القيامة
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ನಾನು ಪುನರುತ್ಥಾನದ ದಿನದ ಮೇಲೆ ಆಣೆ ಮಾಡುತ್ತೇನೆ. | لَآ أُقْسِمُ بِيَوْمِ ٱلْقِيَٰمَةِ. ﴿1﴾ |
| 2 ನಾನು ಆಕ್ಷೇಪಿಸುವ ಮನಸ್ಸಿನ ಮೇಲೆ ಆಣೆ ಮಾಡುತ್ತೇನೆ. | وَلَآ أُقْسِمُ بِٱلنَّفْسِ ٱللَّوَّامَةِ. ﴿2﴾ |
| 3 ಮನುಷ್ಯನು ಭಾವಿಸುತ್ತಿದ್ದಾನೆಯೇ ನಾವು ಅವನ ಮೂಳೆಗಳನ್ನು ಜೋಡಿಸಲಾರೆವು ಎಂದು? | أَيَحْسَبُ ٱلْإِنسَٰنُ أَلَّن نَّجْمَعَ عِظَامَهُۥ. ﴿3﴾ |
| 4 ಹೌದು! ನಮಗೆ ಅವನ ಬೆರಳ ತುದಿಗಳನ್ನು ಕೂಡ ಸರಿಪಡಿಸುವ ಸಾಮರ್ಥ್ಯವಿದೆ. | بَلَىٰ قَٰدِرِينَ عَلَىٰٓ أَن نُّسَوِّىَ بَنَانَهُۥ. ﴿4﴾ |
| 5 ಆದರೆ ಮನುಷ್ಯನು ಮುಂದೆಯೂ ಕೂಡ ಅವಿಧೇಯನಾಗಿಯೇ ಇರಲು ಬಯಸುತ್ತಾನೆ. | بَلْ يُرِيدُ ٱلْإِنسَٰنُ لِيَفْجُرَ أَمَامَهُۥ. ﴿5﴾ |
| 6 ಅವನು ಕೇಳುತ್ತಾನೆ: “ಪುನರುತ್ಥಾನ ದಿನ ಯಾವಾಗ ಸಂಭವಿಸುತ್ತದೆ?” | يَسْـَٔلُ أَيَّانَ يَوْمُ ٱلْقِيَٰمَةِ. ﴿6﴾ |
| 7 ದೃಷ್ಟಿಯು ಕೋರೈಸುವಾಗ. | فَإِذَا بَرِقَ ٱلْبَصَرُ. ﴿7﴾ |
| 8 ಚಂದ್ರ ಪ್ರಕಾಶ ರಹಿತವಾಗುವಾಗ. | وَخَسَفَ ٱلْقَمَرُ. ﴿8﴾ |
|
9
ಸೂರ್ಯ-ಚಂದ್ರರನ್ನು ಜೋಡಿಸಲಾಗುವಾಗ.[1]
[1] ಅಂದರೆ ಬೆಳಕು ರಹಿತವಾಗುವುದರಲ್ಲಿ ಸೂರ್ಯ ಮತ್ತು ಚಂದ್ರ ಸಮಾನರಾಗುವಾಗ. ಎರಡೂ ಖಗೋಳ ಕಾಯಗಳ ಬೆಳಕು ನಂದಿ ಹೋಗಲಿದೆ ಎಂದರ್ಥ.
|
وَجُمِعَ ٱلشَّمْسُ وَٱلْقَمَرُ. ﴿9﴾ |
| 10 ಅಂದು ಮನುಷ್ಯನು ಕೇಳುವನು: “ಪಲಾಯನ ಮಾಡಲು ಸ್ಥಳವೆಲ್ಲಿದೆ?” | يَقُولُ ٱلْإِنسَٰنُ يَوْمَئِذٍ أَيْنَ ٱلْمَفَرُّ. ﴿10﴾ |
| 11 ಇಲ್ಲ, ಯಾವುದೇ ರಕ್ಷಣೆಯೂ ಇಲ್ಲ. | كَلَّا لَا وَزَرَ. ﴿11﴾ |
| 12 ಅಂದು ನಿನ್ನ ವಾಸ್ತವ್ಯವು ನಿನ್ನ ಪರಿಪಾಲಕನ (ಅಲ್ಲಾಹನ) ಕಡೆಗೇ ಆಗಿದೆ. | إِلَىٰ رَبِّكَ يَوْمَئِذٍ ٱلْمُسْتَقَرُّ. ﴿12﴾ |
| 13 ಅಂದು ಮನುಷ್ಯನಿಗೆ ಅವನು ಮುಂದಕ್ಕೆ ಕಳುಹಿಸಿರುವ ಮತ್ತು ಹಿಂದೆ ಬಿಟ್ಟಿರುವ ಕರ್ಮಗಳ ಬಗ್ಗೆ ತಿಳಿಸಲಾಗುವುದು. | يُنَبَّؤُا۟ ٱلْإِنسَٰنُ يَوْمَئِذٍۭ بِمَا قَدَّمَ وَأَخَّرَ. ﴿13﴾ |
| 14 ಅಲ್ಲ, ವಾಸ್ತವವಾಗಿ ಮನುಷ್ಯನು ಅವನ ವಿರುದ್ಧವೇ ಸಾಕ್ಷಿಯಾಗಿದ್ದಾನೆ. | بَلِ ٱلْإِنسَٰنُ عَلَىٰ نَفْسِهِۦ بَصِيرَةٌۭ. ﴿14﴾ |
