الواقعة
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಪುನರುತ್ಥಾನವು ಸಂಭವಿಸುವಾಗ. | إِذَا وَقَعَتِ ٱلْوَاقِعَةُ. ﴿1﴾ |
| 2 ಅದು ಸಂಭವಿಸುತ್ತದೆ ಎಂಬುದರಲ್ಲಿ ಯಾವುದೇ ನಿರಾಕರಣೆಯಿಲ್ಲ. | لَيْسَ لِوَقْعَتِهَا كَاذِبَةٌ. ﴿2﴾ |
|
3
ಅದು (ಕೆಲವರನ್ನು) ಕೆಳಗಿಳಿಸುತ್ತದೆ ಮತ್ತು (ಕೆಲವರನ್ನು) ಮೇಲೇರಿಸುತ್ತದೆ.[1]
[1] ಕೆಳಗಿಳಿಸುವುದು ಮತ್ತು ಮೇಲೇರಿಸುವುದು ಎಂದರೆ ಗೌರವಿಸುವುದು ಮತ್ತು ಅವಮಾನಿಸುವುದು. ಪರಲೋಕದಲ್ಲಿ ಅಲ್ಲಾಹನ ನೀತಿವಂತ ದಾಸರನ್ನು ಉನ್ನತ ಸ್ಥಾನಮಾನಗಳಿಗೆ ಏರಿಸಲಾಗುತ್ತದೆ. ಅವರು ಇಹಲೋಕದಲ್ಲಿ ಎಷ್ಟು ಅವಮಾನಗಳನ್ನು ಎದುರಿಸಬೇಕಾಗಿ ಬಂದಿದ್ದರೂ ಸಹ. ಅದೇ ರೀತಿ ಪರಲೋಕದಲ್ಲಿ ದುಷ್ಕರ್ಮಿಗಳನ್ನು ಅತ್ಯಂತ ಅವಮಾನಕರ ಸ್ಥಾನಗಳಿಗೆ ಇಳಿಸಲಾಗುವುದು. ಅವರು ಇಹಲೋಕದಲ್ಲಿ ಎಷ್ಟೇ ಗೌರವಾರ್ಹರಾಗಿದ್ದರೂ ಸಹ.
|
خَافِضَةٌۭ رَّافِعَةٌ. ﴿3﴾ |
| 4 ಭೂಮಿಯನ್ನು ತೀಕ್ಷ್ಣವಾಗಿ ನಡುಗಿಸಲಾಗುವಾಗ. | إِذَا رُجَّتِ ٱلْأَرْضُ رَجًّۭا. ﴿4﴾ |
| 5 ಪರ್ವತಗಳು ಸಂಪೂರ್ಣ ನುಚ್ಚುನೂರಾಗುವಾಗ. | وَبُسَّتِ ٱلْجِبَالُ بَسًّۭا. ﴿5﴾ |
| 6 ಅವು ಚೆದರಿದ ಧೂಳಿಯಾಗುವಾಗ. | فَكَانَتْ هَبَآءًۭ مُّنۢبَثًّۭا. ﴿6﴾ |
| 7 ನೀವು ಮೂರು ಗುಂಪುಗಳಾಗುವಿರಿ. | وَكُنتُمْ أَزْوَٰجًۭا ثَلَٰثَةًۭ. ﴿7﴾ |
|
8
ಬಲಭಾಗದ ಜನರು—ಬಲಭಾಗದ ಜನರ ಸ್ಥಿತಿಯೇನು?[1]
[1] ಬಲಭಾಗದ ಜನರು ಎಂದರೆ ಕರ್ಮಪುಸ್ತಕವನ್ನು ಬಲಗೈಯಲ್ಲಿ ನೀಡಲಾಗುವವರು.
|
فَأَصْحَٰبُ ٱلْمَيْمَنَةِ مَآ أَصْحَٰبُ ٱلْمَيْمَنَةِ. ﴿8﴾ |
|
9
ಎಡಭಾಗದ ಜನರು—ಎಡಭಾಗದ ಜನರ ಸ್ಥಿತಿಯೇನು?[1]
[1] ಎಡಭಾಗದ ಜನರು ಎಂದರೆ ಕರ್ಮಪುಸ್ತಕವನ್ನು ಎಡಗೈಯಲ್ಲಿ ನೀಡಲಾಗುವವರು.
