النازعات
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 (ದೇಹದೊಳಗೆ) ಧುಮುಕಿ (ಸತ್ಯನಿಷೇಧಿಗಳ ಆತ್ಮಗಳನ್ನು) ಕಠೋರವಾಗಿ ಎಳೆಯುವ ದೇವದೂತರ ಮೇಲಾಣೆ! | وَٱلنَّٰزِعَٰتِ غَرْقًۭا. ﴿1﴾ |
| 2 (ಸತ್ಯವಿಶ್ವಾಸಿಗಳ ಆತ್ಮಗಳನ್ನು) ಸೌಮ್ಯವಾಗಿ ಎಳೆಯುವ ದೇವದೂತರ ಮೇಲಾಣೆ! | وَٱلنَّٰشِطَٰتِ نَشْطًۭا. ﴿2﴾ |
| 3 ಈಜುತ್ತಾ ಚಲಿಸುವ ದೇವದೂತರ ಮೇಲಾಣೆ! | وَٱلسَّٰبِحَٰتِ سَبْحًۭا. ﴿3﴾ |
| 4 ನಂತರ ದೌಡಾಯಿಸುತ್ತಾ ಮುಂದಕ್ಕೆ ಸಾಗುವ ದೇವದೂತರ ಮೇಲಾಣೆ! | فَٱلسَّٰبِقَٰتِ سَبْقًۭا. ﴿4﴾ |
| 5 ಕಾರ್ಯಗಳನ್ನು ನಿಯಂತ್ರಿಸುವ ದೇವದೂತರ ಮೇಲಾಣೆ! | فَٱلْمُدَبِّرَٰتِ أَمْرًۭا. ﴿5﴾ |
| 6 ನಡುಗಿಸುವಂತದ್ದು (ಪ್ರಥಮ ಊದುವಿಕೆ) ನಡುಗಿಸುವ ದಿನ! | يَوْمَ تَرْجُفُ ٱلرَّاجِفَةُ. ﴿6﴾ |
| 7 ಹಿಂಬಾಲಿಸಿ ಬರುವಂತದ್ದು (ಎರಡನೇ ಊದುವಿಕೆ) ಅದರ ಹಿಂದೆಯೇ ಬರುವುದು. | تَتْبَعُهَا ٱلرَّادِفَةُ. ﴿7﴾ |
| 8 ಅಂದು ಬಹಳಷ್ಟು ಹೃದಯಗಳು ಢವಗುಡುತ್ತಿರುವುವು. | قُلُوبٌۭ يَوْمَئِذٍۢ وَاجِفَةٌ. ﴿8﴾ |
| 9 ಅವರ ಕಣ್ಣುಗಳು ಕೆಳಭಾಗಕ್ಕೆ ತಗ್ಗಿರುವುವು. | أَبْصَٰرُهَا خَٰشِعَةٌۭ. ﴿9﴾ |
| 10 ಅವರು ಕೇಳುವರು: “ನಮ್ಮನ್ನು ನಮ್ಮ ಪೂರ್ವಸ್ಥಿತಿಗೆ ಮರಳಿಸಲಾಗುವುದೇ? | يَقُولُونَ أَءِنَّا لَمَرْدُودُونَ فِى ٱلْحَافِرَةِ. ﴿10﴾ |
| 11 ನಾವು ಕೊಳೆತ ಮೂಳೆಗಳಾಗಿ ಬಿಟ್ಟ ಬಳಿಕ!” | أَءِذَا كُنَّا عِظَٰمًۭا نَّخِرَةًۭ. ﴿11﴾ |
| 12 ಅವರು ಹೇಳುವರು: “ಹಾಗಿದ್ದರೆ ಅದು ನಷ್ಟಭರಿತ ಮರಳುವಿಕೆಯಾಗಿದೆ.” | قَالُوا۟ تِلْكَ إِذًۭا كَرَّةٌ خَاسِرَةٌۭ. ﴿12﴾ |
| 13 ಅದು ಕೇವಲ ಒಂದು (ಭಯಾನಕ) ಗದರಿಕೆಯಾಗಿದೆ. | فَإِنَّمَا هِىَ زَجْرَةٌۭ وَٰحِدَةٌۭ. ﴿13﴾ |
