الحاقة
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಸತ್ಯವಾಗಿ ಸಂಭವಿಸುವಂತದ್ದು. | ٱلْحَآقَّةُ. ﴿1﴾ |
| 2 ಸತ್ಯವಾಗಿ ಸಂಭವಿಸುವಂತದ್ದು ಏನು? | مَا ٱلْحَآقَّةُ. ﴿2﴾ |
| 3 ಸತ್ಯವಾಗಿ ಸಂಭವಿಸುವಂತದ್ದು ಏನೆಂದು ನಿಮಗೇನು ಗೊತ್ತು? | وَمَآ أَدْرَىٰكَ مَا ٱلْحَآقَّةُ. ﴿3﴾ |
| 4 ಸಮೂದ್ ಮತ್ತು ಆದ್ ಗೋತ್ರದವರು ಆ ಭಯಾನಕ ಘಟನೆಯನ್ನು (ಪುನರುತ್ಥಾನವನ್ನು) ನಿಷೇಧಿಸಿದರು. | كَذَّبَتْ ثَمُودُ وَعَادٌۢ بِٱلْقَارِعَةِ. ﴿4﴾ |
| 5 ಸಮೂದ್ ಗೋತ್ರದವರನ್ನು ಮಿತಿಮೀರಿದ (ಭಯಾನಕ ಸದ್ದಿನ) ಮೂಲಕ ನಾಶ ಮಾಡಲಾಯಿತು. | فَأَمَّا ثَمُودُ فَأُهْلِكُوا۟ بِٱلطَّاغِيَةِ. ﴿5﴾ |
| 6 ಆದ್ ಗೋತ್ರದವರನ್ನು ಅತಿಶೀತ ಉಗ್ರ ಗಾಳಿಯ ಮೂಲಕ ನಾಶ ಮಾಡಲಾಯಿತು. | وَأَمَّا عَادٌۭ فَأُهْلِكُوا۟ بِرِيحٍۢ صَرْصَرٍ عَاتِيَةٍۢ. ﴿6﴾ |
| 7 ಅಲ್ಲಾಹು ಅದನ್ನು ಅವರ ಮೇಲೆ ಏಳು ರಾತ್ರಿಗಳು ಮತ್ತು ಎಂಟು ದಿನಗಳ ಕಾಲ ನಿರಂತರವಾಗಿ ಹೇರಿದನು; ನಂತರ ಆ ಜನರು—ಕುಸಿದು ಬಿದ್ದ ಖರ್ಜೂರ ಮರಗಳ ಕಾಂಡಗಳೋ ಎಂಬಂತೆ—ಬೋರಲು ಬಿದ್ದು ಸತ್ತಿರುವುದು ನಿಮಗೆ ಕಾಣಬಹುದು. | سَخَّرَهَا عَلَيْهِمْ سَبْعَ لَيَالٍۢ وَثَمَٰنِيَةَ أَيَّامٍ حُسُومًۭا فَتَرَى ٱلْقَوْمَ فِيهَا صَرْعَىٰ كَأَنَّهُمْ أَعْجَازُ نَخْلٍ خَاوِيَةٍۢ. ﴿7﴾ |
| 8 ಅವರಲ್ಲಿ ಯಾರಾದರೂ ಬಾಕಿಯುಳಿದದ್ದನ್ನು ನೀವು ಕಂಡಿದ್ದೀರಾ? | فَهَلْ تَرَىٰ لَهُم مِّنۢ بَاقِيَةٍۢ. ﴿8﴾ |
| 9 ಫರೋಹ, ಅವನಿಗಿಂತ ಮೊದಲಿನವರು ಮತ್ತು ಬುಡಮೇಲುಗೊಳಿಸಲಾದ ಊರಿನವರು ಪಾಪಗಳೊಂದಿಗೆ ಬಂದರು. | وَجَآءَ فِرْعَوْنُ وَمَن قَبْلَهُۥ وَٱلْمُؤْتَفِكَٰتُ بِٱلْخَاطِئَةِ. ﴿9﴾ |
| 10 ಅವರು ಅವರ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಿಗೆ ಅವಿಧೇಯತೆ ತೋರಿದರು. ಆಗ ಅಲ್ಲಾಹು ಅವರನ್ನು ಕಠೋರವಾದ ಹಿಡಿತದಿಂದ ಹಿಡಿದನು. | فَعَصَوْا۟ رَسُولَ رَبِّهِمْ فَأَخَذَهُمْ أَخْذَةًۭ رَّابِيَةً. ﴿10﴾ |
