النبأ
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಅವರು ಪರಸ್ಪರ ಯಾವುದರ ಬಗ್ಗೆ ವಿಚಾರಿಸುತ್ತಿದ್ದಾರೆ? | عَمَّ يَتَسَآءَلُونَ. ﴿1﴾ |
| 2 ಆ ಮಹಾ ಸಮಾಚಾರದ (ಪುನರುತ್ಥಾನದ) ಬಗ್ಗೆ. | عَنِ ٱلنَّبَإِ ٱلْعَظِيمِ. ﴿2﴾ |
| 3 ಅದು ಅವರು ಭಿನ್ನಮತ ತಳೆದಿರುವ ಸಮಾಚಾರವಾಗಿದೆ. | ٱلَّذِى هُمْ فِيهِ مُخْتَلِفُونَ. ﴿3﴾ |
| 4 ಖಂಡಿತವಾಗಿಯೂ ಅವರು ಸದ್ಯವೇ ತಿಳಿಯುವರು. | كَلَّا سَيَعْلَمُونَ. ﴿4﴾ |
| 5 ನಂತರ ಖಂಡಿತವಾಗಿಯೂ ಅವರಿಗೆ ಶೀಘ್ರವೇ ತಿಳಿದುಬರುವುದು. | ثُمَّ كَلَّا سَيَعْلَمُونَ. ﴿5﴾ |
| 6 ನಾವು ಭೂಮಿಯನ್ನು ಹಾಸನ್ನಾಗಿ ಮಾಡಲಿಲ್ಲವೇ? | أَلَمْ نَجْعَلِ ٱلْأَرْضَ مِهَٰدًۭا. ﴿6﴾ |
| 7 ಪರ್ವತಗಳನ್ನು ಗೂಟಗಳನ್ನಾಗಿ ಮಾಡಲಿಲ್ಲವೇ? | وَٱلْجِبَالَ أَوْتَادًۭا. ﴿7﴾ |
| 8 ನಿಮ್ಮನ್ನು ನಾವು ಜೋಡಿಗಳಾಗಿ ಸೃಷ್ಟಿಸಿದೆವು. | وَخَلَقْنَٰكُمْ أَزْوَٰجًۭا. ﴿8﴾ |
| 9 ನಾವು ನಿಮ್ಮ ನಿದ್ದೆಯನ್ನು ವಿಶ್ರಾಂತಿಗೆ ಕಾರಣವಾಗಿ ಮಾಡಿದೆವು. | وَجَعَلْنَا نَوْمَكُمْ سُبَاتًۭا. ﴿9﴾ |
| 10 ನಾವು ರಾತ್ರಿಯನ್ನು ಪರದೆಯಾಗಿ ಮಾಡಿದೆವು. | وَجَعَلْنَا ٱلَّيْلَ لِبَاسًۭا. ﴿10﴾ |
| 11 ನಾವು ಹಗಲನ್ನು ಜೀವನೋಪಾಯದ ವೇಳೆಯಾಗಿ ಮಾಡಿದೆವು. | وَجَعَلْنَا ٱلنَّهَارَ مَعَاشًۭا. ﴿11﴾ |
| 12 ನಾವು ನಿಮ್ಮ ಮೇಲ್ಭಾಗದಲ್ಲಿ ಏಳು ಬಲಿಷ್ಠ ಆಕಾಶಗಳನ್ನು ನಿರ್ಮಿಸಿದೆವು. | وَبَنَيْنَا فَوْقَكُمْ سَبْعًۭا شِدَادًۭا. ﴿12﴾ |
| 13 ನಾವು ಬೆಳಗುವ ಒಂದು ದೀಪವನ್ನು (ಸೂರ್ಯ) ಮಾಡಿದೆವು. | وَجَعَلْنَا سِرَاجًۭا وَهَّاجًۭا. ﴿13﴾ |
| 14 ನಾವು ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸಿದೆವು. | وَأَنزَلْنَا مِنَ ٱلْمُعْصِرَٰتِ مَآءًۭ ثَجَّاجًۭا. ﴿14﴾ |
| 15 ಅದರಿಂದ ಧಾನ್ಯ ಹಾಗೂ ತರಕಾರಿಯನ್ನು ಬೆಳೆಸುವುದಕ್ಕಾಗಿ. | لِّنُخْرِجَ بِهِۦ حَبًّۭا وَنَبَاتًۭا. ﴿15﴾ |
| 16 ಮತ್ತು ದಟ್ಟವಾದ ತೋಟಗಳನ್ನು. | وَجَنَّٰتٍ أَلْفَافًا. ﴿16﴾ |
| 17 ನಿಶ್ಚಯವಾಗಿಯೂ ತೀರ್ಪು ನೀಡುವ ದಿನದ ಸಮಯವನ್ನು ನಿಶ್ಚಯಿಸಲಾಗಿದೆ. | إِنَّ يَوْمَ ٱلْفَصْلِ كَانَ مِيقَٰتًۭا. ﴿17﴾ |