| 14 ಆಗ ಅಗೋ ಅವರು ಒಂದು ಮೈದಾನದಲ್ಲಿ ಒಟ್ಟುಗೂಡುವರು! | فَإِذَا هُم بِٱلسَّاهِرَةِ. ﴿14﴾ |
| 15 ಮೂಸಾರ ಸಮಾಚಾರವು ನಿಮಗೆ ತಲುಪಿದೆಯೇ? | هَلْ أَتَىٰكَ حَدِيثُ مُوسَىٰٓ. ﴿15﴾ |
| 16 ಪವಿತ್ರ ತುವಾ ಕಣಿವೆಯಲ್ಲಿ ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಕರೆದು ಹೇಳಿದ ಸಂದರ್ಭ: | إِذْ نَادَىٰهُ رَبُّهُۥ بِٱلْوَادِ ٱلْمُقَدَّسِ طُوًى. ﴿16﴾ |
| 17 “ಫರೋಹನ ಬಳಿಗೆ ಹೋಗಿರಿ. ನಿಶ್ಚಯವಾಗಿಯೂ ಅವನು ಎಲ್ಲೆ ಮೀರಿ ವರ್ತಿಸಿದ್ದಾನೆ. | ٱذْهَبْ إِلَىٰ فِرْعَوْنَ إِنَّهُۥ طَغَىٰ. ﴿17﴾ |
| 18 ಅವನೊಡನೆ ಕೇಳಿರಿ: ನೀನು ಸ್ವಯಂ ಸಂಸ್ಕರಿಸಲು ಬಯಸುವೆಯಾ? | فَقُلْ هَل لَّكَ إِلَىٰٓ أَن تَزَكَّىٰ. ﴿18﴾ |
| 19 ನಾನು ನಿನಗೆ ನಿನ್ನ ಪರಿಪಾಲಕನ (ಅಲ್ಲಾಹನ) ಮಾರ್ಗವನ್ನು ತೋರಿಸಿಕೊಡುವೆನು. ಅದರಿಂದ ನೀನು ದೇವಭಯವುಳ್ಳವನಾಗಬಹುದು.” | وَأَهْدِيَكَ إِلَىٰ رَبِّكَ فَتَخْشَىٰ. ﴿19﴾ |
| 20 ಮೂಸಾ ಅವನಿಗೆ ಮಹಾ ದೃಷ್ಟಾಂತವನ್ನು ತೋರಿಸಿದರು. | فَأَرَىٰهُ ٱلْءَايَةَ ٱلْكُبْرَىٰ. ﴿20﴾ |
| 21 ಆದರೆ ಅವನು ನಿಷೇಧಿಸಿದನು ಮತ್ತು ಅವಿಧೇಯತೆ ತೋರಿದನು. | فَكَذَّبَ وَعَصَىٰ. ﴿21﴾ |
| 22 ನಂತರ ಅವನು (ತಂತ್ರಗಾರಿಕೆ ಮಾಡಲು) ಪರಿಶ್ರಮಿಸುತ್ತಾ ಹಿಂದಿರುಗಿ ಹೋದನು. | ثُمَّ أَدْبَرَ يَسْعَىٰ. ﴿22﴾ |
| 23 ನಂತರ ಎಲ್ಲರನ್ನೂ ಜಮಾವಣೆಗೊಳಿಸಿ ಘೋಷಿಸಿದನು. | فَحَشَرَ فَنَادَىٰ. ﴿23﴾ |
| 24 ಅವನು ಹೇಳಿದನು: “ನಾನು ನಿಮ್ಮ ಪರಮೋಚ್ಛ ದೇವನಾಗಿದ್ದೇನೆ.” | فَقَالَ أَنَا۠ رَبُّكُمُ ٱلْأَعْلَىٰ. ﴿24﴾ |