|
وَأَصْحَٰبُ ٱلْمَشْـَٔمَةِ مَآ أَصْحَٰبُ ٱلْمَشْـَٔمَةِ. ﴿9﴾ |
|
10
ಮುಂಚೂಣಿಯಲ್ಲಿದ್ದವರು ಮುಂಚೂಣಿಯಲ್ಲಿಯೇ ಇರುವರು.[1]
[1] ಪರಲೋಕದಲ್ಲಿ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. 1. ಮುಂಚೂಣಿಯಲ್ಲಿರುವವರು—ಇವರು ಸತ್ಯವಿಶ್ವಾಸಿಗಳಲ್ಲೇ ಅತ್ಯುತ್ಕೃಷ್ಟರು. 2. ಬಲಭಾಗದ ಜನರು—ಇವರು ಉಳಿದ ಸತ್ಯವಿಶ್ವಾಸಿಗಳು. 3. ಎಡಭಾಗದವರು—ಇವರು ಸತ್ಯನಿಷೇಧಿಗಳು.
|
وَٱلسَّٰبِقُونَ ٱلسَّٰبِقُونَ. ﴿10﴾ |
| 11 ಅವರು (ಅಲ್ಲಾಹನ) ಸಾಮೀಪ್ಯ ಪಡೆದವರು. | أُو۟لَٰٓئِكَ ٱلْمُقَرَّبُونَ. ﴿11﴾ |
| 12 ಅವರು ಸುಖಾನುಗ್ರಹಗಳು ತುಂಬಿದ ಸ್ವರ್ಗಗಳಲ್ಲಿರುವರು. | فِى جَنَّٰتِ ٱلنَّعِيمِ. ﴿12﴾ |
| 13 ಮೊದಲಿನವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು. | ثُلَّةٌۭ مِّنَ ٱلْأَوَّلِينَ. ﴿13﴾ |
| 14 ನಂತರದವರಲ್ಲಿ ಸೇರಿದ ಕೆಲವರು. | وَقَلِيلٌۭ مِّنَ ٱلْءَاخِرِينَ. ﴿14﴾ |
| 15 ಅವರು ಸ್ವರ್ಣದಾರದಿಂದ ನೇಯ್ದ ಮಂಚಗಳಲ್ಲಿರುವರು. | عَلَىٰ سُرُرٍۢ مَّوْضُونَةٍۢ. ﴿15﴾ |
| 16 ಅವುಗಳಲ್ಲಿ ಪರಸ್ಪರ ಎದುರುಬದುರಾಗಿ ಒರಗಿ ಕುಳಿತಿರುವರು. | مُّتَّكِـِٔينَ عَلَيْهَا مُتَقَٰبِلِينَ. ﴿16﴾ |
|
17
ಚಿರಂಜೀವಿಗಳಾದ ಹುಡುಗರು ಅವರ ನಡುವೆ ಸುತ್ತುವರು.[1]
[1] ಚಿರಂಜೀವಿಗಳಾದ ಹುಡುಗರು ಎಂದರೆ ಅವರು ಸದಾ ಹುಡುಗರೇ ಆಗಿರುತ್ತಾರೆ.
|
يَطُوفُ عَلَيْهِمْ وِلْدَٰنٌۭ مُّخَلَّدُونَ. ﴿17﴾ |
| 18 ಲೋಟಗಳು, ಹೂಜಿಗಳು ಮತ್ತು ಹರಿಯುವ ತೊರೆಯ ಶರಾಬನ್ನು ಹೊಂದಿರುವ ಪಾತ್ರೆಗಳೊಂದಿಗೆ. | بِأَكْوَابٍۢ وَأَبَارِيقَ وَكَأْسٍۢ مِّن مَّعِينٍۢ. ﴿18﴾ |
| 19 ಅದನ್ನು ಕುಡಿಯುವುದರಿಂದ ತಲೆನೋವು ಅಥವಾ ಅಮಲು ಉಂಟಾಗುವುದಿಲ್ಲ. | لَّا يُصَدَّعُونَ عَنْهَا وَلَا يُنزِفُونَ. ﴿19﴾ |
| 20 ಅವರಿಗೆ ಇಷ್ಟವಾದ ಹಣ್ಣುಗಳೊಂದಿಗೆ. | وَفَٰكِهَةٍۢ مِّمَّا يَتَخَيَّرُونَ. ﴿20﴾ |
| 21 ಅವರು ಬಯಸುವ ಹಕ್ಕಿಗಳ ಮಾಂಸಗಳೊಂದಿಗೆ. | وَلَحْمِ طَيْرٍۢ مِّمَّا يَشْتَهُونَ. ﴿21﴾ |
