ್ಣಯಿಸಲಾಗಿದೆ. | وَكَذَّبُوا۟ وَٱتَّبَعُوٓا۟ أَهْوَآءَهُمْ ۚ وَكُلُّ أَمْرٍۢ مُّسْتَقِرٌّۭ. ﴿3﴾ |
| 4 ನಿಶ್ಚಯವಾಗಿಯೂ ಅವರ ಬಳಿಗೆ ಗದರಿಕೆಯ (ಉಪದೇಶವಿರುವ) ಸಮಾಚಾರಗಳು ಬಂದಿವೆ. | وَلَقَدْ جَآءَهُم مِّنَ ٱلْأَنۢبَآءِ مَا فِيهِ مُزْدَجَرٌ. ﴿4﴾ |
| 5 ಪೂರ್ಣರೂಪದ ವಿವೇಕಯುಕ್ತ ಮಾತುಗಳು. ಆದರೂ ಆ ಮುನ್ನೆಚ್ಚರಿಕೆಗಳು ಪ್ರಯೋಜನ ನೀಡಲಿಲ್ಲ. | حِكْمَةٌۢ بَٰلِغَةٌۭ ۖ فَمَا تُغْنِ ٱلنُّذُرُ. ﴿5﴾ |
| 6 ಆದ್ದರಿಂದ (ಪ್ರವಾದಿಯವರೇ!) ನೀವು ಅವರಿಂದ ವಿಮುಖರಾಗಿ ಬಿಡಿ. ಕರೆ ನೀಡುವವನು ಅನಿಷ್ಟಕರ ವಿಷಯದ ಕಡೆಗೆ ಕರೆ ನೀಡುವ ದಿನ. | فَتَوَلَّ عَنْهُمْ ۘ يَوْمَ يَدْعُ ٱلدَّاعِ إِلَىٰ شَىْءٍۢ نُّكُرٍ. ﴿6﴾ |
| 7 ಅವರ ಕಣ್ಣುಗಳು ವಿನಮ್ರವಾಗಿರುವುವು. ದಿಕ್ಕೆಟ್ಟು ಹಾರಾಡುವ ಮಿಡತೆಗಳಂತೆ ಅವರು ಸಮಾಧಿಗಳಿಂದ ಹೊರಬರುವರು. | خُشَّعًا أَبْصَٰرُهُمْ يَخْرُجُونَ مِنَ ٱلْأَجْدَاثِ كَأَنَّهُمْ جَرَادٌۭ مُّنتَشِرٌۭ. ﴿7﴾ |
| 8 ಅವರು ಕರೆ ನೀಡುವವನ ಕಡೆಗೆ ಆತುರದಿಂದ ಓಡುವರು. ಸತ್ಯನಿಷೇಧಿಗಳು ಹೇಳುವರು: “ಇದು ಕಠೋರ ದಿನವಾಗಿದೆ.” | مُّهْطِعِينَ إِلَى ٱلدَّاعِ ۖ يَقُولُ ٱلْكَٰفِرُونَ هَٰذَا يَوْمٌ عَسِرٌۭ. ﴿8﴾ |
| 9 ಅವರಿಗಿಂತ ಮೊದಲು ನೂಹರ ಜನರು ನಿಷೇಧಿಸಿದ್ದರು. ಅವರು ನಮ್ಮ ದಾಸನನ್ನು ನಿಷೇಧಿಸಿದರು. ಮಾನಸಿಕ ಅಸ್ವಸ್ಥ ಎಂದು ಜರೆಯುತ್ತಾ ಅವರನ್ನು ಗದರಿಸಿದರು. | ۞ كَذَّبَتْ قَبْلَهُمْ قَوْمُ نُوحٍۢ فَكَذَّبُوا۟ عَبْدَنَا وَقَالُوا۟ مَجْنُونٌۭ وَٱزْدُجِرَ. ﴿9﴾ |
| 10 ಆಗ ನೂಹ್ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು: “ನಾನು ಅಸಹಾಯಕನಾಗಿದ್ದೇನೆ. ನನಗೆ ಸಹಾಯ ಮಾಡು.” | فَدَعَا رَبَّهُۥٓ أَنِّى مَغْلُوبٌۭ فَٱنتَصِرْ. ﴿10﴾ |
| 11 ಆಗ ರಭಸವಾಗಿ ಸುರಿಯುವ ಮಳೆಗಾಗಿ ನಾವು ಆಕಾಶದ್ವಾರಗಳನ್ನು ತೆರೆದೆವು. | فَفَتَحْنَآ أَبْوَٰبَ ٱلسَّمَآءِ بِمَآءٍۢ مُّنْهَمِرٍۢ. ﴿11﴾ |
