الغاشية
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಆ ಮುಚ್ಚುವ ಘಟನೆಯ (ಪುನರುತ್ಥಾನ ದಿನದ) ಸಮಾಚಾರವು ನಿಮಗೆ ತಲುಪಿದೆಯೇ? | هَلْ أَتَىٰكَ حَدِيثُ ٱلْغَٰشِيَةِ. ﴿1﴾ |
| 2 ಅಂದು ಬಹಳಷ್ಟು ಮುಖಗಳು ದೀನವಾಗಿರುವುವು. | وُجُوهٌۭ يَوْمَئِذٍ خَٰشِعَةٌ. ﴿2﴾ |
| 3 ಅವರು ಪರಿಶ್ರಮಪಟ್ಟಿರುವರು ಮತ್ತು ಸುಸ್ತಾಗಿರುವರು. | عَامِلَةٌۭ نَّاصِبَةٌۭ. ﴿3﴾ |
| 4 ಅವರು ತೀವ್ರ ಶಾಖದ ಬೆಂಕಿಯನ್ನು ಪ್ರವೇಶ ಮಾಡುವರು. | تَصْلَىٰ نَارًا حَامِيَةًۭ. ﴿4﴾ |
| 5 ಕೊತಕೊತ ಕುದಿಯುವ ಒರತೆಯ ನೀರನ್ನು ಅವರಿಗೆ ಕುಡಿಸಲಾಗುವುದು. | تُسْقَىٰ مِنْ عَيْنٍ ءَانِيَةٍۢ. ﴿5﴾ |
| 6 ಅವರಿಗೆ ಮುಳ್ಳಿನ ಮರದಿಂದಲೇ ಹೊರತು ಬೇರೆ ಯಾವುದೇ ಆಹಾರವಿಲ್ಲ. | لَّيْسَ لَهُمْ طَعَامٌ إِلَّا مِن ضَرِيعٍۢ. ﴿6﴾ |
| 7 ಅದು ಪೋಷಣೆ ನೀಡುವುದಿಲ್ಲ. ಹಸಿವೆಯನ್ನು ನೀಗಿಸುವುದಿಲ್ಲ. | لَّا يُسْمِنُ وَلَا يُغْنِى مِن جُوعٍۢ. ﴿7﴾ |
| 8 ಅಂದು ಬಹಳಷ್ಟು ಮುಖಗಳು ಶುಭ್ರ ತಾಜಾತನದಿಂದ ಹೊಳೆಯುತ್ತಿರುವುವು. | وُجُوهٌۭ يَوْمَئِذٍۢ نَّاعِمَةٌۭ. ﴿8﴾ |
| 9 ಅವರು ತಮ್ಮ ಪರಿಶ್ರಮದ ಬಗ್ಗೆ ಸಂತೃಪ್ತರಾಗಿರುವರು. | لِّسَعْيِهَا رَاضِيَةٌۭ. ﴿9﴾ |
| 10 ಅವರು ಉನ್ನತ ಸ್ವರ್ಗಗಳಲ್ಲಿರುವರು. | فِى جَنَّةٍ عَالِيَةٍۢ. ﴿10﴾ |
| 11 ಅವರು ಅಲ್ಲಿ ಅನಗತ್ಯ ಮಾತುಗಳನ್ನು ಕೇಳುವುದಿಲ್ಲ. | لَّا تَسْمَعُ فِيهَا لَٰغِيَةًۭ. ﴿11﴾ |
| 12 ಅದರಲ್ಲಿ ಹರಿಯುವ ತೊರೆಯಿದೆ. | فِيهَا عَيْنٌۭ جَارِيَةٌۭ. ﴿12﴾ |
| 13 ಅಲ್ಲಿ ಎತ್ತರದ ಮಂಚಗಳಿವೆ. | فِيهَا سُرُرٌۭ مَّرْفُوعَةٌۭ. ﴿13﴾ |
