عبس
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಅವರು (ಪ್ರವಾದಿ) ಮುಖ ಸಿಂಡರಿಸಿದರು ಮತ್ತು ವಿಮುಖರಾದರು. | عَبَسَ وَتَوَلَّىٰٓ. ﴿1﴾ |
|
2
ಒಬ್ಬ ಕುರುಡ ಅವರ ಬಳಿಗೆ ಬಂದರು ಎಂಬ ಕಾರಣದಿಂದ.[1]
[1] ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರೈಷ್ ಮುಖಂಡರಿಗೆ ಧರ್ಮದ ವಿಷಯಗಳನ್ನು ಹೇಳಿಕೊಟ್ಟು ಇಸ್ಲಾಂಗೆ ಆಮಂತ್ರಿಸುತ್ತಿದ್ದಾಗ, ಅವರ ಅನುಯಾಯಿಗಳಲ್ಲಿ ಒಬ್ಬರಾದ ಇಬ್ನ್ ಉಮ್ಮ್ ಮಕ್ತೂಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಿಗೆ ಬಂದು ಏನೋ ಕೇಳಿದರು. ಅವರು ಕುರುಡರಾಗಿದ್ದರು. ಆದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಡೆಗೆ ಗಮನಹರಿಸದೆ ಕುರೈಷ್ ಮುಖಂಡರಿಗೆ ಆಮಂತ್ರಣ ನೀಡುವುದನ್ನು ಮುಂದುವರಿಸಿದರು. ಇದನ್ನು ಇಲ್ಲಿ ವಿಮರ್ಶಿಸಲಾಗಿದೆ.
|
أَن جَآءَهُ ٱلْأَعْمَىٰ. ﴿2﴾ |
| 3 (ಪ್ರವಾದಿಯವರೇ!) ನಿಮಗೇನು ಗೊತ್ತು? ಆ ಕುರುಡರು ಪರಿಶುದ್ಧತೆಯನ್ನು ಪಡೆಯಬಹುದು. | وَمَا يُدْرِيكَ لَعَلَّهُۥ يَزَّكَّىٰٓ. ﴿3﴾ |
| 4 ಅಥವಾ ಉಪದೇಶಕ್ಕೆ ಕಿವಿಗೊಟ್ಟು, ಆ ಉಪದೇಶವು ಅವರಿಗೆ ಪ್ರಯೋಜನವಾಗಬಹುದು. | أَوْ يَذَّكَّرُ فَتَنفَعَهُ ٱلذِّكْرَىٰٓ. ﴿4﴾ |
| 5 ಆದರೆ ಯಾರು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಪರಿಗಣಿಸುತ್ತಾನೋ, | أَمَّا مَنِ ٱسْتَغْنَىٰ. ﴿5﴾ |
|
6
ಅವನ ಕಡೆಗೆ ನೀವು ಪೂರ್ಣ ಗಮನ ಹರಿಸಿದಿರಿ.[1]
[1] ಅಂದರೆ ನೀವು ಕುರೈಷ್ ಮುಖಂಡನ ಕಡೆಗೆ ಪೂರ್ಣ ಗಮನ ಹರಿಸಿದಿರಿ.