| 18 ಕಹಳೆಯಲ್ಲಿ ಊದಲಾಗುವ ದಿನ. ಆಗ ನೀವು ಗುಂಪು ಗುಂಪಾಗಿ ಬರುವಿರಿ. | يَوْمَ يُنفَخُ فِى ٱلصُّورِ فَتَأْتُونَ أَفْوَاجًۭا. ﴿18﴾ |
| 19 ಆಕಾಶವನ್ನು ತೆರೆಯಲಾಗುವುದು. ಆಗ ಅದು ಅಸಂಖ್ಯ ಬಾಗಿಲುಗಳಾಗಿ ಮಾರ್ಪಡುವುದು. | وَفُتِحَتِ ٱلسَّمَآءُ فَكَانَتْ أَبْوَٰبًۭا. ﴿19﴾ |
| 20 ಪರ್ವತಗಳನ್ನು ಚಲಿಸುವಂತೆ ಮಾಡಲಾಗುವುದು. ಆಗ ಅವು ಮರೀಚಿಕೆಯಂತಾಗುವುವು. | وَسُيِّرَتِ ٱلْجِبَالُ فَكَانَتْ سَرَابًا. ﴿20﴾ |
| 21 ನಿಶ್ಚಯವಾಗಿಯೂ ನರಕವು ನಿಗಾವಣೆಯ ಸ್ಥಳದಲ್ಲಿದೆ. | إِنَّ جَهَنَّمَ كَانَتْ مِرْصَادًۭا. ﴿21﴾ |
| 22 ಅದು ಎಲ್ಲೆ ಮೀರಿ ವರ್ತಿಸಿದವರ ವಾಸಸ್ಥಳವಾಗಿದೆ. | لِّلطَّٰغِينَ مَـَٔابًۭا. ﴿22﴾ |
| 23 ಅವರು ಯುಗ ಯುಗಾಂತರ ಅದರಲ್ಲಿ ವಾಸಿಸುವರು. | لَّٰبِثِينَ فِيهَآ أَحْقَابًۭا. ﴿23﴾ |
| 24 ಅವರು ಅಲ್ಲಿ ತಂಪು ಅಥವಾ ಪಾನೀಯದ ರುಚಿಯನ್ನು ನೋಡುವುದೇ ಇಲ್ಲ. | لَّا يَذُوقُونَ فِيهَا بَرْدًۭا وَلَا شَرَابًا. ﴿24﴾ |
| 25 ಕುದಿಯುವ ನೀರು ಮತ್ತು (ದುರ್ಗಂಧಪೂರಿತ) ಕೀವಿನ (ರುಚಿಯ) ಹೊರತು. | إِلَّا حَمِيمًۭا وَغَسَّاقًۭا. ﴿25﴾ |
| 26 ಅವರಿಗೆ ಪೂರ್ಣ ಪ್ರತಿಫಲ ನೀಡಲಾಗುವುದು. | جَزَآءًۭ وِفَاقًا. ﴿26﴾ |
| 27 ನಿಶ್ಚಯವಾಗಿಯೂ ಅವರು ವಿಚಾರಣೆಯನ್ನು ನಿರೀಕ್ಷಿಸುತ್ತಿರಲಿಲ್ಲ. | إِنَّهُمْ كَانُوا۟ لَا يَرْجُونَ حِسَابًۭا. ﴿27﴾ |
| 28 ಅವರು ಸೊಕ್ಕಿನಿಂದ ನಮ್ಮ ವಚನಗಳನ್ನು ನಿಷೇಧಿಸಿದ್ದರು. | وَكَذَّبُوا۟ بِـَٔايَٰتِنَا كِذَّابًۭا. ﴿28﴾ |
| 29 ನಾವು ಎಲ್ಲ ವಿಷಯಗಳನ್ನೂ ಲಿಖಿತಗೊಳಿಸಿ ಎಣಿಸಿಟ್ಟಿದ್ದೇವೆ. | وَكُلَّ شَىْءٍ أَحْصَيْنَٰهُ كِتَٰبًۭا. ﴿29﴾ |
| 30 ಆದ್ದರಿಂದ ನೀವು (ನಿಮ್ಮ ದುಷ್ಕರ್ಮಗಳ) ರುಚಿಯನ್ನು ನೋಡಿರಿ. ನಾವು ನಿಮಗೆ ಶಿಕ್ಷೆಯಲ್ಲದೆ ಬೇರೇನನ್ನೂ ಅಧಿಕಗೊಳಿಸುವುದಿಲ್ಲ. | فَذُوقُوا۟ فَلَن نَّزِيدَكُمْ إِلَّا عَذَابًا. ﴿30﴾ |
| 31 ನಿಶ್ಚಯವಾಗಿಯೂ ದೇವಭಯವುಳ್ಳವರಿಗೆ ವಿಜಯವಿದೆ. | إِنَّ لِلْمُتَّقِينَ مَفَازًا. ﴿31﴾ |
| 32 ತೋಟಗಳು ಮತ್ತು ದ್ರಾಕ್ಷಿಗಳಿವೆ. | حَدَآئِقَ وَأَعْنَٰبًۭا. ﴿32﴾ |
| 33 ಸಮಪ್ರಾಯದ ಯುವ ತರುಣಿಯರಿದ್ದಾರೆ. | وَكَوَاعِبَ أَتْرَابًۭا. ﴿33﴾ |
