الرحمن
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಪರಮ ದಯಾಳು. | ٱلرَّحْمَٰنُ. ﴿1﴾ |
| 2 ಕುರ್‌ಆನನ್ನು ಕಲಿಸಿದನು. | عَلَّمَ ٱلْقُرْءَانَ. ﴿2﴾ |
| 3 ಮನುಷ್ಯನನ್ನು ಸೃಷ್ಟಿಸಿದನು. | خَلَقَ ٱلْإِنسَٰنَ. ﴿3﴾ |
| 4 ಅವನಿಗೆ ಮಾತನಾಡಲು ಕಲಿಸಿದನು. | عَلَّمَهُ ٱلْبَيَانَ. ﴿4﴾ |
| 5 ಸೂರ್ಯ ಮತ್ತು ಚಂದ್ರ (ನಿಶ್ಚಿತ) ಗಣನೆಯಲ್ಲಿವೆ. | ٱلشَّمْسُ وَٱلْقَمَرُ بِحُسْبَانٍۢ. ﴿5﴾ |
| 6 ಸಸ್ಯಗಳು ಮತ್ತು ಮರಗಳು (ಅಲ್ಲಾಹನಿಗೆ) ಸಾಷ್ಟಾಂಗ ಮಾಡುತ್ತಿವೆ. | وَٱلنَّجْمُ وَٱلشَّجَرُ يَسْجُدَانِ. ﴿6﴾ |
|
7
ಅವನು ಆಕಾಶವನ್ನು ಎತ್ತರಕ್ಕೇರಿಸಿದನು ಮತ್ತು ತಕ್ಕಡಿಯನ್ನು ಸ್ಥಾಪಿಸಿದನು.[1]
[1] ಅಂದರೆ ಭೂಮಿಯಲ್ಲಿ ನ್ಯಾಯವನ್ನು ಸ್ಥಾಪಿಸಿದನು. ನ್ಯಾಯದಿಂದ ವ್ಯವಹರಿಸುವಂತೆ ಮನುಷ್ಯರಿಗೆ ಆಜ್ಞಾಪಿಸಿದನು.
|
وَٱلسَّمَآءَ رَفَعَهَا وَوَضَعَ ٱلْمِيزَانَ. ﴿7﴾ |
| 8 ನೀವು ತೂಕದಲ್ಲಿ ಅಸಮತೋಲನ ಮಾಡದಿರುವುದಕ್ಕಾಗಿ. | أَلَّا تَطْغَوْا۟ فِى ٱلْمِيزَانِ. ﴿8﴾ |
| 9 ನೀವು ನ್ಯಾಯದೊಂದಿಗೆ ತಕ್ಕಡಿಯನ್ನು ಸ್ಥಾಪಿಸಿರಿ. ತೂಕದಲ್ಲಿ ಕಡಿಮೆ ಮಾಡಬೇಡಿ. | وَأَقِيمُوا۟ ٱلْوَزْنَ بِٱلْقِسْطِ وَلَا تُخْسِرُوا۟ ٱلْمِيزَانَ. ﴿9﴾ |
| 10 ಅವನು ಭೂಮಿಯನ್ನು ಮನುಷ್ಯರಿಗೋಸ್ಕರ ಇಟ್ಟನು. | وَٱلْأَرْضَ وَضَعَهَا لِلْأَنَامِ. ﴿10﴾ |
| 11 ಅದರಲ್ಲಿ ಹಣ್ಣು-ಹಂಪಲುಗಳು ಮತ್ತು ಪೊರೆಗಳಿರುವ ಖರ್ಜೂರದ ಮರಗಳಿವೆ. | فِيهَا فَٰكِهَةٌۭ وَٱلنَّخْلُ ذَاتُ ٱلْأَكْمَامِ. ﴿11﴾ |
