Loading date... | Loading Hijri date... | Loading time...

الانشقاق

ಕನ್ನಡ Translation with Arabic Quran Text

ಕನ್ನಡ العربية
1 ಆಕಾಶವು ಒಡೆದು ಸೀಳುವಾಗ. إِذَا ٱلسَّمَآءُ ٱنشَقَّتْ. ﴿1﴾
2 ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.[1]
[1] ಅಂದರೆ ಒಡೆದು ಸೀಳಾಗಬೇಕೆಂಬ ಆಜ್ಞೆ ಸಿಕ್ಕಿದ ಕೂಡಲೆ ಆಕಾಶವು ಆ ಆಜ್ಞೆಯನ್ನು ಅನುಸರಿಸುತ್ತದೆ. ಅಲ್ಲಾಹನ ಆಜ್ಞೆಗಳನ್ನು ಅನುಸರಿಸುವುದು ಅದಕ್ಕೆ ಅರ್ಹವಾಗಿದೆ. ಏಕೆಂದರೆ ಅದು ಅಲ್ಲಾಹನಿಗೆ ಸಂಪೂರ್ಣ ವಿಧೇಯವಾಗಿದೆ.
وَأَذِنَتْ لِرَبِّهَا وَحُقَّتْ. ﴿2﴾
3 ಭೂಮಿಯು ವಿಸ್ತರಿಸಲಾಗುವಾಗ. وَإِذَا ٱلْأَرْضُ مُدَّتْ. ﴿3﴾
4 ಅದು ಅದರೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ. وَأَلْقَتْ مَا فِيهَا وَتَخَلَّتْ. ﴿4﴾
5 ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ. وَأَذِنَتْ لِرَبِّهَا وَحُقَّتْ. ﴿5﴾
6 ಓ ಮನುಷ್ಯನೇ! ನೀನು ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ತನಕ ಎಲ್ಲಾ ರೀತಿಯ ಕಠಿಣ ಪರಿಶ್ರಮ ಮಾಡಿ ನಂತರ ಅವನನ್ನು ಭೇಟಿಯಾಗುವೆ. يَٰٓأَيُّهَا ٱلْإِنسَٰنُ إِنَّكَ كَادِحٌ إِلَىٰ رَبِّكَ كَدْحًۭا فَمُلَٰقِيهِ. ﴿6﴾
7 ಆಗ ಯಾರಿಗೆ ಅವನ ಗ್ರಂಥವನ್ನು ಬಲಗೈಯಲ್ಲಿ ನೀಡಲಾಗುತ್ತದೋ, فَأَمَّا مَنْ أُوتِىَ كِتَٰبَهُۥ بِيَمِينِهِۦ. ﴿7﴾
8 ಅವನನ್ನು ಅತ್ಯಂತ ಸರಳವಾಗಿ ವಿಚಾರಣೆ ಮಾಡಲಾಗುವುದು. فَسَوْفَ يُحَاسَبُ حِسَابًۭا يَسِيرًۭا. ﴿8﴾
9 ಅವನು ತನ್ನ ಮನೆಯವರ ಬಳಿಗೆ ಸಂತೋಷದಿಂದ ಮರಳುವನು. وَيَنقَلِبُ إِلَىٰٓ أَهْلِهِۦ مَسْرُورًۭا. ﴿9﴾
10 ಆದರೆ ಯಾರಿಗೆ ಅವನ ಗ್ರಂಥವನ್ನು ಬೆನ್ನ ಹಿಂದಿನಿಂದ ನೀಡಲಾಗುತ್ತದೋ. وَأَمَّا مَنْ أُوتِىَ كِتَٰبَهُۥ وَرَآءَ ظَهْرِهِۦ. ﴿10﴾
11 ಅವನು ಸಾವನ್ನು ಕರೆಯುವನು. فَسَوْفَ يَدْعُوا۟ ثُبُورًۭا. ﴿11﴾
12 ಮತ್ತು ಧಗಧಗನೆ ಉರಿಯುವ ನರಕಾಗ್ನಿಯನ್ನು ಪ್ರವೇಶಿಸುವನು. وَيَصْلَىٰ سَعِيرًا. ﴿12﴾
13 ನಿಶ್ಚಯವಾಗಿಯೂ ಅವನು (ಇಹಲೋಕದಲ್ಲಿ) ಅವನ ಮನೆಯವರೊಡನೆ ಸಂತೋಷವಾಗಿದ್ದನು. إِنَّهُۥ كَانَ فِىٓ أَهْلِهِۦ مَسْرُورًا. ﴿13﴾
