Loading date... | Loading Hijri date... | Loading time...

المدثر

ಕನ್ನಡ Translation with Arabic Quran Text

ಕನ್ನಡ العربية
1 ಓ ಹೊದಿಕೆಯನ್ನು ಹೊದ್ದುಕೊಂಡವರೇ![1]
[1] ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಟ್ಟಮೊದಲು ಸೂರ ಅಲಕ್‌ನ ಪ್ರಥಮ 5 ವಚನಗಳು ಅವತೀರ್ಣವಾದವು. ನಂತರ ದೀರ್ಘ ಸಮಯದ ತನಕ ಅವರಿಗೆ ಕುರ್‌ಆನ್ ಅವತೀರ್ಣವಾಗಲಿಲ್ಲ. ಒಂದಿನ ಇದ್ದಕ್ಕಿದ್ದಂತೆ ಹಿರಾ ಗುಹೆಯಲ್ಲಿ ನೋಡಿದ ಅದೇ ದೇವದೂತರು ಆಕಾಶ ಮತ್ತು ಭೂಮಿಯ ಮಧ್ಯೆ ಸಂಪೂರ್ಣ ದಿಗಂತವನ್ನು ಮುಚ್ಚುವ ರೀತಿಯಲ್ಲಿ ಕುಳಿತಿರುವುದನ್ನು ಕಂಡರು. ಅವರು ಭಯದಿಂದ ಮನೆಗೆ ಓಡಿ ನನ್ನನ್ನು ಹೊದಿಯಿರಿ; ನನ್ನನ್ನು ಹೊದಿಯಿರಿ ಎಂದರು. ಅವರನ್ನು ಹೊದಿಕೆಯಿಂದ ಹೊದಿಯಲಾಯಿತು. ಆಗ ಈ ವಚನಗಳು ಅವತೀರ್ಣವಾದವು.
يَٰٓأَيُّهَا ٱلْمُدَّثِّرُ. ﴿1﴾
2 ಎದ್ದೇಳಿರಿ ಮತ್ತು ಎಚ್ಚರಿಕೆ ನೀಡಿರಿ. قُمْ فَأَنذِرْ. ﴿2﴾
3 ನಿಮ್ಮ ಪರಿಪಾಲಕನ (ಅಲ್ಲಾಹನ) ಮಹಾತ್ಮೆಯನ್ನು ಕೊಂಡಾಡಿರಿ. وَرَبَّكَ فَكَبِّرْ. ﴿3﴾
4 ನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ. وَثِيَابَكَ فَطَهِّرْ. ﴿4﴾
5 ಅಶುದ್ಧವನ್ನು ವರ್ಜಿಸಿರಿ. وَٱلرُّجْزَ فَٱهْجُرْ. ﴿5﴾
6 ಉಪಕಾರ ಮಾಡಿ ಹೆಚ್ಚು ಗಳಿಸುವ ವ್ಯಾಮೋಹ ಬಿಟ್ಟುಬಿಡಿ. وَلَا تَمْنُن تَسْتَكْثِرُ. ﴿6﴾
7 ನಿಮ್ಮ ಪರಿಪಾಲಕನ (ಅಲ್ಲಾಹನ) ಮಾರ್ಗದಲ್ಲಿ ತಾಳ್ಮೆಯಿಂದಿರಿ. وَلِرَبِّكَ فَٱصْبِرْ. ﴿7﴾
8 ಕಹಳೆಯಲ್ಲಿ ಊದಲಾಗುವಾಗ. فَإِذَا نُقِرَ فِى ٱلنَّاقُورِ. ﴿8﴾
9 ಆ ದಿನವು ಅತ್ಯಂತ ಕಠಿಣ ದಿನವಾಗಿರುವುದು. فَذَٰلِكَ يَوْمَئِذٍۢ يَوْمٌ عَسِيرٌ. ﴿9﴾