| 11 ನಿಶ್ಚಯವಾಗಿಯೂ ನೀರು ಎಲ್ಲೆ ಮೀರಿ ಹರಿದಾಗ ನಾವು ನಿಮ್ಮನ್ನು ನಾವೆಯಲ್ಲಿ ಹೊತ್ತೊಯ್ದೆವು. | إِنَّا لَمَّا طَغَا ٱلْمَآءُ حَمَلْنَٰكُمْ فِى ٱلْجَارِيَةِ. ﴿11﴾ |
| 12 ನಾವು ಅದನ್ನು ನಿಮಗೆ ಒಂದು ನೆನಪಾಗಿ ಮಾಡಲು ಮತ್ತು ಜಾಗೃತ ಕಿವಿಯು ಅದರ ಬಗ್ಗೆ ಜಾಗೃತವಾಗಿರಲು. | لِنَجْعَلَهَا لَكُمْ تَذْكِرَةًۭ وَتَعِيَهَآ أُذُنٌۭ وَٰعِيَةٌۭ. ﴿12﴾ |
| 13 ಕಹಳೆಯಲ್ಲಿ ಒಂದು ಊದುವಿಕೆಯನ್ನು ಊದಲಾದಾಗ. | فَإِذَا نُفِخَ فِى ٱلصُّورِ نَفْخَةٌۭ وَٰحِدَةٌۭ. ﴿13﴾ |
| 14 ಭೂಮಿ ಮತ್ತು ಪರ್ವತಗಳನ್ನು ಎತ್ತಲಾಗುವುದು ಮತ್ತು ಅವೆರಡನ್ನು ಒಂದೇ ಹೊಡೆತಕ್ಕೆ ಪುಡಿಪುಡಿ ಮಾಡಲಾಗುವುದು. | وَحُمِلَتِ ٱلْأَرْضُ وَٱلْجِبَالُ فَدُكَّتَا دَكَّةًۭ وَٰحِدَةًۭ. ﴿14﴾ |
| 15 ಅಂದು ಆ ಸಂಭವಿಸುವಿಕೆಯು (ಪುನರುತ್ಥಾನವು) ಸಂಭವಿಸುವುದು. | فَيَوْمَئِذٍۢ وَقَعَتِ ٱلْوَاقِعَةُ. ﴿15﴾ |
| 16 ಆಕಾಶವು ಇಬ್ಭಾಗವಾಗುವುದು ಮತ್ತು ಅಂದು ಅದು ಬಲಹೀನವಾಗಿರುವುದು. | وَٱنشَقَّتِ ٱلسَّمَآءُ فَهِىَ يَوْمَئِذٍۢ وَاهِيَةٌۭ. ﴿16﴾ |
| 17 ದೇವದೂತರುಗಳು ಅದರ ತುದಿಗಳಲ್ಲಿರುವರು. ಅಂದು ಅವರ ಮೇಲ್ಭಾಗದಲ್ಲಿ ಎಂಟು (ದೇವದೂತರು) ನಿಮ್ಮ ಪರಿಪಾಲಕನ (ಅಲ್ಲಾಹನ) ಸಿಂಹಾಸನವನ್ನು ಎತ್ತಿಕೊಂಡಿರುವರು. | وَٱلْمَلَكُ عَلَىٰٓ أَرْجَآئِهَا ۚ وَيَحْمِلُ عَرْشَ رَبِّكَ فَوْقَهُمْ يَوْمَئِذٍۢ ثَمَٰنِيَةٌۭ. ﴿17﴾ |
| 18 ಅಂದು ನಿಮ್ಮೆಲ್ಲರನ್ನೂ ಪ್ರದರ್ಶಿಸಲಾಗುವುದು. ನಿಮ್ಮ ಯಾವುದೇ ರಹಸ್ಯಗಳು ರಹಸ್ಯವಾಗಿರುವುದಿಲ್ಲ. | يَوْمَئِذٍۢ تُعْرَضُونَ لَا تَخْفَىٰ مِنكُمْ خَافِيَةٌۭ. ﴿18﴾ |
