البروج
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ನಕ್ಷತ್ರ ಪುಂಜಗಳಿರುವ ಆಕಾಶದ ಮೇಲಾಣೆ! | وَٱلسَّمَآءِ ذَاتِ ٱلْبُرُوجِ. ﴿1﴾ |
| 2 ವಾಗ್ದಾನ ಮಾಡಲಾದ ದಿನದ ಮೇಲಾಣೆ! | وَٱلْيَوْمِ ٱلْمَوْعُودِ. ﴿2﴾ |
| 3 ಸಾಕ್ಷಿಯಾಗುವುದರ ಮತ್ತು ಸಾಕ್ಷಿ ವಹಿಸಲಾಗುವುದರ ಮೇಲಾಣೆ! | وَشَاهِدٍۢ وَمَشْهُودٍۢ. ﴿3﴾ |
| 4 ಹೊಂಡದವರು ನಾಶವಾದರು. | قُتِلَ أَصْحَٰبُ ٱلْأُخْدُودِ. ﴿4﴾ |
| 5 ಅದು (ಹೊಂಡ) ಇಂಧನ ತುಂಬಲಾದ ಬೆಂಕಿಯನ್ನು ಹೊಂದಿತ್ತು. | ٱلنَّارِ ذَاتِ ٱلْوَقُودِ. ﴿5﴾ |
| 6 ಅವರು ಅದರ ಸುತ್ತಲೂ ಕುಳಿತಿದ್ದ ಸಂದರ್ಭ. | إِذْ هُمْ عَلَيْهَا قُعُودٌۭ. ﴿6﴾ |
| 7 ಸತ್ಯವಿಶ್ವಾಸಿಗಳೊಂದಿಗೆ ಏನು ಮಾಡಲಾಗುತ್ತಿತ್ತೋ ಅದಕ್ಕೆ ಅವರು ಪ್ರತ್ಯಕ್ಷದರ್ಶಿಗಳಾಗಿದ್ದರು. | وَهُمْ عَلَىٰ مَا يَفْعَلُونَ بِٱلْمُؤْمِنِينَ شُهُودٌۭ. ﴿7﴾ |
|
8
ಅವರು ಪ್ರಬಲನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರು ಎಂಬುದು ಹೊರತು ಅವರಿಂದ ಪ್ರತೀಕಾರ ಪಡೆಯಲು ಇವರಿಗೆ ಬೇರೆ ಯಾವುದೇ ಕಾರಣವಿರಲಿಲ್ಲ.[1]
[1] ಇಲ್ಲಿ ಹೇಳಲಾಗಿರುವುದು ಹೊಂಡಗಳನ್ನು ತೋಡಿ, ಅವುಗಳಲ್ಲಿ ಸೌದೆಗಳನ್ನು ತುಂಬಿಸಿ ಬೆಂಕಿಯುರಿಸಿ, ನಂತರ ಸತ್ಯವಿಶ್ವಾಸಿಗಳನ್ನು ಅವುಗಳಲ್ಲಿ ಜೀವಂತ ಉರಿಸಿದ ಒಂದು ದುಷ್ಟ ರಾಜ ಮತ್ತು ಅವನ ಅನುಯಾಯಿಗಳ ಬಗ್ಗೆಯಾಗಿದೆ.