| 25 ಆಗ ಅಲ್ಲಾಹು ಅವನನ್ನು ಪರಲೋಕ ಮತ್ತು ಇಹಲೋಕದ ಶಿಕ್ಷೆಗಾಗಿ ಹಿಡಿದನು. | فَأَخَذَهُ ٱللَّهُ نَكَالَ ٱلْءَاخِرَةِ وَٱلْأُولَىٰٓ. ﴿25﴾ |
| 26 ನಿಶ್ಚಯವಾಗಿಯೂ ಭಯಪಡುವವರಿಗೆ ಅದರಲ್ಲಿ ನೀತಿಪಾಠವಿದೆ. | إِنَّ فِى ذَٰلِكَ لَعِبْرَةًۭ لِّمَن يَخْشَىٰٓ. ﴿26﴾ |
| 27 ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಆಕಾಶವನ್ನೋ? ಅವನು ಆಕಾಶವನ್ನು ನಿರ್ಮಿಸಿದನು. | ءَأَنتُمْ أَشَدُّ خَلْقًا أَمِ ٱلسَّمَآءُ ۚ بَنَىٰهَا. ﴿27﴾ |
| 28 ಅದರ ಛಾವಣಿಯನ್ನು ಎತ್ತರಿಸಿದನು ಮತ್ತು ಅದನ್ನು ಸರಿಪಡಿಸಿದನು. | رَفَعَ سَمْكَهَا فَسَوَّىٰهَا. ﴿28﴾ |
| 29 ಅದರ ರಾತ್ರಿಯನ್ನು ಕತ್ತಲೆಯಾಗಿ ಮಾಡಿದನು ಮತ್ತು ಅದರ ಹಗಲನ್ನು ಪ್ರತ್ಯಕ್ಷಗೊಳಿಸಿದನು. | وَأَغْطَشَ لَيْلَهَا وَأَخْرَجَ ضُحَىٰهَا. ﴿29﴾ |
| 30 ಅದರ ನಂತರ ಅವನು ಭೂಮಿಯನ್ನು ವಿಸ್ತರಿಸಿದನು. | وَٱلْأَرْضَ بَعْدَ ذَٰلِكَ دَحَىٰهَآ. ﴿30﴾ |
| 31 ಅದರಿಂದ ನೀರನ್ನು ಮತ್ತು ಹುಲ್ಲುಗಾವಲುಗಳನ್ನು ಹೊರತೆಗೆದನು. | أَخْرَجَ مِنْهَا مَآءَهَا وَمَرْعَىٰهَا. ﴿31﴾ |
| 32 ಪರ್ವತಗಳನ್ನು ದೃಢವಾಗಿ ನಿಲ್ಲಿಸಿದನು. | وَٱلْجِبَالَ أَرْسَىٰهَا. ﴿32﴾ |
| 33 ಇವೆಲ್ಲವೂ ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ. | مَتَٰعًۭا لَّكُمْ وَلِأَنْعَٰمِكُمْ. ﴿33﴾ |
| 34 ಆ ಮಹಾ ವಿಪತ್ತು (ಪುನರುತ್ಥಾನ ದಿನ) ಬರುವ ಸಂದರ್ಭ. | فَإِذَا جَآءَتِ ٱلطَّآمَّةُ ٱلْكُبْرَىٰ. ﴿34﴾ |
| 35 ಅಂದು ಮನುಷ್ಯನು ತಾನು ಮಾಡಿಟ್ಟ ಕರ್ಮಗಳನ್ನು ಸ್ಮರಿಸುವನು. | يَوْمَ يَتَذَكَّرُ ٱلْإِنسَٰنُ مَا سَعَىٰ. ﴿35﴾ |
| 36 ನೋಡುಗರೆಲ್ಲರ ಮುಂದೆ ನರಕವನ್ನು ಪ್ರದರ್ಶಿಸಲಾಗುವುದು. | وَبُرِّزَتِ ٱلْجَحِيمُ لِمَن يَرَىٰ. ﴿36﴾ |
