Loading date... | Loading Hijri date... | Loading time...

المعارج

ಕನ್ನಡ Translation with Arabic Quran Text

ಕನ್ನಡ العربية
1 ಸಂಭವಿಸಲಿರುವ ಶಿಕ್ಷೆಯ ಬಗ್ಗೆ ಕೇಳುಗನೊಬ್ಬನು ಕೇಳಿದನು. سَأَلَ سَآئِلٌۢ بِعَذَابٍۢ وَاقِعٍۢ. ﴿1﴾
2 ಸತ್ಯನಿಷೇಧಿಗಳಿಗೆ (ಸಂಭವಿಸುವ ಶಿಕ್ಷೆ). ಅದನ್ನು ನಿವಾರಿಸುವವರಾರೂ ಇಲ್ಲ. لِّلْكَٰفِرِينَ لَيْسَ لَهُۥ دَافِعٌۭ. ﴿2﴾
3 ಆರೋಹಣ ದಾರಿಗಳ ಒಡೆಯನಾದ ಅಲ್ಲಾಹನಿಂದ (ಸಂಭವಿಸಲಿರುವ ಶಿಕ್ಷೆ). مِّنَ ٱللَّهِ ذِى ٱلْمَعَارِجِ. ﴿3﴾
4 ಐವತ್ತು ಸಾವಿರ ವರ್ಷಗಳ ಗಾತ್ರವನ್ನು ಹೊಂದಿರುವ ಒಂದು ದಿನದಲ್ಲಿ ದೇವದೂತರು ಮತ್ತು ರೂಹ್ ಅವನ ಬಳಿಗೆ ಏರಿಹೋಗುತ್ತಾರೆ. تَعْرُجُ ٱلْمَلَٰٓئِكَةُ وَٱلرُّوحُ إِلَيْهِ فِى يَوْمٍۢ كَانَ مِقْدَارُهُۥ خَمْسِينَ أَلْفَ سَنَةٍۢ. ﴿4﴾
5 ಆದ್ದರಿಂದ ನೀವು ಉತ್ತಮ ರೀತಿಯಲ್ಲಿ ತಾಳ್ಮೆ ತೋರಿರಿ. فَٱصْبِرْ صَبْرًۭا جَمِيلًا. ﴿5﴾
6 ನಿಶ್ಚಯವಾಗಿಯೂ ಅವರು ಅದನ್ನು ದೂರದಲ್ಲಿರುವಂತೆ ಕಾಣುತ್ತಿದ್ದಾರೆ. إِنَّهُمْ يَرَوْنَهُۥ بَعِيدًۭا. ﴿6﴾
7 ಆದರೆ ನಾವು ಅದನ್ನು ಸಮೀಪದಲ್ಲಿರುವಂತೆ ಕಾಣುತ್ತಿದ್ದೇವೆ. وَنَرَىٰهُ قَرِيبًۭا. ﴿7﴾
8 ಆಕಾಶವು ಎಣ್ಣೆಯ ಮಡ್ಡಿಯಂತಾಗುವ ದಿನ. يَوْمَ تَكُونُ ٱلسَّمَآءُ كَٱلْمُهْلِ. ﴿8﴾
9 ಪರ್ವತಗಳು ಬಣ್ಣದ ತುಪ್ಪಳದಂತಾಗುವ ದಿನ. وَتَكُونُ ٱلْجِبَالُ كَٱلْعِهْنِ. ﴿9﴾
10 ಯಾವುದೇ ಒಬ್ಬ ಗೆಳೆಯನು ತನ್ನ ಆತ್ಮೀಯ ಗೆಳೆಯನ ಬಗ್ಗೆ ಕೇಳುವುದಿಲ್ಲ. وَلَا يَسْـَٔلُ حَمِيمٌ حَمِيمًۭا. ﴿10﴾
11 ವಾಸ್ತವವಾಗಿ ಅವರನ್ನು ಪರಸ್ಪರ ತೋರಿಸಲಾಗುವುದು. ಅಪರಾಧಿಯು ಆಶಿಸುವನು—ಅಂದಿನ ಶಿಕ್ಷೆಗೆ ಬದಲಿಯಾಗಿ ತನ್ನ ಗಂಡುಮಕ್ಕಳನ್ನು, يُبَصَّرُونَهُمْ ۚ يَوَدُّ ٱلْمُجْرِمُ لَوْ يَفْتَدِى مِنْ عَذَابِ يَوْمِئِذٍۭ بِبَنِيهِ. ﴿11﴾
12 ತನ್ನ ಪತ್ನಿಯನ್ನು ಮತ್ತು ಸಹೋದರನನ್ನು, وَصَٰحِبَتِهِۦ وَأَخِيهِ. ﴿12﴾
13 ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನು, وَفَصِيلَتِهِ ٱلَّتِى تُـْٔوِيهِ. ﴿13﴾