| 22 (ಅಲ್ಲಿ) ಅರಳಿದ ಕಣ್ಣುಗಳಿರುವ ಬೆಳ್ಳಗಿನ ಅಪ್ಸರೆಗಳಿರುವರು. | وَحُورٌ عِينٌۭ. ﴿22﴾ |
| 23 ಅವರು (ಚಿಪ್ಪುಗಳಲ್ಲಿ) ಜೋಪಾನವಾಗಿಡಲಾದ ಮುತ್ತುಗಳಂತೆ ಕಾಣುವರು. | كَأَمْثَٰلِ ٱللُّؤْلُؤِ ٱلْمَكْنُونِ. ﴿23﴾ |
| 24 ಇವೆಲ್ಲವೂ ಅವರು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿವೆ. | جَزَآءًۢ بِمَا كَانُوا۟ يَعْمَلُونَ. ﴿24﴾ |
| 25 ಅವರು ಅಲ್ಲಿ ಅನಗತ್ಯ ಮಾತುಗಳನ್ನು ಮತ್ತು ದೋಷಪೂರಿತ ಮಾತುಗಳನ್ನು ಕೇಳುವುದಿಲ್ಲ. | لَا يَسْمَعُونَ فِيهَا لَغْوًۭا وَلَا تَأْثِيمًا. ﴿25﴾ |
| 26 ಸಲಾಂ ಸಲಾಂ (ಶಾಂತಿ ಶಾಂತಿ) ಎಂಬ ಮಾತುಗಳ ಹೊರತು. | إِلَّا قِيلًۭا سَلَٰمًۭا سَلَٰمًۭا. ﴿26﴾ |
| 27 ಬಲಭಾಗದ ಜನರು—ಬಲಭಾಗದ ಜನರ ಸ್ಥಿತಿಯೇನು? | وَأَصْحَٰبُ ٱلْيَمِينِ مَآ أَصْحَٰبُ ٱلْيَمِينِ. ﴿27﴾ |
| 28 ಅವರು ಮುಳ್ಳುಗಳಿಲ್ಲದ ಬೋರೆ ಮರಗಳಲ್ಲಿ. | فِى سِدْرٍۢ مَّخْضُودٍۢ. ﴿28﴾ |
| 29 ಪದರ ಪದರ ಗೊನೆಗಳಿರುವ ಬಾಳೆಗಳಲ್ಲಿ. | وَطَلْحٍۢ مَّنضُودٍۢ. ﴿29﴾ |
| 30 ಸುದೀರ್ಘ ನೆರಳಿನಲ್ಲಿ. | وَظِلٍّۢ مَّمْدُودٍۢ. ﴿30﴾ |
| 31 ಹರಿಯುವ ನೀರಿನಲ್ಲಿ. | وَمَآءٍۢ مَّسْكُوبٍۢ. ﴿31﴾ |
| 32 ಹೇರಳ ಹಣ್ಣು-ಹಂಪಲುಗಳಲ್ಲಿ. | وَفَٰكِهَةٍۢ كَثِيرَةٍۢ. ﴿32﴾ |
| 33 ಅದು ಎಂದಿಗೂ ಮುಗಿಯುವುದಿಲ್ಲ ಮತ್ತು ತಡೆಯಲ್ಪಡುವುದಿಲ್ಲ. | لَّا مَقْطُوعَةٍۢ وَلَا مَمْنُوعَةٍۢ. ﴿33﴾ |
| 34 ಎತ್ತರವಾಗಿರುವ ಹಾಸಿಗೆಗಳಲ್ಲಿ. | وَفُرُشٍۢ مَّرْفُوعَةٍ. ﴿34﴾ |
| 35 ನಿಶ್ಚಯವಾಗಿಯೂ ನಾವು ಅವರ ಪತ್ನಿಯರನ್ನು ವಿಶೇಷ ರೀತಿಯಲ್ಲಿ ಸೃಷ್ಟಿಸಿದ್ದೇವೆ. | إِنَّآ أَنشَأْنَٰهُنَّ إِنشَآءًۭ. ﴿35﴾ |
| 36 ನಾವು ಅವರನ್ನು ಕನ್ಯೆಯರಾಗಿ ಮಾಡಿದ್ದೇವೆ. | فَجَعَلْنَٰهُنَّ أَبْكَارًا. ﴿36﴾ |
| 37 ಪ್ರೀತಿಸುವವರಾಗಿ ಮತ್ತು ಸಮವಯಸ್ಕರಾಗಿ. | عُرُبًا أَتْرَابًۭا. ﴿37﴾ |