| 15 ಅವನು ಎಷ್ಟೇ ನೆಪಗಳನ್ನು ಒಡ್ಡಿದರೂ ಸಹ. | وَلَوْ أَلْقَىٰ مَعَاذِيرَهُۥ. ﴿15﴾ |
| 16 (ಪ್ರವಾದಿಯವರೇ) ನೀವು ಕುರ್‌ಆನನ್ನು ಆತುರದಿಂದ ಕಂಠಪಾಠ ಮಾಡಲು ನಿಮ್ಮ ನಾಲಗೆಯನ್ನು ಅಲುಗಾಡಿಸಬೇಡಿ. | لَا تُحَرِّكْ بِهِۦ لِسَانَكَ لِتَعْجَلَ بِهِۦٓ. ﴿16﴾ |
|
17
ನಿಶ್ಚಯವಾಗಿಯೂ ಅದನ್ನು ಕ್ರೋಢೀಕರಿಸುವುದು ಮತ್ತು ನೀವು ಅದನ್ನು ಪಠಿಸುವಂತೆ ಮಾಡುವುದು ನಮ್ಮ ಹೊಣೆಯಾಗಿದೆ.[1]
[1] ದೇವದೂತರು ಕುರ್‌ಆನನ್ನು ಓದಿಕೊಡುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಕಂಠಪಾಠ ಮಾಡಲು ಅವರ ಜೊತೆಗೇ ಓದುತ್ತಿದ್ದರು. ಏಕೆಂದರೆ ಅದರಿಂದ ಏನಾದರೂ ಮರೆತು ಬಿಡಬಹುದೇ ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಆದರೆ ಅಲ್ಲಾಹು ಇಲ್ಲಿ ಅದನ್ನು ವಿರೋಧಿಸುತ್ತಿದ್ದಾನೆ. ಕಂಠಪಾಠ ಮಾಡುವುದಕ್ಕಾಗಿ ನೀವು ಅವರ ಜೊತೆಗೇ ಓದಬೇಡಿ. ಬದಲಿಗೆ ಅದನ್ನು ಗಮನವಿಟ್ಟು ಕೇಳಿ. ಅದನ್ನು ನಿಮ್ಮ ಹೃದಯದಲ್ಲಿ ಸಂಗ್ರಹಿಸಿಡುವುದು ಅಲ್ಲಾಹನ ಹೊಣೆಯಾಗಿದೆ.
|
إِنَّ عَلَيْنَا جَمْعَهُۥ وَقُرْءَانَهُۥ. ﴿17﴾ |
| 18 ನಾವು ಅದನ್ನು ಪಠಿಸಿದರೆ ನೀವು ಆ ಪಠಣವನ್ನು ಹಿಂಬಾಲಿಸಿರಿ. | فَإِذَا قَرَأْنَٰهُ فَٱتَّبِعْ قُرْءَانَهُۥ. ﴿18﴾ |
| 19 ನಂತರ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ. | ثُمَّ إِنَّ عَلَيْنَا بَيَانَهُۥ. ﴿19﴾ |
| 20 ಇಲ್ಲ, ನೀವು ಇಹಲೋಕವನ್ನು ಪ್ರೀತಿಸುತ್ತೀರಿ. | كَلَّا بَلْ تُحِبُّونَ ٱلْعَاجِلَةَ. ﴿20﴾ |
| 21 ಪರಲೋಕವನ್ನು ತೊರೆಯುತ್ತೀರಿ. | وَتَذَرُونَ ٱلْءَاخِرَةَ. ﴿21﴾ |
| 22 ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು. | وُجُوهٌۭ يَوْمَئِذٍۢ نَّاضِرَةٌ. ﴿22﴾ |
| 23 ಅದರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುತ್ತಿರುವುವು. | إِلَىٰ رَبِّهَا نَاظِرَةٌۭ. ﴿23﴾ |
| 24 ಅಂದು ಬಹಳಷ್ಟು ಮುಖಗಳು ವಿಷಣ್ಣವಾಗಿರುವುವು. | وَوُجُوهٌۭ يَوْمَئِذٍۭ بَاسِرَةٌۭ. ﴿24﴾ |
| 25 ಅವರೊಡನೆ ಬೆನ್ನು ತುಂಡಾಗಿಸುವ ರೀತಿಯಲ್ಲಿ ವ್ಯವಹರಿಸಲಾಗುವುದೆಂದು ಅವರು ಭಾವಿಸುವರು. | تَظُنُّ أَن يُفْعَلَ بِهَا فَاقِرَةٌۭ. ﴿25﴾ |