14 ಮತ್ತು ಭೂಮಿಯಲ್ಲಿರುವ ಎಲ್ಲರನ್ನೂ ಪರಿಹಾರವಾಗಿ ನೀಡಿ ಅದು ತನ್ನನ್ನು ಪಾರು ಮಾಡುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)! وَمَن فِى ٱلْأَرْضِ جَمِيعًۭا ثُمَّ يُنجِيهِ. ﴿14﴾
15 ಎಂದಿಗೂ ಇಲ್ಲ! ನಿಶ್ಚಯವಾಗಿಯೂ ಅದು ಧಗಧಗಿಸುವ ಬೆಂಕಿಯಾಗಿದೆ. كَلَّآ ۖ إِنَّهَا لَظَىٰ. ﴿15﴾
16 ತಲೆಯ ಚರ್ಮವನ್ನು ಸುಲಿಯುವಂತಹ ಬೆಂಕಿ. نَزَّاعَةًۭ لِّلشَّوَىٰ. ﴿16﴾
17 ಹಿಂದಕ್ಕೆ ಸರಿದ ಮತ್ತು ಮುಖ ತಿರುಗಿಸಿ ನಡೆದ ಎಲ್ಲರನ್ನೂ ಅದು ಕರೆಯುತ್ತದೆ. تَدْعُوا۟ مَنْ أَدْبَرَ وَتَوَلَّىٰ. ﴿17﴾
18 (ಆಸ್ತಿಯನ್ನು) ಕೂಡಿಟ್ಟು ಜೋಪಾನವಾಗಿಟ್ಟವನನ್ನೂ (ಕರೆಯುತ್ತದೆ). وَجَمَعَ فَأَوْعَىٰٓ. ﴿18﴾
19 ನಿಶ್ಚಯವಾಗಿಯೂ ಮನುಷ್ಯನನ್ನು ಚಿಂತಾಕ್ರಾಂತನಾಗಿ ಸೃಷ್ಟಿಸಲಾಗಿದೆ. ۞ إِنَّ ٱلْإِنسَٰنَ خُلِقَ هَلُوعًا. ﴿19﴾
20 ಅವನಿಗೆ ವಿಪತ್ತು ಸಂಭವಿಸಿದರೆ ತಾಳ್ಮೆಗೆಡುತ್ತಾನೆ. إِذَا مَسَّهُ ٱلشَّرُّ جَزُوعًۭا. ﴿20﴾
21 ಅವನಿಗೆ ಆರಾಮ ದೊರೆತರೆ ಜಿಪುಣನಾಗುತ್ತಾನೆ. وَإِذَا مَسَّهُ ٱلْخَيْرُ مَنُوعًا. ﴿21﴾
22 ಆದರೆ ನಮಾಝ್ ನಿರ್ವಹಿಸುವವರು ಇದಕ್ಕೆ ಹೊರತಾಗಿದ್ದಾರೆ. إِلَّا ٱلْمُصَلِّينَ. ﴿22﴾
23 ಅವರು ಯಾರೆಂದರೆ ತಮ್ಮ ನಮಾಝ್‌ನಲ್ಲಿ ಸ್ಥಿರವಾಗಿರುವವರು. ٱلَّذِينَ هُمْ عَلَىٰ صَلَاتِهِمْ دَآئِمُونَ. ﴿23﴾
24 ತಮ್ಮ ಸಂಪತ್ತಿನಲ್ಲಿ ಒಂದು ನಿಶ್ಚಿತ ಹಕ್ಕು ಇರುವವರು. وَٱلَّذِينَ فِىٓ أَمْوَٰلِهِمْ حَقٌّۭ مَّعْلُومٌۭ. ﴿24﴾
25 ಬೇಡುವವನಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವನಿಗೆ. لِّلسَّآئِلِ وَٱلْمَحْرُومِ. ﴿25﴾
26 ಅವರು ಪ್ರತಿಫಲದ ದಿನವನ್ನು ಸತ್ಯವೆಂದು ದೃಢೀಕರಿಸುವವರು. وَٱلَّذِينَ يُصَدِّقُونَ بِيَوْمِ ٱلدِّينِ. ﴿26﴾
27 ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯ ಬಗ್ಗೆ ಭಯಪಡುವವರು. وَٱلَّذِينَ هُم مِّنْ عَذَابِ رَبِّهِم مُّشْفِقُونَ. ﴿27﴾