| 14 ಜೋಡಿಸಿಡಲಾದ ಲೋಟಗಳಿವೆ. | وَأَكْوَابٌۭ مَّوْضُوعَةٌۭ. ﴿14﴾ |
| 15 ಸಾಲಾಗಿಡಲಾದ ದಿಂಬುಗಳಿವೆ. | وَنَمَارِقُ مَصْفُوفَةٌۭ. ﴿15﴾ |
| 16 ಹರಡಿಕೊಂಡಿರುವ ಜಮಖಾನೆಗಳಿವೆ. | وَزَرَابِىُّ مَبْثُوثَةٌ. ﴿16﴾ |
| 17 ಅವರು ಒಂಟೆಯನ್ನು ನೋಡುವುದಿಲ್ಲವೇ—ಅದನ್ನು ಹೇಗೆ ಸೃಷ್ಟಿಸಲಾಗಿದೆಯೆಂದು? | أَفَلَا يَنظُرُونَ إِلَى ٱلْإِبِلِ كَيْفَ خُلِقَتْ. ﴿17﴾ |
| 18 ಆಕಾಶವನ್ನು—ಅದನ್ನು ಹೇಗೆ ಎತ್ತರಿಸಲಾಗಿದೆಯೆಂದು? | وَإِلَى ٱلسَّمَآءِ كَيْفَ رُفِعَتْ. ﴿18﴾ |
| 19 ಪರ್ವತಗಳನ್ನು—ಅವುಗಳನ್ನು ಹೇಗೆ ದೃಢವಾಗಿ ನಿಲ್ಲಿಸಲಾಗಿದೆಯೆಂದು? | وَإِلَى ٱلْجِبَالِ كَيْفَ نُصِبَتْ. ﴿19﴾ |
| 20 ಭೂಮಿಯನ್ನು—ಅದನ್ನು ಹೇಗೆ ಹರಡಲಾಗಿದೆಯೆಂದು? | وَإِلَى ٱلْأَرْضِ كَيْفَ سُطِحَتْ. ﴿20﴾ |
| 21 (ಪ್ರವಾದಿಯವರೇ) ನೀವು ಉಪದೇಶ ನೀಡಿರಿ. ನೀವೊಬ್ಬ ಉಪದೇಶಕರು ಮಾತ್ರ. | فَذَكِّرْ إِنَّمَآ أَنتَ مُذَكِّرٌۭ. ﴿21﴾ |
| 22 ನೀವು ಅವರ ಮೇಲೆ ಅಧಿಕಾರವಿರುವವರಲ್ಲ. | لَّسْتَ عَلَيْهِم بِمُصَيْطِرٍ. ﴿22﴾ |
| 23 ಆದರೆ ವಿಮುಖನಾಗುವವನು ಮತ್ತು ನಿಷೇಧಿಸುವವನು ಯಾರೋ, | إِلَّا مَن تَوَلَّىٰ وَكَفَرَ. ﴿23﴾ |
| 24 ಅವನಿಗೆ ಅಲ್ಲಾಹು ಅತಿದೊಡ್ಡ ಶಿಕ್ಷೆಯನ್ನು ನೀಡುವನು. | فَيُعَذِّبُهُ ٱللَّهُ ٱلْعَذَابَ ٱلْأَكْبَرَ. ﴿24﴾ |
| 25 ನಿಶ್ಚಯವಾಗಿಯೂ ಅವರು ಮರಳಿ ಬರುವುದು ನಮ್ಮ ಬಳಿಗೇ ಆಗಿದೆ. | إِنَّ إِلَيْنَآ إِيَابَهُمْ. ﴿25﴾ |
| 26 ನಂತರ ಅವರನ್ನು ವಿಚಾರಣೆ ಮಾಡುವುದು ನಮ್ಮ ಹೊಣೆಯಾಗಿದೆ. | ثُمَّ إِنَّ عَلَيْنَا حِسَابَهُم. ﴿26﴾ |