| 38 ಇವೆಲ್ಲವೂ ಬಲಭಾಗದ ಜನರಿಗೋಸ್ಕರ. | لِّأَصْحَٰبِ ٱلْيَمِينِ. ﴿38﴾ |
| 39 ಅವರು ಮೊದಲಿನವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು. | ثُلَّةٌۭ مِّنَ ٱلْأَوَّلِينَ. ﴿39﴾ |
| 40 ನಂತರದವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು. | وَثُلَّةٌۭ مِّنَ ٱلْءَاخِرِينَ. ﴿40﴾ |
| 41 ಎಡಭಾಗದ ಜನರು—ಎಡಭಾಗದ ಜನರ ಸ್ಥಿತಿಯೇನು? | وَأَصْحَٰبُ ٱلشِّمَالِ مَآ أَصْحَٰبُ ٱلشِّمَالِ. ﴿41﴾ |
| 42 ಅವರು ಬಿಸಿ ಗಾಳಿ ಮತ್ತು ಕುದಿಯುವ ನೀರಿನಲ್ಲಿರುವರು. | فِى سَمُومٍۢ وَحَمِيمٍۢ. ﴿42﴾ |
| 43 ಕರಿ ಹೊಗೆಯ ನೆರಳುಗಳಲ್ಲಿ. | وَظِلٍّۢ مِّن يَحْمُومٍۢ. ﴿43﴾ |
| 44 ಅದು ತಂಪಾಗಿಲ್ಲ ಅಥವಾ ಆಹ್ಲಾದಕರವಾಗಿಲ್ಲ. | لَّا بَارِدٍۢ وَلَا كَرِيمٍ. ﴿44﴾ |
| 45 ಇದಕ್ಕಿಂತ ಮೊದಲು (ಇಹಲೋಕದಲ್ಲಿ) ಅವರು ಐಶ್ವರ್ಯವಂತರಾಗಿದ್ದರು. | إِنَّهُمْ كَانُوا۟ قَبْلَ ذَٰلِكَ مُتْرَفِينَ. ﴿45﴾ |
| 46 ಅವರು ದೊಡ್ಡ ದೊಡ್ಡ ಪಾಪಕೃತ್ಯಗಳಲ್ಲಿ ಪಟ್ಟುಹಿಡಿದು ಮುಂದುವರಿಯುತ್ತಿದ್ದರು. | وَكَانُوا۟ يُصِرُّونَ عَلَى ٱلْحِنثِ ٱلْعَظِيمِ. ﴿46﴾ |
| 47 ಅವರು ಹೇಳುತ್ತಿದ್ದರು: “ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವಂತವಾಗಿ ಎಬ್ಬಿಸಲಾಗುವುದೇ? | وَكَانُوا۟ يَقُولُونَ أَئِذَا مِتْنَا وَكُنَّا تُرَابًۭا وَعِظَٰمًا أَءِنَّا لَمَبْعُوثُونَ. ﴿47﴾ |
| 48 ನಮ್ಮ ಪೂರ್ವಜರನ್ನು ಕೂಡ?” | أَوَءَابَآؤُنَا ٱلْأَوَّلُونَ. ﴿48﴾ |
| 49 ಹೇಳಿರಿ: “ನಿಶ್ಚಯವಾಗಿಯೂ ನಿಮ್ಮಲ್ಲಿ ಮೊದಲಿನವರನ್ನು ಮತ್ತು ನಂತರದವರನ್ನು. | قُلْ إِنَّ ٱلْأَوَّلِينَ وَٱلْءَاخِرِينَ. ﴿49﴾ |
| 50 ಒಂದು ನಿಶ್ಚಿತ ದಿನದ ಸಮಯದಲ್ಲಿ ಒಟ್ಟುಗೂಡಿಸಲಾಗುವುದು. | لَمَجْمُوعُونَ إِلَىٰ مِيقَٰتِ يَوْمٍۢ مَّعْلُومٍۢ. ﴿50﴾ |
| 51 ನಂತರ, ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ! | ثُمَّ إِنَّكُمْ أَيُّهَا ٱلضَّآلُّونَ ٱلْمُكَذِّبُونَ. ﴿51﴾ |