28 ನಿಶ್ಚಯವಾಗಿಯೂ ಅವರ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಭಯಪಡದೇ ಇರುವಂತದ್ದಲ್ಲ. إِنَّ عَذَابَ رَبِّهِمْ غَيْرُ مَأْمُونٍۢ. ﴿28﴾
29 ಅವರು ತಮ್ಮ ಗುಹ್ಯಾಂಗಗಳನ್ನು ಕಾಪಾಡಿಕೊಳ್ಳುವವರು. وَٱلَّذِينَ هُمْ لِفُرُوجِهِمْ حَٰفِظُونَ. ﴿29﴾
30 ಅವರ ಪತ್ನಿಯರು ಅಥವಾ ಅವರ ಬಲಗೈಗಳು ಅಧೀನದಲ್ಲಿರಿಸಿದವರನ್ನು ಬಿಟ್ಟು. ನಿಶ್ಚಯವಾಗಿಯೂ ಅವರು ಆಕ್ಷೇಪಾರ್ಹರಲ್ಲ. إِلَّا عَلَىٰٓ أَزْوَٰجِهِمْ أَوْ مَا مَلَكَتْ أَيْمَٰنُهُمْ فَإِنَّهُمْ غَيْرُ مَلُومِينَ. ﴿30﴾
31 ಆದರೆ ಯಾರು ಅದಕ್ಕಿಂತ ಆಚೆಗಿರುವುದನ್ನು ಹುಡುಕುತ್ತಾರೋ ಅವರೇ ಎಲ್ಲೆ ಮೀರಿದವರು. فَمَنِ ٱبْتَغَىٰ وَرَآءَ ذَٰلِكَ فَأُو۟لَٰٓئِكَ هُمُ ٱلْعَادُونَ. ﴿31﴾
32 ಅವರು ತಮ್ಮ ವಿಶ್ವಾಸಾರ್ಹತೆಗಳನ್ನು ಮತ್ತು ಕರಾರುಗಳನ್ನು ಪಾಲಿಸುವವರು. وَٱلَّذِينَ هُمْ لِأَمَٰنَٰتِهِمْ وَعَهْدِهِمْ رَٰعُونَ. ﴿32﴾
33 ಅವರು ತಮ್ಮ ಸಾಕ್ಷಿಗಳಲ್ಲಿ ನೇರವಾಗಿ ನಿಲ್ಲುವವರು. وَٱلَّذِينَ هُم بِشَهَٰدَٰتِهِمْ قَآئِمُونَ. ﴿33﴾
34 ಅವರು ತಮ್ಮ ನಮಾಝ್‌ಗಳನ್ನು ಸಂರಕ್ಷಿಸುವವರು. وَٱلَّذِينَ هُمْ عَلَىٰ صَلَاتِهِمْ يُحَافِظُونَ. ﴿34﴾
35 ಅವರು ಸ್ವರ್ಗಗಳಲ್ಲಿ ಗೌರವಿಸಲ್ಪಡುವರು. أُو۟لَٰٓئِكَ فِى جَنَّٰتٍۢ مُّكْرَمُونَ. ﴿35﴾
36 ಸತ್ಯನಿಷೇಧಿಗಳಿಗೇನಾಗಿದೆ? ಅವರೇಕೆ ನಿಮ್ಮ ಕಡೆಗೆ ಅವಸರದಿಂದ ಬರುತ್ತಿದ್ದಾರೆ? فَمَالِ ٱلَّذِينَ كَفَرُوا۟ قِبَلَكَ مُهْطِعِينَ. ﴿36﴾
37 ಗುಂಪು ಗುಂಪಾಗಿ ಬಲಭಾಗದಿಂದ ಮತ್ತು ಎಡಭಾಗದಿಂದ?[1]
[1] ಮಕ್ಕಾದ ಸತ್ಯನಿಷೇಧಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಭೆಗೆ ಓಡೋಡಿ ಬಂದು ಕೂರುತ್ತಿದ್ದರು. ಆದರೆ ಪ್ರವಾದಿಯ ಮಾತುಗಳನ್ನು ಕೇಳಿ ಅದರ ಪ್ರಕಾರ ನಡೆಯುವ ಬದಲು ಅವರು ತಮಾಷೆ ಮಾಡಿ ನಗುತ್ತಿದ್ದರು. ಅವರು ಗುಂಪು ಗುಂಪಾಗಿ ಇರುತ್ತಿದ್ದರು. ಮುಸ್ಲಿಮರು ಸ್ವರ್ಗಕ್ಕೆ ಹೋಗುವುದಾದರೆ ನಾವು ಅದಕ್ಕಿಂತಲೂ ಮೊದಲು ಸ್ವರ್ಗ ಪ್ರವೇಶ ಮಾಡುತ್ತೇವೆ ಎಂದು ಅವರು ಹೇಳುತ್ತಿದ್ದರು.