| 26 ಇಲ್ಲ, ಆತ್ಮವು ಕೊರಳ ಮೂಳೆಗೆ ತಲುಪಿದಾಗ. | كَلَّآ إِذَا بَلَغَتِ ٱلتَّرَاقِىَ. ﴿26﴾ |
| 27 “ಮಂತ್ರಿಸುವವರು ಯಾರಾದರೂ ಇದ್ದಾರೆಯೇ?” ಎಂದು ಕೇಳಲಾಗುವಾಗ. | وَقِيلَ مَنْ ۜ رَاقٍۢ. ﴿27﴾ |
| 28 ಅದು ಅಗಲಿಕೆಯ ಸಮಯವೆಂದು ಅವನಿಗೆ ಖಾತ್ರಿಯಾದಾಗ. | وَظَنَّ أَنَّهُ ٱلْفِرَاقُ. ﴿28﴾ |
| 29 ಕಣಕಾಲು ಕಣಕಾಲಿನೊಂದಿಗೆ ಸುತ್ತುವಾಗ. | وَٱلْتَفَّتِ ٱلسَّاقُ بِٱلسَّاقِ. ﴿29﴾ |
| 30 ಅಂದು (ಅವನನ್ನು) ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಸಾಗಿಸಲಾಗುವುದು. | إِلَىٰ رَبِّكَ يَوْمَئِذٍ ٱلْمَسَاقُ. ﴿30﴾ |
| 31 ಅವನು ವಿಶ್ವಾಸವಿಡಲಿಲ್ಲ, ನಮಾಝ್ ಕೂಡ ಮಾಡಲಿಲ್ಲ. | فَلَا صَدَّقَ وَلَا صَلَّىٰ. ﴿31﴾ |
| 32 ಆದರೆ ಅವನು ನಿಷೇಧಿಸಿದನು ಮತ್ತು ಮುಖ ತಿರುಗಿಸಿ ನಡೆದನು. | وَلَٰكِن كَذَّبَ وَتَوَلَّىٰ. ﴿32﴾ |
| 33 ನಂತರ ಎದೆಯುಬ್ಬಿಸಿ ತನ್ನ ಮನೆಯವರ ಕಡೆಗೆ ಹೊರಟನು. | ثُمَّ ذَهَبَ إِلَىٰٓ أَهْلِهِۦ يَتَمَطَّىٰٓ. ﴿33﴾ |
| 34 ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ. | أَوْلَىٰ لَكَ فَأَوْلَىٰ. ﴿34﴾ |
| 35 ಪುನಃ ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ. | ثُمَّ أَوْلَىٰ لَكَ فَأَوْلَىٰٓ. ﴿35﴾ |
| 36 ಮನುಷ್ಯನು ಭಾವಿಸುತ್ತಾನೆಯೇ ಅವನನ್ನು ಸುಮ್ಮನೆ ಬಿಟ್ಟುಬಿಡಲಾಗುವುದೆಂದು? | أَيَحْسَبُ ٱلْإِنسَٰنُ أَن يُتْرَكَ سُدًى. ﴿36﴾ |
| 37 ಅವನು ಸ್ರವಿಸಲಾದ ವೀರ್ಯದ ಒಂದು ಬಿಂದುವಾಗಿರಲಿಲ್ಲವೇ? | أَلَمْ يَكُ نُطْفَةًۭ مِّن مَّنِىٍّۢ يُمْنَىٰ. ﴿37﴾ |
| 38 ನಂತರ ಅವನು ರಕ್ತಪಿಂಡವಾದನು. ನಂತರ ಅಲ್ಲಾಹು ಅವನನ್ನು ಸೃಷ್ಟಿಸಿದನು ಮತ್ತು ಸರಿಪಡಿಸಿದನು. | ثُمَّ كَانَ عَلَقَةًۭ فَخَلَقَ فَسَوَّىٰ. ﴿38﴾ |
| 39 ನಂತರ ಅವನಿಂದ ಗಂಡು ಮತ್ತು ಹೆಣ್ಣು ಎಂಬ ಜೋಡಿಯನ್ನು ಮಾಡಿದನು. | فَجَعَلَ مِنْهُ ٱلزَّوْجَيْنِ ٱلذَّكَرَ وَٱلْأُنثَىٰٓ. ﴿39﴾ |
| 40 ಅಂತಹವನು ಸತ್ತವರಿಗೆ ಜೀವ ನೀಡುವ ಸಾಮರ್ಥ್ಯವನ್ನು ಹೊಂದಿಲ್ಲವೇ? | أَلَيْسَ ذَٰلِكَ بِقَٰدِرٍ عَلَىٰٓ أَن يُحْۦِىَ ٱلْمَوْتَىٰ. ﴿40﴾ |