Loading date... | Loading Hijri date... | Loading time...

البلد

ಕನ್ನಡ Translation with Arabic Quran Text

ಕನ್ನಡ العربية
1 ನಾನು ಈ ನಗರದ (ಮಕ್ಕಾದ) ಮೇಲೆ ಆಣೆ ಮಾಡುತ್ತೇನೆ. لَآ أُقْسِمُ بِهَٰذَا ٱلْبَلَدِ. ﴿1﴾
2 ನೀವು ಈ ನಗರದ ವಾಸಿಯಾಗಿರುವಿರಿ. وَأَنتَ حِلٌّۢ بِهَٰذَا ٱلْبَلَدِ. ﴿2﴾
3 ತಂದೆ ಮತ್ತು ಮಕ್ಕಳ ಮೇಲಾಣೆ! وَوَالِدٍۢ وَمَا وَلَدَ. ﴿3﴾
4 ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಬಹಳ ಕಷ್ಟಪಡುವಂತೆ ಸೃಷ್ಟಿಸಿದ್ದೇವೆ. لَقَدْ خَلَقْنَا ٱلْإِنسَٰنَ فِى كَبَدٍ. ﴿4﴾
5 ಅವನು ಯಾರ ನಿಯಂತ್ರಣದಲ್ಲೂ ಇಲ್ಲವೆಂದು ಅವನು ಭಾವಿಸುತ್ತಾನೆಯೇ? أَيَحْسَبُ أَن لَّن يَقْدِرَ عَلَيْهِ أَحَدٌۭ. ﴿5﴾
6 ಅವನು ಹೇಳುತ್ತಾನೆ: “ನಾನು ಹೇರಳ ಸಂಪತ್ತು ಖರ್ಚು ಮಾಡಿದ್ದೇನೆ.” يَقُولُ أَهْلَكْتُ مَالًۭا لُّبَدًا. ﴿6﴾
7 ಅವನನ್ನು ಯಾರೂ ನೋಡುವುದಿಲ್ಲವೆಂದು ಅವನು ಭಾವಿಸುತ್ತಾನೆಯೇ? أَيَحْسَبُ أَن لَّمْ يَرَهُۥٓ أَحَدٌ. ﴿7﴾
8 ಅವನಿಗೆ ನಾವು ಎರಡು ಕಣ್ಣುಗಳನ್ನು ಕೊಡಲಿಲ್ಲವೇ? أَلَمْ نَجْعَل لَّهُۥ عَيْنَيْنِ. ﴿8﴾
9 ಒಂದು ನಾಲಗೆ ಮತ್ತು ಎರಡು ತುಟಿಗಳನ್ನು? وَلِسَانًۭا وَشَفَتَيْنِ. ﴿9﴾
10 ನಾವು ಅವನಿಗೆ ಎರಡು ಸ್ಪಷ್ಟ ಮಾರ್ಗಗಳನ್ನು ತೋರಿಸಿಕೊಟ್ಟೆವು. وَهَدَيْنَٰهُ ٱلنَّجْدَيْنِ. ﴿10﴾
11 ಆದರೆ ಅವನು ಆ ಘಾಟಿಯಲ್ಲಿ ಪ್ರವೇಶ ಮಾಡಿಲ್ಲ. فَلَا ٱقْتَحَمَ ٱلْعَقَبَةَ. ﴿11﴾
12 ಆ ಘಾಟಿ ಏನೆಂದು ನಿಮಗೇನು ಗೊತ್ತು? وَمَآ أَدْرَىٰكَ مَا ٱلْعَقَبَةُ. ﴿12﴾
13 ಅದು ಗುಲಾಮನನ್ನು ಸ್ಪತಂತ್ರಗೊಳಿಸುವುದು, فَكُّ رَقَبَةٍ. ﴿13﴾
14 ಅಥವಾ ಹಸಿವಿನ ದಿನದಲ್ಲಿ ಅನ್ನ ನೀಡುವುದು. أَوْ إِطْعَٰمٌۭ فِى يَوْمٍۢ ذِى مَسْغَبَةٍۢ. ﴿14﴾
15 ಸಂಬಂಧಿಕನಾದ ಅನಾಥನಿಗೆ, يَتِيمًۭا ذَا مَقْرَبَةٍ. ﴿15﴾
16 ಅಥವಾ ಬಡತನದಲ್ಲಿರುವ ದರಿದ್ರನಿಗೆ. أَوْ مِسْكِينًۭا ذَا مَتْرَبَةٍۢ. ﴿16﴾
17 ನಂತರ ಸತ್ಯವಿಶ್ವಾಸಿಗಳಲ್ಲಿ ಮತ್ತು ತಾಳ್ಮೆಯ ಉಪದೇಶ ನೀಡುವವರು ಹಾಗೂ ದಯೆಯ ಉಪದೇಶ ನೀಡುವವರಲ್ಲಿ ಸೇರುವುದು. ثُمَّ كَانَ مِنَ ٱلَّذِينَ ءَامَنُوا۟ وَتَوَاصَوْا۟ بِٱلصَّبْرِ وَتَوَاصَوْا۟ بِٱلْمَرْحَمَةِ. ﴿17﴾
18 ಅವರೇ ಬಲಭಾಗದ ಜನರು. أُو۟لَٰٓئِكَ أَصْحَٰبُ ٱلْمَيْمَنَةِ. ﴿18﴾
19 ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ ಅವರೇ ಎಡಭಾಗದ ಜನರು. وَٱلَّذِينَ كَفَرُوا۟ بِـَٔايَٰتِنَا هُمْ أَصْحَٰبُ ٱلْمَشْـَٔمَةِ. ﴿19﴾
20 ಬೆಂಕಿಯು ಎಲ್ಲಾ ಕಡೆಗಳಿಂದಲೂ ಅವರನ್ನು ಮುಚ್ಚಿಕೊಳ್ಳುವುದು. عَلَيْهِمْ نَارٌۭ مُّؤْصَدَةٌۢ. ﴿20﴾