| 19 ಆದ್ದರಿಂದ ಯಾರಿಗೆ ಅವನ ಕರ್ಮಪುಸ್ತಕವನ್ನು ಬಲಗೈಯಲ್ಲಿ ನೀಡಲಾಗುತ್ತದೋ ಅವನು ಹೇಳುವನು: “ಇಗೋ! ನನ್ನ ಕರ್ಮಪುಸ್ತಕವನ್ನು ಓದಿರಿ! | فَأَمَّا مَنْ أُوتِىَ كِتَٰبَهُۥ بِيَمِينِهِۦ فَيَقُولُ هَآؤُمُ ٱقْرَءُوا۟ كِتَٰبِيَهْ. ﴿19﴾ |
| 20 ನಿಶ್ಚಯವಾಗಿಯೂ, ನಾನು ನನ್ನ ವಿಚಾರಣೆಯನ್ನು ಎದುರಿಸಬೇಕಾಗಿದೆಯೆಂದು ನನಗೆ ಪೂರ್ಣ ನಂಬಿಕೆಯಿತ್ತು.” | إِنِّى ظَنَنتُ أَنِّى مُلَٰقٍ حِسَابِيَهْ. ﴿20﴾ |
| 21 ಆದ್ದರಿಂದ ಅವನು ಸಂತೃಪ್ತ ಜೀವನದಲ್ಲಿರುವನು. | فَهُوَ فِى عِيشَةٍۢ رَّاضِيَةٍۢ. ﴿21﴾ |
| 22 ಉನ್ನತ ಸ್ವರ್ಗದಲ್ಲಿ. | فِى جَنَّةٍ عَالِيَةٍۢ. ﴿22﴾ |
| 23 ಅದರ ಹಣ್ಣುಗಳು ಬಾಗಿಕೊಂಡಿರುವುವು. | قُطُوفُهَا دَانِيَةٌۭ. ﴿23﴾ |
| 24 (ಅವರೊಡನೆ ಹೇಳಲಾಗುವುದು): “ಕಳೆದುಹೋದ ದಿನಗಳಲ್ಲಿ ನೀವು ಮುಂದಕ್ಕೆ ಕಳುಹಿಸಿದ ಸತ್ಕರ್ಮಗಳ ಕಾರಣದಿಂದ ಸಂತೋಷವಾಗಿ ತಿನ್ನಿರಿ ಮತ್ತು ಕುಡಿಯಿರಿ.” | كُلُوا۟ وَٱشْرَبُوا۟ هَنِيٓـًٔۢا بِمَآ أَسْلَفْتُمْ فِى ٱلْأَيَّامِ ٱلْخَالِيَةِ. ﴿24﴾ |
| 25 ಆದರೆ ಯಾರಿಗೆ ಅವನ ಕರ್ಮಪುಸ್ತಕವನ್ನು ಎಡಗೈಯಲ್ಲಿ ನೀಡಲಾಗುತ್ತದೋ ಅವನು ಹೇಳುವನು: “ನನಗೆ ನನ್ನ ಕರ್ಮಪುಸ್ತಕವನ್ನು ನೀಡದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು! | وَأَمَّا مَنْ أُوتِىَ كِتَٰبَهُۥ بِشِمَالِهِۦ فَيَقُولُ يَٰلَيْتَنِى لَمْ أُوتَ كِتَٰبِيَهْ. ﴿25﴾ |
| 26 ನನ್ನ ವಿಚಾರಣೆ ಏನೆಂದು ನನಗೆ ತಿಳಿಯದಿರುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)! | وَلَمْ أَدْرِ مَا حِسَابِيَهْ. ﴿26﴾ |
| 27 ಮರಣದೊಂದಿಗೆ ಎಲ್ಲವೂ ಕೊನೆಗೊಳ್ಳುತ್ತಿದ್ದರೆ ಎಷ್ಟು ಚೆನ್ನಾಗಿತ್ತು! | يَٰلَيْتَهَا كَانَتِ ٱلْقَاضِيَةَ. ﴿27﴾ |
| 28 ನನಗೆ ನನ್ನ ಆಸ್ತಿ ಪ್ರಯೋಜನ ನೀಡಲಿಲ್ಲ. | مَآ أَغْنَىٰ عَنِّى مَالِيَهْ ۜ. ﴿28﴾ |
