Loading date... | Loading Hijri date... | Loading time...

الليل

ಕನ್ನಡ Translation with Arabic Quran Text

ಕನ್ನಡ العربية
1 ರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ. وَٱلَّيْلِ إِذَا يَغْشَىٰ. ﴿1﴾
2 ಹಗಲಿನ ಮೇಲಾಣೆ! ಅದು ಬೆಳಕು ಬೀರುವಾಗ. وَٱلنَّهَارِ إِذَا تَجَلَّىٰ. ﴿2﴾
3 ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದವನ ಮೇಲಾಣೆ! وَمَا خَلَقَ ٱلذَّكَرَ وَٱلْأُنثَىٰٓ. ﴿3﴾
4 ನಿಶ್ಚಯವಾಗಿಯೂ ನಿಮ್ಮ ಪರಿಶ್ರಮಗಳು ವಿಭಿನ್ನವಾಗಿವೆ. إِنَّ سَعْيَكُمْ لَشَتَّىٰ. ﴿4﴾
5 (ಅಲ್ಲಾಹನ ಮಾರ್ಗದಲ್ಲಿ) ನೀಡಿದವನು ಮತ್ತು (ಅಲ್ಲಾಹನನ್ನು) ಭಯಪಟ್ಟವನು ಯಾರೋ, فَأَمَّا مَنْ أَعْطَىٰ وَٱتَّقَىٰ. ﴿5﴾
6 ಮತ್ತು ಒಳಿತಿನಲ್ಲಿ ನಂಬಿಕೆಯಿಡುವವನು ಯಾರೋ, وَصَدَّقَ بِٱلْحُسْنَىٰ. ﴿6﴾
7 ನಾವು ಅವನಿಗೆ ಸುಲಭವಾದ ದಾರಿಯನ್ನು ಅನುಕೂಲ ಮಾಡಿಕೊಡುವೆವು. فَسَنُيَسِّرُهُۥ لِلْيُسْرَىٰ. ﴿7﴾
8 ಆದರೆ ಜಿಪುಣತನ ತೋರಿದವನು ಮತ್ತು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಬಗೆದವನು ಯಾರೋ, وَأَمَّا مَنۢ بَخِلَ وَٱسْتَغْنَىٰ. ﴿8﴾
9 ಮತ್ತು ಒಳಿತಿನಲ್ಲಿ ನಂಬಿಕೆಯಿಡದವನು ಯಾರೋ, وَكَذَّبَ بِٱلْحُسْنَىٰ. ﴿9﴾
10 ನಾವು ಅವನಿಗೆ ಕಷ್ಟವಾದ ದಾರಿಯನ್ನು ಅನುಕೂಲ ಮಾಡಿಕೊಡುವೆವು. فَسَنُيَسِّرُهُۥ لِلْعُسْرَىٰ. ﴿10﴾
11 ಅವನು (ನರಕಕ್ಕೆ) ಬೀಳುವಾಗ ಅವನ ಸಂಪತ್ತು ಅವನ ಪ್ರಯೋಜನಕ್ಕೆ ಬರುವುದಿಲ್ಲ. وَمَا يُغْنِى عَنْهُ مَالُهُۥٓ إِذَا تَرَدَّىٰٓ. ﴿11﴾
12 ನಿಶ್ಚಯವಾಗಿಯೂ ಸನ್ಮಾರ್ಗವನ್ನು ತೋರಿಸುವುದು ನಮ್ಮ ಹೊಣೆಯಾಗಿದೆ. إِنَّ عَلَيْنَا لَلْهُدَىٰ. ﴿12﴾
13 ನಿಶ್ಚಯವಾಗಿಯೂ ಪರಲೋಕ ಮತ್ತು ಇಹಲೋಕಗಳು ನಮ್ಮ ವಶದಲ್ಲಿವೆ. وَإِنَّ لَنَا لَلْءَاخِرَةَ وَٱلْأُولَىٰ. ﴿13﴾
14 ನಾನು ನಿಮಗೆ ಧಗಧಗಿಸುವ ಅಗ್ನಿಯ ಬಗ್ಗೆ ಎಚ್ಚರಿಕೆ ನೀಡಿದ್ದೇನೆ. فَأَنذَرْتُكُمْ نَارًۭا تَلَظَّىٰ. ﴿14﴾
15 ಅತ್ಯಂತ ನತದೃಷ್ಟನಲ್ಲದೆ ಇನ್ನಾರೂ ಅದನ್ನು ಪ್ರವೇಶಿಸುವುದಿಲ್ಲ. لَا يَصْلَىٰهَآ إِلَّا ٱلْأَشْقَى. ﴿15﴾
16 ಅವನು ಯಾರೆಂದರೆ ನಿಷೇಧಿಸಿದವನು ಮತ್ತು ಮುಖ ತಿರುಗಿಸಿ ನಡೆದವನು. ٱلَّذِى كَذَّبَ وَتَوَلَّىٰ. ﴿16﴾
17 ಅತ್ಯಧಿಕ ದೇವಭಯವುಳ್ಳವನನ್ನು ಅದರಿಂದ ದೂರವಿರಿಸಲಾಗುವುದು. وَسَيُجَنَّبُهَا ٱلْأَتْقَى. ﴿17﴾
18 ಅವನು ಯಾರೆಂದರೆ ಪರಿಶುದ್ಧತೆಯನ್ನು ಪಡೆಯುವುದಕ್ಕಾಗಿ ತನ್ನ ಸಂಪತ್ತನ್ನು ನೀಡುವವನು. ٱلَّذِى يُؤْتِى مَالَهُۥ يَتَزَكَّىٰ. ﴿18﴾
19 ಪ್ರತ್ಯುಪಕಾರವಾಗಿ ಅದನ್ನು ನೀಡಬೇಕಾದ ಯಾವುದೇ ಜರೂರತ್ತು ಅವನೊಡನೆ ಯಾರಿಗೂ ಇಲ್ಲ.[1]
[1] ಅಂದರೆ ತನಗೆ ಜನರಿಗೆ ಉಪಕಾರ ಸಿಗಬೇಕು ಎಂಬ ಉದ್ದೇಶದಿಂದ ಅವನು ದಾನ ಮಾಡುವುದಿಲ್ಲ.
وَمَا لِأَحَدٍ عِندَهُۥ مِن نِّعْمَةٍۢ تُجْزَىٰٓ. ﴿19﴾
20 ಅತ್ಯುನ್ನತನಾದ ತನ್ನ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಗಾಗಿ ಮಾತ್ರ (ಅವನು ಅದನ್ನು ನೀಡುತ್ತಾನೆ). إِلَّا ٱبْتِغَآءَ وَجْهِ رَبِّهِ ٱلْأَعْلَىٰ. ﴿20﴾
21 ಸದ್ಯವೇ ಅವನು ಸಂತೃಪ್ತನಾಗುವನು. وَلَسَوْفَ يَرْضَىٰ. ﴿21﴾