| 12 ನಾವು ಭೂಮಿಯಲ್ಲಿ ಒರತೆಗಳನ್ನು ಚಿಮ್ಮುವಂತೆ ಮಾಡಿದೆವು. ಈಗಾಗಲೇ ನಿರ್ಣಯಿಸಿದ ವಿಷಯಕ್ಕಾಗಿ (ಆಕಾಶ ಮತ್ತು ಭೂಮಿಯ) ನೀರು ಸಂಗಮವಾಯಿತು. | وَفَجَّرْنَا ٱلْأَرْضَ عُيُونًۭا فَٱلْتَقَى ٱلْمَآءُ عَلَىٰٓ أَمْرٍۢ قَدْ قُدِرَ. ﴿12﴾ |
| 13 ನಾವು ಅವರನ್ನು ಹಲಗೆಗಳು ಮತ್ತು ಮೊಳೆಗಳಿಂದ (ನಿರ್ಮಿಸಿದ ಹಡಗಿನಲ್ಲಿ) ಒಯ್ದೆವು. | وَحَمَلْنَٰهُ عَلَىٰ ذَاتِ أَلْوَٰحٍۢ وَدُسُرٍۢ. ﴿13﴾ |
| 14 ಅದು ನಮ್ಮ ಕಣ್ಣುಗಳ ಮುಂಭಾಗದಲ್ಲಿ ಚಲಿಸುತ್ತಿತ್ತು. ಯಾರನ್ನು ನಿಷೇಧಿಸಲಾಯಿತೋ ಅವರಿಗೆ (ನೂಹರಿಗೆ) ಪ್ರತಿಫಲವಾಗಿ. | تَجْرِى بِأَعْيُنِنَا جَزَآءًۭ لِّمَن كَانَ كُفِرَ. ﴿14﴾ |
| 15 ನಿಶ್ಚಯವಾಗಿಯೂ ನಾವು ಆ ಘಟನೆಯನ್ನು ಒಂದು ದೃಷ್ಟಾಂತವಾಗಿ ಉಳಿಸಿದೆವು. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ? | وَلَقَد تَّرَكْنَٰهَآ ءَايَةًۭ فَهَلْ مِن مُّدَّكِرٍۢ. ﴿15﴾ |
| 16 ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು (ಎಂದು ಹೇಳಿರಿ). | فَكَيْفَ كَانَ عَذَابِى وَنُذُرِ. ﴿16﴾ |
| 17 ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ? | وَلَقَدْ يَسَّرْنَا ٱلْقُرْءَانَ لِلذِّكْرِ فَهَلْ مِن مُّدَّكِرٍۢ. ﴿17﴾ |
| 18 ಆದ್ ಗೋತ್ರದವರು ನಿಷೇಧಿಸಿದರು. ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು? | كَذَّبَتْ عَادٌۭ فَكَيْفَ كَانَ عَذَابِى وَنُذُرِ. ﴿18﴾ |
| 19 ನಿಶ್ಚಯವಾಗಿಯೂ ನಾವು ನಿರಂತರವಾಗಿ ಬೀಸುವ ಭೀಕರ ಚಳಿಗಾಳಿಯನ್ನು ಅಶುಭ ದಿನಗಳಲ್ಲಿ ಅವರ ಕಡೆಗೆ ಕಳುಹಿಸಿದೆವು. | إِنَّآ أَرْسَلْنَا عَلَيْهِمْ رِيحًۭا صَرْصَرًۭا فِى يَوْمِ نَحْسٍۢ مُّسْتَمِرٍّۢ. ﴿19﴾ |
| 20 ಅದು ಮನುಷ್ಯರನ್ನು ಎತ್ತಿ ಎಸೆಯುತ್ತಿತ್ತು. ಅವರು ಬುಡಸಮೇತ ಕೀಳಲಾದ ಖರ್ಜೂರ ಮರದ ಕಾಂಡಗಳೋ ಎಂಬಂತೆ. | تَنزِعُ ٱلنَّاسَ كَأَنَّهُمْ أَعْجَازُ نَخْلٍۢ مُّنقَعِرٍۢ. ﴿20﴾ |
