Loading date... | Loading Hijri date... | Loading time...

المرسلات

ಕನ್ನಡ Translation with Arabic Quran Text

ಕನ್ನಡ العربية
1 ಮನದಣಿಸುತ್ತಾ ಸಾಗುವ ಮಾರುತಗಳ ಮೇಲಾಣೆ! وَٱلْمُرْسَلَٰتِ عُرْفًۭا. ﴿1﴾
2 ಬಲವಾಗಿ ಬೀಸುವ ಮಾರುತಗಳ ಮೇಲಾಣೆ! فَٱلْعَٰصِفَٰتِ عَصْفًۭا. ﴿2﴾
3 (ಮೋಡಗಳನ್ನು) ಎತ್ತಿ ಹಬ್ಬಿಸುವ ಮಾರುತಗಳ ಮೇಲಾಣೆ! وَٱلنَّٰشِرَٰتِ نَشْرًۭا. ﴿3﴾
4 ಸತ್ಯಾಸತ್ಯಗಳನ್ನು ಬೇರ್ಪಡಿಸುವ ದೇವದೂತರ ಮೇಲಾಣೆ! فَٱلْفَٰرِقَٰتِ فَرْقًۭا. ﴿4﴾
5 ದೇವವಾಣಿಯನ್ನು ತರುವ ದೇವದೂತರ ಮೇಲಾಣೆ! فَٱلْمُلْقِيَٰتِ ذِكْرًا. ﴿5﴾
6 ಆರೋಪ ನಿವಾರಿಸಲು ಅಥವಾ ಎಚ್ಚರಿಕೆ ನೀಡಲು. عُذْرًا أَوْ نُذْرًا. ﴿6﴾
7 ನಿಶ್ಚಯವಾಗಿಯೂ ನಿಮಗೆ ವಾಗ್ದಾನ ಮಾಡಲಾಗುವ ವಿಷಯವು ಖಂಡಿತ ಸಂಭವಿಸುತ್ತದೆ. إِنَّمَا تُوعَدُونَ لَوَٰقِعٌۭ. ﴿7﴾
8 ನಕ್ಷತ್ರಗಳನ್ನು ಪ್ರಕಾಶರಹಿತವಾಗಿ ಮಾಡಲಾಗುವಾಗ. فَإِذَا ٱلنُّجُومُ طُمِسَتْ. ﴿8﴾
9 ಆಕಾಶವನ್ನು ಹರಿದು ತೆರೆಯಲಾಗುವಾಗ. وَإِذَا ٱلسَّمَآءُ فُرِجَتْ. ﴿9﴾
10 ಪರ್ವತಗಳನ್ನು ನುಚ್ಚುನೂರು ಮಾಡಿ ಹಾರಿಸಲಾಗುವಾಗ. وَإِذَا ٱلْجِبَالُ نُسِفَتْ. ﴿10﴾
11 ಸಂದೇಶವಾಹಕರುಗಳನ್ನು ನಿಶ್ಚಿತ ಸಮಯಕ್ಕೆ ಕರೆತರಲಾಗುವಾಗ.[1]
[1] ಅಂದರೆ ಜನರ ಬಗ್ಗೆ ತೀರ್ಪು ನೀಡುವಾಗ ಆಯಾ ಸಮುದಾಯಕ್ಕೆ ಕಳುಹಿಸಲಾದ ಸಂದೇಶವಾಹಕರುಗಳನ್ನು ಕರೆಸಿ ಅವರಿಂದ ವಿವರಣೆಗಳನ್ನು ಪಡೆದು ತೀರ್ಪು ನೀಡಲಾಗುವುದು.
