Monday, 12 October 2026 Hijri: — 03:22:46 pm
MalayalamQuran.in
Quran translation reader

അർ റഹ്മാൻ الرحمن Ar-Rahman

Surah 55 മദനിയ്യ • مدنية • Madaniyah 78 ആയത്തുകൾ • 78 Ayahs

സൂറത്ത് അർ റഹ്മാൻ (Ar-Rahman), ഖുർആൻ അധ്യായം 55 — അറബി ആയത്തുകളും ಕನ್ನಡ വിവർത്തനവും ഉൾപ്പെടെ 78 ആയത്തുകൾ വായിക്കുക. Read Surah Ar-Rahman with Arabic text and ಕನ್ನಡ translation.

بِسْمِ ٱللَّهِ ٱلرَّحْمَٰنِ ٱلرَّحِيمِ
1

ಪರಮ ದಯಾಳು.

ٱلرَّحۡمَٰنُ ۝١
2

ಕುರ್‌ಆನನ್ನು ಕಲಿಸಿದನು.

عَلَّمَ ٱلۡقُرۡءَانَ ۝٢
3

ಮನುಷ್ಯನನ್ನು ಸೃಷ್ಟಿಸಿದನು.

خَلَقَ ٱلۡإِنسَٰنَ ۝٣
4

ಅವನಿಗೆ ಮಾತನಾಡಲು ಕಲಿಸಿದನು.

عَلَّمَهُ ٱلۡبَيَانَ ۝٤
5

ಸೂರ್ಯ ಮತ್ತು ಚಂದ್ರ (ನಿಶ್ಚಿತ) ಗಣನೆಯಲ್ಲಿವೆ.

ٱلشَّمۡسُ وَٱلۡقَمَرُ بِحُسۡبَانٖ ۝٥
6

ಸಸ್ಯಗಳು ಮತ್ತು ಮರಗಳು (ಅಲ್ಲಾಹನಿಗೆ) ಸಾಷ್ಟಾಂಗ ಮಾಡುತ್ತಿವೆ.

وَٱلنَّجۡمُ وَٱلشَّجَرُ يَسۡجُدَانِ ۝٦
7

ಅವನು ಆಕಾಶವನ್ನು ಎತ್ತರಕ್ಕೇರಿಸಿದನು ಮತ್ತು ತಕ್ಕಡಿಯನ್ನು ಸ್ಥಾಪಿಸಿದನು.[1]

وَٱلسَّمَآءَ رَفَعَهَا وَوَضَعَ ٱلۡمِيزَانَ ۝٧
8

ನೀವು ತೂಕದಲ್ಲಿ ಅಸಮತೋಲನ ಮಾಡದಿರುವುದಕ್ಕಾಗಿ.

أَلَّا تَطۡغَوۡاْ فِي ٱلۡمِيزَانِ ۝٨
9

ನೀವು ನ್ಯಾಯದೊಂದಿಗೆ ತಕ್ಕಡಿಯನ್ನು ಸ್ಥಾಪಿಸಿರಿ. ತೂಕದಲ್ಲಿ ಕಡಿಮೆ ಮಾಡಬೇಡಿ.

وَأَقِيمُواْ ٱلۡوَزۡنَ بِٱلۡقِسۡطِ وَلَا تُخۡسِرُواْ ٱلۡمِيزَانَ ۝٩
10

ಅವನು ಭೂಮಿಯನ್ನು ಮನುಷ್ಯರಿಗೋಸ್ಕರ ಇಟ್ಟನು.

وَٱلۡأَرۡضَ وَضَعَهَا لِلۡأَنَامِ ۝١٠
11

ಅದರಲ್ಲಿ ಹಣ್ಣು-ಹಂಪಲುಗಳು ಮತ್ತು ಪೊರೆಗಳಿರುವ ಖರ್ಜೂರದ ಮರಗಳಿವೆ.

فِيهَا فَٰكِهَةٞ وَٱلنَّخۡلُ ذَاتُ ٱلۡأَكۡمَامِ ۝١١
12

ಹೊಟ್ಟಿರುವ ಧಾನ್ಯಗಳು ಮತ್ತು ಸುಗಂಧಪೂರಿತ ಸಸ್ಯಗಳಿವೆ.