14 ಅಲ್ಲಾಹನ ಬಳಿಗೆ ಮರಳಿ ಹೋಗುವುದೇ ಇಲ್ಲವೆಂದು ಅವನು ಭಾವಿಸಿದ್ದನು. إِنَّهُۥ ظَنَّ أَن لَّن يَحُورَ. ﴿14﴾
15 ಹೌದು! ನಿಶ್ಚಯವಾಗಿಯೂ ಅವನ ಪರಿಪಾಲಕನು (ಅಲ್ಲಾಹು) ಅವನನ್ನು ನೋಡುತ್ತಿದ್ದನು. بَلَىٰٓ إِنَّ رَبَّهُۥ كَانَ بِهِۦ بَصِيرًۭا. ﴿15﴾
16 ನಾನು ಮುಸ್ಸಂಜೆಯ ಮೇಲೆ ಆಣೆ ಮಾಡುತ್ತೇನೆ. فَلَآ أُقْسِمُ بِٱلشَّفَقِ. ﴿16﴾
17 ರಾತ್ರಿಯ ಮೇಲೆ ಮತ್ತು ಅದು ಒಟ್ಟುಗೂಡಿಸುವ ವಸ್ತುಗಳ ಮೇಲಾಣೆ![1]
[1] ಇರುಳಾಗುತ್ತಿದ್ದಂತೆ ಎಲ್ಲಾ ಜೀವಿಗಳು ತಮ್ಮ ವಸತಿಗಳಿಗೆ ಮತ್ತು ಗೂಡುಗಳಿಗೆ ಮರಳುತ್ತವೆ.
وَٱلَّيْلِ وَمَا وَسَقَ. ﴿17﴾
18 ಚಂದ್ರನ ಮೇಲಾಣೆ! ಅದು ಪೂರ್ಣರೂಪವನ್ನು ಪಡೆಯುವಾಗ. وَٱلْقَمَرِ إِذَا ٱتَّسَقَ. ﴿18﴾
19 ನಿಶ್ಚಯವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪುತ್ತೀರಿ.[1]
[1] ಅಂದರೆ ಪುನರುತ್ಥಾನ ದಿನ ಮನುಷ್ಯನು ಅನೇಕ ಎಡರು-ತೊಡರುಗಳನ್ನು ಬಹಳ ಕಷ್ಟದಿಂದ ಕ್ರಮಿಸಬೇಕಾಗುತ್ತದೆ. ಅವನಿಗೆ ಎದುರಾಗುವ ಪರಿಸ್ಥಿತಿಗಳು ಒಂದಕ್ಕಿಂತ ಇನ್ನೊಂದು ಕಷ್ಟವಾಗಿರುತ್ತವೆ.
لَتَرْكَبُنَّ طَبَقًا عَن طَبَقٍۢ. ﴿19﴾
20 ಅವರಿಗೇನಾಗಿದೆ? ಅವರೇಕೆ ವಿಶ್ವಾಸವಿಡುವುದಿಲ್ಲ? فَمَا لَهُمْ لَا يُؤْمِنُونَ. ﴿20﴾
21 ಅವರಿಗೆ ಕುರ್‌ಆನನ್ನು ಓದಿಕೊಡಲಾದರೆ ಅವರು ಸಾಷ್ಟಾಂಗ ಮಾಡುವುದಿಲ್ಲ. وَإِذَا قُرِئَ عَلَيْهِمُ ٱلْقُرْءَانُ لَا يَسْجُدُونَ ۩. ﴿21﴾
22 ಆದರೆ ಆ ಸತ್ಯನಿಷೇಧಿಗಳು ನಿಷೇಧಿಸುತ್ತಿದ್ದಾರೆ. بَلِ ٱلَّذِينَ كَفَرُوا۟ يُكَذِّبُونَ. ﴿22﴾
23 ಅವರು ಅವರ ಒಡಲಲ್ಲಿ ಮುಚ್ಚಿಡುವುದನ್ನು ಅಲ್ಲಾಹು ಬಹಳ ಚೆನ್ನಾಗಿ ತಿಳಿಯುತ್ತಾನೆ. وَٱللَّهُ أَعْلَمُ بِمَا يُوعُونَ. ﴿23﴾
24 ಅವರಿಗೆ ಯಾತನಾಮಯ ಶಿಕ್ಷೆಯ ಸುವಾರ್ತೆ ನೀಡಿರಿ. فَبَشِّرْهُم بِعَذَابٍ أَلِيمٍ. ﴿24﴾
25 ಆದರೆ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಇದಕ್ಕೆ ಹೊರತಾಗಿದ್ದಾರೆ. ಅವರಿಗೆ ಎಂದೂ ಮುಗಿಯದ ಪ್ರತಿಫಲವಿದೆ. إِلَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ لَهُمْ أَجْرٌ غَيْرُ مَمْنُونٍۭ. ﴿25﴾