وَإِذَا ٱلرُّسُلُ أُقِّتَتْ. ﴿11﴾
12 ಅವರನ್ನು ಯಾವ ದಿನಕ್ಕಾಗಿ ಮಂದೂಡಲಾಗಿದೆ. لِأَىِّ يَوْمٍ أُجِّلَتْ. ﴿12﴾
13 ತೀರ್ಪಿನ ದಿನಕ್ಕಾಗಿ. لِيَوْمِ ٱلْفَصْلِ. ﴿13﴾
14 ತೀರ್ಪಿನ ದಿನ ಏನೆಂದು ನಿಮಗೇನು ಗೊತ್ತು? وَمَآ أَدْرَىٰكَ مَا يَوْمُ ٱلْفَصْلِ. ﴿14﴾
15 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿15﴾
16 ನಾವು ಹಿಂದಿನ ಕಾಲದವರನ್ನು ನಾಶ ಮಾಡಲಿಲ್ಲವೇ? أَلَمْ نُهْلِكِ ٱلْأَوَّلِينَ. ﴿16﴾
17 ನಂತರ ನಾವು ಅವರ ಬಳಿಕ ಅವರ ನಂತರದವರನ್ನು ತಂದೆವು. ثُمَّ نُتْبِعُهُمُ ٱلْءَاخِرِينَ. ﴿17﴾
18 ನಾವು ಅಪರಾಧಿಗಳೊಂದಿಗೆ ಈ ರೀತಿ ವರ್ತಿಸುವೆವು. كَذَٰلِكَ نَفْعَلُ بِٱلْمُجْرِمِينَ. ﴿18﴾
19 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿19﴾
20 ನಾವು ನಿಮ್ಮನ್ನು ತುಚ್ಛ ದ್ರವದಿಂದ ಸೃಷ್ಟಿಸಲಿಲ್ಲವೇ? أَلَمْ نَخْلُقكُّم مِّن مَّآءٍۢ مَّهِينٍۢ. ﴿20﴾
21 ನಂತರ ನಾವು ಅದನ್ನು ಸುರಕ್ಷಿತವಾದ ಭದ್ರ ಸ್ಥಳದಲ್ಲಿಟ್ಟೆವು. فَجَعَلْنَٰهُ فِى قَرَارٍۢ مَّكِينٍ. ﴿21﴾
22 ಒಂದು ನಿಶ್ಚಿತ ಅವಧಿಯವರೆಗೆ. إِلَىٰ قَدَرٍۢ مَّعْلُومٍۢ. ﴿22﴾
23 ನಂತರ ನಾವು ನಿರ್ಣಯಿಸಿದೆವು. ನಾವು ಎಷ್ಟು ಉತ್ತಮ ನಿರ್ಣಯಗಾರರು! فَقَدَرْنَا فَنِعْمَ ٱلْقَٰدِرُونَ. ﴿23﴾
24 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿24﴾
25 ನಾವು ಭೂಮಿಯನ್ನು ಸಂಗ್ರಹಿಸುವ ಸ್ಥಳವಾಗಿ ಮಾಡಲಿಲ್ಲವೇ? أَلَمْ نَجْعَلِ ٱلْأَرْضَ كِفَاتًا. ﴿25﴾
26 ಸತ್ತವರನ್ನು ಮತ್ತು ಬದುಕಿರುವವರನ್ನು. أَحْيَآءًۭ وَأَمْوَٰتًۭا. ﴿26﴾
27 ನಾವು ಅದರಲ್ಲಿ ಎತ್ತರೆತ್ತರದ ದೃಢ ಪರ್ವತಗಳನ್ನು ಸ್ಥಾಪಿಸಿದೆವು ಮತ್ತು ನಿಮಗೆ ಕುಡಿಯಲು ಸಿಹಿಯಾದ ನೀರನ್ನು ನೀಡಿದೆವು. وَجَعَلْنَا فِيهَا رَوَٰسِىَ شَٰمِخَٰتٍۢ وَأَسْقَيْنَٰكُم مَّآءًۭ فُرَاتًۭا. ﴿27﴾
28 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿28﴾
29 (ಸತ್ಯನಿಷೇಧಿಗಳೊಡನೆ ಹೇಳಲಾಗುವುದು): “ನೀವು ನಿಷೇಧಿಸುತ್ತಿದ್ದ ಆ ನರಕಕ್ಕೆ ಹೋಗಿರಿ.” ٱنطَلِقُوٓا۟ إِلَىٰ مَا كُنتُم بِهِۦ تُكَذِّبُونَ. ﴿29﴾
30 ಮೂರು ಶಾಖೆಗಳಿರುವ ನೆರಳಿಗೆ ಹೋಗಿರಿ. ٱنطَلِقُوٓا۟ إِلَىٰ ظِلٍّۢ ذِى ثَلَٰثِ شُعَبٍۢ. ﴿30﴾
31 ಅದು ನೆರಳನ್ನು ನೀಡುವುದಿಲ್ಲ. ಅಗ್ನಿಜ್ವಾಲೆಯಿಂದ ರಕ್ಷಿಸುವುದೂ ಇಲ್ಲ. لَّا ظَلِيلٍۢ وَلَا يُغْنِى مِنَ ٱللَّهَبِ. ﴿31﴾
32 ನಿಶ್ಚಯವಾಗಿಯೂ ಅದು (ನರಕ) ದೊಡ್ಡ ದೊಡ್ಡ ಅರಮನೆಗಳಂತಿರುವ ಕಿಡಿಗಳನ್ನು ಎಸೆಯುತ್ತದೆ. إِنَّهَا تَرْمِى بِشَرَرٍۢ كَٱلْقَصْرِ. ﴿32﴾