| 52 ನೀವು ಖಂಡಿತ ಝಕ್ಕೂಮ್ ಮರದಿಂದ ತಿನ್ನುವಿರಿ. | لَءَاكِلُونَ مِن شَجَرٍۢ مِّن زَقُّومٍۢ. ﴿52﴾ |
| 53 ಅದರಿಂದ ನಿಮ್ಮ ಹೊಟ್ಟೆಗಳನ್ನು ತುಂಬಿಸುವಿರಿ. | فَمَالِـُٔونَ مِنْهَا ٱلْبُطُونَ. ﴿53﴾ |
| 54 ಅದರ ಮೇಲೆ ನೀವು ಕುದಿಯುವ ನೀರನ್ನು ಕುಡಿಯುವಿರಿ. | فَشَٰرِبُونَ عَلَيْهِ مِنَ ٱلْحَمِيمِ. ﴿54﴾ |
| 55 ಬಾಯಾರಿದ ಒಂಟೆಗಳು ಕುಡಿಯುವಂತೆ ಕುಡಿಯುವಿರಿ. | فَشَٰرِبُونَ شُرْبَ ٱلْهِيمِ. ﴿55﴾ |
| 56 ಇದು ಪ್ರತಿಫಲ ದಿನದಂದು ಅವರಿಗೆ ನೀಡಲಾಗುವ ಸತ್ಕಾರವಾಗಿದೆ.” | هَٰذَا نُزُلُهُمْ يَوْمَ ٱلدِّينِ. ﴿56﴾ |
| 57 ನಾವೇ ನಿಮ್ಮನ್ನು ಸೃಷ್ಟಿಸಿದವರು. ಆದರೂ ನೀವು ನಂಬುವುದಿಲ್ಲವೇಕೆ? | نَحْنُ خَلَقْنَٰكُمْ فَلَوْلَا تُصَدِّقُونَ. ﴿57﴾ |
| 58 ನೀವು ಸ್ರವಿಸುವ ವೀರ್ಯವನ್ನು ನೋಡಿದ್ದೀರಾ? | أَفَرَءَيْتُم مَّا تُمْنُونَ. ﴿58﴾ |
| 59 ಅದರಿಂದ ಮನುಷ್ಯನನ್ನು ಸೃಷ್ಟಿಸುವವರು ನೀವೋ? ಅಥವಾ ಸೃಷ್ಟಿಕರ್ತರು ನಾವೋ? | ءَأَنتُمْ تَخْلُقُونَهُۥٓ أَمْ نَحْنُ ٱلْخَٰلِقُونَ. ﴿59﴾ |
| 60 ನಾವೇ ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿದವರು. ನಾವು ಸೋಲುವುದಿಲ್ಲ, | نَحْنُ قَدَّرْنَا بَيْنَكُمُ ٱلْمَوْتَ وَمَا نَحْنُ بِمَسْبُوقِينَ. ﴿60﴾ |
| 61 ನಿಮ್ಮ ಸ್ಥಾನದಲ್ಲಿ ನಿಮ್ಮಂತಹವರನ್ನು ಸೃಷ್ಟಿಸುವ ಮತ್ತು ನಿಮ್ಮನ್ನು ನಿಮಗೆ (ಸ್ವಲ್ಪವೂ) ತಿಳಿದಿಲ್ಲದ ಹೊಸ ರೂಪದಲ್ಲಿ ಸೃಷ್ಟಿಸುವ ವಿಷಯದಲ್ಲಿ. | عَلَىٰٓ أَن نُّبَدِّلَ أَمْثَٰلَكُمْ وَنُنشِئَكُمْ فِى مَا لَا تَعْلَمُونَ. ﴿61﴾ |
| 62 ಪ್ರಥಮ ಬಾರಿ ಸೃಷ್ಟಿಸಿದ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಆದರೂ ನೀವೇಕೆ ಪಾಠ ಕಲಿಯುವುದಿಲ್ಲ? | وَلَقَدْ عَلِمْتُمُ ٱلنَّشْأَةَ ٱلْأُولَىٰ فَلَوْلَا تَذَكَّرُونَ. ﴿62﴾ |