| 12 ಹೊಟ್ಟಿರುವ ಧಾನ್ಯಗಳು ಮತ್ತು ಸುಗಂಧಪೂರಿತ ಸಸ್ಯಗಳಿವೆ. | وَٱلْحَبُّ ذُو ٱلْعَصْفِ وَٱلرَّيْحَانُ. ﴿12﴾ |
| 13 ಹಾಗಾದರೆ ನೀವಿಬ್ಬರು (ಜಿನ್ನ್ ಮತ್ತು ಮನುಷ್ಯರು) ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿13﴾ |
| 14 ಅವನು ಮನುಷ್ಯನನ್ನು ಕುಂಬಾರಿಕೆಯ ಜೇಡಿಮಣ್ಣಿನಿಂದ ಸೃಷ್ಟಿಸಿದನು. | خَلَقَ ٱلْإِنسَٰنَ مِن صَلْصَٰلٍۢ كَٱلْفَخَّارِ. ﴿14﴾ |
| 15 ಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಿದನು. | وَخَلَقَ ٱلْجَآنَّ مِن مَّارِجٍۢ مِّن نَّارٍۢ. ﴿15﴾ |
| 16 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿16﴾ |
|
17
ಅವನು ಎರಡು ಉದಯಸ್ಥಾನಗಳ ಮತ್ತು ಎರಡು ಅಸ್ತಮಸ್ಥಾನಗಳ ಪರಿಪಾಲಕನಾಗಿದ್ದಾನೆ.[1]
[1] ಅಂದರೆ ಬೇಸಿಗೆಗಾಲದ ಉದಯಸ್ಥಾನ ಮತ್ತು ಚಳಿಗಾಲದ ಉದಯಸ್ಥಾನ. ಅದೇ ರೀತಿ ಬೇಸಿಗೆಗಾಲದ ಅಸ್ತಮಸ್ಥಾನ ಮತ್ತು ಚಳಿಗಾಲದ ಅಸ್ತಮಸ್ಥಾನ.
|
رَبُّ ٱلْمَشْرِقَيْنِ وَرَبُّ ٱلْمَغْرِبَيْنِ. ﴿17﴾ |
| 18 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿18﴾ |
| 19 ಅವನು ಎರಡು ಸಮುದ್ರಗಳನ್ನು ಪರಸ್ಪರ ಬೆರೆಯುವಂತೆ ಹರಿಯಲು ಬಿಟ್ಟನು. | مَرَجَ ٱلْبَحْرَيْنِ يَلْتَقِيَانِ. ﴿19﴾ |
|
20
ಅವೆರಡರ ನಡುವೆ ಒಂದು ತಡೆಯಿದ್ದು ಅವು ಅದನ್ನು ಮೀರಿ ಹೋಗುವುದಿಲ್ಲ.[1]
[1] ಎರಡು ಸಮುದ್ರಗಳು ಎಂದರೆ ನೀರಿನ ಎರಡು ಬೇರೆ ಬೇರೆ ಅಸ್ತಿತ್ವಗಳು. ಒಂದು ಸಿಹಿ ನೀರನ್ನು ಹೊಂದಿರುವ ನದಿ ಮತ್ತು ಇನ್ನೊಂದು ಉಪ್ಪು ನೀರನ್ನು ಹೊಂದಿರುವ ಕಡಲು. ಈ ಎರಡು ನೀರುಗಳು ಪರಸ್ಪರ ಸೇರುವಾಗ ಬೆರೆಯದೆ ಬಹುದೂರದ ತನಕ ಹರಿಯುತ್ತವೆ.