| 29 ನನ್ನ ಅಧಿಕಾರವು ನನ್ನಿಂದ ಹೊರಟುಹೋಗಿದೆ.” | هَلَكَ عَنِّى سُلْطَٰنِيَهْ. ﴿29﴾ |
| 30 (ಆಗ ಹೀಗೆ ಆಜ್ಞಾಪಿಸಲಾಗುವುದು): “ಅವನನ್ನು ಹಿಡಿಯಿರಿ; ಮತ್ತು ಅವನಿಗೆ ಸಂಕೋಲೆಯನ್ನು ತೊಡಿಸಿರಿ. | خُذُوهُ فَغُلُّوهُ. ﴿30﴾ |
| 31 ನಂತರ ಅವನನ್ನು ನರಕದಲ್ಲಿ ಹಾಕಿರಿ. | ثُمَّ ٱلْجَحِيمَ صَلُّوهُ. ﴿31﴾ |
| 32 ನಂತರ ಎಪ್ಪತ್ತು ಮೊಳ ಅಳತೆಯಿರುವ ಸಂಕೋಲೆಯಲ್ಲಿ ಅವನನ್ನು ನುಸುಳಿಸಿರಿ. | ثُمَّ فِى سِلْسِلَةٍۢ ذَرْعُهَا سَبْعُونَ ذِرَاعًۭا فَٱسْلُكُوهُ. ﴿32﴾ |
| 33 ನಿಶ್ಚಯವಾಗಿಯೂ, ಅವನು ಪರಮೋಚ್ಛನಾದ ಅಲ್ಲಾಹನಲ್ಲಿ ವಿಶ್ವಾಸವಿಡುತ್ತಿರಲಿಲ್ಲ. | إِنَّهُۥ كَانَ لَا يُؤْمِنُ بِٱللَّهِ ٱلْعَظِيمِ. ﴿33﴾ |
| 34 ಅವನು ಬಡವರಿಗೆ ಅನ್ನ ನೀಡಲು ಪ್ರೇರೇಪಿಸುತ್ತಿರಲಿಲ್ಲ. | وَلَا يَحُضُّ عَلَىٰ طَعَامِ ٱلْمِسْكِينِ. ﴿34﴾ |
| 35 ಆದ್ದರಿಂದ ಇಂದು ಅವನಿಗೆ ಇಲ್ಲಿ ಯಾವುದೇ ಆತ್ಮೀಯ ಗೆಳೆಯನಿಲ್ಲ. | فَلَيْسَ لَهُ ٱلْيَوْمَ هَٰهُنَا حَمِيمٌۭ. ﴿35﴾ |
| 36 ಕೀವಿನಿಂದಲೇ ಹೊರತು ಅವನಿಗೆ ಬೇರೆ ಆಹಾರವಿಲ್ಲ. | وَلَا طَعَامٌ إِلَّا مِنْ غِسْلِينٍۢ. ﴿36﴾ |
| 37 ಅದನ್ನು ಪಾಪಿಗಳ ಹೊರತಾಗಿ ಯಾರೂ ಸೇವಿಸುವುದಿಲ್ಲ. | لَّا يَأْكُلُهُۥٓ إِلَّا ٱلْخَٰطِـُٔونَ. ﴿37﴾ |
| 38 ಆದ್ದರಿಂದ ನೀವು ನೋಡುತ್ತಿರುವುದರ ಮೇಲೆ ನಾನು ಆಣೆ ಮಾಡುತ್ತೇನೆ. | فَلَآ أُقْسِمُ بِمَا تُبْصِرُونَ. ﴿38﴾ |
| 39 ನೀವು ನೋಡದಿರುವವುಗಳ ಮೇಲೂ (ಆಣೆ ಮಾಡುತ್ತೇನೆ). | وَمَا لَا تُبْصِرُونَ. ﴿39﴾ |
| 40 ನಿಶ್ಚಯವಾಗಿಯೂ ಇದು (ಕುರ್‌ಆನ್) ಒಬ್ಬ ಗಣ್ಯ ಸಂದೇಶವಾಹಕನ ವಚನವಾಗಿದೆ. | إِنَّهُۥ لَقَوْلُ رَسُولٍۢ كَرِيمٍۢ. ﴿40﴾ |
| 41 ಇದು ಯಾವುದೇ ಕವಿಯ ಮಾತುಗಳಲ್ಲ. ನೀವು ಸ್ವಲ್ಪವೇ ವಿಶ್ವಾಸವಿಡುತ್ತೀರಿ. | وَمَا هُوَ بِقَوْلِ شَاعِرٍۢ ۚ قَلِيلًۭا مَّا تُؤْمِنُونَ. ﴿41﴾ |
