Loading date... | Loading Hijri date... | Loading time...

الضحى

ಕನ್ನಡ Translation with Arabic Quran Text

ಕನ್ನಡ العربية
1 ಪೂರ್ವಾಹ್ನದ ಮೇಲಾಣೆ! وَٱلضُّحَىٰ. ﴿1﴾
2 ರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ. وَٱلَّيْلِ إِذَا سَجَىٰ. ﴿2﴾
3 (ಪ್ರವಾದಿಯವರೇ) ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮನ್ನು ತೊರೆದಿಲ್ಲ ಮತ್ತು ನಿಮ್ಮ ಬಗ್ಗೆ ಬೇಸರಪಟ್ಟಿಲ್ಲ. مَا وَدَّعَكَ رَبُّكَ وَمَا قَلَىٰ. ﴿3﴾
4 ನಿಶ್ಚಯವಾಗಿಯೂ ನಿಮಗೆ ಇಹಲೋಕಕ್ಕಿಂತಲೂ ಪರಲೋಕವು ಶ್ರೇಷ್ಠವಾಗಿದೆ. وَلَلْءَاخِرَةُ خَيْرٌۭ لَّكَ مِنَ ٱلْأُولَىٰ. ﴿4﴾
5 ನಿಮ್ಮ ಪರಿಪಾಲಕನು (ಅಲ್ಲಾಹು) ಸದ್ಯವೇ ನಿಮಗೆ (ಅನುಗ್ರಹಗಳನ್ನು) ದಯಪಾಲಿಸುವನು. ಆಗ ನೀವು ಸಂತೃಪ್ತರಾಗುವಿರಿ. وَلَسَوْفَ يُعْطِيكَ رَبُّكَ فَتَرْضَىٰٓ. ﴿5﴾
6 ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯ ನೀಡಲಿಲ್ಲವೇ? أَلَمْ يَجِدْكَ يَتِيمًۭا فَـَٔاوَىٰ. ﴿6﴾
7 ಅವನು ನಿಮ್ಮನ್ನು ದಾರಿ ತಪ್ಪಿದವನಾಗಿ ಕಂಡು ನಿಮಗೆ ಮಾರ್ಗದರ್ಶನ ಮಾಡಿದನು. وَوَجَدَكَ ضَآلًّۭا فَهَدَىٰ. ﴿7﴾
8 ಅವನು ನಿಮ್ಮನ್ನು ಬಡವನಾಗಿ ಕಂಡು ನಿಮಗೆ ಐಶ್ವರ್ಯವನ್ನು ನೀಡಿದನು. وَوَجَدَكَ عَآئِلًۭا فَأَغْنَىٰ. ﴿8﴾
9 ಆದ್ದರಿಂದ ನೀವು ಅನಾಥನೊಡನೆ ಕಠಿಣವಾಗಿ ವರ್ತಿಸಬೇಡಿ. فَأَمَّا ٱلْيَتِيمَ فَلَا تَقْهَرْ. ﴿9﴾
10 ಬೇಡುವವನನ್ನು ಗದರಿಸಬೇಡಿ. وَأَمَّا ٱلسَّآئِلَ فَلَا تَنْهَرْ. ﴿10﴾
11 ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹಗಳ ಬಗ್ಗೆ ಮಾತನಾಡುತ್ತಿರಿ. وَأَمَّا بِنِعْمَةِ رَبِّكَ فَحَدِّثْ. ﴿11﴾