| 63 ನೀವು ಬಿತ್ತುವ (ಬೀಜವನ್ನು) ನೀವು ನೋಡಿದ್ದೀರಾ? | أَفَرَءَيْتُم مَّا تَحْرُثُونَ. ﴿63﴾ |
| 64 ಅದನ್ನು ನೀವು (ಸಸ್ಯವಾಗಿ) ಬೆಳೆಸುತ್ತೀರೋ? ಅಥವಾ ಬೆಳೆಸುವವರು ನಾವೋ? | ءَأَنتُمْ تَزْرَعُونَهُۥٓ أَمْ نَحْنُ ٱلزَّٰرِعُونَ. ﴿64﴾ |
| 65 ನಾವು ಇಚ್ಛಿಸಿದರೆ ಅದನ್ನು (ಸಸ್ಯವನ್ನು) ಕಸಕಡ್ಡಿಯಾಗಿ ಮಾಡುತ್ತಿದ್ದೆವು. ಆಗ ನೀವು ಅಚ್ಚರಿಯಿಂದ ಹೇಳುವಿರಿ: | لَوْ نَشَآءُ لَجَعَلْنَٰهُ حُطَٰمًۭا فَظَلْتُمْ تَفَكَّهُونَ. ﴿65﴾ |
| 66 “ನಾವು ನಷ್ಟದ ಹೊರೆಯನ್ನು ಹೊರಬೇಕಾಗಿ ಬಂದಿದೆ. | إِنَّا لَمُغْرَمُونَ. ﴿66﴾ |
| 67 ಅಲ್ಲ, ವಾಸ್ತವವಾಗಿ ನಮಗೆ ತಡೆಯಲಾಗಿದೆ.” | بَلْ نَحْنُ مَحْرُومُونَ. ﴿67﴾ |
| 68 ನೀವು ಕುಡಿಯುವ ನೀರನ್ನು ನೀವು ನೋಡಿದ್ದೀರಾ? | أَفَرَءَيْتُمُ ٱلْمَآءَ ٱلَّذِى تَشْرَبُونَ. ﴿68﴾ |
| 69 ಅದನ್ನು ಮೋಡದಿಂದ ಸುರಿಸಿದವರು ನೀವೋ? ಅಥವಾ ಸುರಿಸುವವರು ನಾವೋ? | ءَأَنتُمْ أَنزَلْتُمُوهُ مِنَ ٱلْمُزْنِ أَمْ نَحْنُ ٱلْمُنزِلُونَ. ﴿69﴾ |
| 70 ನಾವು ಇಚ್ಛಿಸಿದರೆ ಅದನ್ನು ಕಹಿಯಾಗಿ ಮಾಡುತ್ತಿದ್ದೆವು. ಆದರೂ ನೀವು ಕೃತಜ್ಞರಾಗುವುದಿಲ್ಲವೇ? | لَوْ نَشَآءُ جَعَلْنَٰهُ أُجَاجًۭا فَلَوْلَا تَشْكُرُونَ. ﴿70﴾ |
| 71 ನೀವು ಉರಿಸುವ ಬೆಂಕಿಯನ್ನು ನೀವು ನೋಡಿದ್ದೀರಾ? | أَفَرَءَيْتُمُ ٱلنَّارَ ٱلَّتِى تُورُونَ. ﴿71﴾ |
| 72 ಅದರ ಮರವನ್ನು ಸೃಷ್ಟಿಸಿದ್ದು ನೀವೋ? ಅಥವಾ ಸೃಷ್ಟಿಸುವವರು ನಾವೋ? | ءَأَنتُمْ أَنشَأْتُمْ شَجَرَتَهَآ أَمْ نَحْنُ ٱلْمُنشِـُٔونَ. ﴿72﴾ |
|
73
ನಾವು ಅದನ್ನೊಂದು ಉಪದೇಶವಾಗಿ ಮತ್ತು ಪ್ರಯಾಣಿಕರಿಗೆ ಸವಲತ್ತಾಗಿ ಮಾಡಿದ್ದೇವೆ.[1]
[1] ಹಿಂದಿನ ಕಾಲದಲ್ಲಿ ಜನರು ಮರುಭೂಮಿ ಮತ್ತು ಅಡವಿಗಳ ಮೂಲಕ ಪ್ರಯಾಣ ಮಾಡುತ್ತಿದ್ದರು. ರಾತ್ರಿ ವೇಳೆಯಲ್ಲಿ ಅವರು ಮರಗಳನ್ನು ಕಡಿದು ಬೆಂಕಿಯುರಿಸುತ್ತಿದ್ದರು. ಅವರು ಅದರಿಂದ ದೊಂದಿಗಳನ್ನು ತಯಾರಿಸುತ್ತಿದ್ದರು ಮತ್ತು ಚಳಿ ಕಾಯಿಸುತ್ತಿದ್ದರು. ವನ್ಯಮೃಗಗಳನ್ನು ದೂರವಿಡಲು ಕೂಡ ಅದು ಬಳಕೆಯಾಗುತ್ತಿತ್ತು.
