الشمس
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಸೂರ್ಯ ಮತ್ತು ಅದರ ಬೆಳಕಿನ ಮೇಲಾಣೆ! | وَٱلشَّمْسِ وَضُحَىٰهَا. ﴿1﴾ |
| 2 ಚಂದ್ರನ ಮೇಲಾಣೆ! ಅದು ಸೂರ್ಯನನ್ನು ಹಿಂಬಾಲಿಸುವಾಗ. | وَٱلْقَمَرِ إِذَا تَلَىٰهَا. ﴿2﴾ |
| 3 ಹಗಲಿನ ಮೇಲಾಣೆ! ಅದು ಸೂರ್ಯನನ್ನು ಬೆಳಗಿಸುವಾಗ. | وَٱلنَّهَارِ إِذَا جَلَّىٰهَا. ﴿3﴾ |
| 4 ರಾತ್ರಿಯ ಮೇಲಾಣೆ! ಅದು ಸೂರ್ಯನನ್ನು ಮುಚ್ಚುವಾಗ. | وَٱلَّيْلِ إِذَا يَغْشَىٰهَا. ﴿4﴾ |
| 5 ಆಕಾಶ ಮತ್ತು ಅದನ್ನು ನಿರ್ಮಿಸಿದವನ ಮೇಲಾಣೆ! | وَٱلسَّمَآءِ وَمَا بَنَىٰهَا. ﴿5﴾ |
| 6 ಭೂಮಿ ಮತ್ತು ಅದನ್ನು ವಿಸ್ತರಿಸಿದವನ ಮೇಲಾಣೆ! | وَٱلْأَرْضِ وَمَا طَحَىٰهَا. ﴿6﴾ |
| 7 ಆತ್ಮ ಮತ್ತು ಅದನ್ನು ಸರಿಪಡಿಸಿದವನ ಮೇಲಾಣೆ! | وَنَفْسٍۢ وَمَا سَوَّىٰهَا. ﴿7﴾ |
|
8
ನಂತರ ಅವನು ಅದಕ್ಕೆ ದುಷ್ಕರ್ಮದ ಬಗ್ಗೆ ಮತ್ತು ರಕ್ಷಾಮಾರ್ಗದ ಬಗ್ಗೆ ತಿಳಿಸಿದನು.[1]
[1] ಅಂದರೆ ಪ್ರವಾದಿಗಳನ್ನು ಕಳುಹಿಸುವ ಮೂಲಕ ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸುವ ಮೂಲಕ ಅಲ್ಲಾಹು ಮನುಷ್ಯನಿಗೆ ಒಳಿತು ಮತ್ತು ಕೆಡುಕುಗಳನ್ನು ತಿಳಿಸಿಕೊಟ್ಟಿದ್ದಾನೆ. ಅಥವಾ ಮನುಷ್ಯನ ಸಹಜ ಮನೋಧರ್ಮದಲ್ಲೇ ಒಳಿತನ್ನು ಸ್ವೀಕರಿಸುವ ಮತ್ತು ಕೆಡುಕಿನಿಂದ ದೂರವಾಗುವ ಇಚ್ಛಾಶಕ್ತಿಯನ್ನು ತುಂಬಲಾಗಿದೆ.
|
فَأَلْهَمَهَا فُجُورَهَا وَتَقْوَىٰهَا. ﴿8﴾ |
| 9 ಅದನ್ನು ಪರಿಶುದ್ಧಗೊಳಿಸಿದವನು ಯಶಸ್ವಿಯಾದನು. | قَدْ أَفْلَحَ مَن زَكَّىٰهَا. ﴿9﴾ |
| 10 ಅದನ್ನು ಮಲಿನಗೊಳಿಸಿದವನು ವಿಫಲನಾದನು. | وَقَدْ خَابَ مَن دَسَّىٰهَا. ﴿10﴾ |
| 11 ಸಮೂದ್ ಗೋತ್ರದವರು ತಮ್ಮ ಅತಿರೇಕದಿಂದಾಗಿ (ಸತ್ಯವನ್ನು) ನಿಷೇಧಿಸಿದರು. | كَذَّبَتْ ثَمُودُ بِطَغْوَىٰهَآ. ﴿11﴾ |
| 12 ಅವರಲ್ಲಿನ ಅತ್ಯಂತ ನತದೃಷ್ಟನು ಎದ್ದು ನಿಂತ ಸಂದರ್ಭ. | إِذِ ٱنۢبَعَثَ أَشْقَىٰهَا. ﴿12﴾ |
| 13 ಆಗ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಅವರೊಡನೆ ಹೇಳಿದರು: “ಅಲ್ಲಾಹನ ಒಂಟೆ ಮತ್ತು ಅದರ ಜಲಪಾನದ ಬಗ್ಗೆ (ಎಚ್ಚರವಹಿಸಿರಿ).” | فَقَالَ لَهُمْ رَسُولُ ٱللَّهِ نَاقَةَ ٱللَّهِ وَسُقْيَٰهَا. ﴿13﴾ |
| 14 ಆದರೆ ಅವರು ಆ ಸಂದೇಶವಾಹಕರನ್ನು ನಿಷೇಧಿಸಿದರು ಮತ್ತು ಒಂಟೆಯ ಕಾಲುಗಳನ್ನು ಕಡಿದರು. ಆಗ ಅವರ ಪಾಪಗಳ ಕಾರಣದಿಂದ ಅವರ ಪರಿಪಾಲಕನು (ಅಲ್ಲಾಹು) ಅವರ ಮೇಲೆ ವಿನಾಶವನ್ನು ತಂದನು. ಅವನು ಅದನ್ನು (ಅವರೆಲ್ಲರಿಗೂ) ಸಮಾನಗೊಳಿಸಿದನು. | فَكَذَّبُوهُ فَعَقَرُوهَا فَدَمْدَمَ عَلَيْهِمْ رَبُّهُم بِذَنۢبِهِمْ فَسَوَّىٰهَا. ﴿14﴾ |
| 15 ಅದರ ಅನಂತರ ಫಲದ ಬಗ್ಗೆ ಅವನು ಭಯಪಡುವುದಿಲ್ಲ. | وَلَا يَخَافُ عُقْبَٰهَا. ﴿15﴾ |