|
فَأَنتَ لَهُۥ تَصَدَّىٰ. ﴿6﴾ |
| 7 ಅವನು ಪರಿಶುದ್ಧತೆಯನ್ನು ಪಡೆಯದಿದ್ದರೆ ನಿಮಗೇನೂ ದೋಷವಿಲ್ಲ. | وَمَا عَلَيْكَ أَلَّا يَزَّكَّىٰ. ﴿7﴾ |
| 8 ಆದರೆ ಯಾರು ನಿಮ್ಮ ಬಳಿಗೆ ಓಡುತ್ತಾ ಬಂದರೋ, | وَأَمَّا مَن جَآءَكَ يَسْعَىٰ. ﴿8﴾ |
| 9 ಅಲ್ಲಾಹನನ್ನು ಭಯಪಡುವ ಸ್ಥಿತಿಯಲ್ಲಿ, | وَهُوَ يَخْشَىٰ. ﴿9﴾ |
| 10 ಅವರ ಬಗ್ಗೆ ನೀವು ಅಸಡ್ಡೆ ತೋರಿದಿರಿ. | فَأَنتَ عَنْهُ تَلَهَّىٰ. ﴿10﴾ |
| 11 ಅಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಒಂದು ಉಪದೇಶವಾಗಿದೆ. | كَلَّآ إِنَّهَا تَذْكِرَةٌۭ. ﴿11﴾ |
| 12 ಇಚ್ಛೆಯುಳ್ಳವರು ಅದರಿಂದ ಉಪದೇಶ ಪಡೆಯಲಿ. | فَمَن شَآءَ ذَكَرَهُۥ. ﴿12﴾ |
| 13 ಅದು ಪ್ರತಿಷ್ಠಿತ ಗ್ರಂಥದಲ್ಲಿದೆ. | فِى صُحُفٍۢ مُّكَرَّمَةٍۢ. ﴿13﴾ |
| 14 ಉನ್ನತವಾದ ಮತ್ತು ಪರಿಶುದ್ಧವಾದ (ಗ್ರಂಥದಲ್ಲಿ). | مَّرْفُوعَةٍۢ مُّطَهَّرَةٍۭ. ﴿14﴾ |
| 15 ಅದು ದೇವದೂತರುಗಳ ಕೈಗಳಲ್ಲಿವೆ. | بِأَيْدِى سَفَرَةٍۢ. ﴿15﴾ |
| 16 ಗಣ್ಯರು ಮತ್ತು ನೀತಿವಂತರಾದ (ದೇವದೂತರುಗಳು). | كِرَامٍۭ بَرَرَةٍۢ. ﴿16﴾ |
| 17 ಮನುಷ್ಯನ ಮೇಲೆ ಅಲ್ಲಾಹನ ಶಾಪವಿರಲಿ! ಅವನು ಎಷ್ಟೊಂದು ಕೃತಜ್ಞತೆಯಿಲ್ಲದವನಾಗಿ ಬಿಟ್ಟಿದ್ದಾನೆ! | قُتِلَ ٱلْإِنسَٰنُ مَآ أَكْفَرَهُۥ. ﴿17﴾ |
| 18 ಅಲ್ಲಾಹು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದನು? | مِنْ أَىِّ شَىْءٍ خَلَقَهُۥ. ﴿18﴾ |
| 19 ಅವನನ್ನು ವೀರ್ಯದಿಂದ ಸೃಷ್ಟಿಸಿದನು. ನಂತರ ಅವನನ್ನು ನಿರ್ಣಯಿಸಿದನು. | مِن نُّطْفَةٍ خَلَقَهُۥ فَقَدَّرَهُۥ. ﴿19﴾ |
| 20 ನಂತರ ಅವನಿಗೆ ಮಾರ್ಗವನ್ನು ಸುಗಮಗೊಳಿಸಿದನು. | ثُمَّ ٱلسَّبِيلَ يَسَّرَهُۥ. ﴿20﴾ |
| 21 ನಂತರ ಅವನಿಗೆ ಮರಣವನ್ನು ನೀಡಿ ಸಮಾಧಿಯಲ್ಲಿ ದಫನ ಮಾಡಿಸಿದನು. | ثُمَّ أَمَاتَهُۥ فَأَقْبَرَهُۥ. ﴿21﴾ |
| 22 ನಂತರ ಅವನು ಇಚ್ಛಿಸುವಾಗ ಅವನಿಗೆ ಪುನಃ ಜೀವ ನೀಡಿ ಎಬ್ಬಿಸುವನು. | ثُمَّ إِذَا شَآءَ أَنشَرَهُۥ. ﴿22﴾ |
| 23 ಇಲ್ಲವೇ ಇಲ್ಲ. ಅವನು ಇಲ್ಲಿಯ ತನಕ ಅಲ್ಲಾಹನ ಆಜ್ಞೆಗಳನ್ನು ಪಾಲಿಸಲಿಲ್ಲ. | كَلَّا لَمَّا يَقْضِ مَآ أَمَرَهُۥ. ﴿23﴾ |
| 24 ಮನುಷ್ಯನು ತನ್ನ ಆಹಾರವನ್ನು ನೋಡಲಿ. | فَلْيَنظُرِ ٱلْإِنسَٰنُ إِلَىٰ طَعَامِهِۦٓ. ﴿24﴾ |