عَنِ ٱلْيَمِينِ وَعَنِ ٱلشِّمَالِ عِزِينَ. ﴿37﴾
38 ತನ್ನನ್ನು ಸುಖಸಮೃದ್ಧವಾದ ಸ್ವರ್ಗಕ್ಕೆ ಪ್ರವೇಶ ಮಾಡಿಸಬೇಕೆಂದು ಅವರಲ್ಲಿ ಪ್ರತಿಯೊಬ್ಬನೂ ಹಾರೈಸುತ್ತಾನೆಯೇ? أَيَطْمَعُ كُلُّ ٱمْرِئٍۢ مِّنْهُمْ أَن يُدْخَلَ جَنَّةَ نَعِيمٍۢ. ﴿38﴾
39 ಎಂದಿಗೂ ಇಲ್ಲ; ನಾವು ಅವರನ್ನು ಅವರು ತಿಳಿದಿರುವ ವಸ್ತುವಿನಿಂದಲೇ ಸೃಷ್ಟಿಸಿದ್ದೇವೆ. كَلَّآ ۖ إِنَّا خَلَقْنَٰهُم مِّمَّا يَعْلَمُونَ. ﴿39﴾
40 ಆದ್ದರಿಂದ ನಾನು ಪೂರ್ವಗಳ ಮತ್ತು ಪಶ್ಚಿಮಗಳ ಪರಿಪಾಲಕನ (ಅಲ್ಲಾಹನ) ಮೇಲೆ ಆಣೆ ಮಾಡುತ್ತೇನೆ. ನಿಶ್ಚಯವಾಗಿಯೂ ನಮಗೆ ಸಾಮರ್ಥ್ಯವಿದೆ. فَلَآ أُقْسِمُ بِرَبِّ ٱلْمَشَٰرِقِ وَٱلْمَغَٰرِبِ إِنَّا لَقَٰدِرُونَ. ﴿40﴾
41 ಅವರ ಬದಲಿಗೆ ಅವರಿಗಿಂತ ಶ್ರೇಷ್ಟರನ್ನು ತರಲು. ನಮ್ಮನ್ನು ಯಾರಿಗೂ ಸೋಲಿಸಲಾಗದು. عَلَىٰٓ أَن نُّبَدِّلَ خَيْرًۭا مِّنْهُمْ وَمَا نَحْنُ بِمَسْبُوقِينَ. ﴿41﴾
42 ಆದ್ದರಿಂದ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರು ಅನಗತ್ಯ ಮಾತುಗಳಲ್ಲಿ ಮತ್ತು ಆಟದಲ್ಲಿ ಮಗ್ನರಾಗಲಿ. ಎಲ್ಲಿಯವರೆಗೆಂದರೆ, ಅವರಿಗೆ ವಾಗ್ದಾನ ಮಾಡಲಾಗುವ ಆ ದಿನವನ್ನು ಅವರು ಭೇಟಿಯಾಗುವ ತನಕ. فَذَرْهُمْ يَخُوضُوا۟ وَيَلْعَبُوا۟ حَتَّىٰ يُلَٰقُوا۟ يَوْمَهُمُ ٱلَّذِى يُوعَدُونَ. ﴿42﴾
43 ಅವರು ಸಮಾಧಿಗಳಿಂದ ತರಾತುರಿಯಲ್ಲಿ ಹೊರಟುಬರುವ ದಿನ! ಅವರು ಒಂದು ಗುರಿಯೆಡೆಗೆ ವೇಗವಾಗಿ ಸಾಗುವಂತೆ. يَوْمَ يَخْرُجُونَ مِنَ ٱلْأَجْدَاثِ سِرَاعًۭا كَأَنَّهُمْ إِلَىٰ نُصُبٍۢ يُوفِضُونَ. ﴿43﴾
44 ಅವರ ಕಣ್ಣುಗಳು ತಗ್ಗಿಕೊಂಡಿರುವುವು. ಅವಮಾನವು ಅವರನ್ನು ಆವರಿಸಿಕೊಳ್ಳುವುದು. ಅದೇ ಅವರಿಗೆ ವಾಗ್ದಾನ ಮಾಡಲಾಗುತ್ತಿದ್ದ ದಿನ. خَٰشِعَةً أَبْصَٰرُهُمْ تَرْهَقُهُمْ ذِلَّةٌۭ ۚ ذَٰلِكَ ٱلْيَوْمُ ٱلَّذِى كَانُوا۟ يُوعَدُونَ. ﴿44﴾