الانفطار
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಆಕಾಶವು ಒಡೆದು ಸೀಳುವಾಗ. | إِذَا ٱلسَّمَآءُ ٱنفَطَرَتْ. ﴿1﴾ |
| 2 ನಕ್ಷತ್ರಗಳು ಉದುರಿ ಬೀಳುವಾಗ. | وَإِذَا ٱلْكَوَاكِبُ ٱنتَثَرَتْ. ﴿2﴾ |
| 3 ಸಮುದ್ರಗಳು ಉಕ್ಕಿ ಹರಿಯುವಾಗ. | وَإِذَا ٱلْبِحَارُ فُجِّرَتْ. ﴿3﴾ |
| 4 ಸಮಾಧಿಗಳು ಬುಡಮೇಲಾಗುವಾಗ. | وَإِذَا ٱلْقُبُورُ بُعْثِرَتْ. ﴿4﴾ |
| 5 ಆಗ ಮನುಷ್ಯನು ತಾನು ಮುಂದಕ್ಕೆ ಕಳುಹಿಸಿದ ಮತ್ತು ಹಿಂದೆ ಉಳಿಸಿದ (ಕರ್ಮಗಳನ್ನು) ತಿಳಿಯುವನು. | عَلِمَتْ نَفْسٌۭ مَّا قَدَّمَتْ وَأَخَّرَتْ. ﴿5﴾ |
| 6 ಓ ಮನುಷ್ಯನೇ! ಅತ್ಯುದಾರಿಯಾದ ನಿನ್ನ ಪರಿಪಾಲಕನ (ಅಲ್ಲಾಹನ) ವಿಷಯದಲ್ಲಿ ನಿನ್ನನ್ನು ವಂಚಿಸಿದ್ದೇನು? | يَٰٓأَيُّهَا ٱلْإِنسَٰنُ مَا غَرَّكَ بِرَبِّكَ ٱلْكَرِيمِ. ﴿6﴾ |
| 7 ಅವನು (ಅಲ್ಲಾಹು) ಯಾರೆಂದರೆ ನಿನ್ನನ್ನು ಸೃಷ್ಟಿಸಿದವನು, ನಿನ್ನನ್ನು ಸರಿಪಡಿಸಿದವನು ಮತ್ತು ನಿನ್ನನ್ನು ಸಮತೋಲನಗೊಳಿಸಿದವನು. | ٱلَّذِى خَلَقَكَ فَسَوَّىٰكَ فَعَدَلَكَ. ﴿7﴾ |
| 8 ಅವನು ಇಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದವನು. | فِىٓ أَىِّ صُورَةٍۢ مَّا شَآءَ رَكَّبَكَ. ﴿8﴾ |
| 9 ಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿದ್ದೀರಿ. | كَلَّا بَلْ تُكَذِّبُونَ بِٱلدِّينِ. ﴿9﴾ |
| 10 ನಿಶ್ಚಯವಾಗಿಯೂ ನಿಮ್ಮ ಮೇಲೆ ನಿಗಾ ವಹಿಸುವವರಿದ್ದಾರೆ. | وَإِنَّ عَلَيْكُمْ لَحَٰفِظِينَ. ﴿10﴾ |
| 11 ಗೌರವಾನ್ವಿತ ಬರಹಗಾರರು. | كِرَامًۭا كَٰتِبِينَ. ﴿11﴾ |
| 12 ನೀವು ಮಾಡುವುದೆಲ್ಲವನ್ನೂ ಅವರು ತಿಳಿಯುತ್ತಾರೆ. | يَعْلَمُونَ مَا تَفْعَلُونَ. ﴿12﴾ |
| 13 ನಿಶ್ಚಯವಾಗಿಯೂ ಸತ್ಕರ್ಮಿಗಳು ಸುಖದ ಸುಪ್ಪತ್ತಿಗೆಯಲ್ಲಿರುವರು. | إِنَّ ٱلْأَبْرَارَ لَفِى نَعِيمٍۢ. ﴿13﴾ |
| 14 ನಿಶ್ಚಯವಾಗಿಯೂ ದುಷ್ಕರ್ಮಿಗಳು ಧಗಧಗಿಸುವ ನರಕದಲ್ಲಿರುವರು. | وَإِنَّ ٱلْفُجَّارَ لَفِى جَحِيمٍۢ. ﴿14﴾ |
| 15 ಪ್ರತಿಫಲ ದಿನದಂದು ಅವರು ಅದನ್ನು ಪ್ರವೇಶಿಸುವರು. | يَصْلَوْنَهَا يَوْمَ ٱلدِّينِ. ﴿15﴾ |
| 16 ಅವರಿಗೆ ಅದರಿಂದ ಅನುಪಸ್ಥಿತರಾಗಲು ಸಾಧ್ಯವಾಗುವುದಿಲ್ಲ. | وَمَا هُمْ عَنْهَا بِغَآئِبِينَ. ﴿16﴾ |
| 17 ಪ್ರತಿಫಲದ ದಿನ ಏನೆಂದು ನಿಮಗೇನು ಗೊತ್ತು? | وَمَآ أَدْرَىٰكَ مَا يَوْمُ ٱلدِّينِ. ﴿17﴾ |
| 18 ಪುನಃ (ಕೇಳುತ್ತೇನೆ). ಪ್ರತಿಫಲದ ದಿನ ಏನೆಂದು ನಿಮಗೇನು ಗೊತ್ತು? | ثُمَّ مَآ أَدْرَىٰكَ مَا يَوْمُ ٱلدِّينِ. ﴿18﴾ |
| 19 ಅಂದು ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗಾಗಿ ಏನೂ ಅಧೀನದಲ್ಲಿಟ್ಟುಕೊಳ್ಳುವುದಿಲ್ಲ! ಅಂದು ಎಲ್ಲಾ ಆಜ್ಞೆಗಳು ಅಲ್ಲಾಹನದ್ದಾಗಿರುವುದು. | يَوْمَ لَا تَمْلِكُ نَفْسٌۭ لِّنَفْسٍۢ شَيْـًۭٔا ۖ وَٱلْأَمْرُ يَوْمَئِذٍۢ لِّلَّهِ. ﴿19﴾ |