10 ಅದು ಸತ್ಯನಿಷೇಧಿಗಳಿಗೆ ಸುಗಮವಾಗಿರುವುದಿಲ್ಲ. عَلَى ٱلْكَٰفِرِينَ غَيْرُ يَسِيرٍۢ. ﴿10﴾
11 ನನ್ನನ್ನು ಹಾಗೂ ನಾನು ಏಕಾಂಗಿಯಾಗಿ ಸೃಷ್ಟಿದವನನ್ನು ಬಿಟ್ಟುಬಿಡಿ.[1]
[1] ಅಂದರೆ ಅವನ ವಿಷಯವನ್ನು ನಾನು ನೋಡಿಕೊಳ್ಳುವೆನು. ಅವನು ಅವನ ತಾಯಿಯ ಹೊಟ್ಟೆಯಿಂದ ಹೊರಬರುವಾಗ ಅವನಲ್ಲಿ ಐಶ್ವರ್ಯ ಅಥವಾ ಮಕ್ಕಳಿರಲಿಲ್ಲ. ಇವೆಲ್ಲವೂ ನಾನು ಅವನಿಗೆ ನೀಡಿದ ಅನುಗ್ರಹಗಳು. ಆದರೂ ಅವನು ಈಗ ನನ್ನ ವಿರುದ್ಧ ಸೆಟೆದು ನಿಂತಿದ್ದಾನೆ. — ಇಲ್ಲಿ ಹೇಳಲಾಗಿರುವುದು ಕುರೈಷಿ ಮುಖಂಡ ವಲೀದ್ ಬಿನ್ ಮುಗೀರ ಎಂಬವನ ಬಗ್ಗೆಯಾಗಿದೆ.
ذَرْنِى وَمَنْ خَلَقْتُ وَحِيدًۭا. ﴿11﴾
12 ನಾನು ಅವನಿಗೆ ಹೇರಳ ಐಶ್ವರ್ಯವನ್ನು ನೀಡಿದೆನು. وَجَعَلْتُ لَهُۥ مَالًۭا مَّمْدُودًۭا. ﴿12﴾
13 ಸನ್ನದ್ಧರಾಗಿರುವ ಗಂಡು ಮಕ್ಕಳನ್ನು ನೀಡಿದೆನು. وَبَنِينَ شُهُودًۭا. ﴿13﴾
14 ನಾನು ಅವನಿಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಟ್ಟೆನು. وَمَهَّدتُّ لَهُۥ تَمْهِيدًۭا. ﴿14﴾
15 ಆದರೂ ನಾನು ಅವನಿಗೆ ಇನ್ನೂ ಹೆಚ್ಚು ನೀಡಬೇಕೆಂದು ಅವನು ಹಾತೊರೆಯುತ್ತಾನೆ. ثُمَّ يَطْمَعُ أَنْ أَزِيدَ. ﴿15﴾
16 ಖಂಡಿತ ಇಲ್ಲ. ಅವನು ನಮ್ಮ ವಚನಗಳ ವಿರೋಧಿಯಾಗಿದ್ದಾನೆ. كَلَّآ ۖ إِنَّهُۥ كَانَ لِءَايَٰتِنَا عَنِيدًۭا. ﴿16﴾
17 ಸದ್ಯವೇ ನಾನು ಅವನನ್ನು ಒಂದು ಪ್ರಯಾಸಕರ ಏರುವಿಕೆಯನ್ನು ಏರುವಂತೆ ಮಾಡುವೆನು.[1]
[1] ಅಂದರೆ ಅವನಿಗೆ ಸಹಿಸಲು ಅಸಾಧ್ಯವಾದ ಶಿಕ್ಷೆಯನ್ನು ನೀಡುವೆನು. ಇತರ ಕೆಲವು ವ್ಯಾಖ್ಯಾನಕಾರರು ಹೇಳುವಂತೆ ನರಕದಲ್ಲಿ ಒಂದು ಅಗ್ನಿಯ ಪರ್ವತವಿದ್ದು ಈತ ಅದನ್ನು ಏರುತ್ತಲೇ ಇರುವನು.
