التين
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಅಂಜೂರ ಮತ್ತು ಆಲಿವ್‌ನ ಮೇಲಾಣೆ! | وَٱلتِّينِ وَٱلزَّيْتُونِ. ﴿1﴾ |
| 2 ತೂರ್ ಸಿನಾಯ್ ಪರ್ವತದ ಮೇಲಾಣೆ! | وَطُورِ سِينِينَ. ﴿2﴾ |
| 3 ಈ ನಿರ್ಭಯ ನಗರದ (ಮಕ್ಕಾದ) ಮೇಲಾಣೆ! | وَهَٰذَا ٱلْبَلَدِ ٱلْأَمِينِ. ﴿3﴾ |
| 4 ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಅತ್ಯುತ್ತಮ ರೂಪದಲ್ಲಿ ಸೃಷ್ಟಿಸಿದೆವು. | لَقَدْ خَلَقْنَا ٱلْإِنسَٰنَ فِىٓ أَحْسَنِ تَقْوِيمٍۢ. ﴿4﴾ |
| 5 ನಂತರ ಅವನನ್ನು ನೀಚರಲ್ಲಿ ನೀಚನಾಗಿ ಮಾಡಿದೆವು. | ثُمَّ رَدَدْنَٰهُ أَسْفَلَ سَٰفِلِينَ. ﴿5﴾ |
| 6 ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಇದರಿಂದ ಹೊರತಾಗಿದ್ದಾರೆ. ಅವರಿಗೆ ಎಂದೂ ಮುಗಿಯದ ಪ್ರತಿಫಲವಿದೆ. | إِلَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ فَلَهُمْ أَجْرٌ غَيْرُ مَمْنُونٍۢ. ﴿6﴾ |
| 7 ಹಾಗಾದರೆ ಪ್ರತಿಫಲ ದಿನವನ್ನು ನಿಷೇಧಿಸುವಂತೆ ನಿನ್ನನ್ನು ಉತ್ತೇಜಿಸುವುದೇನು? | فَمَا يُكَذِّبُكَ بَعْدُ بِٱلدِّينِ. ﴿7﴾ |
| 8 ಅಲ್ಲಾಹು ಎಲ್ಲಾ ತೀರ್ಪುಗಾರರಿಗೂ ತೀರ್ಪುಗಾರನಲ್ಲವೇ? | أَلَيْسَ ٱللَّهُ بِأَحْكَمِ ٱلْحَٰكِمِينَ. ﴿8﴾ |