| 25 ನಾವು ರಭಸವಾಗಿ ಮಳೆಯನ್ನು ಸುರಿಸಿದೆವು. | أَنَّا صَبَبْنَا ٱلْمَآءَ صَبًّۭا. ﴿25﴾ |
| 26 ನಂತರ ಭೂಮಿಯನ್ನು ಸರಿಯಾದ ರೀತಿಯಲ್ಲಿ ಸೀಳಿದೆವು. | ثُمَّ شَقَقْنَا ٱلْأَرْضَ شَقًّۭا. ﴿26﴾ |
| 27 ನಂತರ ಅದರಲ್ಲಿ ಧಾನ್ಯವನ್ನು ಬೆಳೆಸಿದೆವು. | فَأَنۢبَتْنَا فِيهَا حَبًّۭا. ﴿27﴾ |
| 28 ದ್ರಾಕ್ಷಿ ಮತ್ತು ತರಕಾರಿಗಳನ್ನು, | وَعِنَبًۭا وَقَضْبًۭا. ﴿28﴾ |
| 29 ಆಲಿವ್ ಮತ್ತು ಖರ್ಜೂರ ಮರಗಳನ್ನು, | وَزَيْتُونًۭا وَنَخْلًۭا. ﴿29﴾ |
| 30 ದಟ್ಟವಾದ ತೋಟಗಳನ್ನು. | وَحَدَآئِقَ غُلْبًۭا. ﴿30﴾ |
| 31 ಹಣ್ಣು-ಹಂಪಲುಗಳನ್ನು ಮತ್ತು ಹುಲ್ಲುಗಾವಲುಗಳನ್ನು. | وَفَٰكِهَةًۭ وَأَبًّۭا. ﴿31﴾ |
| 32 ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ. | مَّتَٰعًۭا لَّكُمْ وَلِأَنْعَٰمِكُمْ. ﴿32﴾ |
| 33 ಕಿವಿಯನ್ನು ಕಿವುಡುಗೊಳಿಸುವ ಆ ಸದ್ದು (ಪುನರುತ್ಥಾನ) ಬಂದಾಗ. | فَإِذَا جَآءَتِ ٱلصَّآخَّةُ. ﴿33﴾ |
| 34 ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು. | يَوْمَ يَفِرُّ ٱلْمَرْءُ مِنْ أَخِيهِ. ﴿34﴾ |
| 35 ತನ್ನ ತಂದೆ-ತಾಯಿಗಳಿಂದ. | وَأُمِّهِۦ وَأَبِيهِ. ﴿35﴾ |
| 36 ತನ್ನ ಮಡದಿ-ಮಕ್ಕಳಿಂದ. | وَصَٰحِبَتِهِۦ وَبَنِيهِ. ﴿36﴾ |
| 37 ಅಂದು ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇತರರ ಕಡೆಗೆ ಗಮನಕೊಡಲಾಗದಷ್ಟು ತನ್ನದೇ ಆದ ಆಲೋಚನೆಗಳಿರುವುವು. | لِكُلِّ ٱمْرِئٍۢ مِّنْهُمْ يَوْمَئِذٍۢ شَأْنٌۭ يُغْنِيهِ. ﴿37﴾ |
| 38 ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು. | وُجُوهٌۭ يَوْمَئِذٍۢ مُّسْفِرَةٌۭ. ﴿38﴾ |
| 39 ಅವು ಕಿಲಕಿಲ ನಗುತ್ತಿರುವುವು ಮತ್ತು ಸಂತೋಷದಿಂದಿರುವುವು. | ضَاحِكَةٌۭ مُّسْتَبْشِرَةٌۭ. ﴿39﴾ |
| 40 ಅಂದು ಬಹಳಷ್ಟು ಮುಖಗಳಿಗೆ ಧೂಳು ಮೆತ್ತಿಕೊಂಡಿರುವುದು. | وَوُجُوهٌۭ يَوْمَئِذٍ عَلَيْهَا غَبَرَةٌۭ. ﴿40﴾ |
| 41 ಅವುಗಳನ್ನು ಕಾರ್ಗತ್ತಲೆಯು ಕವಿದಿರುವುದು. | تَرْهَقُهَا قَتَرَةٌ. ﴿41﴾ |
| 42 ಅವರೇ ಸತ್ಯನಿಷೇಧಿಗಳು ಮತ್ತು ದುಷ್ಕರ್ಮಿಗಳು. | أُو۟لَٰٓئِكَ هُمُ ٱلْكَفَرَةُ ٱلْفَجَرَةُ. ﴿42﴾ |