سَأُرْهِقُهُۥ صَعُودًا. ﴿17﴾
18 ಅವನು ಯೋಚಿಸಿದನು ಮತ್ತು ನಿರ್ಣಯಿಸಿದನು. إِنَّهُۥ فَكَّرَ وَقَدَّرَ. ﴿18﴾
19 ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿದನು? فَقُتِلَ كَيْفَ قَدَّرَ. ﴿19﴾
20 ಪುನಃ ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿದನು? ثُمَّ قُتِلَ كَيْفَ قَدَّرَ. ﴿20﴾
21 ನಂತರ ಅವನು ನೋಡಿದನು. ثُمَّ نَظَرَ. ﴿21﴾
22 ನಂತರ ಅವನು ಹುಬ್ಬುಗಂಟಿಕ್ಕಿದನು ಮತ್ತು ಮುಖವನ್ನು ಸಿಂಡರಿಸಿದನು. ثُمَّ عَبَسَ وَبَسَرَ. ﴿22﴾
23 ನಂತರ ಅವನು ಹಿಂದಡಿಯಿಟ್ಟನು ಮತ್ತು ಅಹಂಕಾರ ತೋರಿದನು. ثُمَّ أَدْبَرَ وَٱسْتَكْبَرَ. ﴿23﴾
24 ನಂತರ ಅವನು ಹೇಳಿದನು: “ಇದು (ಕುರ್‌ಆನ್) ನಕಲು ಮಾಡಲಾದ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ. فَقَالَ إِنْ هَٰذَآ إِلَّا سِحْرٌۭ يُؤْثَرُ. ﴿24﴾
25 ಇದು ಕೇವಲ ಒಬ್ಬ ಮನುಷ್ಯನ ಮಾತಾಗಿದೆ.” إِنْ هَٰذَآ إِلَّا قَوْلُ ٱلْبَشَرِ. ﴿25﴾
26 ನಾನು ಸದ್ಯವೇ ಅವನನ್ನು ಸಖರ್‌ಗೆ (ನರಕಕ್ಕೆ) ಹಾಕುವೆನು. سَأُصْلِيهِ سَقَرَ. ﴿26﴾
27 ಸಖರ್ ಏನೆಂದು ನಿಮಗೇನು ಗೊತ್ತು? وَمَآ أَدْرَىٰكَ مَا سَقَرُ. ﴿27﴾
28 ಅದು ಏನನ್ನೂ ಉಳಿಸುವುದಿಲ್ಲ ಮತ್ತು ಬಿಟ್ಟುಬಿಡುವುದಿಲ್ಲ. لَا تُبْقِى وَلَا تَذَرُ. ﴿28﴾
29 ಅದು ಚರ್ಮವನ್ನು ಸುಟ್ಟು ಕರಕಲಾಗಿಸುತ್ತದೆ. لَوَّاحَةٌۭ لِّلْبَشَرِ. ﴿29﴾
30 ಅದರ ಮೇಲೆ ಹತ್ತೊಂಬತ್ತು (ದೇವದೂತರುಗಳು) ಇದ್ದಾರೆ. عَلَيْهَا تِسْعَةَ عَشَرَ. ﴿30﴾
31 ನಾವು ನರಕದ ಕಾವಲುಗಾರರಾಗಿ ಕೇವಲ ದೇವದೂತರುಗಳನ್ನು ಮಾತ್ರ ನಿಶ್ಚಯಿಸಿದ್ದೇವೆ. ನಾವು ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳಿಗೆ ಒಂದು ಪರೀಕ್ಷೆಯಾಗಿ ಮಾಡಿದ್ದೇವೆ.[1] ಇದೇಕೆಂದರೆ, ಗ್ರಂಥ ನೀಡಲಾದವರಿಗೆ ದೃಢವಿಶ್ವಾಸ ಉಂಟಾಗಲೆಂದು[2] ಮತ್ತು ಸತ್ಯವಿಶ್ವಾಸಿಗಳ ವಿಶ್ವಾಸವು ಇನ್ನಷ್ಟು ಹೆಚ್ಚಾಗಲೆಂದು. ಅದೇ ರೀತಿ ಗ್ರಂಥ ನೀಡಲಾದವರು ಹಾಗೂ ಸತ್ಯವಿಶ್ವಾಸಿಗಳು ಸಂಶಯ ಪಡದಿರಲೆಂದು ಮತ್ತು ಹೃದಯದಲ್ಲಿ ರೋಗವಿರುವವರು ಹಾಗೂ ಸತ್ಯನಿಷೇಧಿಗಳು, “ಈ ವಿವರಣೆಯಿಂದ ಅಲ್ಲಾಹು ಉದ್ದೇಶಿಸುವುದೇನು?” ಎಂದು ಕೇಳಲೆಂದು. ಈ ರೀತಿ ಅಲ್ಲಾಹು ಅವನು ಇಚ್ಛಿಸಿದವರನ್ನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸಿದವರಿಗೆ ಸನ್ಮಾರ್ಗ ತೋರಿಸುತ್ತಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಸೈನ್ಯವನ್ನು ಅವನ ಹೊರತು ಯಾರೂ ತಿಳಿದಿಲ್ಲ. ಅದು (ನರಕ) ಮನುಷ್ಯರಿಗೆ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.