|
بَيْنَهُمَا بَرْزَخٌۭ لَّا يَبْغِيَانِ. ﴿20﴾ |
| 21 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿21﴾ |
| 22 ಅವೆರಡರಿಂದಲೂ ಮುತ್ತು ಮತ್ತು ಹವಳಗಳು ಹೊರಬರುತ್ತವೆ. | يَخْرُجُ مِنْهُمَا ٱللُّؤْلُؤُ وَٱلْمَرْجَانُ. ﴿22﴾ |
| 23 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿23﴾ |
| 24 ಸಮುದ್ರದಲ್ಲಿ ಬೆಟ್ಟಗಳಂತೆ ಎತ್ತರವಾಗಿದ್ದು ಸಂಚರಿಸುವ ಹಡಗುಗಳು ಅವನ ನಿಯಂತ್ರಣದಲ್ಲಿವೆ. | وَلَهُ ٱلْجَوَارِ ٱلْمُنشَـَٔاتُ فِى ٱلْبَحْرِ كَٱلْأَعْلَٰمِ. ﴿24﴾ |
| 25 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿25﴾ |
| 26 ಭೂಮಿಯ ಮೇಲಿರುವ ಎಲ್ಲವೂ ನಾಶವಾಗಲಿವೆ. | كُلُّ مَنْ عَلَيْهَا فَانٍۢ. ﴿26﴾ |
| 27 ನಿಮ್ಮ ಪರಿಪಾಲಕನ (ಅಲ್ಲಾಹನ) ಮಹತ್ವಪೂರ್ಣ ಮತ್ತು ಗೌರವಾರ್ಹವಾದ ಮುಖವು ಮಾತ್ರ ಅವಶೇಷಿಸುತ್ತದೆ. | وَيَبْقَىٰ وَجْهُ رَبِّكَ ذُو ٱلْجَلَٰلِ وَٱلْإِكْرَامِ. ﴿27﴾ |
| 28 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿28﴾ |
| 29 ಭೂಮ್ಯಾಕಾಶಗಳಲ್ಲಿರುವವರೆಲ್ಲರೂ ಅವನಲ್ಲಿ ಬೇಡುತ್ತಾರೆ. ಪ್ರತಿದಿನವೂ ಅವನು ಒಂದು ಕೆಲಸದಲ್ಲಿದ್ದಾನೆ. | يَسْـَٔلُهُۥ مَن فِى ٱلسَّمَٰوَٰتِ وَٱلْأَرْضِ ۚ كُلَّ يَوْمٍ هُوَ فِى شَأْنٍۢ. ﴿29﴾ |
| 30 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿30﴾ |
| 31 ಓ ಜಿನ್ನ್ ಮತ್ತು ಮನುಷ್ಯರ ಸಮೂಹಗಳೇ! ಸದ್ಯವೇ ನಾವು ನಿಮಗೋಸ್ಕರ ಸಂಪೂರ್ಣ ಬಿಡುವು ಮಾಡಿಕೊಳ್ಳುವೆವು. | سَنَفْرُغُ لَكُمْ أَيُّهَ ٱلثَّقَلَانِ. ﴿31﴾ |
| 32 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿32﴾ |
| 33 ಓ ಜಿನ್ನ್ ಮತ್ತು ಮನುಷ್ಯರ ಸಮೂಹಗಳೇ! ಭೂಮ್ಯಾಕಾಶಗಳ ಸೀಮೆಗಳಿಂದ ಹೊರಗೆ ಓಡಿಹೋಗುವ ಸಾಮರ್ಥ್ಯ ನಿಮಗಿದ್ದರೆ ಓಡಿಹೋಗಿರಿ. ಪ್ರಬಲ ಶಕ್ತಿಯಿಲ್ಲದೆ ನಿಮಗೆ ಓಡಿಹೋಗಲು ಸಾಧ್ಯವಿಲ್ಲ. | يَٰمَعْشَرَ ٱلْجِنِّ وَٱلْإِنسِ إِنِ ٱسْتَطَعْتُمْ أَن تَنفُذُوا۟ مِنْ أَقْطَارِ ٱلسَّمَٰوَٰتِ وَٱلْأَرْضِ فَٱنفُذُوا۟ ۚ لَا تَنفُذُونَ إِلَّا بِسُلْطَٰنٍۢ. ﴿33﴾ |