|
نَحْنُ جَعَلْنَٰهَا تَذْكِرَةًۭ وَمَتَٰعًۭا لِّلْمُقْوِينَ. ﴿73﴾ |
| 74 ಆದ್ದರಿಂದ ನೀವು ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ. | فَسَبِّحْ بِٱسْمِ رَبِّكَ ٱلْعَظِيمِ. ﴿74﴾ |
| 75 ನಾನು ನಕ್ಷತ್ರಗಳ ಅಸ್ತಮ ಸ್ಥಾನದ ಮೇಲೆ ಆಣೆ ಮಾಡಿ ಹೇಳುತ್ತೇನೆ. | ۞ فَلَآ أُقْسِمُ بِمَوَٰقِعِ ٱلنُّجُومِ. ﴿75﴾ |
| 76 ನೀವು ತಿಳಿದಿದ್ದರೆ ಅದು ಬಹಳ ದೊಡ್ಡ ಆಣೆಯಾಗಿದೆ. | وَإِنَّهُۥ لَقَسَمٌۭ لَّوْ تَعْلَمُونَ عَظِيمٌ. ﴿76﴾ |
| 77 ನಿಶ್ಚಯವಾಗಿಯೂ ಈ ಕುರ್‌ಆನ್ ಅತ್ಯಂತ ಆದರಣೀಯವಾಗಿದೆ. | إِنَّهُۥ لَقُرْءَانٌۭ كَرِيمٌۭ. ﴿77﴾ |
| 78 ಅದು ಭದ್ರವಾದ ಒಂದು ಗ್ರಂಥದಲ್ಲಿದೆ. | فِى كِتَٰبٍۢ مَّكْنُونٍۢ. ﴿78﴾ |
|
79
ಅದನ್ನು ಪರಿಶುದ್ಧ ಜನರು (ದೇವದೂತರುಗಳು) ಮಾತ್ರ ಸ್ಪರ್ಶಿಸುತ್ತಾರೆ.[1]
[1] ಅಂದರೆ ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಲ್ಲಿರುವ ಪವಿತ್ರ ಕುರ್‌ಆನನ್ನು ದೇವದೂತರುಗಳು ಮಾತ್ರ ಸ್ಪರ್ಶಿಸುತ್ತಾರೆ. ಕುರ್‌ಆನನ್ನು ಆಕಾಶಲೋಕದಿಂದ ಶೈತಾನರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ತಂದು ಕೊಡುತ್ತಿದ್ದಾರೆಂದು ಸತ್ಯನಿಷೇಧಿಗಳು ಅಪಪ್ರಚಾರ ಮಾಡುತ್ತಿದ್ದರು. ಇದಕ್ಕೆ ಉತ್ತರವಾಗಿ ಈ ವಚನವು ಅವತೀರ್ಣವಾಯಿತು. ಶೈತಾನರಿಗೆ ಕುರ್‌ಆನನ್ನು ತರಲು ಸಾಧ್ಯವಿಲ್ಲ. ಏಕೆಂದರೆ ಅದು ಅತ್ಯಂತ ಭದ್ರತೆಯಲ್ಲಿದೆ. ದೇವದೂತರುಗಳ ಹೊರತು ಬೇರೆ ಯಾರಿಗೂ ಅದನ್ನು ಸ್ಪರ್ಶಿಸುವ ಅಧಿಕಾರವಿಲ್ಲ.
|
لَّا يَمَسُّهُۥٓ إِلَّا ٱلْمُطَهَّرُونَ. ﴿79﴾ |
| 80 ಅದು ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ. | تَنزِيلٌۭ مِّن رَّبِّ ٱلْعَٰلَمِينَ. ﴿80﴾ |
| 81 ಹಾಗಾದರೆ ಈ ಮಾತುಗಳನ್ನು (ಕುರ್‌ಆನನ್ನು) ನೀವು ಅನಪೇಕ್ಷಿತವಾಗಿ ಸ್ವೀಕರಿಸುತ್ತೀರಾ? | أَفَبِهَٰذَا ٱلْحَدِيثِ أَنتُم مُّدْهِنُونَ. ﴿81﴾ |
| 82 ಸತ್ಯವನ್ನು ನಿಷೇಧಿಸುವುದನ್ನೇ ನಿಮ್ಮ (ಪರಿಪಾಲಕನು ಒದಗಿಸಿದ) ಉಪಜೀವನಕ್ಕೆ (ಕೃತಜ್ಞತೆಯಾಗಿ) ಮಾಡಿಕೊಳ್ಳುತ್ತೀರಾ? | وَتَجْعَلُونَ رِزْقَكُمْ أَنَّكُمْ تُكَذِّبُونَ. ﴿82﴾ |