[1] ನರಕದ ಕಾವಲುಗಾರರ ಸಂಖ್ಯೆ 19 ಎಂಬ ವಚನ ಅವತೀರ್ಣವಾದಾಗ, ಸತ್ಯನಿಷೇಧಿಗಳ ಮುಖಂಡ ಅಬೂಜಹಲ್ ತನ್ನ ಜನರನ್ನು ಕರೆದು ವ್ಯಂಗ್ಯವಾಗಿ ಹೇಳಿದ: ನಿಮ್ಮಲ್ಲಿ ಪ್ರತಿ ಹತ್ತು ಜನರಿಗೆ ಒಬ್ಬೊಬ್ಬ ದೇವದೂತನನ್ನು ಸೋಲಿಸಲು ಸಾಧ್ಯವಿಲ್ಲವೇ? ಆಗ ಈ ವಚನವು ಅವತೀರ್ಣವಾಯಿತು. [2] ಈ ವಿಷಯವು ತೌರಾತ್ ಮತ್ತು ಇಂಜೀಲ್‌ನಲ್ಲಿ ಕೂಡ ಇರುವುದರಿಂದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದು ಸತ್ಯವೆಂದು ಗ್ರಂಥದವರಿಗೆ ದೃಢವಿಶ್ವಾಸ ಉಂಟಾಗಲಿದೆ.
وَمَا جَعَلْنَآ أَصْحَٰبَ ٱلنَّارِ إِلَّا مَلَٰٓئِكَةًۭ ۙ وَمَا جَعَلْنَا عِدَّتَهُمْ إِلَّا فِتْنَةًۭ لِّلَّذِينَ كَفَرُوا۟ لِيَسْتَيْقِنَ ٱلَّذِينَ أُوتُوا۟ ٱلْكِتَٰبَ وَيَزْدَادَ ٱلَّذِينَ ءَامَنُوٓا۟ إِيمَٰنًۭا ۙ وَلَا يَرْتَابَ ٱلَّذِينَ أُوتُوا۟ ٱلْكِتَٰبَ وَٱلْمُؤْمِنُونَ ۙ وَلِيَقُولَ ٱلَّذِينَ فِى قُلُوبِهِم مَّرَضٌۭ وَٱلْكَٰفِرُونَ مَاذَآ أَرَادَ ٱللَّهُ بِهَٰذَا مَثَلًۭا ۚ كَذَٰلِكَ يُضِلُّ ٱللَّهُ مَن يَشَآءُ وَيَهْدِى مَن يَشَآءُ ۚ وَمَا يَعْلَمُ جُنُودَ رَبِّكَ إِلَّا هُوَ ۚ وَمَا هِىَ إِلَّا ذِكْرَىٰ لِلْبَشَرِ. ﴿31﴾
32 ಇಲ್ಲ; ಚಂದ್ರನ ಮೇಲಾಣೆ! كَلَّا وَٱلْقَمَرِ. ﴿32﴾
33 ರಾತ್ರಿಯ ಮೇಲಾಣೆ! ಅದು ಹಿಂದಕ್ಕೆ ಸರಿಯುವಾಗ. وَٱلَّيْلِ إِذْ أَدْبَرَ. ﴿33﴾
34 ಬೆಳಗ್ಗಿನ ಮೇಲಾಣೆ! ಅದು ಬೆಳಗುವಾಗ. وَٱلصُّبْحِ إِذَآ أَسْفَرَ. ﴿34﴾