| 34 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿34﴾ |
| 35 ನಿಮ್ಮ ಮೇಲೆ ಬೆಂಕಿಯ ಜ್ವಾಲೆಯನ್ನು ಮತ್ತು ಹೊಗೆಯನ್ನು ಬಿಡಲಾಗುವುದು. ಆಗ ನಿಮಗೆ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. | يُرْسَلُ عَلَيْكُمَا شُوَاظٌۭ مِّن نَّارٍۢ وَنُحَاسٌۭ فَلَا تَنتَصِرَانِ. ﴿35﴾ |
| 36 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿36﴾ |
| 37 ಆಕಾಶವು ಸಿಡಿದು ಹೋಳಾಗಿ ಕೆಂಪು ಚರ್ಮದಂತೆ ಕೆಂಪಾಗುವಾಗ. | فَإِذَا ٱنشَقَّتِ ٱلسَّمَآءُ فَكَانَتْ وَرْدَةًۭ كَٱلدِّهَانِ. ﴿37﴾ |
| 38 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿38﴾ |
|
39
ಅಂದು ಯಾವುದೇ ಮನುಷ್ಯನಲ್ಲಿ ಅಥವಾ ಜಿನ್ನ್‌ನಲ್ಲಿ ಅವನು ಮಾಡಿದ ಪಾಪಗಳ ಬಗ್ಗೆ ಕೇಳಲಾಗುವುದಿಲ್ಲ.[1]
[1] ಅಂದರೆ ಮನುಷ್ಯನು ಮಾಡಿದ ಪಾಪಗಳ ಬಗ್ಗೆ ಅವನೊಡನೆ ಕೇಳಲಾಗುವುದಿಲ್ಲ. ಏಕೆಂದರೆ ಎಲ್ಲವನ್ನೂ ದೇವದೂತರು ದಾಖಲಿಸಿಟ್ಟಿದ್ದಾರೆ ಮತ್ತು ಎಲ್ಲವೂ ಅವನ ಕರ್ಮಪುಸ್ತಕದಲ್ಲಿದೆ. ಬದಲಿಗೆ, ಅವನೊಡನೆ ಆ ಪಾಪಗಳನ್ನು ಏಕೆ ಮಾಡಿದೆ ಎಂದು ಕೇಳಲಾಗುವುದು. ಇನ್ನೊಂದು ಅರ್ಥದ ಪ್ರಕಾರ, ಅವರ ಪಾಪಗಳ ಬಗ್ಗೆ ಅವರೊಡನೆ ಕೇಳಲಾಗುವುದಿಲ್ಲ. ಅವರ ಬಾಯಿಗೆ ಮೊಹರು ಹಾಕಲಾಗುವುದು ಮತ್ತು ಅವರ ಅಂಗಾಂಗಗಳು ಎಲ್ಲವನ್ನೂ ಹೇಳಿಬಿಡುವುವು.
|
فَيَوْمَئِذٍۢ لَّا يُسْـَٔلُ عَن ذَنۢبِهِۦٓ إِنسٌۭ وَلَا جَآنٌّۭ. ﴿39﴾ |
| 40 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿40﴾ |
| 41 ಅಪರಾಧಿಗಳನ್ನು ಅವರ ಲಕ್ಷಣಗಳ ಮೂಲಕ ಗುರುತಿಸಲಾಗುವುದು. ಅವರನ್ನು ಅವರ ಜುಟ್ಟು ಮತ್ತು ಪಾದಗಳನ್ನು ಹಿಡಿದು ಒಯ್ಯಲಾಗುವುದು. | يُعْرَفُ ٱلْمُجْرِمُونَ بِسِيمَٰهُمْ فَيُؤْخَذُ بِٱلنَّوَٰصِى وَٱلْأَقْدَامِ. ﴿41﴾ |
| 42 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿42﴾ |
| 43 ಇದೇ ಅಪರಾಧಿಗಳು ನಿಷೇಧಿಸುತ್ತಿದ್ದ ನರಕಾಗ್ನಿ. | هَٰذِهِۦ جَهَنَّمُ ٱلَّتِى يُكَذِّبُ بِهَا ٱلْمُجْرِمُونَ. ﴿43﴾ |
| 44 ಅವರು ಅದರ ಮತ್ತು ಕುದಿಯುವ ಬಿಸಿನೀರಿನ ನಡುವೆ ಸುತ್ತುವರು. | يَطُوفُونَ بَيْنَهَا وَبَيْنَ حَمِيمٍ ءَانٍۢ. ﴿44﴾ |
| 45 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿45﴾ |