وَٱلۡحَبُّ ذُو ٱلۡعَصۡفِ وَٱلرَّيۡحَانُ ۝١٢
13

ಹಾಗಾದರೆ ನೀವಿಬ್ಬರು (ಜಿನ್ನ್ ಮತ್ತು ಮನುಷ್ಯರು) ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝١٣
14

ಅವನು ಮನುಷ್ಯನನ್ನು ಕುಂಬಾರಿಕೆಯ ಜೇಡಿಮಣ್ಣಿನಿಂದ ಸೃಷ್ಟಿಸಿದನು.

خَلَقَ ٱلۡإِنسَٰنَ مِن صَلۡصَٰلٖ كَٱلۡفَخَّارِ ۝١٤
15

ಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಿದನು.

وَخَلَقَ ٱلۡجَآنَّ مِن مَّارِجٖ مِّن نَّارٖ ۝١٥
16

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝١٦
17

ಅವನು ಎರಡು ಉದಯಸ್ಥಾನಗಳ ಮತ್ತು ಎರಡು ಅಸ್ತಮಸ್ಥಾನಗಳ ಪರಿಪಾಲಕನಾಗಿದ್ದಾನೆ.[1]

رَبُّ ٱلۡمَشۡرِقَيۡنِ وَرَبُّ ٱلۡمَغۡرِبَيۡنِ ۝١٧
18

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝١٨
19

ಅವನು ಎರಡು ಸಮುದ್ರಗಳನ್ನು ಪರಸ್ಪರ ಬೆರೆಯುವಂತೆ ಹರಿಯಲು ಬಿಟ್ಟನು.

مَرَجَ ٱلۡبَحۡرَيۡنِ يَلۡتَقِيَانِ ۝١٩
20

ಅವೆರಡರ ನಡುವೆ ಒಂದು ತಡೆಯಿದ್ದು ಅವು ಅದನ್ನು ಮೀರಿ ಹೋಗುವುದಿಲ್ಲ.[1]

بَيۡنَهُمَا بَرۡزَخٞ لَّا يَبۡغِيَانِ ۝٢٠
21

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٢١
22

ಅವೆರಡರಿಂದಲೂ ಮುತ್ತು ಮತ್ತು ಹವಳಗಳು ಹೊರಬರುತ್ತವೆ.

يَخۡرُجُ مِنۡهُمَا ٱللُّؤۡلُؤُ وَٱلۡمَرۡجَانُ ۝٢٢
23

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٢٣
24

ಸಮುದ್ರದಲ್ಲಿ ಬೆಟ್ಟಗಳಂತೆ ಎತ್ತರವಾಗಿದ್ದು ಸಂಚರಿಸುವ ಹಡಗುಗಳು ಅವನ ನಿಯಂತ್ರಣದಲ್ಲಿವೆ.

وَلَهُ ٱلۡجَوَارِ ٱلۡمُنشَـَٔاتُ فِي ٱلۡبَحۡرِ كَٱلۡأَعۡلَٰمِ ۝٢٤
25

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٢٥
26

ಭೂಮಿಯ ಮೇಲಿರುವ ಎಲ್ಲವೂ ನಾಶವಾಗಲಿವೆ.

كُلُّ مَنۡ عَلَيۡهَا فَانٖ ۝٢٦
27

ನಿಮ್ಮ ಪರಿಪಾಲಕನ (ಅಲ್ಲಾಹನ) ಮಹತ್ವಪೂರ್ಣ ಮತ್ತು ಗೌರವಾರ್ಹವಾದ ಮುಖವು ಮಾತ್ರ ಅವಶೇಷಿಸುತ್ತದೆ.

وَيَبۡقَىٰ وَجۡهُ رَبِّكَ ذُو ٱلۡجَلَٰلِ وَٱلۡإِكۡرَامِ ۝٢٧
28

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٢٨
29

ಭೂಮ್ಯಾಕಾಶಗಳಲ್ಲಿರುವವರೆಲ್ಲರೂ ಅವನಲ್ಲಿ ಬೇಡುತ್ತಾರೆ. ಪ್ರತಿದಿನವೂ ಅವನು ಒಂದು ಕೆಲಸದಲ್ಲಿದ್ದಾನೆ.

