Loading date... | Loading Hijri date... | Loading time...

الطارق

ಕನ್ನಡ Translation with Arabic Quran Text

ಕನ್ನಡ العربية
1 ಆಕಾಶದ ಮೇಲಾಣೆ. ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದರ ಮೇಲಾಣೆ! وَٱلسَّمَآءِ وَٱلطَّارِقِ. ﴿1﴾
2 ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದು ಏನೆಂದು ನಿಮಗೇನು ಗೊತ್ತು? وَمَآ أَدْرَىٰكَ مَا ٱلطَّارِقُ. ﴿2﴾
3 ಅದು ಬೆಳಗುವ ನಕ್ಷತ್ರವಾಗಿದೆ. ٱلنَّجْمُ ٱلثَّاقِبُ. ﴿3﴾
4 ನಿಗಾವಣೆಯಲ್ಲಿರುವ ದೇವದೂತರಿಲ್ಲದ ಯಾವುದೇ ವ್ಯಕ್ತಿಯೂ ಇಲ್ಲ.[1]
[1] ಅಂದರೆ ಅಲ್ಲಾಹು ಪ್ರತಿಯೊಬ್ಬ ಮನುಷ್ಯನಿಗೂ ಅವನ ಒಳಿತು ಮತ್ತು ಕೆಡುಕುಗಳನ್ನು ದಾಖಲಿಸುವ ದೇವದೂತರುಗಳನ್ನು ನೇಮಿಸಿದ್ದಾನೆ.
إِن كُلُّ نَفْسٍۢ لَّمَّا عَلَيْهَا حَافِظٌۭ. ﴿4﴾
5 ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನು ನೋಡಿಕೊಳ್ಳಲಿ. فَلْيَنظُرِ ٱلْإِنسَٰنُ مِمَّ خُلِقَ. ﴿5﴾
6 ಅವನನ್ನು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿದೆ. خُلِقَ مِن مَّآءٍۢ دَافِقٍۢ. ﴿6﴾
7 ಅದು ಬೆನ್ನು ಮತ್ತು ಪಕ್ಕೆಲುಬುಗಳ ನಡುವಿನಿಂದ ಹೊರಬರುತ್ತದೆ. يَخْرُجُ مِنۢ بَيْنِ ٱلصُّلْبِ وَٱلتَّرَآئِبِ. ﴿7﴾
8 ನಿಶ್ಚಯವಾಗಿಯೂ ಅವನನ್ನು ಮರಳಿ ತರಲು (ಮರಳಿ ಸೃಷ್ಟಿಸಲು) ಅಲ್ಲಾಹನಿಗೆ ಸಾಮರ್ಥ್ಯವಿದೆ. إِنَّهُۥ عَلَىٰ رَجْعِهِۦ لَقَادِرٌۭ. ﴿8﴾
9 ಮರೆಯಾಗಿರುವ ರಹಸ್ಯಗಳನ್ನು ತನಿಖೆ ಮಾಡಲಾಗುವ ದಿನ![1]
[1] ಅಂದರೆ ಪುನರುತ್ಥಾನ ದಿನ.
يَوْمَ تُبْلَى ٱلسَّرَآئِرُ. ﴿9﴾
10 ಆಗ ಮನುಷ್ಯನ ಬಳಿ ಯಾವುದೇ ಶಕ್ತಿ ಅಥವಾ ಸಹಾಯಕರು ಇರುವುದಿಲ್ಲ. فَمَا لَهُۥ مِن قُوَّةٍۢ وَلَا نَاصِرٍۢ. ﴿10﴾
11 ಮಳೆಯನ್ನು ಸುರಿಸುವ ಆಕಾಶದ ಮೇಲಾಣೆ! وَٱلسَّمَآءِ ذَاتِ ٱلرَّجْعِ. ﴿11﴾
12 ಸೀಳುವ ಭೂಮಿಯ ಮೇಲಾಣೆ! وَٱلْأَرْضِ ذَاتِ ٱلصَّدْعِ. ﴿12﴾
13 ನಿಶ್ಚಯವಾಗಿಯೂ ಇದು (ಕುರ್‌ಆನ್) ನಿರ್ಣಾಯಕ ಮಾತಾಗಿದೆ. إِنَّهُۥ لَقَوْلٌۭ فَصْلٌۭ. ﴿13﴾
14 ಇದು ಹಾಸ್ಯದ ಮಾತುಗಳಲ್ಲ. وَمَا هُوَ بِٱلْهَزْلِ. ﴿14﴾
15 ನಿಶ್ಚಯವಾಗಿಯೂ ಅವರು ತಂತ್ರಗಾರಿಕೆ ಮಾಡುತ್ತಿದ್ದಾರೆ. إِنَّهُمْ يَكِيدُونَ كَيْدًۭا. ﴿15﴾
16 ನಾನು ಕೂಡ ತಂತ್ರಗಾರಿಕೆ ಮಾಡುತ್ತಿದ್ದೇನೆ. وَأَكِيدُ كَيْدًۭا. ﴿16﴾
17 ಸತ್ಯನಿಷೇಧಿಗಳಿಗೆ ಕಾಲಾವಕಾಶ ನೀಡಿರಿ. ಅವರನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟುಬಿಡಿ. فَمَهِّلِ ٱلْكَٰفِرِينَ أَمْهِلْهُمْ رُوَيْدًۢا. ﴿17﴾