| 46 ತನ್ನ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲಬೇಕೆಂಬ ಭಯವಿರುವ ವ್ಯಕ್ತಿಗೆ ಎರಡು ಸ್ವರ್ಗಗಳಿವೆ. | وَلِمَنْ خَافَ مَقَامَ رَبِّهِۦ جَنَّتَانِ. ﴿46﴾ |
| 47 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿47﴾ |
| 48 ಅವೆರಡರಲ್ಲೂ ಅನೇಕ ಗೆಲ್ಲುಗಳು ಮತ್ತು ಶಾಖೆಗಳಿವೆ. | ذَوَاتَآ أَفْنَانٍۢ. ﴿48﴾ |
| 49 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿49﴾ |
| 50 ಅವೆರಡರಲ್ಲೂ ಹರಿಯುವ ಎರಡು ತೊರೆಗಳಿವೆ. | فِيهِمَا عَيْنَانِ تَجْرِيَانِ. ﴿50﴾ |
| 51 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿51﴾ |
| 52 ಅವೆರಡರಲ್ಲೂ ಎಲ್ಲಾ ತರಹದ ಹಣ್ಣುಗಳಲ್ಲೂ ಎರಡೆರಡು ವಿಧಗಳಿವೆ. | فِيهِمَا مِن كُلِّ فَٰكِهَةٍۢ زَوْجَانِ. ﴿52﴾ |
| 53 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿53﴾ |
| 54 ಅವರು ಕೆಲವು ಹಾಸುಗಳ ಮೇಲೆ ಒರಗಿ ಕುಳಿತುಕೊಳ್ಳುವರು. ಆ ಹಾಸುಗಳ ಒಳಪದರವು ದಪ್ಪ ರೇಷ್ಮೆ ಬಟ್ಟೆಯದ್ದಾಗಿದೆ. ಆ ಎರಡು ಸ್ವರ್ಗಗಳಲ್ಲಿರುವ ಹಣ್ಣುಗಳು ಹತ್ತಿರಕ್ಕೆ ಬಾಗಿಕೊಂಡಿರುವುವು. | مُتَّكِـِٔينَ عَلَىٰ فُرُشٍۭ بَطَآئِنُهَا مِنْ إِسْتَبْرَقٍۢ ۚ وَجَنَى ٱلْجَنَّتَيْنِ دَانٍۢ. ﴿54﴾ |
| 55 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿55﴾ |
| 56 ಅಲ್ಲಿ ದೃಷ್ಟಿಯನ್ನು ತಗ್ಗಿಸುವ ಅಪ್ಸರೆಯರಿದ್ದಾರೆ. ಅವರಿಗಿಂತ ಮೊದಲು ಯಾವುದೇ ಮನುಷ್ಯ ಅಥವಾ ಜಿನ್ನ್ ಆ ಅಪ್ಸರೆಯರನ್ನು ಮುಟ್ಟಿಲ್ಲ. | فِيهِنَّ قَٰصِرَٰتُ ٱلطَّرْفِ لَمْ يَطْمِثْهُنَّ إِنسٌۭ قَبْلَهُمْ وَلَا جَآنٌّۭ. ﴿56﴾ |
| 57 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿57﴾ |
| 58 ಆ ಅಪ್ಸರೆಯರು ಮಾಣಿಕ್ಯ ಮತ್ತು ಹವಳದಂತೆ ಕಾಣುತ್ತಾರೆ. | كَأَنَّهُنَّ ٱلْيَاقُوتُ وَٱلْمَرْجَانُ. ﴿58﴾ |
| 59 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿59﴾ |
| 60 ಒಳಿತಿಗೆ ಪ್ರತಿಫಲವಾಗಿ ಒಳಿತಲ್ಲದೆ ಬೇರೇನಿದೆ? | هَلْ جَزَآءُ ٱلْإِحْسَٰنِ إِلَّا ٱلْإِحْسَٰنُ. ﴿60﴾ |