يَسۡـَٔلُهُۥ مَن فِي ٱلسَّمَٰوَٰتِ وَٱلۡأَرۡضِۚ كُلَّ يَوۡمٍ هُوَ فِي شَأۡنٖ ۝٢٩
30

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٣٠
31

ಓ ಜಿನ್ನ್ ಮತ್ತು ಮನುಷ್ಯರ ಸಮೂಹಗಳೇ! ಸದ್ಯವೇ ನಾವು ನಿಮಗೋಸ್ಕರ ಸಂಪೂರ್ಣ ಬಿಡುವು ಮಾಡಿಕೊಳ್ಳುವೆವು.

سَنَفۡرُغُ لَكُمۡ أَيُّهَ ٱلثَّقَلَانِ ۝٣١
32

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٣٢
33

ಓ ಜಿನ್ನ್ ಮತ್ತು ಮನುಷ್ಯರ ಸಮೂಹಗಳೇ! ಭೂಮ್ಯಾಕಾಶಗಳ ಸೀಮೆಗಳಿಂದ ಹೊರಗೆ ಓಡಿಹೋಗುವ ಸಾಮರ್ಥ್ಯ ನಿಮಗಿದ್ದರೆ ಓಡಿಹೋಗಿರಿ. ಪ್ರಬಲ ಶಕ್ತಿಯಿಲ್ಲದೆ ನಿಮಗೆ ಓಡಿಹೋಗಲು ಸಾಧ್ಯವಿಲ್ಲ.

يَٰمَعۡشَرَ ٱلۡجِنِّ وَٱلۡإِنسِ إِنِ ٱسۡتَطَعۡتُمۡ أَن تَنفُذُواْ مِنۡ أَقۡطَارِ ٱلسَّمَٰوَٰتِ وَٱلۡأَرۡضِ فَٱنفُذُواْۚ لَا تَنفُذُونَ إِلَّا بِسُلۡطَٰنٖ ۝٣٣
34

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٣٤
35

ನಿಮ್ಮ ಮೇಲೆ ಬೆಂಕಿಯ ಜ್ವಾಲೆಯನ್ನು ಮತ್ತು ಹೊಗೆಯನ್ನು ಬಿಡಲಾಗುವುದು. ಆಗ ನಿಮಗೆ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

يُرۡسَلُ عَلَيۡكُمَا شُوَاظٞ مِّن نَّارٖ وَنُحَاسٞ فَلَا تَنتَصِرَانِ ۝٣٥
36

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٣٦
37

ಆಕಾಶವು ಸಿಡಿದು ಹೋಳಾಗಿ ಕೆಂಪು ಚರ್ಮದಂತೆ ಕೆಂಪಾಗುವಾಗ.

فَإِذَا ٱنشَقَّتِ ٱلسَّمَآءُ فَكَانَتۡ وَرۡدَةٗ كَٱلدِّهَانِ ۝٣٧
38

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٣٨
39

ಅಂದು ಯಾವುದೇ ಮನುಷ್ಯನಲ್ಲಿ ಅಥವಾ ಜಿನ್ನ್‌ನಲ್ಲಿ ಅವನು ಮಾಡಿದ ಪಾಪಗಳ ಬಗ್ಗೆ ಕೇಳಲಾಗುವುದಿಲ್ಲ.[1]

فَيَوۡمَئِذٖ لَّا يُسۡـَٔلُ عَن ذَنۢبِهِۦٓ إِنسٞ وَلَا جَآنّٞ ۝٣٩
40

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٤٠
41

ಅಪರಾಧಿಗಳನ್ನು ಅವರ ಲಕ್ಷಣಗಳ ಮೂಲಕ ಗುರುತಿಸಲಾಗುವುದು. ಅವರನ್ನು ಅವರ ಜುಟ್ಟು ಮತ್ತು ಪಾದಗಳನ್ನು ಹಿಡಿದು ಒಯ್ಯಲಾಗುವುದು.