|
وَمَا نَقَمُوا۟ مِنْهُمْ إِلَّآ أَن يُؤْمِنُوا۟ بِٱللَّهِ ٱلْعَزِيزِ ٱلْحَمِيدِ. ﴿8﴾ |
| 9 ಅವನು (ಅಲ್ಲಾಹು) ಯಾರೆಂದರೆ ಭೂಮ್ಯಾಕಾಶಗಳ ಸಾರ್ವಭೌಮತ್ವವು ಯಾರಿಗೆ ಸೇರಿದ್ದೋ ಅವನು. ಅಲ್ಲಾಹು ಎಲ್ಲ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ. | ٱلَّذِى لَهُۥ مُلْكُ ٱلسَّمَٰوَٰتِ وَٱلْأَرْضِ ۚ وَٱللَّهُ عَلَىٰ كُلِّ شَىْءٍۢ شَهِيدٌ. ﴿9﴾ |
| 10 ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ಹಿಂಸೆ ನೀಡುವವರು ಮತ್ತು ಆ ಬಳಿಕ ಪಶ್ಚಾತ್ತಾಪ ಪಡದವರು ಯಾರೋ—ಅವರಿಗೆ ನರಕದ ಶಿಕ್ಷೆಯಿದೆ. ಅವರಿಗೆ ಸುಟ್ಟು ಕರಕಲಾಗುವ ಶಿಕ್ಷೆಯಿದೆ. | إِنَّ ٱلَّذِينَ فَتَنُوا۟ ٱلْمُؤْمِنِينَ وَٱلْمُؤْمِنَٰتِ ثُمَّ لَمْ يَتُوبُوا۟ فَلَهُمْ عَذَابُ جَهَنَّمَ وَلَهُمْ عَذَابُ ٱلْحَرِيقِ. ﴿10﴾ |
| 11 ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅದೇ ಅತಿದೊಡ್ಡ ವಿಜಯ. | إِنَّ ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ لَهُمْ جَنَّٰتٌۭ تَجْرِى مِن تَحْتِهَا ٱلْأَنْهَٰرُ ۚ ذَٰلِكَ ٱلْفَوْزُ ٱلْكَبِيرُ. ﴿11﴾ |
| 12 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಬಹಳ ಕಠೋರವಾಗಿದೆ. | إِنَّ بَطْشَ رَبِّكَ لَشَدِيدٌ. ﴿12﴾ |
| 13 ಅವನೇ ಪ್ರಥಮ ಬಾರಿ ಸೃಷ್ಟಿಸುವವನು ಮತ್ತು ಎರಡನೇ ಬಾರಿ ಸೃಷ್ಟಿಸುವವನು. | إِنَّهُۥ هُوَ يُبْدِئُ وَيُعِيدُ. ﴿13﴾ |
| 14 ಅವನು ಕ್ಷಮಿಸುವವನು ಮತ್ತು, ಅತಿಯಾಗಿ ಪ್ರೀತಿಸುವವನು. | وَهُوَ ٱلْغَفُورُ ٱلْوَدُودُ. ﴿14﴾ |
| 15 ಅವನು ಸಿಂಹಾಸನದ ಒಡೆಯನು ಮತ್ತು ಪರಮೋನ್ನತನು. | ذُو ٱلْعَرْشِ ٱلْمَجِيدُ. ﴿15﴾ |
| 16 ತಾನು ಬಯಸುವುದೆಲ್ಲವನ್ನೂ ಕಾರ್ಯರೂಪಕ್ಕೆ ತರುವವನು. | فَعَّالٌۭ لِّمَا يُرِيدُ. ﴿16﴾ |
| 17 ಸೈನ್ಯಗಳ ಸಮಾಚಾರವು ನಿಮಗೆ ತಲುಪಿದೆಯೇ? | هَلْ أَتَىٰكَ حَدِيثُ ٱلْجُنُودِ. ﴿17﴾ |
| 18 ಫರೋಹ ಮತ್ತು ಸಮೂದ್ ಗೋತ್ರದವರ (ಸಮಾಚಾರ). | فِرْعَوْنَ وَثَمُودَ. ﴿18﴾ |
| 19 ಆದರೆ ಸತ್ಯನಿಷೇಧಿಗಳು ನಿಷೇಧಿಸುತ್ತಲೇ ಇದ್ದಾರೆ. | بَلِ ٱلَّذِينَ كَفَرُوا۟ فِى تَكْذِيبٍۢ. ﴿19﴾ |
| 20 ಅಲ್ಲಾಹು ಅವರನ್ನು ಎಲ್ಲಾ ದಿಕ್ಕುಗಳಿಂದ ಆವರಿಸಿಕೊಂಡಿದ್ದಾನೆ. | وَٱللَّهُ مِن وَرَآئِهِم مُّحِيطٌۢ. ﴿20﴾ |
| 21 ಆದರೆ ಇದು ಮಹತ್ವಪೂರ್ಣ ಕುರ್‌ಆನ್ ಆಗಿದೆ. | بَلْ هُوَ قُرْءَانٌۭ مَّجِيدٌۭ. ﴿21﴾ |
| 22 ಇದನ್ನು ಸುರಕ್ಷಿತ ಫಲಕದಲ್ಲಿ ಬರೆದಿಡಲಾಗಿದೆ. | فِى لَوْحٍۢ مَّحْفُوظٍۭ. ﴿22﴾ |