ಸೂರ್ಯನನ್ನು ಹೊದಿಯಲಾಗುವಾಗ.
അത്തക്വീർ التكوير At-Takwir
സൂറത്ത് അത്തക്വീർ (At-Takwir), ഖുർആൻ അധ്യായം 81 — അറബി ആയത്തുകളും ಕನ್ನಡ വിവർത്തനവും ഉൾപ്പെടെ 29 ആയത്തുകൾ വായിക്കുക. Read Surah At-Takwir with Arabic text and ಕನ್ನಡ translation.
ನಕ್ಷತ್ರಗಳು ಪ್ರಕಾಶರಹಿತವಾಗುವಾಗ.
ಪರ್ವತಗಳನ್ನು ಚಲಿಸುವಂತೆ ಮಾಡಲಾಗುವಾಗ.
ಪೂರ್ಣ ಬಸುರಿಗಳಾದ ಒಂಟೆಗಳನ್ನು ಉಪೇಕ್ಷಿಸಲಾಗುವಾಗ.[1]
ವನ್ಯ ಮೃಗಗಳನ್ನು ಒಟ್ಟುಗೂಡಿಸಲಾಗುವಾಗ.[1]
ಸಮುದ್ರಗಳನ್ನು ಧಗಧಗನೆ ಉರಿಸಲಾಗುವಾಗ.
ಆತ್ಮಗಳನ್ನು (ದೇಹಗಳೊಂದಿಗೆ) ಜೋಡಿಸಲಾಗುವಾಗ.[1]
ಜೀವಂತ ಹೂಳಲಾದ ಹೆಣ್ಣು ಮಗುವಿನೊಂದಿಗೆ ಕೇಳಲಾಗುವಾಗ.
ಯಾವ ತಪ್ಪಿಗಾಗಿ ಅವಳನ್ನು ಕೊಲೆ ಮಾಡಲಾಯಿತೆಂದು.
ಕರ್ಮಪುಸ್ತಕಗಳನ್ನು ತೆರೆಯಲಾಗುವಾಗ.
ಆಕಾಶವನ್ನು ಕಳಚಲಾಗುವಾಗ.
ನರಕವನ್ನು ಧಗಧಗನೆ ಉರಿಸಲಾಗುವಾಗ.
ಸ್ವರ್ಗವನ್ನು ಸಮೀಪಕ್ಕೆ ತರಲಾಗುವಾಗ.
ಅಂದು ಪ್ರತಿಯೊಬ್ಬ ವ್ಯಕ್ತಿಯೂ ತಾನು ಏನು ತಂದಿರುವೆನೆಂದು ತಿಳಿಯುವನು.
ನಾನು ಹಿಂದಕ್ಕೆ ಸರಿಯುವ ನಕ್ಷತ್ರಗಳ ಮೇಲೆ ಆಣೆ ಮಾಡುತ್ತೇನೆ.
ಚಲಿಸುವ ಮತ್ತು ಅಪ್ರತ್ಯಕ್ಷವಾಗುವ (ನಕ್ಷತ್ರಗಳ ಮೇಲೆ).
ರಾತ್ರಿಯ ಮೇಲೆ, ಅದು ಸರಿಯುವಾಗ.
ಪ್ರಭಾತದ ಮೇಲೆ, ಅದು ಬೆಳಗುವಾಗ.
ನಿಶ್ಚಯವಾಗಿಯೂ ಇದು (ಕುರ್‌ಆನ್) ಒಬ್ಬ ಗೌರವಾನ್ವಿತ ದೂತರ (ಜಿಬ್ರೀಲ್) ಮಾತಾಗಿದೆ.[1]
ಅವರು ಅತ್ಯಂತ ಶಕ್ತಿಶಾಲಿ ಮತ್ತು ಸಿಂಹಾಸನದ ಒಡೆಯನಾದ ಅಲ್ಲಾಹನ ಬಳಿ ಉನ್ನತ ಪದವಿಯುಳ್ಳವರಾಗಿದ್ದಾರೆ.
(ಆಕಾಶಲೋಕದಲ್ಲಿ) ಅವರನ್ನು ಅನುಸರಿಸಲಾಗುತ್ತದೆ ಮತ್ತು ಅವರು ವಿಶ್ವಾಸಯೋಗ್ಯರಾಗಿದ್ದಾರೆ.
ನಿಶ್ಚಯವಾಗಿಯೂ ನಿಮ್ಮ ಸಂಗಡಿಗರು (ಪ್ರವಾದಿ) ಮಾನಸಿಕ ಅಸ್ವಸ್ಥರಲ್ಲ.
ಅವರು ಅವರನ್ನು (ಜಿಬ್ರೀಲರನ್ನು) ಪ್ರತ್ಯಕ್ಷ ದಿಗಂತದಲ್ಲಿ ನೋಡಿದ್ದಾರೆ.
ಅವರು ಅದೃಶ್ಯ ವಿಷಯಗಳನ್ನು ತಿಳಿಸುವ ವಿಷಯದಲ್ಲಿ ಜಿಪುಣತನ ತೋರುವುದಿಲ್ಲ.[1]
ಇದು (ಕುರ್‌ಆನ್) ಬಹಿಷ್ಕೃತನಾದ ಶೈತಾನನ ಮಾತುಗಳಲ್ಲ.
ಆದರೂ ನೀವು ಎಲ್ಲಿಗೆ ಹೋಗುತ್ತಿದ್ದೀರಿ?
ಇದು ಸರ್ವಲೋಕದ ಜನರಿಗೆ ಒಂದು ಉಪದೇಶವಾಗಿದೆ.
(ವಿಶೇಷವಾಗಿ) ನಿಮ್ಮ ಪೈಕಿ ನೇರ ಮಾರ್ಗದಲ್ಲಿ ಚಲಿಸಲು ಇಚ್ಛಿಸುವವರಿಗೆ.
ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಇಚ್ಛಿಸದೆ ನೀವು ಇಚ್ಛಿಸುವುದಿಲ್ಲ.