33 ಅವು ಹಳದಿ ಬಣ್ಣದ ಒಂಟೆಗಳ ಹಿಂಡುಗಳೋ ಎಂಬಂತೆ (ಕಾಣುತ್ತವೆ). كَأَنَّهُۥ جِمَٰلَتٌۭ صُفْرٌۭ. ﴿33﴾
34 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿34﴾
35 ಇದು ಅವರಿಗೆ ತುಟಿಬಿಚ್ಚಲು ಸಾಧ್ಯವಾಗದ ದಿನವಾಗಿದೆ. هَٰذَا يَوْمُ لَا يَنطِقُونَ. ﴿35﴾
36 ಅವರಿಗೆ ನೆಪಗಳನ್ನು ಹೇಳಲು ಅನುಮತಿ ನೀಡಲಾಗುವುದಿಲ್ಲ. وَلَا يُؤْذَنُ لَهُمْ فَيَعْتَذِرُونَ. ﴿36﴾
37 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿37﴾
38 (ಅವರೊಡನೆ ಹೇಳಲಾಗುವುದು): “ಇದೇ ತೀರ್ಪಿನ ದಿನ. ನಾವು ನಿಮ್ಮನ್ನು ಮತ್ತು ನಿಮ್ಮ ಪೂರ್ವಜರನ್ನು ಜಮಾವಣೆಗೊಳಿಸಿದ್ದೇವೆ. هَٰذَا يَوْمُ ٱلْفَصْلِ ۖ جَمَعْنَٰكُمْ وَٱلْأَوَّلِينَ. ﴿38﴾
39 ನಿಮಲ್ಲಿ ಏನಾದರೂ ತಂತ್ರಗಳಿದ್ದರೆ ಅದನ್ನು ನನ್ನ ವಿರುದ್ಧ ಪ್ರಯೋಗಿಸಿರಿ.” فَإِن كَانَ لَكُمْ كَيْدٌۭ فَكِيدُونِ. ﴿39﴾
40 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿40﴾
41 ನಿಶ್ಚಯವಾಗಿಯೂ ದೇವಭಯವುಳ್ಳವರು ನೆರಳುಗಳಲ್ಲಿ ಮತ್ತು ಚಿಲುಮೆಗಳಲ್ಲಿರುವರು. إِنَّ ٱلْمُتَّقِينَ فِى ظِلَٰلٍۢ وَعُيُونٍۢ. ﴿41﴾
42 ಅವರು ಹಾತೊರೆಯುವ ಹಣ್ಣು-ಹಂಪಲುಗಳಲ್ಲಿ. وَفَوَٰكِهَ مِمَّا يَشْتَهُونَ. ﴿42﴾
43 (ಅವರೊಡನೆ ಹೇಳಲಾಗುವುದು): “ನೀವು ಮಾಡಿದ ಸತ್ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ತಿನ್ನಿರಿ ಮತ್ತು ಕುಡಿಯಿರಿ.” كُلُوا۟ وَٱشْرَبُوا۟ هَنِيٓـًٔۢا بِمَا كُنتُمْ تَعْمَلُونَ. ﴿43﴾
44 ನಿಶ್ಚಯವಾಗಿಯೂ ನಾವು ಒಳಿತು ಮಾಡಿದವರಿಗೆ ಈ ರೀತಿ ಪ್ರತಿಫಲವನ್ನು ನೀಡುವೆವು. إِنَّا كَذَٰلِكَ نَجْزِى ٱلْمُحْسِنِينَ. ﴿44﴾
45 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿45﴾
46 (ಸತ್ಯನಿಷೇಧಿಗಳೇ) ನೀವು (ಇಹಲೋಕದಲ್ಲಿ) ಸ್ವಲ್ಪ ಸಮಯದವರೆಗೆ ತಿನ್ನಿರಿ ಮತ್ತು ಆನಂದಿಸಿರಿ. ನಿಶ್ಚಯವಾಗಿಯೂ ನೀವು ಅಪರಾಧಿಗಳಾಗಿದ್ದೀರಿ. كُلُوا۟ وَتَمَتَّعُوا۟ قَلِيلًا إِنَّكُم مُّجْرِمُونَ. ﴿46﴾
47 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿47﴾
48 ಅವರೊಡನೆ ತಲೆಬಾಗಿರಿ ಎಂದು ಹೇಳಲಾಗುವಾಗ ಅವರು ತಲೆಬಾಗುವುದಿಲ್ಲ. وَإِذَا قِيلَ لَهُمُ ٱرْكَعُوا۟ لَا يَرْكَعُونَ. ﴿48﴾
49 ಅಂದು ನಿಷೇಧಿಸಿದವರಿಗೆ ವಿನಾಶವಿದೆ. وَيْلٌۭ يَوْمَئِذٍۢ لِّلْمُكَذِّبِينَ. ﴿49﴾
50 ಅವರು ಇದರ (ಈ ಕುರ್‌ಆನಿನ) ನಂತರ ಯಾವ ಮಾತಿನಲ್ಲಿ ವಿಶ್ವಾಸವಿಡುವರು? فَبِأَىِّ حَدِيثٍۭ بَعْدَهُۥ يُؤْمِنُونَ. ﴿50﴾