| 83 ಆದರೆ ಪ್ರಾಣವು ಗಂಟಲಿಗೆ ತಲುಪುವಾಗ, | فَلَوْلَآ إِذَا بَلَغَتِ ٱلْحُلْقُومَ. ﴿83﴾ |
| 84 ಆ ವೇಳೆಯಲ್ಲಿ ನೀವು ನೋಡುತ್ತಲೇ ಇರುವಿರಿ. | وَأَنتُمْ حِينَئِذٍۢ تَنظُرُونَ. ﴿84﴾ |
| 85 ನಾವು ಆ ವ್ಯಕ್ತಿಗೆ ನಿಮಗಿಂತಲೂ ಹೆಚ್ಚು ಹತ್ತಿರದಲ್ಲಿದ್ದೇವೆ. ಆದರೆ ನಿಮಗೆ ನೋಡಲು ಸಾಧ್ಯವಾಗುವುದಿಲ್ಲ. | وَنَحْنُ أَقْرَبُ إِلَيْهِ مِنكُمْ وَلَٰكِن لَّا تُبْصِرُونَ. ﴿85﴾ |
| 86 ನೀವು ಇನ್ನೊಬ್ಬರ (ಅಲ್ಲಾಹನ) ಆಜ್ಞೆಗೆ ವಿಧೇಯರಲ್ಲದಿದ್ದರೆ, | فَلَوْلَآ إِن كُنتُمْ غَيْرَ مَدِينِينَ. ﴿86﴾ |
| 87 ಆ ಪ್ರಾಣವನ್ನು ಮರಳಿ ಪಡೆಯಬಾರದೇಕೆ? ನೀವು ಸತ್ಯವನ್ನೇ ಹೇಳುತ್ತಿದ್ದರೆ. | تَرْجِعُونَهَآ إِن كُنتُمْ صَٰدِقِينَ. ﴿87﴾ |
| 88 ಅವನು (ಮೃತನು) ಅಲ್ಲಾಹನ ಸಾಮೀಪ್ಯ ಪಡೆದವರಲ್ಲಿ ಸೇರಿದ್ದರೆ, | فَأَمَّآ إِن كَانَ مِنَ ٱلْمُقَرَّبِينَ. ﴿88﴾ |
| 89 ಅವನಿಗೆ ನೆಮ್ಮದಿ, ವಿಶಿಷ್ಟ ಆಹಾರ ಮತ್ತು ಅನುಗ್ರಹಪೂರ್ಣ ಸ್ವರ್ಗವಿದೆ. | فَرَوْحٌۭ وَرَيْحَانٌۭ وَجَنَّتُ نَعِيمٍۢ. ﴿89﴾ |
| 90 ಅವನು ಬಲಭಾಗದ ಜನರಲ್ಲಿ ಸೇರಿದವನಾಗಿದ್ದರೆ, | وَأَمَّآ إِن كَانَ مِنْ أَصْحَٰبِ ٱلْيَمِينِ. ﴿90﴾ |
| 91 (ಅವನೊಡನೆ ಹೇಳಲಾಗುವುದು): “ನೀನು ಬಲಭಾಗದ ಜನರಲ್ಲಿ ಸೇರಿದ್ದರಿಂದ ನಿನಗೆ ಸುರಕ್ಷೆಯಿದೆ.” | فَسَلَٰمٌۭ لَّكَ مِنْ أَصْحَٰبِ ٱلْيَمِينِ. ﴿91﴾ |
| 92 ಆದರೆ ಅವನು ಸತ್ಯನಿಷೇಧಿಗಳಲ್ಲಿ ಮತ್ತು ದುರ್ಮಾರ್ಗಿಗಳಲ್ಲಿ ಸೇರಿದವನಾಗಿದ್ದರೆ, | وَأَمَّآ إِن كَانَ مِنَ ٱلْمُكَذِّبِينَ ٱلضَّآلِّينَ. ﴿92﴾ |
| 93 ಅವನಿಗೆ ಕುದಿಯುವ ನೀರಿನ ಸತ್ಕಾರವಿದೆ. | فَنُزُلٌۭ مِّنْ حَمِيمٍۢ. ﴿93﴾ |
| 94 ನರಕಾಗ್ನಿಗೆ ಪ್ರವೇಶವಿದೆ. | وَتَصْلِيَةُ جَحِيمٍ. ﴿94﴾ |
| 95 ನಿಶ್ಚಯವಾಗಿಯೂ ಇದು ಖಚಿತವಾದ ಸತ್ಯವಾಗಿದೆ. | إِنَّ هَٰذَا لَهُوَ حَقُّ ٱلْيَقِينِ. ﴿95﴾ |
| 96 ಆದ್ದರಿಂದ ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ. | فَسَبِّحْ بِٱسْمِ رَبِّكَ ٱلْعَظِيمِ. ﴿96﴾ |