35 ನಿಶ್ಚಯವಾಗಿಯೂ ಅದು (ನರಕ) ಮಹಾ ವಿಷಯಗಳಲ್ಲಿ ಒಂದಾಗಿದೆ. إِنَّهَا لَإِحْدَى ٱلْكُبَرِ. ﴿35﴾
36 ಮನುಷ್ಯರಿಗೆ ಒಂದು ಮುನ್ನೆಚ್ಚರಿಕೆಯಾಗಿದೆ. نَذِيرًۭا لِّلْبَشَرِ. ﴿36﴾
37 ಅಂದರೆ ನಿಮ್ಮಲ್ಲಿ ಮುಂದಕ್ಕೆ ಬರಲು ಅಥವಾ ಹಿಂದೆಯೇ ಉಳಿಯಲು ಇಚ್ಛಿಸುವವರಿಗೆ. لِمَن شَآءَ مِنكُمْ أَن يَتَقَدَّمَ أَوْ يَتَأَخَّرَ. ﴿37﴾
38 ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಗಳಿಗೆ ಅಡಮಾನವಾಗಿದ್ದಾನೆ.[1]
[1] ಅಂದರೆ ಒಂದೋ ಅವನ ಕರ್ಮಗಳು ಅವನನ್ನು ಸ್ವರ್ಗಕ್ಕೆ ಸೇರಿಸುತ್ತವೆ ಅಥವಾ ಅವನ ಕರ್ಮಗಳು ಅವನನ್ನು ನರಕಕ್ಕೆ ಸೇರಿಸುತ್ತವೆ.
كُلُّ نَفْسٍۭ بِمَا كَسَبَتْ رَهِينَةٌ. ﴿38﴾
39 ಬಲಭಾಗದ ಜನರ ಹೊರತು. إِلَّآ أَصْحَٰبَ ٱلْيَمِينِ. ﴿39﴾
40 ಅವರು ಸ್ವರ್ಗೋದ್ಯಾನಗಳಲ್ಲಿ (ಕುಳಿತು) ಪರಸ್ಪರ ವಿಚಾರಿಸುವರು. فِى جَنَّٰتٍۢ يَتَسَآءَلُونَ. ﴿40﴾
41 ಅಪರಾಧಿಗಳ ಕುರಿತು. عَنِ ٱلْمُجْرِمِينَ. ﴿41﴾
42 ನಿಮ್ಮನ್ನು ನರಕದಲ್ಲಿ ಬೀಳಿಸಿದ್ದೇನು? مَا سَلَكَكُمْ فِى سَقَرَ. ﴿42﴾
43 ಅವರು ಹೇಳುವರು: “ನಾವು ನಮಾಝ್ ಮಾಡುವವರಾಗಿರಲಿಲ್ಲ. قَالُوا۟ لَمْ نَكُ مِنَ ٱلْمُصَلِّينَ. ﴿43﴾
44 ನಾವು ಬಡವರಿಗೆ ಆಹಾರ ನೀಡುತ್ತಿರಲಿಲ್ಲ. وَلَمْ نَكُ نُطْعِمُ ٱلْمِسْكِينَ. ﴿44﴾
45 ನಾವು ಅನಗತ್ಯ ಮಾತುಕತೆ ನಡೆಸುವವರ (ಸತ್ಯನಿಷೇಧಿಗಳ) ಜೊತೆಗೆ ಅನಗತ್ಯ ಮಾತುಗಳಲ್ಲಿ ತಲ್ಲೀನರಾಗಿದ್ದೆವು. وَكُنَّا نَخُوضُ مَعَ ٱلْخَآئِضِينَ. ﴿45﴾
46 ನಾವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿದ್ದೆವು. وَكُنَّا نُكَذِّبُ بِيَوْمِ ٱلدِّينِ. ﴿46﴾
