الزلزلة
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಭೂಮಿಯನ್ನು ಸಂಪೂರ್ಣವಾಗಿ ನಡುಗಿಸಲಾಗುವಾಗ, | إِذَا زُلْزِلَتِ ٱلْأَرْضُ زِلْزَالَهَا. ﴿1﴾ |
|
2
ಅದು (ಭೂಮಿ) ಅದರ ಭಾರಗಳನ್ನು ಹೊರಹಾಕುವಾಗ,[1]
[1] ಅಂದರೆ ಭೂಮಿ ತೀವ್ರವಾಗಿ ಕಂಪಿಸಿ ಅದರಲ್ಲಿರುವ ಎಲ್ಲವೂ ನುಚ್ಚು ನೂರಾಗುತ್ತದೆ. ಇದು ಕಹಳೆಯಲ್ಲಿ ಪ್ರಥಮ ಬಾರಿ ಊದುವಾಗ ಸಂಭವಿಸುತ್ತದೆ.
|
وَأَخْرَجَتِ ٱلْأَرْضُ أَثْقَالَهَا. ﴿2﴾ |
| 3 “ಇದಕ್ಕೇನಾಗಿದೆ?” ಎಂದು ಮನುಷ್ಯನು ಕೇಳುವನು. | وَقَالَ ٱلْإِنسَٰنُ مَا لَهَا. ﴿3﴾ |
| 4 ಅಂದು ಅದು (ಭೂಮಿ) ತನ್ನ ಎಲ್ಲಾ ಸಮಾಚಾರಗಳನ್ನು ತಿಳಿಸುವುದು. | يَوْمَئِذٍۢ تُحَدِّثُ أَخْبَارَهَا. ﴿4﴾ |
| 5 ನಿಮ್ಮ ಪರಿಪಾಲಕನು (ಅಲ್ಲಾಹು) ಅದಕ್ಕೆ ಆದೇಶ ನೀಡಿದ ಕಾರಣದಿಂದ. | بِأَنَّ رَبَّكَ أَوْحَىٰ لَهَا. ﴿5﴾ |
| 6 ಅಂದು ಮನುಷ್ಯರು ವಿಭಿನ್ನ ಗುಂಪುಗಳಾಗಿ ಮರಳುವರು—ಅವರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ. | يَوْمَئِذٍۢ يَصْدُرُ ٱلنَّاسُ أَشْتَاتًۭا لِّيُرَوْا۟ أَعْمَٰلَهُمْ. ﴿6﴾ |
| 7 ಆದ್ದರಿಂದ ಯಾರು ಒಂದು ಅಣುವಿನ ತೂಕದಷ್ಟು ಒಳಿತು ಮಾಡಿದ್ದಾನೋ ಅವನು ಅದನ್ನು ನೋಡುವನು. | فَمَن يَعْمَلْ مِثْقَالَ ذَرَّةٍ خَيْرًۭا يَرَهُۥ. ﴿7﴾ |
| 8 ಯಾರು ಒಂದು ಅಣುವಿನ ತೂಕದಷ್ಟು ಕೆಡುಕು ಮಾಡಿದ್ದಾನೋ ಅವನು ಅದನ್ನು ನೋಡುವನು. | وَمَن يَعْمَلْ مِثْقَالَ ذَرَّةٍۢ شَرًّۭا يَرَهُۥ. ﴿8﴾ |