| 21 ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು? | فَكَيْفَ كَانَ عَذَابِى وَنُذُرِ. ﴿21﴾ |
| 22 ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ? | وَلَقَدْ يَسَّرْنَا ٱلْقُرْءَانَ لِلذِّكْرِ فَهَلْ مِن مُّدَّكِرٍۢ. ﴿22﴾ |
| 23 ಸಮೂದ್ ಗೋತ್ರದವರು ಎಚ್ಚರಿಕೆಗಳನ್ನು ನಿಷೇಧಿಸಿದರು. | كَذَّبَتْ ثَمُودُ بِٱلنُّذُرِ. ﴿23﴾ |
| 24 ಅವರು ಹೇಳಿದರು: “ನಮ್ಮವರಲ್ಲೇ ಸೇರಿದ ಒಬ್ಬನನ್ನು ನಾವು ಅನುಸರಿಸಬೇಕೇ? ಹಾಗೇನಾದರೂ ಆದರೆ ನಿಶ್ಚಯವಾಗಿಯೂ ನಾವು ಪ್ರಮಾದದಲ್ಲಿ ಬೀಳುವೆವು ಮತ್ತು ಮತಿಯಿಲ್ಲದವರಾಗಿ ಬಿಡುವೆವು. | فَقَالُوٓا۟ أَبَشَرًۭا مِّنَّا وَٰحِدًۭا نَّتَّبِعُهُۥٓ إِنَّآ إِذًۭا لَّفِى ضَلَٰلٍۢ وَسُعُرٍ. ﴿24﴾ |
| 25 ನಮ್ಮ ನಡುವೆ ಅವನಿಗೆ ಮಾತ್ರ ದೇವವಾಣಿ ನೀಡಲಾಗುತ್ತಿದೆಯೇ? ಅಲ್ಲ, ವಾಸ್ತವವಾಗಿ ಅವನು ಸುಳ್ಳುಗಾರ ಮತ್ತು ಅಹಂಭಾವಿಯಾಗಿದ್ದಾನೆ.” | أَءُلْقِىَ ٱلذِّكْرُ عَلَيْهِ مِنۢ بَيْنِنَا بَلْ هُوَ كَذَّابٌ أَشِرٌۭ. ﴿25﴾ |
| 26 ಸುಳ್ಳುಗಾರ ಮತ್ತು ಅಹಂಭಾವಿ ಯಾರೆಂದು ಅವರು ನಾಳೆ ತಿಳಿಯುವರು. | سَيَعْلَمُونَ غَدًۭا مَّنِ ٱلْكَذَّابُ ٱلْأَشِرُ. ﴿26﴾ |
| 27 ನಿಶ್ಚಯವಾಗಿಯೂ ನಾವು ಅವರಿಗೆ ಪರೀಕ್ಷೆಯಾಗಿ ಒಂದು ಒಂಟೆಯನ್ನು ಕಳುಹಿಸುವೆವು. (ಓ ಸ್ವಾಲಿಹ್) ನೀವು ಅವರನ್ನು ಗಮನಿಸುತ್ತಿರಿ ಮತ್ತು ತಾಳ್ಮೆಯಿಂದಿರಿ. | إِنَّا مُرْسِلُوا۟ ٱلنَّاقَةِ فِتْنَةًۭ لَّهُمْ فَٱرْتَقِبْهُمْ وَٱصْطَبِرْ. ﴿27﴾ |
| 28 ನೀರನ್ನು ಅವರ ಮಧ್ಯೆ (ಅವರಿಗೆ ಮತ್ತು ಒಂಟೆಗೆ) ಪಾಲು ಮಾಡಲಾಗಿದೆಯೆಂದು ಅವರಿಗೆ ತಿಳಿಸಿರಿ. ಪ್ರತಿಯೊಬ್ಬರೂ ತಮ್ಮ ಸರದಿ ಬಂದಾಗ ಉಪಸ್ಥಿತರಾಗಲಿ. | وَنَبِّئْهُمْ أَنَّ ٱلْمَآءَ قِسْمَةٌۢ بَيْنَهُمْ ۖ كُلُّ شِرْبٍۢ مُّحْتَضَرٌۭ. ﴿28﴾ |
