Loading date... | Loading Hijri date... | Loading time...

العلق

ಕನ್ನಡ Translation with Arabic Quran Text

ಕನ್ನಡ العربية
1 ಸೃಷ್ಟಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಓದಿರಿ. ٱقْرَأْ بِٱسْمِ رَبِّكَ ٱلَّذِى خَلَقَ. ﴿1﴾
2 ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು. خَلَقَ ٱلْإِنسَٰنَ مِنْ عَلَقٍ. ﴿2﴾
3 ಓದಿರಿ. ನಿಮ್ಮ ಪರಿಪಾಲಕ (ಅಲ್ಲಾಹು) ಅತ್ಯುದಾರಿಯಾಗಿದ್ದಾನೆ. ٱقْرَأْ وَرَبُّكَ ٱلْأَكْرَمُ. ﴿3﴾
4 ಅವನು ಯಾರೆಂದರೆ ಲೇಖನಿಯ ಮೂಲಕ ಕಲಿಸಿದವನು. ٱلَّذِى عَلَّمَ بِٱلْقَلَمِ. ﴿4﴾
5 ಮನುಷ್ಯನಿಗೆ ತಿಳಿಯದೇ ಇರುವುದನ್ನು ಅವನು ಕಲಿಸಿದನು.[1]
[1] ಇವು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಪ್ರಥಮವಾಗಿ ಅವತೀರ್ಣವಾದ ಐದು ವಚನಗಳು. ಅವರು ಹಿರಾ ಗುಹೆಯಲ್ಲಿದ್ದಾಗ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಈ ವಚನಗಳನ್ನು ಅವರಿಗೆ ಓದಿಕೊಟ್ಟರು.
عَلَّمَ ٱلْإِنسَٰنَ مَا لَمْ يَعْلَمْ. ﴿5﴾
6 ನಿಸ್ಸಂದೇಹವಾಗಿಯೂ ಮನುಷ್ಯನು ಎಲ್ಲೆ ಮೀರಿ ನಡೆಯುತ್ತಾನೆ. كَلَّآ إِنَّ ٱلْإِنسَٰنَ لَيَطْغَىٰٓ. ﴿6﴾
7 ಅದೇಕೆಂದರೆ, ಅವನು ಅವನನ್ನೇ ಸ್ವಯಂ-ಪರ್ಯಾಪ್ತನಾಗಿ ಕಾಣುತ್ತಾನೆ. أَن رَّءَاهُ ٱسْتَغْنَىٰٓ. ﴿7﴾
8 ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗಬೇಕಾಗಿದೆ. إِنَّ إِلَىٰ رَبِّكَ ٱلرُّجْعَىٰٓ. ﴿8﴾
9 ತಡೆಯುವವನನ್ನು ನೀವು ನೋಡಿದ್ದೀರಾ?[1]
[1] ತಡೆಯುವವನು ಎಂದರೆ ಪ್ರವಾದಿಯ ಬದ್ಧ ವೈರಿಯಾಗಿದ್ದ ಸತ್ಯನಿಷೇಧಿಗಳ ಮುಖಂಡ ಅಬೂಜಹಲ್. ದಾಸನು ಎಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ). ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮಾಡುತ್ತಿದ್ದಾಗ ಅಬೂಜಹಲ್ ತಡೆಯಲು ಪ್ರಯತ್ನಿಸಿದ್ದನು.
أَرَءَيْتَ ٱلَّذِى يَنْهَىٰ. ﴿9﴾
10 ದಾಸನನ್ನು—ಅವನು ನಮಾಝ್ ಮಾಡುವಾಗ. عَبْدًا إِذَا صَلَّىٰٓ. ﴿10﴾
11 ನೀವು ನೋಡಿದ್ದೀರಾ—ಒಂದು ವೇಳೆ ಅವನು (ದಾಸನು) ಸನ್ಮಾರ್ಗದಲ್ಲಿದ್ದರೆ. أَرَءَيْتَ إِن كَانَ عَلَى ٱلْهُدَىٰٓ. ﴿11﴾
12 ಅಥವಾ ಅವನು ದೇವಭಯವಿಟ್ಟುಕೊಳ್ಳಲು ಆದೇಶಿಸಿದ್ದರೆ. أَوْ أَمَرَ بِٱلتَّقْوَىٰٓ. ﴿12﴾
13 ನೀವು ನೋಡಿದ್ದೀರಾ—ಒಂದು ವೇಳೆ ಅವನು (ತಡೆಯುವವನು) ನಿಷೇಧಿಸಿದ್ದರೆ ಮತ್ತು ವಿಮುಖನಾಗಿದ್ದರೆ. أَرَءَيْتَ إِن كَذَّبَ وَتَوَلَّىٰٓ. ﴿13﴾
14 ಅಲ್ಲಾಹು ಅವನನ್ನು ನೋಡುತ್ತಿದ್ದಾನೆಂದು ಅವನಿಗೆ ತಿಳಿದಿಲ್ಲವೇ? أَلَمْ يَعْلَم بِأَنَّ ٱللَّهَ يَرَىٰ. ﴿14﴾
15 ಅವನು ದೂರ ಸರಿಯದಿದ್ದರೆ ನಾವು ಖಂಡಿತವಾಗಿಯೂ ಅವನ ಮುಂದಲೆಯನ್ನು ಹಿಡಿದು ಎಳೆಯುವೆವು. كَلَّا لَئِن لَّمْ يَنتَهِ لَنَسْفَعًۢا بِٱلنَّاصِيَةِ. ﴿15﴾
16 ಸುಳ್ಳು ಹೇಳುವ, ಪಾಪವೆಸಗುವ ಮುಂದಲೆ. نَاصِيَةٍۢ كَٰذِبَةٍ خَاطِئَةٍۢ. ﴿16﴾
17 ಅವನು ತನ್ನ ಸಭಾ ಸದಸ್ಯರನ್ನು ಕರೆಯಲಿ. فَلْيَدْعُ نَادِيَهُۥ. ﴿17﴾
18 ನಾವು (ನರಕದಲ್ಲಿ) ಶಿಕ್ಷೆ ನೀಡುವ ದೇವದೂತರನ್ನು ಕರೆಯುವೆವು. سَنَدْعُ ٱلزَّبَانِيَةَ. ﴿18﴾
19 ಎಚ್ಚರಾ! ಅವನ ಮಾತನ್ನು ಎಂದಿಗೂ ಕೇಳಬೇಡಿ. (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿರಿ ಮತ್ತು ಅವನಿಗೆ ಸಮೀಪವಾಗಿರಿ. كَلَّا لَا تُطِعْهُ وَٱسْجُدْ وَٱقْتَرِب ۩. ﴿19﴾