| 34 ತುಂಬಿ ತುಳುಕುವ ಲೋಟಗಳಿವೆ. | وَكَأْسًۭا دِهَاقًۭا. ﴿34﴾ |
| 35 ಅವರು ಅಲ್ಲಿ ಅನಗತ್ಯ ಮಾತುಗಳನ್ನು ಅಥವಾ ಸುಳ್ಳು ವಾರ್ತೆಗಳನ್ನು ಕೇಳುವುದಿಲ್ಲ. | لَّا يَسْمَعُونَ فِيهَا لَغْوًۭا وَلَا كِذَّٰبًۭا. ﴿35﴾ |
| 36 ಇವೆಲ್ಲವೂ ಅವರಿಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ದೊರೆಯುವ ಪರ್ಯಾಪ್ತ ಪ್ರತಿಫಲವಾಗಿದೆ. | جَزَآءًۭ مِّن رَّبِّكَ عَطَآءً حِسَابًۭا. ﴿36﴾ |
| 37 ಅವನು ಯಾರೆಂದರೆ ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಅವನು ಪರಮ ದಯಾಳುವಾಗಿದ್ದಾನೆ. ಅವನೊಡನೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. | رَّبِّ ٱلسَّمَٰوَٰتِ وَٱلْأَرْضِ وَمَا بَيْنَهُمَا ٱلرَّحْمَٰنِ ۖ لَا يَمْلِكُونَ مِنْهُ خِطَابًۭا. ﴿37﴾ |
| 38 ರೂಹ್ (ಜಿಬ್ರೀಲ್) ಮತ್ತು ದೇವದೂತರುಗಳು ಸಾಲು ಸಾಲಾಗಿ ನಿಲ್ಲುವ ದಿನ. (ಅಂದು) ಪರಮ ದಯಾಳುವಾದ ಅಲ್ಲಾಹು ಯಾರಿಗೆ ಅನುಮತಿ ನೀಡುತ್ತಾನೋ ಮತ್ತು ಯಾರು ಸರಿಯಾದ ಮಾತನ್ನೇ ಆಡುತ್ತಾರೋ ಅವರ ಹೊರತು ಬೇರೆ ಯಾರಿಗೂ ತುಟಿ ಬಿಚ್ಚಲಾಗುವುದಿಲ್ಲ. | يَوْمَ يَقُومُ ٱلرُّوحُ وَٱلْمَلَٰٓئِكَةُ صَفًّۭا ۖ لَّا يَتَكَلَّمُونَ إِلَّا مَنْ أَذِنَ لَهُ ٱلرَّحْمَٰنُ وَقَالَ صَوَابًۭا. ﴿38﴾ |
| 39 ಆ ದಿನವು ಸತ್ಯವಾಗಿದೆ. ಆದ್ದರಿಂದ ಇಚ್ಛೆಯುಳ್ಳವನು (ಸತ್ಕರ್ಮಗಳನ್ನು ಮಾಡಿ) ತನ್ನ ಪರಿಪಾಲಕನ (ಅಲ್ಲಾಹನ) ಬಳಿ ವಾಸಸ್ಥಳವನ್ನು ಸ್ವೀಕರಿಸಿಕೊಳ್ಳಲಿ. | ذَٰلِكَ ٱلْيَوْمُ ٱلْحَقُّ ۖ فَمَن شَآءَ ٱتَّخَذَ إِلَىٰ رَبِّهِۦ مَـَٔابًا. ﴿39﴾ |
| 40 ನಾವು ನಿಮಗೆ ಶೀಘ್ರದಲ್ಲೇ ಬರುವ ಒಂದು ಶಿಕ್ಷೆಯ ಬಗ್ಗೆ ನಿಶ್ಚಯವಾಗಿಯೂ ಮುನ್ನೆಚ್ಚರಿಕೆ ನೀಡಿದ್ದೇವೆ. ಅಂದು ಮನುಷ್ಯನು ತನ್ನ ಕೈಗಳು ಮುಂದಕ್ಕೆ ಕಳುಹಿಸಿದ ಕರ್ಮಗಳನ್ನು ನೋಡುವನು ಮತ್ತು ಸತ್ಯನಿಷೇಧಿಯು ಹೇಳುವನು: “ಅಯ್ಯೋ! ನಾನು ಮಣ್ಣಾಗಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು!” | إِنَّآ أَنذَرْنَٰكُمْ عَذَابًۭا قَرِيبًۭا يَوْمَ يَنظُرُ ٱلْمَرْءُ مَا قَدَّمَتْ يَدَاهُ وَيَقُولُ ٱلْكَافِرُ يَٰلَيْتَنِى كُنتُ تُرَٰبًۢا. ﴿40﴾ |