47 ಎಲ್ಲಿಯವರೆಗೆಂದರೆ ನಮಗೆ ಸಾವು ಬರುವ ತನಕ.” حَتَّىٰٓ أَتَىٰنَا ٱلْيَقِينُ. ﴿47﴾
48 ಅವರಿಗೆ ಶಿಫಾರಸುಗಾರರ ಶಿಫಾರಸು ಪ್ರಯೋಜನಪಡುವುದಿಲ್ಲ. فَمَا تَنفَعُهُمْ شَفَٰعَةُ ٱلشَّٰفِعِينَ. ﴿48﴾
49 ಅವರಿಗೇನಾಗಿದೆ? ಅವರೇಕೆ ಉಪದೇಶದಿಂದ ವಿಮುಖರಾಗುತ್ತಿದ್ದಾರೆ? فَمَا لَهُمْ عَنِ ٱلتَّذْكِرَةِ مُعْرِضِينَ. ﴿49﴾
50 ಅವರು ಗಾಬರಿಗೊಂಡ ಕತ್ತೆಗಳೋ ಎಂಬಂತೆ. كَأَنَّهُمْ حُمُرٌۭ مُّسْتَنفِرَةٌۭ. ﴿50﴾
51 ಸಿಂಹವನ್ನು ಕಂಡು ಪಲಾಯನ ಮಾಡಿದ. فَرَّتْ مِن قَسْوَرَةٍۭ. ﴿51﴾
52 ಅಲ್ಲ, ವಾಸ್ತವವಾಗಿ ಅವರಲ್ಲಿ ಪ್ರತಿಯೊಬ್ಬನೂ ತನಗೆ ತೆರೆದಿಟ್ಟ ಧರ್ಮಗ್ರಂಥಗಳು ಸಿಗಬೇಕೆಂದು ಬಯಸುತ್ತಾನೆ. بَلْ يُرِيدُ كُلُّ ٱمْرِئٍۢ مِّنْهُمْ أَن يُؤْتَىٰ صُحُفًۭا مُّنَشَّرَةًۭ. ﴿52﴾
53 ಇಲ್ಲ; ವಾಸ್ತವವಾಗಿ ಅವರು ಪರಲೋಕವನ್ನು ಭಯಪಡುವುದಿಲ್ಲ. كَلَّا ۖ بَل لَّا يَخَافُونَ ٱلْءَاخِرَةَ. ﴿53﴾
54 ಖಂಡಿತ ಇಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಉಪದೇಶವಾಗಿದೆ. كَلَّآ إِنَّهُۥ تَذْكِرَةٌۭ. ﴿54﴾
55 ಇಷ್ಟವಿರುವವರು ಅದರಿಂದ ಉಪದೇಶವನ್ನು ಪಡೆದುಕೊಳ್ಳಲಿ. فَمَن شَآءَ ذَكَرَهُۥ. ﴿55﴾
56 ಆದರೆ ಅಲ್ಲಾಹು ಇಚ್ಛಿಸಿದ ಹೊರತು ಅವರು ಅದರಿಂದ ಉಪದೇಶ ಪಡೆಯುವುದಿಲ್ಲ. ಅವನು ಭಯಪಡಲು ಅರ್ಹನಾಗಿದ್ದಾನೆ ಮತ್ತು ಕ್ಷಮಿಸಲು ಅರ್ಹನಾಗಿದ್ದಾನೆ. وَمَا يَذْكُرُونَ إِلَّآ أَن يَشَآءَ ٱللَّهُ ۚ هُوَ أَهْلُ ٱلتَّقْوَىٰ وَأَهْلُ ٱلْمَغْفِرَةِ. ﴿56﴾