| 29 ಆದರೆ ಅವರು ಅವರ ಗೆಳೆಯನನ್ನು ಕರೆದರು. ಅವನು ಆ ಒಂಟೆಯನ್ನು ಹಿಡಿದು ಅದರ ಕಾಲುಗಳನ್ನು ಕತ್ತರಿಸಿದನು. | فَنَادَوْا۟ صَاحِبَهُمْ فَتَعَاطَىٰ فَعَقَرَ. ﴿29﴾ |
| 30 ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು? | فَكَيْفَ كَانَ عَذَابِى وَنُذُرِ. ﴿30﴾ |
| 31 ನಾವು ಅವರ ಮೇಲೆ ಒಂದೇ ಚೀತ್ಕಾರವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ನಿರ್ಮಿಸುವವನು ಎಸೆದ ಹುಲ್ಲಿನಂತಾಗಿ ಬಿಟ್ಟರು. | إِنَّآ أَرْسَلْنَا عَلَيْهِمْ صَيْحَةًۭ وَٰحِدَةًۭ فَكَانُوا۟ كَهَشِيمِ ٱلْمُحْتَظِرِ. ﴿31﴾ |
| 32 ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ? | وَلَقَدْ يَسَّرْنَا ٱلْقُرْءَانَ لِلذِّكْرِ فَهَلْ مِن مُّدَّكِرٍۢ. ﴿32﴾ |
| 33 ಲೂತರ ಜನರು ಎಚ್ಚರಿಕೆಗಳನ್ನು ನಿಷೇಧಿಸಿದರು. | كَذَّبَتْ قَوْمُ لُوطٍۭ بِٱلنُّذُرِ. ﴿33﴾ |
| 34 ನಿಶ್ಚಯವಾಗಿಯೂ ನಾವು ಅವರ ಮೇಲೆ ಕಲ್ಲುಗಳ ಬಿರುಗಾಳಿಯನ್ನು ಕಳುಹಿಸಿದೆವು. ಲೂತರ ಕುಟುಂಬದ ಹೊರತು. ನಾವು ಅವರನ್ನು ಸಹರಿಯ ವೇಳೆಯಲ್ಲಿ (ರಾತ್ರಿಯ ಕೊನೆಯ ಸಮಯ) ರಕ್ಷಿಸಿದೆವು. | إِنَّآ أَرْسَلْنَا عَلَيْهِمْ حَاصِبًا إِلَّآ ءَالَ لُوطٍۢ ۖ نَّجَّيْنَٰهُم بِسَحَرٍۢ. ﴿34﴾ |
| 35 ನಮ್ಮ ಕಡೆಯ ಒಂದು ಉಪಕಾರವಾಗಿ. ಕೃತಜ್ಞರಾಗಿರುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು. | نِّعْمَةًۭ مِّنْ عِندِنَا ۚ كَذَٰلِكَ نَجْزِى مَن شَكَرَ. ﴿35﴾ |
| 36 ನಮ್ಮ ಹಿಡಿತದ ಬಗ್ಗೆ ಅವರು (ಲೂತ್) ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅವರು ಆ ಎಚ್ಚರಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. | وَلَقَدْ أَنذَرَهُم بَطْشَتَنَا فَتَمَارَوْا۟ بِٱلنُّذُرِ. ﴿36﴾ |
