التكوير
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಸೂರ್ಯನನ್ನು ಹೊದಿಯಲಾಗುವಾಗ. | إِذَا ٱلشَّمْسُ كُوِّرَتْ. ﴿1﴾ |
| 2 ನಕ್ಷತ್ರಗಳು ಪ್ರಕಾಶರಹಿತವಾಗುವಾಗ. | وَإِذَا ٱلنُّجُومُ ٱنكَدَرَتْ. ﴿2﴾ |
| 3 ಪರ್ವತಗಳನ್ನು ಚಲಿಸುವಂತೆ ಮಾಡಲಾಗುವಾಗ. | وَإِذَا ٱلْجِبَالُ سُيِّرَتْ. ﴿3﴾ |
|
4
ಪೂರ್ಣ ಬಸುರಿಗಳಾದ ಒಂಟೆಗಳನ್ನು ಉಪೇಕ್ಷಿಸಲಾಗುವಾಗ.[1]
[1] ಪೂರ್ಣ ಬಸುರಿ ಒಂಟೆಗಳನ್ನು ಅರಬ್ಬರು ಅಮೂಲ್ಯ ಸಂಪತ್ತೆಂದು ಪರಿಗಣಿಸುತ್ತಿದ್ದರು.
|
وَإِذَا ٱلْعِشَارُ عُطِّلَتْ. ﴿4﴾ |
|
5
ವನ್ಯ ಮೃಗಗಳನ್ನು ಒಟ್ಟುಗೂಡಿಸಲಾಗುವಾಗ.[1]
[1] ಪುನರುತ್ಥಾನ ದಿನ ವನ್ಯ ಮೃಗಗಳನ್ನು ಕೂಡ ಒಟ್ಟುಗೂಡಿಸಲಾಗುವುದು.
|
وَإِذَا ٱلْوُحُوشُ حُشِرَتْ. ﴿5﴾ |
| 6 ಸಮುದ್ರಗಳನ್ನು ಧಗಧಗನೆ ಉರಿಸಲಾಗುವಾಗ. | وَإِذَا ٱلْبِحَارُ سُجِّرَتْ. ﴿6﴾ |
|
7
ಆತ್ಮಗಳನ್ನು (ದೇಹಗಳೊಂದಿಗೆ) ಜೋಡಿಸಲಾಗುವಾಗ.[1]
[1] ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ ಇದರ ಅರ್ಥವೇನೆಂದರೆ, ಪುನರುತ್ಥಾನ ದಿನದಂದು ಜನರನ್ನು ಅವರದ್ದೇ ಗುಂಪುಗಳೊಂದಿಗೆ ಸೇರಿಸಲಾಗುವುದು. ಸತ್ಯವಿಶ್ವಾಸಿಗಳನ್ನು ಸತ್ಯವಿಶ್ವಾಸಿಗಳೊಂದಿಗೆ, ಸತ್ಯನಿಷೇಧಿಗಳನ್ನು ಸತ್ಯನಿಷೇಧಗಳೊಂದಿಗೆ, ಕಪಟ ವಿಶ್ವಾಸಿಗಳನ್ನು ಕಪಟ ವಿಶ್ವಾಸಿಗಳೊಂದಿಗೆ ಇತ್ಯಾದಿ.
|
وَإِذَا ٱلنُّفُوسُ زُوِّجَتْ. ﴿7﴾ |
| 8 ಜೀವಂತ ಹೂಳಲಾದ ಹೆಣ್ಣು ಮಗುವಿನೊಂದಿಗೆ ಕೇಳಲಾಗುವಾಗ. | وَإِذَا ٱلْمَوْءُۥدَةُ سُئِلَتْ. ﴿8﴾ |
| 9 ಯಾವ ತಪ್ಪಿಗಾಗಿ ಅವಳನ್ನು ಕೊಲೆ ಮಾಡಲಾಯಿತೆಂದು. | بِأَىِّ ذَنۢبٍۢ قُتِلَتْ. ﴿9﴾ |
| 10 ಕರ್ಮಪುಸ್ತಕಗಳನ್ನು ತೆರೆಯಲಾಗುವಾಗ. | وَإِذَا ٱلصُّحُفُ نُشِرَتْ. ﴿10﴾ |
| 11 ಆಕಾಶವನ್ನು ಕಳಚಲಾಗುವಾಗ. | وَإِذَا ٱلسَّمَآءُ كُشِطَتْ. ﴿11﴾ |
| 12 ನರಕವನ್ನು ಧಗಧಗನೆ ಉರಿಸಲಾಗುವಾಗ. | وَإِذَا ٱلْجَحِيمُ سُعِّرَتْ. ﴿12﴾ |
| 13 ಸ್ವರ್ಗವನ್ನು ಸಮೀಪಕ್ಕೆ ತರಲಾಗುವಾಗ. | وَإِذَا ٱلْجَنَّةُ أُزْلِفَتْ. ﴿13﴾ |
| 14 ಅಂದು ಪ್ರತಿಯೊಬ್ಬ ವ್ಯಕ್ತಿಯೂ ತಾನು ಏನು ತಂದಿರುವೆನೆಂದು ತಿಳಿಯುವನು. | عَلِمَتْ نَفْسٌۭ مَّآ أَحْضَرَتْ. ﴿14﴾ |
| 15 ನಾನು ಹಿಂದಕ್ಕೆ ಸರಿಯುವ ನಕ್ಷತ್ರಗಳ ಮೇಲೆ ಆಣೆ ಮಾಡುತ್ತೇನೆ. | فَلَآ أُقْسِمُ بِٱلْخُنَّسِ. ﴿15﴾ |
| 16 ಚಲಿಸುವ ಮತ್ತು ಅಪ್ರತ್ಯಕ್ಷವಾಗುವ (ನಕ್ಷತ್ರಗಳ ಮೇಲೆ). | ٱلْجَوَارِ ٱلْكُنَّسِ. ﴿16﴾ |
| 17 ರಾತ್ರಿಯ ಮೇಲೆ, ಅದು ಸರಿಯುವಾಗ. | وَٱلَّيْلِ إِذَا عَسْعَسَ. ﴿17﴾ |
| 18 ಪ್ರಭಾತದ ಮೇಲೆ, ಅದು ಬೆಳಗುವಾಗ. | وَٱلصُّبْحِ إِذَا تَنَفَّسَ. ﴿18﴾ |
|
19
ನಿಶ್ಚಯವಾಗಿಯೂ ಇದು (ಕುರ್‌ಆನ್) ಒಬ್ಬ ಗೌರವಾನ್ವಿತ ದೂತರ (ಜಿಬ್ರೀಲ್) ಮಾತಾಗಿದೆ.[1]
[1] ಅಂದರೆ ಅವರು (ಜಿಬ್ರೀಲ್) ಇದನ್ನು ಅಲ್ಲಾಹನ ಬಳಿಯಿಂದ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲುಪಿಸುತ್ತಿದ್ದಾರೆ.