يُعۡرَفُ ٱلۡمُجۡرِمُونَ بِسِيمَٰهُمۡ فَيُؤۡخَذُ بِٱلنَّوَٰصِي وَٱلۡأَقۡدَامِ ۝٤١
42

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٤٢
43

ಇದೇ ಅಪರಾಧಿಗಳು ನಿಷೇಧಿಸುತ್ತಿದ್ದ ನರಕಾಗ್ನಿ.

هَٰذِهِۦ جَهَنَّمُ ٱلَّتِي يُكَذِّبُ بِهَا ٱلۡمُجۡرِمُونَ ۝٤٣
44

ಅವರು ಅದರ ಮತ್ತು ಕುದಿಯುವ ಬಿಸಿನೀರಿನ ನಡುವೆ ಸುತ್ತುವರು.

يَطُوفُونَ بَيۡنَهَا وَبَيۡنَ حَمِيمٍ ءَانٖ ۝٤٤
45

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٤٥
46

ತನ್ನ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲಬೇಕೆಂಬ ಭಯವಿರುವ ವ್ಯಕ್ತಿಗೆ ಎರಡು ಸ್ವರ್ಗಗಳಿವೆ.

وَلِمَنۡ خَافَ مَقَامَ رَبِّهِۦ جَنَّتَانِ ۝٤٦
47

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٤٧
48

ಅವೆರಡರಲ್ಲೂ ಅನೇಕ ಗೆಲ್ಲುಗಳು ಮತ್ತು ಶಾಖೆಗಳಿವೆ.

ذَوَاتَآ أَفۡنَانٖ ۝٤٨
49

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٤٩
50

ಅವೆರಡರಲ್ಲೂ ಹರಿಯುವ ಎರಡು ತೊರೆಗಳಿವೆ.

فِيهِمَا عَيۡنَانِ تَجۡرِيَانِ ۝٥٠
51

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٥١
52

ಅವೆರಡರಲ್ಲೂ ಎಲ್ಲಾ ತರಹದ ಹಣ್ಣುಗಳಲ್ಲೂ ಎರಡೆರಡು ವಿಧಗಳಿವೆ.

فِيهِمَا مِن كُلِّ فَٰكِهَةٖ زَوۡجَانِ ۝٥٢
53

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٥٣
54

ಅವರು ಕೆಲವು ಹಾಸುಗಳ ಮೇಲೆ ಒರಗಿ ಕುಳಿತುಕೊಳ್ಳುವರು. ಆ ಹಾಸುಗಳ ಒಳಪದರವು ದಪ್ಪ ರೇಷ್ಮೆ ಬಟ್ಟೆಯದ್ದಾಗಿದೆ. ಆ ಎರಡು ಸ್ವರ್ಗಗಳಲ್ಲಿರುವ ಹಣ್ಣುಗಳು ಹತ್ತಿರಕ್ಕೆ ಬಾಗಿಕೊಂಡಿರುವುವು.

مُتَّكِـِٔينَ عَلَىٰ فُرُشِۭ بَطَآئِنُهَا مِنۡ إِسۡتَبۡرَقٖۚ وَجَنَى ٱلۡجَنَّتَيۡنِ دَانٖ ۝٥٤
55

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٥٥
56

ಅಲ್ಲಿ ದೃಷ್ಟಿಯನ್ನು ತಗ್ಗಿಸುವ ಅಪ್ಸರೆಯರಿದ್ದಾರೆ. ಅವರಿಗಿಂತ ಮೊದಲು ಯಾವುದೇ ಮನುಷ್ಯ ಅಥವಾ ಜಿನ್ನ್ ಆ ಅಪ್ಸರೆಯರನ್ನು ಮುಟ್ಟಿಲ್ಲ.

فِيهِنَّ قَٰصِرَٰتُ ٱلطَّرۡفِ لَمۡ يَطۡمِثۡهُنَّ إِنسٞ قَبۡلَهُمۡ وَلَا جَآنّٞ ۝٥٦
57

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٥٧
58

ಆ ಅಪ್ಸರೆಯರು ಮಾಣಿಕ್ಯ ಮತ್ತು ಹವಳದಂತೆ ಕಾಣುತ್ತಾರೆ.