| 37 ಅವರು ಲೂತರನ್ನು ಅವರ ಅತಿಥಿಗಳ ವಿಷಯದಲ್ಲಿ ಪುಸಲಾಯಿಸಿದರು. ಆಗ ನಾವು ಅವರ ಕಣ್ಣುಗಳನ್ನು ಕುರುಡಾಗಿಸಿದೆವು. (ನಾವು ಹೇಳಿದೆವು): “ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳ ರುಚಿಯನ್ನು ನೋಡಿರಿ.” | وَلَقَدْ رَٰوَدُوهُ عَن ضَيْفِهِۦ فَطَمَسْنَآ أَعْيُنَهُمْ فَذُوقُوا۟ عَذَابِى وَنُذُرِ. ﴿37﴾ |
| 38 ಮುಂಜಾನೆಯೇ ಅವರನ್ನು ಒಂದೇ ಸ್ಥಳದಲ್ಲಿ ಹಿಡಿದಿಡುವ ಶಿಕ್ಷೆಯು ಅವರ ಮೇಲೆರಗಿಬಿಟ್ಟಿತು. | وَلَقَدْ صَبَّحَهُم بُكْرَةً عَذَابٌۭ مُّسْتَقِرٌّۭ. ﴿38﴾ |
| 39 (ನಾವು ಹೇಳಿದೆವು): “ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳ ರುಚಿಯನ್ನು ನೋಡಿರಿ.” | فَذُوقُوا۟ عَذَابِى وَنُذُرِ. ﴿39﴾ |
| 40 ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ? | وَلَقَدْ يَسَّرْنَا ٱلْقُرْءَانَ لِلذِّكْرِ فَهَلْ مِن مُّدَّكِرٍۢ. ﴿40﴾ |
| 41 ಫರೋಹನ ಜನರಿಗೂ ಎಚ್ಚರಿಕೆಗಳು ಬಂದಿದ್ದವು. | وَلَقَدْ جَآءَ ءَالَ فِرْعَوْنَ ٱلنُّذُرُ. ﴿41﴾ |
| 42 ಅವರು ನಮ್ಮ ದೃಷ್ಟಾಂತಗಳೆಲ್ಲವನ್ನೂ ನಿಷೇಧಿಸಿದರು. ಆಗ ನಾವು ಮಹಾ ಪ್ರಬಲನು ಮತ್ತು ಶಕ್ತಿವಂತನು ಹಿಡಿಯುವಂತೆ ಅವರನ್ನು ಹಿಡಿದೆವು. | كَذَّبُوا۟ بِـَٔايَٰتِنَا كُلِّهَا فَأَخَذْنَٰهُمْ أَخْذَ عَزِيزٍۢ مُّقْتَدِرٍ. ﴿42﴾ |
| 43 (ಓ ಕುರೈಶರೇ) ನಿಮ್ಮ ಸತ್ಯನಿಷೇಧಿಗಳು ಇವರಿಗಿಂತ ಒಳ್ಳೆಯವರೇ? ಅಥವಾ ನಿಮಗೆ ಪೂರ್ವ ಗ್ರಂಥಗಳಲ್ಲಿ ವಿನಾಯಿತಿ ನಿಶ್ಚಯಿಸಲಾಗಿದೆಯೇ? | أَكُفَّارُكُمْ خَيْرٌۭ مِّنْ أُو۟لَٰٓئِكُمْ أَمْ لَكُم بَرَآءَةٌۭ فِى ٱلزُّبُرِ. ﴿43﴾ |
| 44 ಅಥವಾ, “ನಾವು ಗೆಲ್ಲುವ ಸಂಘವಾಗಿದ್ದೇವೆ” ಎಂದು ಅವರು ಹೇಳುತ್ತಿದ್ದಾರೆಯೇ? | أَمْ يَقُولُونَ نَحْنُ جَمِيعٌۭ مُّنتَصِرٌۭ. ﴿44﴾ |
| 45 ಅವರ ಸಂಘವು ಸದ್ಯವೇ ಪರಾಭವಗೊಳ್ಳಲಿದೆ ಮತ್ತು ಅವರು ಬೆನ್ನು ತೋರಿಸಿ ಓಡಲಿದ್ದಾರೆ. | سَيُهْزَمُ ٱلْجَمْعُ وَيُوَلُّونَ ٱلدُّبُرَ. ﴿45﴾ |
