Loading date... | Loading Hijri date... | Loading time...

نوح

ಕನ್ನಡ Translation with Arabic Quran Text

ಕನ್ನಡ العربية
1 ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರಿಗೆ ಯಾತನಾಮಯ ಶಿಕ್ಷೆ ಎರಗುವುದಕ್ಕೆ ಮೊದಲೇ ಅವರಿಗೆ ಎಚ್ಚರಿಕೆ ನೀಡಿರಿ ಎಂಬ ಸಂದೇಶದೊಂದಿಗೆ. إِنَّآ أَرْسَلْنَا نُوحًا إِلَىٰ قَوْمِهِۦٓ أَنْ أَنذِرْ قَوْمَكَ مِن قَبْلِ أَن يَأْتِيَهُمْ عَذَابٌ أَلِيمٌۭ. ﴿1﴾
2 ನೂಹ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ. قَالَ يَٰقَوْمِ إِنِّى لَكُمْ نَذِيرٌۭ مُّبِينٌ. ﴿2﴾
3 ನೀವು ಅಲ್ಲಾಹನನ್ನು ಆರಾಧಿಸಿರಿ, ಅವನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. أَنِ ٱعْبُدُوا۟ ٱللَّهَ وَٱتَّقُوهُ وَأَطِيعُونِ. ﴿3﴾
4 ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ಒಂದು ನಿಶ್ಚಿತ ಅವಧಿಯವರೆಗೆ ನಿಮ್ಮನ್ನು ಬಿಟ್ಟುಬಿಡುವನು. ನಿಶ್ಚಯವಾಗಿಯೂ ಅಲ್ಲಾಹನ ಅವಧಿಯು ಬಂದರೆ ಅದನ್ನು ಮುಂದೂಡಲಾಗುವುದಿಲ್ಲ. ನೀವು ತಿಳಿದವರಾಗಿದ್ದರೆ! يَغْفِرْ لَكُم مِّن ذُنُوبِكُمْ وَيُؤَخِّرْكُمْ إِلَىٰٓ أَجَلٍۢ مُّسَمًّى ۚ إِنَّ أَجَلَ ٱللَّهِ إِذَا جَآءَ لَا يُؤَخَّرُ ۖ لَوْ كُنتُمْ تَعْلَمُونَ. ﴿4﴾
5 ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನಾನು ನನ್ನ ಜನರನ್ನು ಹಗಲು-ರಾತ್ರಿ ನಿನ್ನ ಕಡೆಗೆ ಕರೆದಿದ್ದೇನೆ. قَالَ رَبِّ إِنِّى دَعَوْتُ قَوْمِى لَيْلًۭا وَنَهَارًۭا. ﴿5﴾
6 ಆದರೆ ನನ್ನ ಕರೆಯು ಅವರಿಗೆ ಪಲಾಯನವನ್ನೇ ವಿನಾ ಇನ್ನೇನನ್ನೂ ಹೆಚ್ಚಿಸಲಿಲ್ಲ. فَلَمْ يَزِدْهُمْ دُعَآءِىٓ إِلَّا فِرَارًۭا. ﴿6﴾
7 ನಿಶ್ಚಯವಾಗಿಯೂ ನೀನು ಅವರನ್ನು ಕ್ಷಮಿಸಬೇಕೆಂದು ನಾನು ಅವರನ್ನು ನಿನ್ನ ಕಡೆಗೆ ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿಟ್ಟರು, ಬಟ್ಟೆಗಳಿಂದ ತಮ್ಮನ್ನು ಮುಚ್ಚಿಕೊಂಡರು, (ಸತ್ಯನಿಷೇಧದಲ್ಲಿ) ದೃಢವಾಗಿ ನಿಂತರು ಮತ್ತು ಮಹಾ ಅಹಂಕಾರವನ್ನು ತೋರಿದರು. وَإِنِّى كُلَّمَا دَعَوْتُهُمْ لِتَغْفِرَ لَهُمْ جَعَلُوٓا۟ أَصَٰبِعَهُمْ فِىٓ ءَاذَانِهِمْ وَٱسْتَغْشَوْا۟ ثِيَابَهُمْ وَأَصَرُّوا۟ وَٱسْتَكْبَرُوا۟ ٱسْتِكْبَارًۭا. ﴿7﴾
8 ನಂತರ ನಿಶ್ಚಯವಾಗಿಯೂ ನಾನು ಅವರನ್ನು ಉಚ್ಛ ಧ್ವನಿಯಲ್ಲಿ ಕರೆದೆ. ثُمَّ إِنِّى دَعَوْتُهُمْ جِهَارًۭا. ﴿8﴾