| 61 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿61﴾ |
| 62 ಅವೆರಡರ ಹೊರತಾಗಿ ಬೇರೆ ಎರಡು ಸ್ವರ್ಗಗಳಿವೆ. | وَمِن دُونِهِمَا جَنَّتَانِ. ﴿62﴾ |
| 63 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿63﴾ |
| 64 ಅವೆರಡು ಕಡುಹಸಿರು ಬಣ್ಣದ್ದಾಗಿವೆ. | مُدْهَآمَّتَانِ. ﴿64﴾ |
| 65 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿65﴾ |
| 66 ಅವೆರಡರಲ್ಲೂ ರಭಸವಾಗಿ ಹರಿಯುವ ಎರಡು ತೊರೆಗಳಿವೆ. | فِيهِمَا عَيْنَانِ نَضَّاخَتَانِ. ﴿66﴾ |
| 67 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿67﴾ |
| 68 ಅವೆರಡರಲ್ಲೂ ಹಣ್ಣುಗಳು, ಖರ್ಜೂರದ ಮರಗಳು ಮತ್ತು ದಾಳಿಂಬೆಗಳಿವೆ. | فِيهِمَا فَٰكِهَةٌۭ وَنَخْلٌۭ وَرُمَّانٌۭ. ﴿68﴾ |
| 69 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿69﴾ |
| 70 ಅವುಗಳಲ್ಲಿ ಶ್ರೇಷ್ಠ ಗುಣನಡತೆಯ ಸುರಸುಂದರಿ ಮಹಿಳೆಯರಿದ್ದಾರೆ. | فِيهِنَّ خَيْرَٰتٌ حِسَانٌۭ. ﴿70﴾ |
| 71 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿71﴾ |
| 72 ಡೇರೆಗಳಲ್ಲಿ ಜೋಪಾನವಾಗಿಡಲಾದ ಬೆಳ್ಳಗಿನ ಅಪ್ಸರೆಯರು! | حُورٌۭ مَّقْصُورَٰتٌۭ فِى ٱلْخِيَامِ. ﴿72﴾ |
| 73 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿73﴾ |
| 74 ಅವರಿಗಿಂತ ಮೊದಲು ಯಾವುದೇ ಮನುಷ್ಯ ಅಥವಾ ಜಿನ್ನ್ ಆ ಅಪ್ಸರೆಯರನ್ನು ಮುಟ್ಟಿಲ್ಲ. | لَمْ يَطْمِثْهُنَّ إِنسٌۭ قَبْلَهُمْ وَلَا جَآنٌّۭ. ﴿74﴾ |
| 75 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿75﴾ |
| 76 ಅವರು ಹಸಿರು ದಿಂಬುಗಳಲ್ಲಿ ಮತ್ತು ಸುಂದರ ಜಮಾಖಾನೆಗಳಲ್ಲಿ ಒರಗಿ ಕುಳಿತುಕೊಳ್ಳುವರು. | مُتَّكِـِٔينَ عَلَىٰ رَفْرَفٍ خُضْرٍۢ وَعَبْقَرِىٍّ حِسَانٍۢ. ﴿76﴾ |
| 77 ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? | فَبِأَىِّ ءَالَآءِ رَبِّكُمَا تُكَذِّبَانِ. ﴿77﴾ |
| 78 ಮಹತ್ವಪೂರ್ಣನು ಮತ್ತು ಗೌರವಾರ್ಹನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರು ಸಮೃದ್ಧಪೂರ್ಣವಾಗಿದೆ. | تَبَٰرَكَ ٱسْمُ رَبِّكَ ذِى ٱلْجَلَٰلِ وَٱلْإِكْرَامِ. ﴿78﴾ |