|
إِنَّهُۥ لَقَوْلُ رَسُولٍۢ كَرِيمٍۢ. ﴿19﴾ |
| 20 ಅವರು ಅತ್ಯಂತ ಶಕ್ತಿಶಾಲಿ ಮತ್ತು ಸಿಂಹಾಸನದ ಒಡೆಯನಾದ ಅಲ್ಲಾಹನ ಬಳಿ ಉನ್ನತ ಪದವಿಯುಳ್ಳವರಾಗಿದ್ದಾರೆ. | ذِى قُوَّةٍ عِندَ ذِى ٱلْعَرْشِ مَكِينٍۢ. ﴿20﴾ |
| 21 (ಆಕಾಶಲೋಕದಲ್ಲಿ) ಅವರನ್ನು ಅನುಸರಿಸಲಾಗುತ್ತದೆ ಮತ್ತು ಅವರು ವಿಶ್ವಾಸಯೋಗ್ಯರಾಗಿದ್ದಾರೆ. | مُّطَاعٍۢ ثَمَّ أَمِينٍۢ. ﴿21﴾ |
| 22 ನಿಶ್ಚಯವಾಗಿಯೂ ನಿಮ್ಮ ಸಂಗಡಿಗರು (ಪ್ರವಾದಿ) ಮಾನಸಿಕ ಅಸ್ವಸ್ಥರಲ್ಲ. | وَمَا صَاحِبُكُم بِمَجْنُونٍۢ. ﴿22﴾ |
| 23 ಅವರು ಅವರನ್ನು (ಜಿಬ್ರೀಲರನ್ನು) ಪ್ರತ್ಯಕ್ಷ ದಿಗಂತದಲ್ಲಿ ನೋಡಿದ್ದಾರೆ. | وَلَقَدْ رَءَاهُ بِٱلْأُفُقِ ٱلْمُبِينِ. ﴿23﴾ |
|
24
ಅವರು ಅದೃಶ್ಯ ವಿಷಯಗಳನ್ನು ತಿಳಿಸುವ ವಿಷಯದಲ್ಲಿ ಜಿಪುಣತನ ತೋರುವುದಿಲ್ಲ.[1]
[1] ಅಂದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿಕೊಡಲಾಗುವ ವಿಷಯಗಳೆಲ್ಲವನ್ನೂ ಅವರು ಜನರಿಗೆ ತಲುಪಿಸುತ್ತಿದ್ದಾರೆ. ಅದರಲ್ಲಿ ಅವರು ಸ್ವಲ್ಪವೂ ಜಿಪುಣತನ ತೋರಿಸುವುದಿಲ್ಲ.
|
وَمَا هُوَ عَلَى ٱلْغَيْبِ بِضَنِينٍۢ. ﴿24﴾ |
| 25 ಇದು (ಕುರ್‌ಆನ್) ಬಹಿಷ್ಕೃತನಾದ ಶೈತಾನನ ಮಾತುಗಳಲ್ಲ. | وَمَا هُوَ بِقَوْلِ شَيْطَٰنٍۢ رَّجِيمٍۢ. ﴿25﴾ |
| 26 ಆದರೂ ನೀವು ಎಲ್ಲಿಗೆ ಹೋಗುತ್ತಿದ್ದೀರಿ? | فَأَيْنَ تَذْهَبُونَ. ﴿26﴾ |
| 27 ಇದು ಸರ್ವಲೋಕದ ಜನರಿಗೆ ಒಂದು ಉಪದೇಶವಾಗಿದೆ. | إِنْ هُوَ إِلَّا ذِكْرٌۭ لِّلْعَٰلَمِينَ. ﴿27﴾ |
| 28 (ವಿಶೇಷವಾಗಿ) ನಿಮ್ಮ ಪೈಕಿ ನೇರ ಮಾರ್ಗದಲ್ಲಿ ಚಲಿಸಲು ಇಚ್ಛಿಸುವವರಿಗೆ. | لِمَن شَآءَ مِنكُمْ أَن يَسْتَقِيمَ. ﴿28﴾ |
| 29 ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಇಚ್ಛಿಸದೆ ನೀವು ಇಚ್ಛಿಸುವುದಿಲ್ಲ. | وَمَا تَشَآءُونَ إِلَّآ أَن يَشَآءَ ٱللَّهُ رَبُّ ٱلْعَٰلَمِينَ. ﴿29﴾ |