9 ನಂತರ ನಾನು ಅವರಿಗೆ ಬಹಿರಂಗವಾಗಿ ತಿಳಿಸಿದೆ. ಅತ್ಯಂತ ರಹಸ್ಯವಾಗಿಯೂ ತಿಳಿಸಿದೆ. ثُمَّ إِنِّىٓ أَعْلَنتُ لَهُمْ وَأَسْرَرْتُ لَهُمْ إِسْرَارًۭا. ﴿9﴾
10 ನಾನು ಹೇಳಿದೆ: “ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನು. فَقُلْتُ ٱسْتَغْفِرُوا۟ رَبَّكُمْ إِنَّهُۥ كَانَ غَفَّارًۭا. ﴿10﴾
11 ಅವನು ಆಕಾಶದಿಂದ ನಿಮಗೆ ಧಾರಾಕಾರ ಮಳೆಯನ್ನು ಸುರಿಸುವನು. يُرْسِلِ ٱلسَّمَآءَ عَلَيْكُم مِّدْرَارًۭا. ﴿11﴾
12 ಅವನು ನಿಮಗೆ ಹೇರಳ ಆಸ್ತಿಪಾಸ್ತಿ ಮತ್ತು ಗಂಡುಮಕ್ಕಳನ್ನು ನೀಡಿ ನೆರವಾಗುವನು. ಅವನು ನಿಮಗೆ ತೋಟಗಳನ್ನು ಕೊಡುವನು ಮತ್ತು ಹೊಳೆಗಳನ್ನು ಹರಿಸುವನು.” وَيُمْدِدْكُم بِأَمْوَٰلٍۢ وَبَنِينَ وَيَجْعَل لَّكُمْ جَنَّٰتٍۢ وَيَجْعَل لَّكُمْ أَنْهَٰرًۭا. ﴿12﴾
13 ಅಲ್ಲಾಹನ ಮಹಿಮೆಯಲ್ಲಿ ನಂಬಿಕೆಯಿಡದಿರಲು ನಿಮಗೇನಾಗಿದೆ? مَّا لَكُمْ لَا تَرْجُونَ لِلَّهِ وَقَارًۭا. ﴿13﴾
14 ಅವನು ನಿಮ್ಮನ್ನು ಹಲವು ಘಟ್ಟಗಳ ಮೂಲಕ ಸೃಷ್ಟಿಸಿದ್ದಾನೆ. وَقَدْ خَلَقَكُمْ أَطْوَارًا. ﴿14﴾
15 ಅಲ್ಲಾಹು ಏಳು ಆಕಾಶಗಳನ್ನು ಹೇಗೆ ಅಂತಸ್ತುಗಳಾಗಿ ಸೃಷ್ಟಿಸಿದ್ದಾನೆಂದು ನೀವು ನೋಡಿಲ್ಲವೇ? أَلَمْ تَرَوْا۟ كَيْفَ خَلَقَ ٱللَّهُ سَبْعَ سَمَٰوَٰتٍۢ طِبَاقًۭا. ﴿15﴾
16 ಅವನು ಅವುಗಳಲ್ಲಿ ಚಂದ್ರನನ್ನು ಬೆಳಕಾಗಿ ಮತ್ತು ಸೂರ್ಯನನ್ನು (ಉರಿಯುವ) ದೀಪವಾಗಿ ಮಾಡಿದನು. وَجَعَلَ ٱلْقَمَرَ فِيهِنَّ نُورًۭا وَجَعَلَ ٱلشَّمْسَ سِرَاجًۭا. ﴿16﴾
17 ಅಲ್ಲಾಹು ನಿಮ್ಮನ್ನು (ವಿಶೇಷ ಮುತುವರ್ಜಿ ನೀಡಿ) ಭೂಮಿಯಿಂದ ಬೆಳೆಸಿದನು. وَٱللَّهُ أَنۢبَتَكُم مِّنَ ٱلْأَرْضِ نَبَاتًۭا. ﴿17﴾
18 ನಂತರ ಅವನು ನಿಮ್ಮನ್ನು ಅದಕ್ಕೆ ಮರಳಿಸುವನು ಮತ್ತು (ವಿಶೇಷ ರೀತಿಯಲ್ಲಿ) ನಿಮ್ಮನ್ನು ಹೊರತರುವನು. ثُمَّ يُعِيدُكُمْ فِيهَا وَيُخْرِجُكُمْ إِخْرَاجًۭا. ﴿18﴾
19 ಅಲ್ಲಾಹು ನಿಮಗೆ ಭೂಮಿಯನ್ನು ಒಂದು ಹಾಸಿನಂತೆ ಮಾಡಿಕೊಟ್ಟನು. وَٱللَّهُ جَعَلَ لَكُمُ ٱلْأَرْضَ بِسَاطًۭا. ﴿19﴾
20 ನೀವು ಅದರ ವಿಶಾಲವಾದ ದಾರಿಗಳಲ್ಲಿ ಸಾಗಲಿಕ್ಕಾಗಿ. لِّتَسْلُكُوا۟ مِنْهَا سُبُلًۭا فِجَاجًۭا. ﴿20﴾
21 ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನಗೆ ಅವಿಧೇಯತೆ ತೋರಿದ್ದಾರೆ. ಯಾರ ಆಸ್ತಿ ಹಾಗೂ ಮಕ್ಕಳು ಅವನಿಗೆ ನಷ್ಟವನ್ನಲ್ಲದೆ ಇನ್ನೇನನ್ನೂ ಹೆಚ್ಚಿಸುವುದಿಲ್ಲವೋ ಅಂತಹವನನ್ನು ಅವರು ಹಿಂಬಾಲಿಸಿದ್ದಾರೆ. قَالَ نُوحٌۭ رَّبِّ إِنَّهُمْ عَصَوْنِى وَٱتَّبَعُوا۟ مَن لَّمْ يَزِدْهُ مَالُهُۥ وَوَلَدُهُۥٓ إِلَّا خَسَارًۭا. ﴿21﴾
