الأعلى
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಅತ್ಯುನ್ನತನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನ ಪರಿಶುದ್ಧಿಯನ್ನು ಕೊಂಡಾಡಿರಿ. | سَبِّحِ ٱسْمَ رَبِّكَ ٱلْأَعْلَى. ﴿1﴾ |
| 2 ಅವನು ಯಾರೆಂದರೆ ಸೃಷ್ಟಿಸಿದವನು ಮತ್ತು ಸರಿಪಡಿಸಿದವನು, | ٱلَّذِى خَلَقَ فَسَوَّىٰ. ﴿2﴾ |
| 3 (ಸರಿಯಾಗಿ) ನಿರ್ಣಯಿಸಿದವನು ಮತ್ತು ಮಾರ್ಗದರ್ಶನ ಮಾಡಿದವನು, | وَٱلَّذِى قَدَّرَ فَهَدَىٰ. ﴿3﴾ |
| 4 ಹಸಿರು ಹಲ್ಲುಗಾವಲನ್ನು ಉಂಟು ಮಾಡಿದವನು, | وَٱلَّذِىٓ أَخْرَجَ ٱلْمَرْعَىٰ. ﴿4﴾ |
| 5 ನಂತರ ಅವನು ಅದನ್ನು (ಒಣಗುವಂತೆ ಮಾಡಿ) ಕಪ್ಪು ಕಸಕಡ್ಡಿಗಳಾಗಿ ಪರಿವರ್ತಿಸಿದನು. | فَجَعَلَهُۥ غُثَآءً أَحْوَىٰ. ﴿5﴾ |
| 6 ನಾವು ನಿಮಗೆ ಓದಿಕೊಡುವೆವು. ನಂತರ ನೀವು ಮರೆಯಲಾರಿರಿ. | سَنُقْرِئُكَ فَلَا تَنسَىٰٓ. ﴿6﴾ |
| 7 ಅಲ್ಲಾಹು ಇಚ್ಛಿಸುವುದರ ಹೊರತಾಗಿ. ಅವನು ಬಹಿರಂಗವಾಗಿರುವುದನ್ನು ಮತ್ತು ರಹಸ್ಯವಾಗಿರುವುದನ್ನು ತಿಳಿಯುತ್ತಾನೆ. | إِلَّا مَا شَآءَ ٱللَّهُ ۚ إِنَّهُۥ يَعْلَمُ ٱلْجَهْرَ وَمَا يَخْفَىٰ. ﴿7﴾ |
| 8 ನಾವು ನಿಮಗೆ ಸುಲಭ ಮಾಡಿಕೊಡುವೆವು. | وَنُيَسِّرُكَ لِلْيُسْرَىٰ. ﴿8﴾ |
| 9 ಆದ್ದರಿಂದ ನೀವು ಉಪದೇಶ ನೀಡಿರಿ. ಉಪದೇಶವು ಪ್ರಯೋಜನ ನೀಡುವುದಾದರೆ. | فَذَكِّرْ إِن نَّفَعَتِ ٱلذِّكْرَىٰ. ﴿9﴾ |
| 10 ಭಯಪಡುವವನು ಉಪದೇಶವನ್ನು ಸ್ವೀಕರಿಸುವನು. | سَيَذَّكَّرُ مَن يَخْشَىٰ. ﴿10﴾ |
| 11 ನತದೃಷ್ಟನು ಆ ಉಪದೇಶದಿಂದ ದೂರ ಸರಿಯುವನು. | وَيَتَجَنَّبُهَا ٱلْأَشْقَى. ﴿11﴾ |
| 12 ಅವನು ಯಾರೆಂದರೆ ಅತಿದೊಡ್ಡ ಅಗ್ನಿಯನ್ನು ಪ್ರವೇಶಿಸುವವನು. | ٱلَّذِى يَصْلَى ٱلنَّارَ ٱلْكُبْرَىٰ. ﴿12﴾ |
| 13 ನಂತರ ಅವನು ಅಲ್ಲಿ ಸಾಯುವುದಿಲ್ಲ, ಬದುಕುವುದೂ ಇಲ್ಲ. | ثُمَّ لَا يَمُوتُ فِيهَا وَلَا يَحْيَىٰ. ﴿13﴾ |
| 14 ನಿಶ್ಚಯವಾಗಿಯೂ ಪರಿಶುದ್ಧತೆ ಪಡೆದವನು ಯಶಸ್ವಿಯಾದನು. | قَدْ أَفْلَحَ مَن تَزَكَّىٰ. ﴿14﴾ |
| 15 ತನ್ನ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿದವನು ಮತ್ತು ನಮಾಝ್ ಮಾಡಿದವನು. | وَذَكَرَ ٱسْمَ رَبِّهِۦ فَصَلَّىٰ. ﴿15﴾ |
| 16 ಆದರೆ ನೀವು ಇಹಲೋಕ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ. | بَلْ تُؤْثِرُونَ ٱلْحَيَوٰةَ ٱلدُّنْيَا. ﴿16﴾ |
| 17 ಪರಲೋಕವು ಅತಿಶ್ರೇಷ್ಠ ಮತ್ತು ಶಾಶ್ವತವಾಗಿದೆ. | وَٱلْءَاخِرَةُ خَيْرٌۭ وَأَبْقَىٰٓ. ﴿17﴾ |
| 18 ಈ ಮಾತುಗಳು ಹಿಂದಿನ ಗ್ರಂಥಗಳಲ್ಲಿವೆ. | إِنَّ هَٰذَا لَفِى ٱلصُّحُفِ ٱلْأُولَىٰ. ﴿18﴾ |
| 19 ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ. | صُحُفِ إِبْرَٰهِيمَ وَمُوسَىٰ. ﴿19﴾ |