| 42 ಇದು ಜ್ಯೋತಿಷಿಯ ಮಾತುಗಳೂ ಅಲ್ಲ. ನೀವು ಸ್ವಲ್ಪವೇ ಉಪದೇಶ ಪಡೆಯುತ್ತೀರಿ. | وَلَا بِقَوْلِ كَاهِنٍۢ ۚ قَلِيلًۭا مَّا تَذَكَّرُونَ. ﴿42﴾ |
| 43 ಇದು ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಗ್ರಂಥವಾಗಿದೆ. | تَنزِيلٌۭ مِّن رَّبِّ ٱلْعَٰلَمِينَ. ﴿43﴾ |
| 44 ಅವರು (ಪ್ರವಾದಿ) ನಮ್ಮ ಮೇಲೆ ಕೆಲವು (ಸುಳ್ಳು) ಮಾತುಗಳನ್ನು ಆರೋಪಿಸುತ್ತಿದ್ದರೆ, | وَلَوْ تَقَوَّلَ عَلَيْنَا بَعْضَ ٱلْأَقَاوِيلِ. ﴿44﴾ |
| 45 ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು. | لَأَخَذْنَا مِنْهُ بِٱلْيَمِينِ. ﴿45﴾ |
| 46 ನಂತರ ನಾವು ಅವರ ಅಪಧಮನಿಯನ್ನು ಕತ್ತರಿಸುತ್ತಿದ್ದೆವು. | ثُمَّ لَقَطَعْنَا مِنْهُ ٱلْوَتِينَ. ﴿46﴾ |
| 47 ಆಗ ಅವರನ್ನು (ನಮ್ಮಿಂದ) ತಡೆಯುವವರು ನಿಮ್ಮಲ್ಲಿ ಯಾರೂ ಇರಲಾರರು. | فَمَا مِنكُم مِّنْ أَحَدٍ عَنْهُ حَٰجِزِينَ. ﴿47﴾ |
| 48 ನಿಶ್ಚಯವಾಗಿಯೂ ಇದು ದೇವಭಯವುಳ್ಳವರಿಗೆ ಒಂದು ಉಪದೇಶವಾಗಿದೆ. | وَإِنَّهُۥ لَتَذْكِرَةٌۭ لِّلْمُتَّقِينَ. ﴿48﴾ |
| 49 ನಿಶ್ಚಯವಾಗಿಯೂ ನಿಮ್ಮಲ್ಲಿ ಇದನ್ನು ನಿಷೇಧಿಸುವವರಿದ್ದಾರೆಂದು ನಮಗೆ ಬಹಳ ಚೆನ್ನಾಗಿ ತಿಳಿದಿದೆ. | وَإِنَّا لَنَعْلَمُ أَنَّ مِنكُم مُّكَذِّبِينَ. ﴿49﴾ |
| 50 ನಿಶ್ಚಯವಾಗಿಯೂ ಅದು (ನಿಷೇಧಿಸುವುದು) ಸತ್ಯನಿಷೇಧಿಗಳ ವಿಷಾದಕ್ಕೆ ಕಾರಣವಾಗಲಿದೆ. | وَإِنَّهُۥ لَحَسْرَةٌ عَلَى ٱلْكَٰفِرِينَ. ﴿50﴾ |
| 51 ನಿಶ್ಚಯವಾಗಿಯೂ ಅದು ಖಚಿತ ಸತ್ಯವಾಗಿದೆ. | وَإِنَّهُۥ لَحَقُّ ٱلْيَقِينِ. ﴿51﴾ |
| 52 ಆದ್ದರಿಂದ ನೀವು ಪರಮೋಚ್ಛನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಅವನ ಪರಿಶುದ್ಧಿಯನ್ನು ಕೊಂಡಾಡಿರಿ. | فَسَبِّحْ بِٱسْمِ رَبِّكَ ٱلْعَظِيمِ. ﴿52﴾ |