22 ಅವರು ಬಹುದೊಡ್ಡ ಸಂಚು ರೂಪಿಸಿದ್ದಾರೆ. وَمَكَرُوا۟ مَكْرًۭا كُبَّارًۭا. ﴿22﴾
23 “(ಜನರೇ) ನೀವು ನಿಮ್ಮ ದೇವರುಗಳನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ. ವದ್ದ್, ಸುವಾಅ್, ಯಗೂಸ್, ಯಊಕ್ ಮತ್ತು ನಸ್ರ್‌ರನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ” ಎಂದು ಅವರು ಹೇಳುತ್ತಾರೆ. وَقَالُوا۟ لَا تَذَرُنَّ ءَالِهَتَكُمْ وَلَا تَذَرُنَّ وَدًّۭا وَلَا سُوَاعًۭا وَلَا يَغُوثَ وَيَعُوقَ وَنَسْرًۭا. ﴿23﴾
24 ಅವರು ಈಗಾಗಲೇ ಬಹಳಷ್ಟು ಜನರನ್ನು ದಾರಿ ತಪ್ಪಿಸಿದ್ದಾರೆ. ನೀನು ಆ ಅಕ್ರಮಿಗಳಿಗೆ ಅವರ ದುರ್ಮಾರ್ಗವನ್ನು ಇನ್ನಷ್ಟು ಹೆಚ್ಚಿಸಿಕೊಡು.” وَقَدْ أَضَلُّوا۟ كَثِيرًۭا ۖ وَلَا تَزِدِ ٱلظَّٰلِمِينَ إِلَّا ضَلَٰلًۭا. ﴿24﴾
25 ಅವರ ಪಾಪಗಳ ಕಾರಣದಿಂದ ಅವರನ್ನು ಮುಳುಗಿಸಲಾಯಿತು. ನಂತರ ನರಕಾಗ್ನಿಗೆ ಪ್ರವೇಶ ಮಾಡಿಸಲಾಯಿತು. ಅವರು ಅಲ್ಲಾಹನ ಹೊರತು ಬೇರೆ ಯಾವುದೇ ಸಹಾಯಕರನ್ನು ಕಾಣಲಿಲ್ಲ. مِّمَّا خَطِيٓـَٰٔتِهِمْ أُغْرِقُوا۟ فَأُدْخِلُوا۟ نَارًۭا فَلَمْ يَجِدُوا۟ لَهُم مِّن دُونِ ٱللَّهِ أَنصَارًۭا. ﴿25﴾
26 ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನೀನು ಭೂಮಿಯ ಮೇಲೆ ಸತ್ಯನಿಷೇಧಿಗಳಲ್ಲಿ ಯಾರನ್ನೂ ವಾಸಿಸಲು ಬಿಡಬೇಡ. وَقَالَ نُوحٌۭ رَّبِّ لَا تَذَرْ عَلَى ٱلْأَرْضِ مِنَ ٱلْكَٰفِرِينَ دَيَّارًا. ﴿26﴾
27 ನೀನೇನಾದರೂ ಅವರನ್ನು ಬಿಟ್ಟುಬಿಟ್ಟರೆ ಅವರು ನಿನ್ನ ದಾಸರನ್ನು ದಾರಿತಪ್ಪಿಸುವರು. ಅವರು ದುಷ್ಕರ್ಮಿಗಳು ಮತ್ತು ಸತ್ಯನಿಷೇಧಿಗಳಿಗೆ ಮಾತ್ರ ಜನ್ಮ ನೀಡುವರು. إِنَّكَ إِن تَذَرْهُمْ يُضِلُّوا۟ عِبَادَكَ وَلَا يَلِدُوٓا۟ إِلَّا فَاجِرًۭا كَفَّارًۭا. ﴿27﴾
28 ನನ್ನ ಪರಿಪಾಲಕನೇ! ನನಗೆ, ನನ್ನ ಮಾತಾಪಿತರಿಗೆ ಮತ್ತು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದವನಿಗೆ ಕ್ಷಮಿಸು. ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಕ್ಷಮಿಸು. ಅಕ್ರಮಿಗಳಿಗೆ ಸರ್ವನಾಶವಲ್ಲದೆ ಇನ್ನೇನೂ ಹೆಚ್ಚಿಸಬೇಡ.” رَّبِّ ٱغْفِرْ لِى وَلِوَٰلِدَىَّ وَلِمَن دَخَلَ بَيْتِىَ مُؤْمِنًۭا وَلِلْمُؤْمِنِينَ وَٱلْمُؤْمِنَٰتِ وَلَا تَزِدِ ٱلظَّٰلِمِينَ إِلَّا تَبَارًۢا. ﴿28﴾