كَأَنَّهُنَّ ٱلۡيَاقُوتُ وَٱلۡمَرۡجَانُ ۝٥٨
59

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٥٩
60

ಒಳಿತಿಗೆ ಪ್ರತಿಫಲವಾಗಿ ಒಳಿತಲ್ಲದೆ ಬೇರೇನಿದೆ?

هَلۡ جَزَآءُ ٱلۡإِحۡسَٰنِ إِلَّا ٱلۡإِحۡسَٰنُ ۝٦٠
61

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٦١
62

ಅವೆರಡರ ಹೊರತಾಗಿ ಬೇರೆ ಎರಡು ಸ್ವರ್ಗಗಳಿವೆ.

وَمِن دُونِهِمَا جَنَّتَانِ ۝٦٢
63

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٦٣
64

ಅವೆರಡು ಕಡುಹಸಿರು ಬಣ್ಣದ್ದಾಗಿವೆ.

مُدۡهَآمَّتَانِ ۝٦٤
65

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٦٥
66

ಅವೆರಡರಲ್ಲೂ ರಭಸವಾಗಿ ಹರಿಯುವ ಎರಡು ತೊರೆಗಳಿವೆ.

فِيهِمَا عَيۡنَانِ نَضَّاخَتَانِ ۝٦٦
67

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٦٧
68

ಅವೆರಡರಲ್ಲೂ ಹಣ್ಣುಗಳು, ಖರ್ಜೂರದ ಮರಗಳು ಮತ್ತು ದಾಳಿಂಬೆಗಳಿವೆ.

فِيهِمَا فَٰكِهَةٞ وَنَخۡلٞ وَرُمَّانٞ ۝٦٨
69

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٦٩
70

ಅವುಗಳಲ್ಲಿ ಶ್ರೇಷ್ಠ ಗುಣನಡತೆಯ ಸುರಸುಂದರಿ ಮಹಿಳೆಯರಿದ್ದಾರೆ.

فِيهِنَّ خَيۡرَٰتٌ حِسَانٞ ۝٧٠
71

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٧١
72

ಡೇರೆಗಳಲ್ಲಿ ಜೋಪಾನವಾಗಿಡಲಾದ ಬೆಳ್ಳಗಿನ ಅಪ್ಸರೆಯರು!

حُورٞ مَّقۡصُورَٰتٞ فِي ٱلۡخِيَامِ ۝٧٢
73

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٧٣
74

ಅವರಿಗಿಂತ ಮೊದಲು ಯಾವುದೇ ಮನುಷ್ಯ ಅಥವಾ ಜಿನ್ನ್ ಆ ಅಪ್ಸರೆಯರನ್ನು ಮುಟ್ಟಿಲ್ಲ.

لَمۡ يَطۡمِثۡهُنَّ إِنسٞ قَبۡلَهُمۡ وَلَا جَآنّٞ ۝٧٤
75

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٧٥
76

ಅವರು ಹಸಿರು ದಿಂಬುಗಳಲ್ಲಿ ಮತ್ತು ಸುಂದರ ಜಮಾಖಾನೆಗಳಲ್ಲಿ ಒರಗಿ ಕುಳಿತುಕೊಳ್ಳುವರು.

مُتَّكِـِٔينَ عَلَىٰ رَفۡرَفٍ خُضۡرٖ وَعَبۡقَرِيٍّ حِسَانٖ ۝٧٦
77

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ?

فَبِأَيِّ ءَالَآءِ رَبِّكُمَا تُكَذِّبَانِ ۝٧٧
78

ಮಹತ್ವಪೂರ್ಣನು ಮತ್ತು ಗೌರವಾರ್ಹನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರು ಸಮೃದ್ಧಪೂರ್ಣವಾಗಿದೆ.

تَبَٰرَكَ ٱسۡمُ رَبِّكَ ذِي ٱلۡجَلَٰلِ وَٱلۡإِكۡرَامِ ۝٧٨