| 37 ಆದ್ದರಿಂದ ಯಾರು ಎಲ್ಲೆ ಮೀರಿದವನೋ, | فَأَمَّا مَن طَغَىٰ. ﴿37﴾ |
| 38 ಮತ್ತು ಇಹಲೋಕಕ್ಕೆ ಪ್ರಾಶಸ್ತ್ಯ ನೀಡಿದವನೋ, | وَءَاثَرَ ٱلْحَيَوٰةَ ٱلدُّنْيَا. ﴿38﴾ |
| 39 ನಿಶ್ಚಯವಾಗಿಯೂ ನರಕವೇ ಅವನ ವಾಸಸ್ಥಳ. | فَإِنَّ ٱلْجَحِيمَ هِىَ ٱلْمَأْوَىٰ. ﴿39﴾ |
| 40 ಯಾರು ತನ್ನ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲುವುದನ್ನು ಭಯಪಟ್ಟನೋ ಮತ್ತು ತನ್ನ ದೇಹವನ್ನು ಸ್ವೇಚ್ಛೆಗಳಿಂದ ದೂರವಿಟ್ಟವನೋ, | وَأَمَّا مَنْ خَافَ مَقَامَ رَبِّهِۦ وَنَهَى ٱلنَّفْسَ عَنِ ٱلْهَوَىٰ. ﴿40﴾ |
| 41 ನಿಶ್ಚಯವಾಗಿಯೂ ಸ್ವರ್ಗವೇ ಅವನ ವಾಸಸ್ಥಳ. | فَإِنَّ ٱلْجَنَّةَ هِىَ ٱلْمَأْوَىٰ. ﴿41﴾ |
| 42 ಅಂತ್ಯಸಮಯವು—ಅದು ಯಾವಾಗ ಸಂಭವಿಸುತ್ತದೆಯೆಂದು ಅವರು ನಿಮ್ಮಲ್ಲಿ ಕೇಳುತ್ತಾರೆ. | يَسْـَٔلُونَكَ عَنِ ٱلسَّاعَةِ أَيَّانَ مُرْسَىٰهَا. ﴿42﴾ |
| 43 ನಿಮಗೆ ಅದರ ಬಗ್ಗೆ ಏನು ಜ್ಞಾನವಿದೆ? | فِيمَ أَنتَ مِن ذِكْرَىٰهَآ. ﴿43﴾ |
| 44 ಅದರ ಆತ್ಯಂತಿಕ ಜ್ಞಾನವಿರುವುದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ. | إِلَىٰ رَبِّكَ مُنتَهَىٰهَآ. ﴿44﴾ |
| 45 ನೀವಂತೂ ಅದನ್ನು ಭಯಪಡುವವರಿಗೆ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ. | إِنَّمَآ أَنتَ مُنذِرُ مَن يَخْشَىٰهَا. ﴿45﴾ |
| 46 ಅವರು ಅದನ್ನು ನೋಡುವ ದಿನದಂದು, ದಿನದ ಕೊನೆಯ ಭಾಗ ಅಥವಾ ದಿನದ ಮೊದಲ ಭಾಗ ಮಾತ್ರ ಅವರು (ಭೂಮಿಯಲ್ಲಿ) ವಾಸವಾಗಿದ್ದರು ಎಂದು ಅವರಿಗೆ ಭಾಸವಾಗುವುದು. | كَأَنَّهُمْ يَوْمَ يَرَوْنَهَا لَمْ يَلْبَثُوٓا۟ إِلَّا عَشِيَّةً أَوْ ضُحَىٰهَا. ﴿46﴾ |