| 46 ಅಲ್ಲ, ಅಂತ್ಯಸಮಯವು (ಪುನರುತ್ಥಾನ ದಿನವು) ಅವರಿಗೆ ವಾಗ್ದಾನ ಮಾಡಲಾದ ಸಮಯವಾಗಿದೆ. ಅಂತ್ಯಸಮಯವು ಅತ್ಯಂತ ಕಠೋರ ಮತ್ತು ಅತ್ಯಂತ ಕಹಿಯಾಗಿದೆ. | بَلِ ٱلسَّاعَةُ مَوْعِدُهُمْ وَٱلسَّاعَةُ أَدْهَىٰ وَأَمَرُّ. ﴿46﴾ |
| 47 ನಿಶ್ಚಯವಾಗಿಯೂ ಅಪರಾಧಿಗಳು ದುರ್ಮಾರ್ಗದಲ್ಲಿ ಮತ್ತು ಶಿಕ್ಷೆಯಲ್ಲಿದ್ದಾರೆ. | إِنَّ ٱلْمُجْرِمِينَ فِى ضَلَٰلٍۢ وَسُعُرٍۢ. ﴿47﴾ |
| 48 ಅವರನ್ನು ಅವರ ಮುಖದ ಮೇಲೆ ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ! (ಅವರೊಡನೆ ಹೇಳಲಾಗುವುದು): “ನೀವು ನರಕ ಸ್ಪರ್ಶದ ರುಚಿಯನ್ನು ನೋಡಿರಿ.” | يَوْمَ يُسْحَبُونَ فِى ٱلنَّارِ عَلَىٰ وُجُوهِهِمْ ذُوقُوا۟ مَسَّ سَقَرَ. ﴿48﴾ |
| 49 ನಿಶ್ಚಯವಾಗಿಯೂ ನಾವು ಎಲ್ಲಾ ವಸ್ತುಗಳನ್ನು ಒಂದು (ನಿಶ್ಚಿತ) ನಿರ್ಣಯದಂತೆ ಸೃಷ್ಟಿಸಿದ್ದೇವೆ. | إِنَّا كُلَّ شَىْءٍ خَلَقْنَٰهُ بِقَدَرٍۢ. ﴿49﴾ |
| 50 ನಮ್ಮ ಆಜ್ಞೆಯು ಕಣ್ಣೆವೆಯಿಕ್ಕುವಂತೆ ಒಂದು ಮಾತು ಮಾತ್ರವಾಗಿದೆ. | وَمَآ أَمْرُنَآ إِلَّا وَٰحِدَةٌۭ كَلَمْحٍۭ بِٱلْبَصَرِ. ﴿50﴾ |
| 51 ನಾವು ನಿಮ್ಮಂತಹ ಅನೇಕರನ್ನು ನಾಶ ಮಾಡಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ? | وَلَقَدْ أَهْلَكْنَآ أَشْيَاعَكُمْ فَهَلْ مِن مُّدَّكِرٍۢ. ﴿51﴾ |
| 52 ಅವರು ಮಾಡಿದ ಕರ್ಮಗಳೆಲ್ಲವೂ ಕರ್ಮಪುಸ್ತಕಗಳಲ್ಲಿವೆ. | وَكُلُّ شَىْءٍۢ فَعَلُوهُ فِى ٱلزُّبُرِ. ﴿52﴾ |
| 53 ಚಿಕ್ಕ ಮತ್ತು ದೊಡ್ಡದಾದ ಎಲ್ಲವನ್ನೂ ನಮೂದಿಸಲಾಗಿದೆ. | وَكُلُّ صَغِيرٍۢ وَكَبِيرٍۢ مُّسْتَطَرٌ. ﴿53﴾ |
| 54 ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ನದಿಗಳಲ್ಲಿರುವರು. | إِنَّ ٱلْمُتَّقِينَ فِى جَنَّٰتٍۢ وَنَهَرٍۢ. ﴿54﴾ |
| 55 ಗೌರವದ ಆಸನದಲ್ಲಿ, ಬಲಿಷ್ಠ ಸಾಮ್ರಾಟನ ಬಳಿಯಲ್ಲಿ. | فِى مَقْعَدِ صِدْقٍ عِندَ مَلِيكٍۢ مُّقْتَدِرٍۭ. ﴿55﴾ |